ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು, ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹಕ್ಕೆ ಬೆಂಬಲಿಸಿ ಹಾಗೂ ಬೇಡ ಜಂಗಮ, ಬುಡ್ಗ ಜಂಗಮ, ಮಾಲ ಜಂಗಮದವರಾದ ನಮಗೆ ಸಂವಿಧಾನಾತ್ಮಕವಾಗಿ ಸಿಗುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ವಿತರಿಸುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಂಗಮ ಸಮುದಾಯದಿಂದ ಮನವಿ ನೀಡಲಾಯಿತು.
ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತೃತ್ವ ವಹಿಸಿರುವ ನ್ಯಾಯವಾದಿ ಬಿ. ಡಿ. ಹಿರೇಮಠ ಅವರು ಬೇಡ ಜಂಗಮ ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ನಮ್ಮೇಲ್ಲರ ಬೆಂವಲವಿದೆ ಅಂತಾ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ವೇಳೆ, ರುದ್ರಮನಿ ಶಾಸ್ತ್ರಿಗಳು, ಬಸಯ್ಯ ಶಾಸ್ತ್ರಿಗಳು, ಮಂಜುನಾಥ್ ಹಿರೇಮಠ, ಶಿವಯೋಗಿ ಕೂಡಲಮಠ, ಚನ್ನಬಸಯ್ಯ ಹಿರೇಮಠ, ನಿಂಗಯ್ಯ ಸುರಗಿ ಮಠ, ವೀರಯ್ಯ ಕರ್ಪೂರಮಠ, ಬಸವರಾಜ್ ನಡುವಿನಮನಿ, ವಿವೇಕ್ ಹಿರೇಮಠ್ ಸೇರಿದಂತೆ ಬೇಡ ಜಂಗಮ ಸಮಾಜ ಬಾಂಧವರು ಹಾಜರಿದ್ದರು.