ಮುಂಡಗೋಡ ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾನೆ. ಕುಷ್ಟಗಿಯಿಂದ ಮಣಿಪಾಲಕ್ಕೆ ಬೈಕ್ ಮುಖಾಂತರ ತೆರಳುತ್ತಿದ್ದ ನಿರಂಜನ್ ಅಮರೇಶ್ ಅಮ್ಮಿನಗಡ ಎನ್ನುವ ವ್ಯಕ್ತಿಯ ಬೈಕ್ ಅಪಘಾತವಾಗಿದ್ದು, ಸದ್ಯ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡಿನ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳೀಯರು ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಮಾನವೀಯತೆ ತೋರಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ವಿದ್ಯುತ್ ಕಂಬ ಏರಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ದಾರುಣ ಸಾವು, ಲೈನ್ ಮೆನ್ ನಿರ್ಲಕ್ಷಕ್ಕೆ ಬಲಿಯಾದ್ನಾ ಬಡವ..?
ಹಾನಗಲ್ ತಾಲೂಕಿನ ಹೆರೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ವಿದ್ಯುತ್ ಲೈನ್ ದುರಸ್ಥಿ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ವಿದ್ಯುತ್ ಕಂಬದಿಂದ ಬಿದ್ದು ದಾರುಣ ಸಾವು ಕಂಡಿದ್ದಾನೆ. ಲೈನ್ ಮೆನ್ ನ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ಓರ್ವ ವ್ಯಕ್ತಿಯ ಪ್ರಾಣವನ್ನೇ ಕಿತ್ತುಕೊಂಡಿದೆ ಅಂತಾ ಜನರು ಆಕ್ರೋಶಗೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಫಕ್ಕೀರಪ್ಪ ಶಿವಾನಂದಪ್ಪ ಮಡಿವಾಳರ ಎಂಬುವ ವ್ಯಕ್ತಿಯೇ ದುರಂತ ಸಾವು ಕಂಡಿದ್ದು, ಹೆರೂರು ಭಾಗದಲ್ಲಿ ಲೈನ್ ಮೆನ್ ಆಗಿ ಕಾರ್ಯನಿರ್ವಹಿಸ್ತಿರೊ ತಿರುಪತಿ ತಹಶೀಲ್ದಾರ್ ಎಂಬುವವನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ಘಟನೆ ಏನು..? ಹಾನಗಲ್ ತಾಲೂಕಿನಲ್ಲಿ ಸಂಜೆ ಗುಡುಗು ಸಹಿತ ಮಳೆಯಾದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ, ವಿದ್ಯುತ್ ಸಮಸ್ಯೆಯನ್ನು ಸರಿ ಮಾಡಲು ಲೈನ್ ಮೆನ್ ಆದ ತಿರುಪತಿ ತಹಶೀಲ್ದಾರ್ ಸದ್ಯ ದುರಂತದಲ್ಲಿ ದಾರುಣ ಸಾವು ಕಂಡಿರೊ ಫಕ್ಕೀರಪ್ಪನಿಗೆ ಕಂಠ ಪೂರ್ತಿ ಮದ್ಯಪಾನ ಮಾಡಿಸಿ, ವಿದ್ಯುತ್ ಕಂಬ್ ಹತ್ತಿಸಿದ್ದಾನೆ. ಜೊತೆಗೆ ತಾನೂ ಕೂಡ ಕಂಠಪೂರ್ತಿ ಕುಡಿದು ನಶೆಯಲ್ಲೇ ವಿದ್ಯುತ್ ಸಂಪರ್ಕದ ಸಮಸ್ಯೆಯ ರಿಪೇರಿಗೆ ಇಳಿದಿದ್ದ...
ಕೊಪ್ಪ ಇಂದಿರಾನಗರ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಕೋಡಂಬಿಯ ವ್ಯಕ್ತಿಗೆ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರನಿಗೆ ಗಾಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡಿರೋ ಬೈಕ್ ಸವಾರ, ಕೋಡಂಬಿ ಗ್ರಾಮದ ರಾಘವೇಂದ್ರ ಬಾಬು ಅರ್ಕಸಾಲಿ ಅಂತಾ ಗುರುತಿಸಲಾಗಿದೆ. ಈತ ಸಂಜೆ ತನ್ನ ಬೈಕ್ಮೂಲಕ ಇಂದಿರಾನಗರದ ಬಳಿ ಹೊರಟಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ದುರ್ಘಟನೆ ನಡೆದಿದೆ. ನಂತರ ಮಾಹಿತಿ ತಿಳಿದು 108 ಅಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ 108 ಅಂಬ್ಯಲೆನ್ಸ್ ಸಿಬ್ಬಂದಿಗಳು ಸವಾರನಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಗಾಯಗೊಂಡಿರೋ ಬೈಕ್ ಸವಾರನ ಬಳಿ ಒಂದು ಪರ್ಸ್, ಮೊಬೈಲ್, ಹಣ ಆಧಾರ ಕಾರ್ಡ್, ಪಾನ್ ಕಾರ್ಡ್, ಎ ಟಿ ಎಮ್ ಕಾರ್ಡ್ ದೊರೆತಿದ್ದು, 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಪೊಲೀಸ್ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಲ್ಲಾಪುರ ರಸ್ತೆಯ ಗುಂಜಾವತಿ ಬಳಿ ಕಾರು ಅಪಘಾತ, ಮದುವೆಗೆಂದು ಬಂದಿದ್ದ ಮಹಾರಾಷ್ಟ್ರದ ಕುಟುಂಬಕ್ಕೆ ಆಘಾತ..!
ಮುಂಡಗೋಡ ತಾಲೂಕಿನ ಯಲ್ಲಾಪುರ ರಸ್ತೆಯ ಬಡ್ಡಿಗೇರಿ, ಗುಂಜಾವತಿ ನಡುವೆ ಕಾರು ಅಪಘಾತವಾಗಿದೆ. ಮದುವೆಗೆಂದು ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಕಾರಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮಹಾರಾಷ್ಟ್ರ ಮೂಲದ ಕುಟುಂಬ ಇಂದು ಮುಂಡಗೋಡ ತಾಲೂಕಿನಲ್ಲಿ ಮದುವೆ ಇದ್ದ ಕಾರಣ, ಮದುವೆಗೆಂದು ಆಗಮಿಸಿತ್ತು. ಮದುವೆ ಮುಗಿಸಿಕೊಂಡು ಹೊರಡುವಾಗ ಬಡ್ಡಿಗೇರಿ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದೆ. ಹೀಗಾಗಿ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಆದ್ರೂ ಅದೃಷ್ಟವಶಾತ್ ಕಾರಲ್ಲಿದ್ದವರಿಗೆ ಗಂಭೀರ ಗಾಯಗಳಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ ಹೊರವಲಯದ APMC ಬಳಿಯ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..!
ಮುಂಡಗೋಡ ಪಟ್ಟಣದ ಹೊರವಲಯದ APMC ಹತ್ತಿರದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾವುದೋ ಕಾರಣಕ್ಕೆ ಕಾಡಿನಲ್ಲಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಕೊಳೆತು ನಾರುವ ಸ್ಥಿತಿಯಲ್ಲಿರೋ ಶವ, ಕನಿಷ್ಟ ಸುಮಾರು ಹತ್ತು ದಿನಗಳ ಹಿಂದೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೈನಳ್ಳಿ ಯುವಕನಿಂದ ಲವ್, ಸೆಕ್ಸ್, ದೋಖಾ ಆರೋಪ, ಆತನ ಮನೆ ಎದುರೇ ಧರಣಿ ಕುಳಿತ ಯುವತಿ..! ಅಷ್ಟಕ್ಕೂ ಏನಿದು ಘಟನೆ..?
ಮುಂಡಗೋಡ ತಾಲೂಕಿನ ಮೈನಳ್ಳಿಯಲ್ಲಿ ಯುವತಿಯೋರ್ವಳು ತನಗೆ ಅನ್ಯಾಯವಾಗಿದೆ ಅಂತಾ ಯುವಕನ ಮನೆಯೆದುರು ನಿನ್ನೆ ಸೋಮವಾರದಿಂದಲೂ ಸತ್ಯಾಗ್ರಹ ನಡೆಸ್ತಿದಾಳೆ. ಇಲ್ಲಿನ ಯುವಕನೊಬ್ಬ ನಂಗೆ ಪುಸಲಾಯಿಸಿ, ಪ್ರೀತಿಯ ಬಲೆ ಹೆಣೆದು, ಬಳಸಿಕೊಂಡು ಇವಾಗ ಮದುವೆ ಅಂತಾ ಮಾತಾಡಿದ್ರೆ ಆಗಲ್ಲ ಅಂತಾ ದ್ರೋಹ ಮಾಡ್ತಿದಾನೆ ಎಂದು ಅಲವತ್ತುಕೊಂಡಿದ್ದಾಳೆ.. ಘಟನೆ ಏನು..? ಯುವತಿ ಹೇಳೋ ಪ್ರಕಾರ, ಮೈನಳ್ಳಿ ಗ್ರಾಮದ ಅದೊಬ್ಬ ಯುವಕ, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಅದೇಂತದ್ದೋ ಟ್ರೇನಿಂಗ್ ಗೆ ಹೋದಾಗ, ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕಾಂಡೇಬಾಗೂರ್ ಗ್ರಾಮದ 19 ವರ್ಷದ ಯುವತಿಯೊಂದಿಗೆ ಸ್ನೇಹ ಬೆಳಸಿಕೊಳ್ತಾನೆ. ಆ ಸ್ನೇಹ ಮುಂದುವರೆದು ಪ್ರೀತಿಗೆ ತಿರುಗತ್ತೆ. ಆ ನಂತರದಲ್ಲಿ ಇಬ್ಬರೂ ನಾನಿನ್ನ ಬಿಡಲಾರೆ ಅಂತಾ ಜೊತೆ ಜೊತೆಯಾಗೇ ಬೆಂಗಳೂರಿಗೆ ಕೆಲಸಕ್ಕೆ ಅಂತ ಹೋಗಿರ್ತಾರೆ. ಅಲ್ಲಿಯೂ ಇವ್ರು ಒಂದೇ ರೂಮಿನಲ್ಲಿ ವಾಸ ಮಾಡಿರ್ತಾರೆ. ಹೀಗೆ ಬರೋಬ್ಬರಿ ಒಂದು ವರ್ಷಗಳ ಕಾಲ ನಡೆದ ಇವ್ರ ಪ್ರೇಮ, ಸರಸ ಸಲ್ಲಾಪ ಕಡೆ ಕಡೆಗೆ ಮದುವೆ ಮಾತಿಗೆ ಬಂದಾಗ ಯುವಕ ಬಿಲ್...
ಕಾತೂರಿನಿಂದ ಆಸ್ಪತ್ರೆಗೆಂದು ಮುಂಡಗೋಡಿಗೆ ಬಂದಿದ್ದ ವೃದ್ದೆ ನಾಪತ್ತೆ, ಕಂಡರೆ ತಕ್ಷಣವೇ ಮಾಹಿತಿ ನೀಡಲು ಮನವಿ..!
ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ವೃದ್ದೆಯೋರ್ವರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮುಂಡಗೋಡ ಪಟ್ಟಣಕ್ಕೆ ಬಂದವರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ ಅಂತಾ ಆಕೆಯ ಪುತ್ರ ಮನವಿ ಮಾಡಿದ್ದಾರೆ. ಕಾತೂರಿನ ಶಿವಕ್ಕ ಫಕ್ಕೀರಪ್ಪ ತಳವಾರ(65) ಎಂಬ ವೃದ್ದೆಯೇ ನಾಪತ್ತೆಯಾದವರು. ನಿನ್ನೆ ಮುಂಜಾನೆ 10 ಘಂಟೆಗೆ ಕಾತೂರನಿಂದ ಮುಂಡಗೋಡಿಗೆ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಆಸ್ಪತ್ರೆಗೆ ಅಂತಾ ಬಂದವರು ವಾಪಸ್ ಮನೆಗೆ ಹೋಗದೆ ಎಲ್ಲಿಯೊ ನಾಪತ್ತೆಯಾಗಿದ್ದು, ಕುಟುಂಬಸ್ಥರು ಎಲ್ಲ ಕಡೆ ಹುಡುಕುತ್ತಿದ್ದಾರೆ. ಆದ್ರೆ ಇದುವರೆಗೂ ವೃದ್ದೆಯ ಪತ್ತೆಯಾಗಿಲ್ಲ. ಹೀಗಾಗಿ, ಯಾರಿಗಾದ್ರೂ ಇವ್ರು ಕಂಡುಬಂದಲ್ಲಿ ತಕ್ಷಣವೇ ಆಕೆಯ ಪುತ್ರ ಲಕ್ಷ್ಮಣ ತಳವಾರ ಮೊಬೈಲ್ ಸಂಖ್ಯೆ 7259996999 ಹಾಗೂ ವಿಜಯ್- 9611888517 ಎಂಬುವರಿಗೆ ಕರೆ ಮಾಡಲು ವಿನಂತಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ನ್ಯಾಸರ್ಗಿ ಯುವಕ ಚಿಕಿತ್ಸೆ ಫಲಿಸದೇ ಸಾವು..!
ಮುಂಡಗೋಡ ಪಟ್ಟಣದ ಹೊರವಲಯದ ಅಯ್ಯಪ್ಪ ದೇವಸ್ಥಾನದ ಬಳಿ ನಿನ್ನೆ ನಡೆದಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರೋ ಮಾಹಿತಿ ಲಭ್ಯವಾಗಿದೆ. ನ್ಯಾಸರ್ಗಿ ಗ್ರಾಮದ ಕಿರಣ್ ಫಕ್ಕೀರಪ್ಪ ಮೇದಾರ್ (25) ಮೃತ ಬೈಕ್ ಸವಾನಾಗಿದ್ದಾನೆ. ನಿನ್ನೆ ರವಿವಾರ ರಾತ್ರಿ ನಡೆದಿದ್ದ ಬೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಗೆ ಸೂಕ್ತ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಕಿಮ್ಸ್ ನಲ್ಲಿ ಕಿರಣ್ ಮೃತಪಟ್ಟಿದ್ದಾನೆ ಅಂತಾ ಮೂಲಗಳು ತಿಳಿಸಿವೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮುಂಡಗೋಡ ಅಯ್ಯಪ್ಪ ದೇವಸ್ಥಾನದ ಬಳಿ ಭೀಕರ ಬೈಕ್ ಅಪಘಾತ ನ್ಯಾಸರ್ಗಿ ಯುವಕ ಗಂಭೀರ..!
ಮುಂಡಗೋಡ ಪಟ್ಟಣದ ಹೊರವಲಯದ ಅಯ್ಯಪ್ಪ ದೇವಸ್ಥಾನದ ಬಳಿ ಭೀಕರ ಬೈಕ್ ಅಪಘಾತವಾಗಿದೆ. ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದಾನೆ. ನ್ಯಾಸರ್ಗಿ ಗ್ರಾಮದ ಕಿರಣ್ ಫಕ್ಕೀರಪ್ಪ ಮೇದಾರ್ (25) ಗಂಭೀರ ಗಾಯಗೊಂಡಿರೊ ವ್ಯಕ್ತಿಯಾಗಿದ್ದಾನೆ. ಗಾಯಾಳುವನ್ನು ಸೂಕ್ತ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗೆ ಪ್ರಥಮ ಚಿಕಿತ್ಸೆ ಕೊಟ್ಟು 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿಗ್ಗಾವಿ ಕ್ಷೇತ್ರ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಲವು ಪ್ರಮುಖರು..!
ಶಿಗ್ಗಾವಿ: ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖ ಮುಖಂಡ ಶಿವಾನಂದ ರಾಮಗೇರಿ , ಎಮ್ ಎನ್ ಹೊನಕೇರಿ, ಶಿವು ಅಂಗಡಿ, ಕಾಳಪ್ಪ ಬಂಡಿ, ಶಿವಯೋಗಿ ಮುಕ್ಕಣ್ಣವರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರಖಾನ್ ಪಠಾಣ, ಕೆಪಿಸಿಸಿ ಸದಸ್ಯರಾದ ಸೋಮಣ್ಣ ಬೇವಿನಮರದ ಹಾಗೂ ಯುವ ನಾಯಕರಾದ ರಾಜು ಕುನ್ನೂರ ಅವರ ನೇತೃತ್ವದಲ್ಲಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಸವಣೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಜೆ ಮುಲ್ಲಾ, ಸವಣೂರ ತಾಲೂಕ ಕುರುಬ ಸಮಾಜದ ಅಧ್ಯಕ್ಷರಾದ ರವಿ ಕರಿಗಾರ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.