ವಡಗಟ್ಟಾ ನಾಕಾ ಬಳಿ ಬೈಕ್ ಸ್ಕಿಡ್, ಸವಾರನ ಕಾಲು ಮುರಿತ, ತಾಲೂಕಾಸ್ಪತ್ರೆಗೆ ರವಾನೆ..!

ಮುಂಡಗೋಡ ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾನೆ.

ಕುಷ್ಟಗಿಯಿಂದ ಮಣಿಪಾಲಕ್ಕೆ ಬೈಕ್ ಮುಖಾಂತರ ತೆರಳುತ್ತಿದ್ದ ನಿರಂಜನ್ ಅಮರೇಶ್ ಅಮ್ಮಿನಗಡ ಎನ್ನುವ ವ್ಯಕ್ತಿಯ ಬೈಕ್ ಅಪಘಾತವಾಗಿದ್ದು, ಸದ್ಯ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡಿನ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.

ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳೀಯರು ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಮಾನವೀಯತೆ ತೋರಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!