ಹಾವೇರಿ: ಇಲ್ಲಿಗೆ ಸಮೀಪದ ಗುಂಡನಹಳ್ಳಿ ಕ್ರಾಸ್ ಬಳಿರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶುಕ್ರವಾರ ಬೆಳಗಿನ ಜಾವ 3.40ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳೂ ಸೇರಿ13 ಜನರು ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದ್ದು, ವಾಹನದಲ್ಲಿದ್ದ ಚಾಲಕ ಸೇರಿ ನಾಲ್ವರು ಪುರುಷರು, ಏಳುಜನ ಮಹಿಳೆಯರು, ಮಗು, ಓರ್ವ ಅಜ್ಜಿ, ಓರ್ವ ವಿಕಲಚೇತನ ಯುವತಿ ಸೇರಿದ್ದು, ಶವಗಳನ್ನು ಇಲ್ಲಿ ನ ಜಿಲ್ಲಾ ಆಸ್ಪತ್ರೆ ಗೆ ಸಾಗಿಸಲಾಗಿದೆ. ಅಪಘಾತ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ 108ರ ವಾಹನದ ಸ್ಟಾಪ್ ನರ್ಸ ಶಂಕರ್ ಲಮಾಣಿ, ಚಾಲಕರು ಟಿಟಿ ವಾಹನದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಣೆ ಮಾಡಿ ಅವರಿಗೆ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಈ ಮೂವರು ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಚಿಕಿತ್ಸೆಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬಳಿಯ ಎಮ್ಮೆ ಹಟ್ಟಿ ಗಂಗಾಮದವರನ್ನು ತಿಳಿದು ಬಂದಿದೆ ಟಿಟಿ...
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?
ಮುಂಡಗೋಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಹಳ್ಳ ಹಿಡಿತಿದೆಯಾ..? ಅವನೊಬ್ಬ ಬಕಾಸುರ ಬಗಬಂಡಿಯಿಂದ ಬಡ ಕೂಲಿ ಕಾರ್ಮಿಕರಿಗೆ ಬದುಕಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ, ಕೆಲ ಆಸೆ ಬುರುಕ ಗ್ರಾಮ ಪಂಚಾಯತಿ ಮೆಂಬರುಗಳಿಗೆ ರೊಕ್ಕ ಗಳಿಸುವ ಅಡ್ಡ ಕಸುಬು ಆಗ್ತಿದೆಯಾ..? ಇಂತಹದ್ದೊಂದು ಅನುಮಾನ ಇಂದೂರಿನ ಈ ಗ್ರಾಮ ಪಂಚಾಯತಿ ಸದಸ್ಯನ ಮಾತುಗಳನ್ನು ಕೇಳಿದ್ರೆ ಎಂತವರಿಗೂ ಅರ್ಥವಾಗ್ತಿದೆ. ಅದು ಇಂದೂರು ಪಂಚಾಯತಿ..! ಯಸ್, ಇಂದೂರು ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಇದುವರೆಗೂ ಒಂದಿಷ್ಟು ಮಾನ ಮರ್ಯಾದೆ ಅಂತಾ ಇಟ್ಕೊಂಡು ಹೆಸರುವಾಸಿಯಾಗಿತ್ತು. ಆದ್ರೆ, ಈಗ ಅದೇ ಗ್ರಾಮ ಪಂಚಾಯತಿಯ ಗೌರವಾನ್ವಿತ ಸದಸ್ಯರುಗಳು, ಸಿಬ್ಬಂದಿಗಳೇ ಅಲ್ಲಿನ ಅಸಲೀ ಹೂರಣ ಬಿಚ್ಚಿಟ್ಟಿದ್ದಾರೆ. ಬಡ ಕೂಲಿ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರೋ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯನ್ನು ಹೇಗೇಲ್ಲ ಹಳ್ಳಹಿಡಿಸಿದ್ದಾರೆ ಅಂತಾ ಖುದ್ದು, ಪಂಚಾಯತಿ ಸದಸ್ಯರೇ ಆರೋಪಿಸಿದ್ದಾರೆ. ಅಸಲು, ಸರ್ಕಾರ ಬಡ ಕೂಲಿ ಕಾರ್ಮಿಕರಿಗಾಗೇ ರೂಪಿಸಿರೋ ಮಹತ್ವದ ಈ ಯೋಜನೆ, ಬಡ ಕೂಲಿ ಕಾರ್ಮಿಕರ ಬದಲಾಗಿ ಜೆಸಿಬಿ ಮಾಲೀಕರ ಪಾಲಾಗುತ್ತಿದೆ. ಅದ್ರಲ್ಲೂ...
ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!
ಇದು ಮುಂಡಗೋಡ ಪೊಲೀಸಪ್ಪನ ಘನಂಧಾರಿ ಕೆಲಸ. ಯುವತಿಯೋರ್ವಳಿಗೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಮುಂಡಾಮೋಚಿದ ನಯವಂಚಕತನದ ಸ್ಟೋರಿ. ಈತನಿಗೆ ಈ ಹಿಂದೆಯೇ ಇಲ್ಲಿನ ಇಲಾಖೆಯ ಹಿರಿಯರು ಒಂದಿಷ್ಟು ಕಿವಿ ಹಿಂಡಿದ್ದಿದ್ರೆ ಬಹುಶಃ ಇವತ್ತು ಇಡೀ ಇಲಾಖೆಗೆ ಆಗಿರೋ ಮುಜುಗರ ಒಂದಿಷ್ಟು ತಪ್ಪುತ್ತಿತ್ತೋ ಏನೋ. ಆದ್ರೆ, ಯಾರಂದ್ರೆ ಯಾರೂ ಈತನ ಅಡ್ನಾಡಿ ಕೆಲಸಗಳ ವಿರುದ್ಧ ಧನಿ ಎತ್ತಲೇ ಇಲ್ಲ. ಹೀಗಾಗಿ ಇವತ್ತು ಅದೊಂದು ಅಮಾಯಕ ಹೆಣ್ಣು ಜೀವ ಮುಂಡಗೋಡ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದೆ. ತನಗೆ ಆಗಿರೋ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದಿದೆ. ಅಸಲು, ಈಗಲೂ ಆಕೆಗೆ ಖಡಾಖಂಡಿತವಾದ ನ್ಯಾಯ ಸಿಕ್ಕತ್ತೆ ಅನ್ನೋ ಭರವಸೆನೇ ಉಳಿದಿಲ್ಲ. ಬರೋಬ್ಬರಿ 18 ಲಕ್ಷ..! ಸದ್ಯ ಮುಂಡಗೋಡ ಠಾಣೆಯಲ್ಲಿ ಹಾಸನದ ಯುವತಿಯೋರ್ವಳು ಗಿರೀಶ್ ಅನ್ನೊ ಪೊಲೀಸಪ್ಪನ ವಿರುದ್ಧ ವಂಚನೆಯ ಕೇಸ್ ದಾಖಲಿಸಿದ್ದಾರೆ. ಬರೋಬ್ಬರಿ 18 ಲಕ್ಷಗಳನ್ಜು ವಂಚಿಸಿರೋ ಆರೋಪ ಆತನ ಮೇಲಿದೆ. ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಆರೋಪಿ ಪೊಲೀಸಪ್ಪ ನಾಪತ್ತೆಯಾಗಿದ್ದಾನೆ ಅನ್ನೋ ಮಾಹಿತಿ ಇದೆ. ಹೀಗಾಗಿ, ತನ್ನ...
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಬಂಧನ! ಯಾಕೆ ಗೊತ್ತಾ..?
ಶಿವಮೊಗ್ಗ : ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಗ್ವೆ ಬಂಧನವಾಗಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿರುವ ಅರುಣ್ ಕುಗ್ವೆ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಮುಂದಿನ 5 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಅರುಣ್ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ, ಇದೇ ಜೂ. 28 ಕ್ಕೆ ಅರುಣ್ ಕುಗ್ವೆ ಮದುವೆ ಫಿಕ್ಸ್ ಆಗಿತ್ತು. ಆದ್ರೆ, ಅದಕ್ಕೂ ಮೊದಲೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಪೊಲೀಸರಿಂದ ಬಂಧನವಾಗಿದೆ. ಮಹಿಳೆಯೊಬ್ಬರಿಗೆ ಬಳಸಿಕೊಂಡಿರುವ ಆರೋಪ ಹೊತ್ತಿರೋ ಅರುಣ್, ತನಗೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಮಹಿಳೆ ಆರೋಪಿಸಿ ಕೇಸು ದಾಖಲಿಸಿದ್ದಾರೆ. http://*Exclusive* *ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..?* *ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..?* *ಅಷ್ಟಕ್ಕೂ ಅವ್ರದ್ದೇನಾ ಈ ಫೋನ್ ಸಂಭಾಷಣೆ ಆಡಿಯೋ..?* *ಪಬ್ಲಿಕ್ ಫಸ್ಟ್ ನ್ಯೂಸ್* *https://publicfirstnewz.com/?p=33381*
ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!
ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಬ್ಬ ಶಂಕಿತ (Suspected Terrorist) ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ತೀವ್ರ ಶೋಧ ನಡೆಸಿದ್ದು, ಶಂಕಿತ ಉಗ್ರನ ನಿವಾಸಕ್ಕೆ ATS ಅಧಿಕಾರಿಗಳು ನೋಟಿಸ್ ಅಂಟಿಸಿದ್ದು, ಶಂಕಿತನ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರು ಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್ ನಡೆಸಿದೆ. ಆರೋಪಿ ಪತ್ತೆಗೆ ಉಗ್ರ ನಿಗ್ರಹ ಪಡೆ ಉತ್ತರ ಕನಡ ಜಿಲಾಡಳಿತದ ನೆರವು ಕೇಳಿದೆ. ಈತ ಮಹಾರಾಷ್ಟ್ರದಲ್ಲಿ ಉಗ್ರ ನಿಗ್ರಹ ಪಡೆ ಪುಣೆ ವಿಭಾಗದಲ್ಲಿ ಯುಎಪಿಎಎ (ಕಾನೂನುಬಾಹಿರ ಕೃತ್ಯ ತಡೆ ಕಾಯಿದೆ) ಅಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅಬ್ದುಲ್ ಕಬೀರ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ್ ಹೆಸರಿನ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನವಾಯತ...
ಬಿಸಿಯೂಟದ ಸಿಬ್ಬಂದಿ ನೇಮಕಕ್ಕೂ ಫಿಕ್ಸ್ ಆಯ್ತಾ ರೇಟು..? ಮುಂಡಗೋಡ ತುಂಬ, ಪ.ಪಂ. ಸದಸ್ಯೆ ಆಡಿರೋ ಮಾತಿನದ್ದೇ ಘಾಟು..!
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಬಿಸಿಯೂಟದ ನೌಕರಿ ಬಿಕರಿಗಿದೆಯಾ..? ಇಂತಹದ್ದೊಂದು ಅನುಮಾನ ಅದೊಂದು ಆಡಿಯೋ ಕೇಳಿದ ಎಂತವ್ರಿಗೂ ಮೂಡದೇ ಇರಲ್ಲ. ಮುಂಡಗೋಡ ಪಟ್ಟಣ ಪಂಚಾಯತಿಯ ಸದಸ್ಯೆಯೊಬ್ಬರು ಮಾತನಾಡಿದ್ದು ಎನ್ನಲಾದ ಆಡಿಯೋ ಸದ್ಯ ಊರ ತುಂಬಾ ವೈರಲ್ ಆಗಿದೆ. ಖುಲ್ಲಂ ಖುಲ್ಲಾ ದಂಧೆನಾ..? ಅಷ್ಟಕ್ಕೂ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಎರಡು ಶಾಲೆಗಳಿಗೆ ಅವಶ್ಯವಿರುವ ಬಿಸಿಯೂಟದ ಸಿಬ್ಬಂದಿಯ ನೇಮಕದಲ್ಲಿ ಪಟ್ಟಣ ಪಂಚಾಯತಿಯ ಆ ಸದಸ್ಯೆ ಖುಲ್ಲಂ ಖುಲ್ಲಾ ವ್ಯವಹಾರಕ್ಕೆ ಇಳಿದು ಬಿಟ್ರಾ..? ಬಿಸಿಯೂಟದ ಸಿಬ್ಬಂದಿಗಳ ನೇಮಕಕ್ಕೆ, ಬರೋಬ್ಬರಿ ತಲಾ 50 ಸಾವಿರ ರೂ. ರೇಟು ಫಿಕ್ಸ್ ಆಗಿ ಹೋಯ್ತಾ..? ಇದೇಲ್ಲ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಈ ಆಡಿಯೋ ಸಂಭಾಷಣೆಯಿಂದ ಅನುಮಾನ ಮೂಡಿಸಿ, ತಲೆ ಗಿರ್ರ್ ಅನಿಸಿದೆ. ಬೇಕಾಗಿದ್ದು ಎರಡು ಸ್ಥಾನ..! ಅಸಲು, ಮುಂಡಗೋಡ ಪಟ್ಟಣದ ಮಾರಿಕಾಂಬಾ ನಗರದ ಕಿರಿಯ ಪ್ರಾಥಮಿಕ ಶಾಲೆ, ಹಾಗೂ ಬಸವನಗರದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಂದರಂತೆ, ಎರಡು ಬಿಸಿಯೂಟದ ಸಿಬ್ಬಂದಿಯ ಹುದ್ದೆ ಖಾಲಿಯಿದೆ. ಹೀಗಾಗಿ, ಖಾಲಿಯಿರೋ ಹುದ್ದೆಗಳನ್ನು...
ಪಾಳಾ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಮರ, ಮಗು ಸೇರಿ ದಂಪತಿಗೆ ಗಂಭೀರ ಗಾಯ..!
ಪಾಳಾ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಬಿದ್ದ ಪರಿಣಾಮ ಒಂದು ಮಗು ಸೇರಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಾಳಾದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆ ಬದಿಯ ಹಳೆಯ ಮರ ಬಿದ್ದು ಘಟನೆ ಸಂಭವಿಸಿದೆ. ಮುಂಡಗೋಡ ತಾಲೂಕಿನ ಚಿಟಗೇರಿಯ ಪರಶುರಾಮ್ ಸಿದ್ದಪ್ಪ ನಾಯ್ಕರ್, ಮಧು ಪರಶುರಾಮ್ ನಾಯ್ಕರ್ ಹಾಗೂ ಒಂದೂವರೆ ವರ್ಷದ ಮಗು ಧನವೀರ್ ಪರಶುರಾಮ್ ನಾಯ್ಕರ್ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೆ ಮಗುವನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುಂಡಗೋಡ ಪಿಎಸ್ ಐ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಾಳಾ ಬಳಿ ಬೈಕ್ ಸವಾರನ ಮೇಲೆ ಉರುಳಿ ಬಿದ್ದ ಮರ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಪಾಳಾ ಕ್ರಾಸ್ ಬಳಿ ರಸ್ತೆ ಮೇಲೆ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮರ ಉರುಳಿಬಿದ್ದು ಗಂಭೀರ ಗಾಯವಾದ ಘಟನೆ ನಡೆದಿದೆ. ಪಾಳಾದಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆ ಬದಿಯ ಹಳೆಯ ಮರ ಬಿದ್ದು ಘಟನೆ ಸಂಭವಿಸಿದೆ. ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸದ್ಯ ಗಾಯಾಳುವನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಮುಂಡಗೋಡ ಪಿಎಸ್ ಐ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶಿರಸಿ ದಾಸನಕೊಪ್ಪದಲ್ಲಿ ಭಯೋತ್ಪಾದನೆ ನಂಟು; ಓರ್ವನನ್ನು ವಶಕ್ಕೆ ಪಡೆದ NIA
ಶಿರಸಿ: ಭಯೋತ್ಪಾದನೆಯ ನಂಟಿನ ಜಾಲ ಭೇದಿಸಲು ಶಿರಸಿಗೆ ಬಂದಿಳಿದ ಎನ್ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ದಾಸನಕೊಪ್ಪದ ಅಬ್ದುಲ್ ಸಕೂರ್ ಎನ್ಐಎ ವಶದಲ್ಲಿರುವ ಆರೋಪಿ. ಈತನು ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟನಲ್ಲಿ ನಕಲಿ ದಾಖಲೆ ನೀಡಿರುವ ಆರೋಪವಿತ್ತು. ಈ ನಡುವೆ ದುಬೈನಿಂದ ಬಕ್ರೀದ್ ಹಬ್ಬಕ್ಕೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಅಬ್ದುಲ್ ಸಕೂರ್ ಆಗಮಿಸಿದ್ದ. ಈ ವೇಳೆ ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಎನ್ಐಎ ತಂಡವು ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ದಾಸನಕೊಪ್ಪದ ಕಾಡಲ್ಲಿ ಇಂದೂರು ಹುಡುಗನ ಭಯಾನಕ ಹತ್ಯೆ, ಖಾಸಾ ಗೆಳೆಯನಿಂದ್ಲೇ ಮರ್ಡರ್ ಆದ್ನಾ ಮಲ್ಲಪ್ಪ..?
ಇಂದೂರಿನ ಹುಡುಗನೊಬ್ಬ ಬನವಾಸಿಯ ಕಾಡಲ್ಲಿ ಭಯಾನಕವಾಗಿ ಹತ್ಯೆಯಾಗಿದ್ದಾನೆ.. ಟ್ರ್ಯಾಕ್ಟರ್ ಸಾಲದ ಕಂತು ತುಂಬು ಅಂತಾ ಹೇಳಲು ಹೋದವನು ಹೆಣವಾದ್ನಾ..? ನಂಬಿಗಸ್ಥನಿಂದಲೇ ದ್ರೋಹ ಕಂಡು ಬನವಾಸಿಯ ಕಾಡಲ್ಲಿ ಬೆಂದು ಹೋದ್ನಾ..?ಹೀಗೆ ಕೊಳೆತು ದುರ್ನಾತ ಬೀರುತ್ತಿರೊ ಹುಡುಗನ ಶವದ ಸುತ್ತ ಹಲವು ಪ್ರಶ್ನೆಗಳು ಏಳುತ್ತಿವೆ. ಅಸಲು, ಮಲ್ಲಪ್ಪನ ಖಾಸಾ ಗೆಳೆಯ ಆರೀಫನೇ ಮರ್ಡರ್ ಮಾಡಿದ್ನಾ..? ಗೊತ್ತಿಲ್ಲ. ಆದ್ರೆ, ಅಂತಹ ಅನುಮಾನಗಳು ಬನವಾಸಿ ಪೊಲೀಸರಿಗಿದೆ. ಯಸ್, ಶಿರಸಿ ತಾಲೂಕಿನ ದಾಸನಕೊಪ್ಪ ಸಮೀಪದ ದನಗನಹಳ್ಳಿಯ ಆರೀಫ್ ಹುಸೇನ್ ಬಾಳಂಬೀಡ (30) ಎಂಬಾತ, ಇಂದೂರಿನ ಮಲ್ಲಪ್ಪ ಕೆಂಚಗೊಣ್ಣವರ ಎಂಬುವವನನ್ನ ಅಮಾನುಷವಾಗಿ ಕೊಂದು ಹಾಕಿರೋ ಅನುಮಾನ ವ್ಯಕ್ತವಾಗಿದೆ. ಕಳೆದ ಜೂನ್ 11 ರಂದೇ ದನಗನಹಳ್ಳಿಯ ಕಾಡಿನ ನಡುವೆ ಇಂದೂರಿನ ಮಲ್ಲಪ್ಪ ಕೆಂಚಗೊಣ್ಣನವರ ಹೆಣವಾಗಿ ಬೆಂದು ಹೋಗಿದ್ದಾನೆ. ಆದ್ರೆ, ಹಾಗೆ ಹೆಣವಾಗಿ ಬರೋಬ್ಬರಿ ನಾಲ್ಕು ದಿನಗಳ ನಂತ್ರ ಶವ ಪತ್ತೆಯಾಗಿದೆ. ಮರ್ಡರ್ ಆದವನು ಮಲ್ಲಪ್ಪ..! ಅಂದಹಾಗೆ, ಆತನ ಹೆಸ್ರು ಮಲ್ಲಪ್ಪ ಕೆಂಚಗೊಣ್ಣವರ್, ಈಗಷ್ಟೇ 28 ರ ಆಸುಪಾಸಿನ ಹುಡುಗ. ಅಕ್ಷರಶಃ ಮುಗ್ದ...