ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ವೃದ್ದೆಯೋರ್ವರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮುಂಡಗೋಡ ಪಟ್ಟಣಕ್ಕೆ ಬಂದವರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ ಅಂತಾ ಆಕೆಯ ಪುತ್ರ ಮನವಿ ಮಾಡಿದ್ದಾರೆ.

ಕಾತೂರಿನ ಶಿವಕ್ಕ ಫಕ್ಕೀರಪ್ಪ ತಳವಾರ(65) ಎಂಬ ವೃದ್ದೆಯೇ ನಾಪತ್ತೆಯಾದವರು.
ನಿನ್ನೆ ಮುಂಜಾನೆ 10 ಘಂಟೆಗೆ ಕಾತೂರನಿಂದ ಮುಂಡಗೋಡಿಗೆ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಆಸ್ಪತ್ರೆಗೆ ಅಂತಾ ಬಂದವರು ವಾಪಸ್ ಮನೆಗೆ ಹೋಗದೆ ಎಲ್ಲಿಯೊ ನಾಪತ್ತೆಯಾಗಿದ್ದು, ಕುಟುಂಬಸ್ಥರು ಎಲ್ಲ ಕಡೆ ಹುಡುಕುತ್ತಿದ್ದಾರೆ. ಆದ್ರೆ ಇದುವರೆಗೂ ವೃದ್ದೆಯ ಪತ್ತೆಯಾಗಿಲ್ಲ. ಹೀಗಾಗಿ, ಯಾರಿಗಾದ್ರೂ ಇವ್ರು ಕಂಡುಬಂದಲ್ಲಿ ತಕ್ಷಣವೇ ಆಕೆಯ ಪುತ್ರ ಲಕ್ಷ್ಮಣ ತಳವಾರ ಮೊಬೈಲ್ ಸಂಖ್ಯೆ 7259996999 ಹಾಗೂ ವಿಜಯ್- 9611888517 ಎಂಬುವರಿಗೆ ಕರೆ ಮಾಡಲು ವಿನಂತಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!