ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಬಿಸಿಯೂಟದ ನೌಕರಿ ಬಿಕರಿಗಿದೆಯಾ..? ಇಂತಹದ್ದೊಂದು ಅನುಮಾನ ಅದೊಂದು ಆಡಿಯೋ ಕೇಳಿದ ಎಂತವ್ರಿಗೂ ಮೂಡದೇ ಇರಲ್ಲ. ಮುಂಡಗೋಡ ಪಟ್ಟಣ ಪಂಚಾಯತಿಯ ಸದಸ್ಯೆಯೊಬ್ಬರು ಮಾತನಾಡಿದ್ದು ಎನ್ನಲಾದ ಆಡಿಯೋ ಸದ್ಯ ಊರ ತುಂಬಾ ವೈರಲ್ ಆಗಿದೆ.

ಖುಲ್ಲಂ ಖುಲ್ಲಾ ದಂಧೆನಾ..?
ಅಷ್ಟಕ್ಕೂ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಎರಡು ಶಾಲೆಗಳಿಗೆ ಅವಶ್ಯವಿರುವ ಬಿಸಿಯೂಟದ ಸಿಬ್ಬಂದಿಯ ನೇಮಕದಲ್ಲಿ ಪಟ್ಟಣ ಪಂಚಾಯತಿಯ ಆ ಸದಸ್ಯೆ ಖುಲ್ಲಂ ಖುಲ್ಲಾ ವ್ಯವಹಾರಕ್ಕೆ ಇಳಿದು ಬಿಟ್ರಾ..? ಬಿಸಿಯೂಟದ ಸಿಬ್ಬಂದಿಗಳ ನೇಮಕಕ್ಕೆ, ಬರೋಬ್ಬರಿ ತಲಾ 50 ಸಾವಿರ ರೂ. ರೇಟು ಫಿಕ್ಸ್ ಆಗಿ ಹೋಯ್ತಾ..? ಇದೇಲ್ಲ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಈ ಆಡಿಯೋ ಸಂಭಾಷಣೆಯಿಂದ ಅನುಮಾನ ಮೂಡಿಸಿ, ತಲೆ ಗಿರ್ರ್ ಅನಿಸಿದೆ.

ಬೇಕಾಗಿದ್ದು ಎರಡು ಸ್ಥಾನ..!
ಅಸಲು, ಮುಂಡಗೋಡ ಪಟ್ಟಣದ ಮಾರಿಕಾಂಬಾ ನಗರದ ಕಿರಿಯ ಪ್ರಾಥಮಿಕ ಶಾಲೆ, ಹಾಗೂ ಬಸವನಗರದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಂದರಂತೆ, ಎರಡು ಬಿಸಿಯೂಟದ ಸಿಬ್ಬಂದಿಯ ಹುದ್ದೆ ಖಾಲಿಯಿದೆ. ಹೀಗಾಗಿ, ಖಾಲಿಯಿರೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ. ಈ ಕುರಿತು ಈಗಾಗಲೇ ಪತ್ರಿಕಾ ಜಾಹೀರಾತು ಕೂಡ ನೀಡಲಾಗಿದೆ. ಈ ಕಾರಣಕ್ಕಾಗಿ ಆ ಹುದ್ದೆಗಳಿಗೆ ಸ್ಥಳೀಯ ಕೆಲವು ಮಹಿಳೆಯರು ಅರ್ಜಿ ಹಾಕಿದ್ದಾರೆ. ಆದ್ರೆ, ಅದರ ನಡುವೆಯೇ ಅವಳೊಬ್ಬ ಪ.ಪಂಚಾಯತಿ ಸದಸ್ಯೆ ಇದನ್ನೇ ಬಂಡವಾಳ ಮಾಡಿಕೊಂಡು ಅಮೇದ್ಯ ಮೇಯಲು ರೆಡಿಯಾಗಿ ಕುಳಿತ್ರಾ ಅನ್ನೋ ಅನುಮಾನ ಶುರುವಾಗಿದೆ. ಅವ್ರ ವಾರ್ಡಿಗೆ ಸಂಬಂಧಿಸಿದ ಸ್ಥಾನಕ್ಕೆ ಬರೋಬ್ಬರಿ 50 ಸಾವಿರ ರೂ. ರೇಟು ಫಿಕ್ಸ ಮಾಡಿದ್ರಾ ಅನ್ನೊ ಸಂಶಯ ಮೂಡಿದೆ. ಆಡಿಯೋದಲ್ಲಿ ಹೇಳಿದಂತೆ ಯಾರು ಹಣ ಕೊಡ್ತಾರೊ ಅವ್ರಿಗೆ ನೌಕರಿ ಕೊಡೋದು ಗ್ಯಾರಂಟಿನಾ..? ಅನ್ನೋ ಚರ್ಚೆ ನಡೆದಿದೆ.

DC ಗೂ ಕೊಡಬೇಕು, AC ಗೂ ಕೊಡಬೇಕಂತೆ..!
ವಿಪರ್ಯಾಸ ಅಂದ್ರೆ, ಸದ್ಯ ವೈರಲ್ ಆಗಿರೋ ಆಡಿಯೋದಲ್ಲಿ, ಪಟ್ಟಣ ಪಂಚಾಯತಿ ಸದಸ್ಯೆ ಎನ್ನಲಾಗ್ತಿರೋ ಮಹಿಳೆ ಹೇಳೊ ಪ್ರಕಾರ, ಈ ಹಣ ಅವಳಿಗಲ್ಲವಂತೆ, ಇದ್ರಲ್ಲಿ DC ಗೂ ಕೊಡಬೇಕಂತೆ, AC ಗೂ ಕೊಡಬೇಕಂತೆ, ಪಪಂ ಚೀಫ್ ಆಫೀಸರಿಗೂ ಕೊಡಬೇಕಂತೆ. ಇದ್ರೊಂದಿಗೆ ಒಟ್ಟೂ ನಾಲ್ಕು ಜನ ಅಧಿಕಾರಿಗಳಿಗೆ ಮುಟ್ಟಿಸಬೇಕಂತೆ, ಹಾಗಂತ, ಆಡಿಯೋದಲ್ಲಿ ಪಟ್ಟಣ ಪಂಚಾಯತಿ ಸದಸ್ಯೆ ಎನ್ನಲಾಗ್ತಿರೋ ಮಹಿಳೆ ಹೇಳಿಕೊಂಡಿದ್ದಾಳೆ. ಹಾಗಿದ್ರೆ, ಇದೇಲ್ಲ ಸತ್ಯವಾ..? ಆ ಎರಡೂ ಬಿಸಿಯೂಟದ ಸಿಬ್ಬಂದಿಗಳ ನೇಮಕದಲ್ಲೂ ವ್ಯವಹಾರಗಳು ನಡಿತಿದೆಯಾ..? ಇದ್ರಲ್ಲಿ ಆ ಆಡಿಯೋದಲ್ಲಿ ಹೇಳಲಾದಂತೆ ಅಧಿಕಾರಿಗಳ ಪಾಲೂ ಇದೆಯಾ..? ಹಾಗಿದ್ರೆ ಆ ಅಧಿಕಾರಿಗಳಾದ್ರೂ ಯಾರು..? ಸಮಗ್ರ ತನಿಖೆಯ ಅವಶ್ಯಕತೆ ಇದೆ ಅಷ್ಟೆ..!

error: Content is protected !!