ಹಾನಗಲ್ ತಾಲೂಕಿನ ಹೆರೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ವಿದ್ಯುತ್ ಲೈನ್ ದುರಸ್ಥಿ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ವಿದ್ಯುತ್ ಕಂಬದಿಂದ ಬಿದ್ದು ದಾರುಣ ಸಾವು ಕಂಡಿದ್ದಾನೆ. ಲೈನ್ ಮೆನ್ ನ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ಓರ್ವ ವ್ಯಕ್ತಿಯ ಪ್ರಾಣವನ್ನೇ ಕಿತ್ತುಕೊಂಡಿದೆ ಅಂತಾ ಜನರು ಆಕ್ರೋಶಗೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಫಕ್ಕೀರಪ್ಪ ಶಿವಾನಂದಪ್ಪ ಮಡಿವಾಳರ ಎಂಬುವ ವ್ಯಕ್ತಿಯೇ ದುರಂತ ಸಾವು ಕಂಡಿದ್ದು, ಹೆರೂರು ಭಾಗದಲ್ಲಿ ಲೈನ್ ಮೆನ್ ಆಗಿ ಕಾರ್ಯನಿರ್ವಹಿಸ್ತಿರೊ ತಿರುಪತಿ ತಹಶೀಲ್ದಾರ್ ಎಂಬುವವನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ.
ಘಟನೆ ಏನು..?
ಹಾನಗಲ್ ತಾಲೂಕಿನಲ್ಲಿ ಸಂಜೆ ಗುಡುಗು ಸಹಿತ ಮಳೆಯಾದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ಸಮಸ್ಯೆಯಾಗಿತ್ತು. ಹೀಗಾಗಿ, ವಿದ್ಯುತ್ ಸಮಸ್ಯೆಯನ್ನು ಸರಿ ಮಾಡಲು ಲೈನ್ ಮೆನ್ ಆದ ತಿರುಪತಿ ತಹಶೀಲ್ದಾರ್ ಸದ್ಯ ದುರಂತದಲ್ಲಿ ದಾರುಣ ಸಾವು ಕಂಡಿರೊ ಫಕ್ಕೀರಪ್ಪನಿಗೆ ಕಂಠ ಪೂರ್ತಿ ಮದ್ಯಪಾನ ಮಾಡಿಸಿ, ವಿದ್ಯುತ್ ಕಂಬ್ ಹತ್ತಿಸಿದ್ದಾನೆ. ಜೊತೆಗೆ ತಾನೂ ಕೂಡ ಕಂಠಪೂರ್ತಿ ಕುಡಿದು ನಶೆಯಲ್ಲೇ ವಿದ್ಯುತ್ ಸಂಪರ್ಕದ ಸಮಸ್ಯೆಯ ರಿಪೇರಿಗೆ ಇಳಿದಿದ್ದ ಎನ್ನಲಾಗಿದೆ.
ಈ ವೇಳೆ ನಶೆಯಲ್ಲಿಯೇ ಇದ್ದ ವ್ಯಕ್ತಿ ವಿದ್ಯುತ್ ಕಂಬ ಏರಿದ್ದು, ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಲೈನ್ ಮೆನ್ ತಿರುಪತಿ ತಹಶೀಲ್ದಾರ್ ಎಂಬುವವನನ್ನ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕೂಡಿ ಹಾಕಲಾಗಿದ್ದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.