ಇಂದೂರು ಕೊಪ್ಪದ ಈ ರಸ್ತೆಯಲ್ಲಿ ಸಂಚರಿಸಲು “ಗುಂಡಿ”ಗೆ ಗಟ್ಟಿ ಇರಬೇಕು..! ಅಧಿಕಾರಿಗಳೇ ಏನಿದು ಅವ್ಯವಸ್ಥೆ..?

ಇಂದೂರು ಕೊಪ್ಪದ ಈ ರಸ್ತೆಯಲ್ಲಿ ಸಂಚರಿಸಲು “ಗುಂಡಿ”ಗೆ ಗಟ್ಟಿ ಇರಬೇಕು..! ಅಧಿಕಾರಿಗಳೇ ಏನಿದು ಅವ್ಯವಸ್ಥೆ..?

 ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಗ್ರಾಮದ ಅದೊಂದು ರಸ್ತೆ ಹದಗೆಟ್ಟು ಹಳ್ಳ ಹಿಡಿದಿದೆ. ಹಾಗಂತ, ಸ್ಥಳೀಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದಾರೆ. ಕೊಪ್ಪ ಗ್ರಾಮದಿಂದ ಟಿಬೇಟಿಯನ್ ಕ್ಯಾಂಪ್ ನಂಬರ್ 3 ಕ್ಕೆ ಮಾರ್ಗ ಕಲ್ಪಿಸುವ ರಸ್ತೆ ನಡೆದಾಡಲೂ ಆಗದ ಸ್ಥಿತಿಗೆ ತಲುಪಿದೆ. ಅಧಿಕಾರಿಗಳ ನಿರ್ಲಕ್ಷ ಅನ್ನೋದು ಜನರ ಜೀವ ಹಿಂಡುತ್ತಿದೆ. ದಶಕಗಳ ಸಮಸ್ಯೆ..! ಸುಮಾರು 2 ಕೀಮಿ ಇರೋ ರಸ್ತೆ ದಶಕಗಳಿಂದಲೂ ಯಥಾಸ್ಥಿತಿಯಲ್ಲಿದೆ. ನಿತ್ಯವೂ ಇಲ್ಲಿ ಸಂಚರಿಸುವ ಜನ ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ಉ… ಉಪ್ಪಿನಕಾಯಿ ಹಾಕ್ತಿದಾರೆ. ರಸ್ತೆಯ ಅದ್ವಾನಗಳ ಬಗ್ಗೆ ಅದೇಷ್ಟೇ ಬಡಕೊಂಡ್ರೂ ಇದುವರೆಗೂ ಯಾರೂ ಕ್ಯಾರೇ ಅಂದಿಲ್ಲವಂತೆ. ಹಾಗಾಗಿ, ಇಲ್ಲಿನ ಜನ ಆಕ್ರೋಶಗೊಂಡಿದ್ದಾರೆ. ಕಣ್ಣಿದ್ದೂ ಕುರಡಾಗಿರೋ ಅಧಿಕಾರಿಗಳ ವಿರುದ್ಧ ಶಪಿಸುತ್ತಿದ್ದಾರೆ. ಆದ್ರೂ ಯಾರಂದ್ರೆ ಯಾರೂ ಈ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಪಿ.ಜಿ.ತಂಗಚ್ಚನ್ ಆಕ್ರೋಶ..! ಈ ಕಾರಣಕ್ಕಾಗೇ, ಇಲ್ಲಿನ ನಿವಾಸಿ ಪಿ.ಜಿ.ತಂಗಚ್ಚನ್ ಎಂಬುವವರು, ಹದಗೆಟ್ಟ ರಸ್ತೆಯ ಪೋಟೋಗಳನ್ನು ವಾಟ್ಸಾಪ್ ಗಳಲ್ಲಿ ಶೇರ್ ಮಾಡಿ ಆಕ್ರೋಶ...

ತ್ರಿವಳೀ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ, ಎರಡು ಗಂಡು, ಒಂದು ಹೆಣ್ಣು ಮಗು ಜನನ..!

ತ್ರಿವಳೀ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ, ಎರಡು ಗಂಡು, ಒಂದು ಹೆಣ್ಣು ಮಗು ಜನನ..!

ಕುಮಟಾ: ಮಹಾತಾಯಿಯೊಬ್ರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕುಮಟಾದ ಖಾಸಗಿ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಗೀತಾ ಪಟಗಾರ ಎಂಬುವ ಮಹಿಳೆಯೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದವಳಾಗಿದ್ದು, ಮದುವೆಯಾಗಿ 11ವರ್ಷದ ಬಳಿಕ ಎರಡು ಗಂಡು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಮೂರು ಮಕ್ಕಳು ಆರೋಗ್ಯವಾಗಿವೆ.

ಯಲ್ಲಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಾಗಿಸುತ್ತಿದ್ದ 6 ಒಂಟೆಗಳ ರಕ್ಷಣೆ..?

ಯಲ್ಲಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಾಗಿಸುತ್ತಿದ್ದ 6 ಒಂಟೆಗಳ ರಕ್ಷಣೆ..?

ಯಲ್ಲಾಪುರ ಪೊಲೀಸರು ನಿನ್ನೆ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ‌. ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 6  ಒಂಟೆಗಳನ್ನು ರಕ್ಷಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.  ಈಚರ್ ವಾಹನದಲ್ಲಿ, ಹುಬ್ಬಳ್ಳಿ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ, ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ ಒಂಟೆಗಳನ್ನು ಯಲ್ಲಾಪುರ ಪಟ್ಟಣದ ಜೋಡಕೆರೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಕ್ರೀದ್ ಹಬ್ಗಕ್ಕಾಗಿ ಬಲಿ ಕೊಡುವ ಸಂಬಂಧ ಒಂಟೆಗಳನ್ನ ಸಾಗಿಸಲಾಗುತ್ತಿತ್ತಾ..? ಅಥವಾ ಬೇರೆ ಯಾವುದೋ ಕಾರಣಕ್ಕೆ ಒಂಟೆಗಳನ್ನು ಸಾಗಿಸಲಾಗುತ್ತಿತ್ತಾ..? ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕೊಪ್ಪದಲ್ಲಿ ರಾತ್ರಿಯೇ ಅರಳಿ ನಿಂತ ಆ ಸುಂದರಿ ಯಾರು ಗೊತ್ತಾ..? ನೀವೂ ಒಮ್ಮೆ ಕಣ್ತುಂಬಿಕೊಳ್ಳಿ..!

ಕೊಪ್ಪದಲ್ಲಿ ರಾತ್ರಿಯೇ ಅರಳಿ ನಿಂತ ಆ ಸುಂದರಿ ಯಾರು ಗೊತ್ತಾ..? ನೀವೂ ಒಮ್ಮೆ ಕಣ್ತುಂಬಿಕೊಳ್ಳಿ..!

 ಅದು ನಟ್ಟ ನಡುರಾತ್ರಿ, ಸುರಿಯುತ್ತಿರೋ ಮಹಾಮಳೆ, ಆ ಮಳೆಯ ರಪ ರಪ ಸಪ್ಪಳದ ನಡುವೆ ಅಲ್ಲೊಬ್ಬಳು ಸುಂದರಿ ತನ್ನೊಳಗಿನ ಸುಂದರ ರೂಪ ಹೊರಸೂಸಿದ್ದಳು. ಪವಾಡವೆಂಬಂತೆ ಮೆಲ್ಲನೆ ಅರಳಿ ನಿಂತಿದ್ದ ಚೆಲುವೆಯ ಸುತ್ತ ಮಧುರ, ಸುಮಧುರ ಘಮಲು. ನಿಜಕ್ಕೂ ಅದೊಂದು ಅದ್ಭುತ ಕ್ಷಣ.. ಆ ಅದ್ಬುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು ತಾಲೂಕಿನ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ ಕುಟುಂಬ.. ಹೌದು, ತಾಲೂಕಿನ ಕೊಪ್ಪ ಗ್ರಾಮ ಮೋಹನ್ ಪಾಣತ್ರಿಯಲ್ ಮನೆಯಲ್ಲಿ ನಿನ್ನೆ ರಾತ್ರಿ ಮಹಾ ಸುಂದರಿ ಜನ್ಮ ತಾಳಿದ್ದಾಳೆ. ಅಪ್ಪಟ ಮನಮೋಹಕ ಸೌಂದರ್ಯ ದೇವತೆ ಅರಳಿ ನಿಂತಿದಾಳೆ. ರಾತ್ರಿ ಘಮ್ಮೆನ್ನುವ ಸುಮಧುರತೆ ಬಿತ್ತಿರೋ ಬ್ರಹ್ಮ ಕಮಲ ಅರಳಿ ನಿಂತಿದೆ. ಬ್ರಹ್ಮ ಕಮಲ ಅರಳೊರೋ ದೃಷ್ಯವನ್ನು ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ. ಹಲವರು ಬ್ರಹ್ಮ ಸುಂದರಿಯ ಅರಳಿ ನಿಂತ ಸೋಬಗು ಕಣ್ತುಂಬಿಕೊಂಡಿದ್ದಾರೆ‌. ಜಾಹೀರಾತು

ಚಿರತೆ ಬಂತು ಚಿರತೆ, ಬರೀ ಅಂತೆ ಕಂತೆ, ವದಂತಿಗಳಿಂದ ಆತಂಕದಲ್ಲಿದ್ದಾರೆ ಮಜ್ಜಿಗೇರಿ ಭಾಗದ ರೈತರು..!

ಚಿರತೆ ಬಂತು ಚಿರತೆ, ಬರೀ ಅಂತೆ ಕಂತೆ, ವದಂತಿಗಳಿಂದ ಆತಂಕದಲ್ಲಿದ್ದಾರೆ ಮಜ್ಜಿಗೇರಿ ಭಾಗದ ರೈತರು..!

ಮುಂಡಗೋಡ; ತಾಲೂಕಿನಲ್ಲಿ ಚಿರತೆಯ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಚಿರತೆ, ಹುಲಿಗಳ ಬಗೆಗಿನ ಬಗೆ ಬಗೆಯ ವದಂತಿಗಳು ಎಲ್ಲೆಡೆ ಹರಡುತ್ತಿವೆ. ಹೀಗಾಗಿ, ಜನ್ರು ಹೊಲ ಗದ್ದೆಗಳಿಗೆ ಹೋಗಲು ಭಯ ಪಡುವಂತಾಗಿದೆ. ಮಜ್ಜಿಗೇರಿಯಲ್ಲಿ ಶುಕ್ರವಾರ ಚಿರತೆ ಕುರಿ ತಿಂದು ಹಾಕಿದ ಘಟನೆ ಬೆಳಕಿಗೆ ಬಂದ‌ ನಂತರವಂತೂ ಈ ಭಾಗದ ಜನರ ಭಯ ಮತ್ತಷ್ಟು ದುಪ್ಪಟ್ಟಾಗಿದೆ. ಹೊರಗೆ ಹೋಗಲೂ ಕೂಡ ಭಯ ಪಡುವಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳು ಭಯ ಪಡೋದು ಬೇಡ, ಎಚ್ಚರಿಕೆ ಇಂದ ಇರಿ ಅಂತಾ ಜನ್ರಿಗೆ ಮನವಿ ಮಾಡಿದ್ದಾರೆ. ಹಾಗೇನಾದ್ರೂ ನಿಮಗೆ ಅಂತಹ ಕಾಡು ಪ್ರಾಣಿಗಳು ಕಂಡ್ರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿ ಅಂದಿದ್ದಾರೆ.  ಸುಳ್ಳು ವದಂತಿಗಳು..! ಮಜ್ಜಿಗೇರಿಯಲ್ಲಿ ಶುಕ್ರವಾರ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ಹಾಗೆ ಘಟನೆ ನಡೆದ ನಂತರವಂತೂ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಬಗೆ ಬಗೆಯ ವದಂತಿಗಳು ಹರಿದಾಡತೊಡಗಿವೆ. ಅಲ್ಲಿ ಬಂತು, ಇಲ್ಲಿ ಕಾಣ್ತು ಅಂತಾ ಅದ್ಯಾವುದೊ ಬೇರೆ...

ಕೊಪ್ಪದಲ್ಲಿ ದಾರಿತಪ್ಪಿ ಬಂದಿದ್ದ ಅಪರೂಪದ ಕಾಡು ಪ್ರಾಣಿ, ರಕ್ಷಿಸಿದ ಅರಣ್ಯ ಸಿಬ್ಬಂದಿ..!

ಕೊಪ್ಪದಲ್ಲಿ ದಾರಿತಪ್ಪಿ ಬಂದಿದ್ದ ಅಪರೂಪದ ಕಾಡು ಪ್ರಾಣಿ, ರಕ್ಷಿಸಿದ ಅರಣ್ಯ ಸಿಬ್ಬಂದಿ..!

 ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಅಪರೂಪ ಕಾಡುಪ್ರಾಣಿಯನ್ನು ರಕ್ಷಿಸಲಾಗಿದೆ. ನಿರಂತರ ಸುರಿಯುತ್ತಿರೊ ಮಳೆಯಿಂದ ಕಂಗೆಟ್ಟ ಕಾಡು ಬೆಕ್ಕು(Indian small sivit) ಅನ್ನು ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಅಂದಹಾಗೆ, ಇಂದು ಬೆಳಿಗ್ಗೆ ಕೊಪ್ಪ ಗ್ರಾಮದ ರಸ್ತೆ ಪಕ್ಕದ ಪೊದೆಯಲ್ಲಿ ಈ ಅಪರೂಪದ ಪ್ರಾಣಿ ಕಂಡಿದೆ. ಆಹಾರ ಅರಸಿಯೋ ಅಥವಾ ನಿರಂತರ ಮಳೆಯಿಂದಲೋ ಕಂಗೆಟ್ಟಿದೆ. ಹೀಗಾಗಿ, ಕಾಡು ಬಿಟ್ಟು ನಾಡಿನೆಡೆ ಬಂದಿದ್ದ ಕಾಡುಬೆಕ್ಕು ತೀವ್ರ ಭಯದಿಂದ ಅಲ್ಲೇ ಸುಳಿದಾಡಿದೆ. ಹೀಗಾಗಿ, ಈ ದೃಷ್ಯ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಕಾಡುಬೆಕ್ಕು ರಕ್ಷಿಸಿದ್ದಾರೆ. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ, ಸಾಗರ್, ಮಂಜುನಾಥ್ ಪೂಜಾರ್, ಶಿವಪ್ಪ ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದಾರೆ.

ಮುಂಡಗೋಡ ಬಿಜೆಪಿಯಲ್ಲೀಗ “ರಾಜೀ”ನಾಮೆ ಪರ್ವ; ಅಷ್ಟಕ್ಕೂ, ಬದಲಾವಣೆಯ ಆಟದಲ್ಲಿ ಗೆಲ್ಲೋರು ಯಾರು..?

ಮುಂಡಗೋಡ ಬಿಜೆಪಿಯಲ್ಲೀಗ “ರಾಜೀ”ನಾಮೆ ಪರ್ವ; ಅಷ್ಟಕ್ಕೂ, ಬದಲಾವಣೆಯ ಆಟದಲ್ಲಿ ಗೆಲ್ಲೋರು ಯಾರು..?

ಮುಂಡಗೋಡ: ಬಿಜೆಪಿಯಲ್ಲಿ ಬದಲಾವಣೆ ಪರ್ವ ಶುರುವಾಗಿದೆಯಾ..? ಒಳ ಒಪ್ಪಂದಗಳನ್ನು ಮೀರಿ, ಬಹುತೇಕ ಪಕ್ಷದ ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದ್ದ ಅಧ್ಯಕ್ಷರು, ಉಪಾಧ್ಯಕ್ಷರ ರಾಜೀನಾಮೆ ಮಸಲತ್ತುಗಳಿಗೆ ಬಿಜೆಪಿ ಪಕ್ಷದ ಕೋರ್ ಕಮೀಟಿ ಮೂಗುದಾಣ ಹಾಕಲು ಸನ್ನದ್ಧವಾಗಿದೆ ಅನ್ನೊ ಖಚಿತ ಮಾಹಿತಿ ಲಭ್ಯವಾಗಿದೆ. 15-15 ರ ಒಪ್ಪಂದ..! ಅಂದಹಾಗೆ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹಲವು ಕಡೆ ಭರ್ಜರಿ ಜಯ ದಾಖಲಿಸಿದ್ದರು. ಹೀಗಾಗಿ, ಬಿಜೆಪಿ ಬೆಂಬಲಿತರಿಗೆ ಅಧಿಕಾರದ ಚುಕ್ಕಾಣಿ ಸಿಕ್ಕಿದ್ದ ಹಲವು ಗ್ರಾಪಂ ಗಳಲ್ಲಿ ಅವತ್ತು, ಅಧಿಕಾರದ ಹಂಚಿಕೆಯಲ್ಲಿ ಒಳ ಒಪ್ಪಂದಗಳಾಗಿದ್ದವು. ಅದ್ರಂತೆ ಬಹುತೇಕ 15-15 ರ ಮಾತುಕತೆ ಆಗಿದ್ದವು. ಆದ್ರೆ, ಹಾಗೆ ಒಪ್ಪಂದಗಳಿಗೆ ಒಳಪಟ್ಟು ಅಧ್ಯಕ್ಷ ಪದವಿಗೆ ಏರಿದ್ದ ಅಧ್ಯಕ್ಷರುಗಳು 15 ತಿಂಗಳು ಕಳೆದು ಹಳೇ ಮಾತಾದ್ರೂ, ಅಧಿಕಾರ ಹಸ್ತಾಂತರಿಸುವ ಗೋಜಿಗೇ ಹೋಗಿರಲಿಲ್ಲ. ಹೀಗಾಗಿ, ಆಯಾ ಗ್ರಾಮ ಪಂಚಾಯತಿಗಳಲ್ಲಿ ಪಟ್ಟಕ್ಕೇರಿದ್ದ ಬಿಜೆಪಿ ಬೆಂಬಲಿತರಲ್ಲೇ ಕಚ್ಚಾಟಗಳು ಹಾದಿ ಬೀದಿಗೆ ಬಂದಿದ್ದವು. ಕೆಲವು ಕಡೆ ಕೋರ್ಟ್ ಅಂಗಳಕ್ಕೂ ಹೋಗಿ ತಡೆಯಾಜ್ಞೆ, ತೆರವು ಆಜ್ಞೆ ಅಂತೇಲ್ಲ...

ಮಜ್ಜಿಗೇರಿ ಬಳಿ ಚಿರತೆ ಪ್ರತ್ಯಕ್ಷ..? ಅನಾಮತ್ತಾಗಿ 12 ಕುರಿಗಳನ್ನು ತಿಂದು ಹಾಕ್ತಾ ಚಿರತೆ..? ಗ್ರಾಮಸ್ಥರಲ್ಲಿ ಆತಂಕ..!

ಮಜ್ಜಿಗೇರಿ ಬಳಿ ಚಿರತೆ ಪ್ರತ್ಯಕ್ಷ..? ಅನಾಮತ್ತಾಗಿ 12 ಕುರಿಗಳನ್ನು ತಿಂದು ಹಾಕ್ತಾ ಚಿರತೆ..? ಗ್ರಾಮಸ್ಥರಲ್ಲಿ ಆತಂಕ..!

 ಮುಂಡಗೋಡ: ತಾಲೂಕಿನ ಮಜ್ಜಿಗೇರಿ ಬಳಿಯ ಕಾಡಿನಲ್ಲಿ ಚಿರತೆ ಪ್ರತ್ಯಕ್ಷವಾಗಿರೋ ಅನುಮಾನ ದಟ್ಟವಾಗಿದೆ. ಕಾಡಿನಲ್ಲಿ ಮೇಯಲು ಹೋಗಿದ್ದ ಬರೋಬ್ಬರಿ 12 ಕುರಿಗಳನ್ನು ಚಿರತೆ ಕೊಂದು ಹಾಕಿದೆ ಅಂತಾ ಹೇಳಲಾಗ್ತಿದೆ. ಮಜ್ಜಿಗೇರಿ ಗ್ರಾಮದ ಬರಮಣ್ಣ ಉಗ್ರಾಣಿ ಎಂಬುವವರಿಗೆ ಸೇರಿದ 10 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ನಿನ್ನೆ ಸಂಜೆ 4 ಗಂಟೆಯ ಹೊತ್ತಿನಲ್ಲಿ ಚಿರತೆಯನ್ನು ಬರಮಣ್ಣ ನೋಡಿದ್ದಾರೆ ಎನ್ನಲಾಗಿದೆ. ಆದ್ರೆ, ಹಾಗೆ ಚಿರತೆ ಕಂಡ ತಕ್ಷಣವೇ ಭಯದಿಂದ ಕಾಲ್ಕಿತ್ತಿರೊ ಬರಮಣ್ಣ ಉಗ್ರಾಣಿಯವರ 10 ಕುರಿಗಳು ಹಾಗೆ ಬೇರೆಯವರ 2 ಕುರಿಗಳು ನಾಪತ್ತೆಯಾಗಿವೆ. ರಾತ್ರಿ ಹುಡುಕಾಡಿದ್ರೂ ಕುರಿಗಳು ಪತ್ತೆಯಾಗಿರಲಿಲ್ಲ. ಆದ್ರೆ, ಬೆಳಿಗ್ಗೆ ಕಾಡಿನಲ್ಲಿ ಕುರಿಗಳು ಮೃತಪಟ್ಟಿರೋದು ಪತ್ತೆಯಾಗಿದೆ. 6 ಕುರಿಗಳ ಮೃತದೇಹಗಳು ಪತ್ತೆಯಾಗಿವೆ. ಹೀಗಾಗಿ, ಚಿರತೆಯೇ ಕುರಿಗಳನ್ನು ತಿಂದು ಹಾಕಿದೆ ಅನ್ನೋ ಅನುಮಾನ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಮನಿಸಬೇಕಿದೆ.

ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆಯಿಲ್ಲ..!

ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆಯಿಲ್ಲ..!

ಮುಂಡಗೋಡ: ನಾಳೆ ಶುಕ್ರವಾರ ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶ ನೀಡಿರುವಂತೆ ಕರಾವಳಿ ಭಾಗದ ತಾಲೂಕುಗಳಾದ ಕಾರವಾರ, ಅಂಕೋಲಾ, ಭಟ್ಕಳ, ಕುಮಟಾ, ಹೊನ್ನಾವರ ಹಾಗೂ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಜೋಯಿಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ. ಆದ್ರೆ, ಮುಂಡಗೋಡ ತಾಲೂಕಿಗೆ ರಜೆ ನೀಡಲಾಗಿಲ್ಲ ಅಂತಾ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ..!

ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ..!

 ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು, ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹಕ್ಕೆ ಬೆಂಬಲಿಸಿ ಹಾಗೂ ಬೇಡ ಜಂಗಮ, ಬುಡ್ಗ ಜಂಗಮ, ಮಾಲ ಜಂಗಮದವರಾದ ನಮಗೆ ಸಂವಿಧಾನಾತ್ಮಕವಾಗಿ ಸಿಗುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ವಿತರಿಸುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಂಗಮ ಸಮುದಾಯದಿಂದ ಮನವಿ ನೀಡಲಾಯಿತು. ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತೃತ್ವ ವಹಿಸಿರುವ ನ್ಯಾಯವಾದಿ ಬಿ. ಡಿ. ಹಿರೇಮಠ ಅವರು ಬೇಡ ಜಂಗಮ ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ನಮ್ಮೇಲ್ಲರ ಬೆಂವಲವಿದೆ ಅಂತಾ‌ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ವೇಳೆ, ರುದ್ರಮನಿ ಶಾಸ್ತ್ರಿಗಳು, ಬಸಯ್ಯ ಶಾಸ್ತ್ರಿಗಳು, ಮಂಜುನಾಥ್ ಹಿರೇಮಠ, ಶಿವಯೋಗಿ ಕೂಡಲಮಠ, ಚನ್ನಬಸಯ್ಯ ಹಿರೇಮಠ, ನಿಂಗಯ್ಯ ಸುರಗಿ ಮಠ,...

error: Content is protected !!