ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!

ಇದು ಮುಂಡಗೋಡ ಪೊಲೀಸಪ್ಪನ ಘನಂಧಾರಿ ಕೆಲಸ. ಯುವತಿಯೋರ್ವಳಿಗೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಮುಂಡಾಮೋಚಿದ ನಯವಂಚಕತನದ ಸ್ಟೋರಿ. ಈತನಿಗೆ ಈ ಹಿಂದೆಯೇ ಇಲ್ಲಿನ ಇಲಾಖೆಯ ಹಿರಿಯರು ಒಂದಿಷ್ಟು ಕಿವಿ ಹಿಂಡಿದ್ದಿದ್ರೆ ಬಹುಶಃ ಇವತ್ತು ಇಡೀ ಇಲಾಖೆಗೆ ಆಗಿರೋ ಮುಜುಗರ ಒಂದಿಷ್ಟು ತಪ್ಪುತ್ತಿತ್ತೋ ಏನೋ. ಆದ್ರೆ, ಯಾರಂದ್ರೆ ಯಾರೂ ಈತನ ಅಡ್ನಾಡಿ ಕೆಲಸಗಳ ವಿರುದ್ಧ ಧನಿ ಎತ್ತಲೇ ಇಲ್ಲ‌. ಹೀಗಾಗಿ ಇವತ್ತು ಅದೊಂದು ಅಮಾಯಕ ಹೆಣ್ಣು ಜೀವ ಮುಂಡಗೋಡ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದೆ. ತನಗೆ ಆಗಿರೋ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದಿದೆ. ಅಸಲು, ಈಗಲೂ ಆಕೆಗೆ ಖಡಾಖಂಡಿತವಾದ ನ್ಯಾಯ ಸಿಕ್ಕತ್ತೆ ಅನ್ನೋ ಭರವಸೆನೇ ಉಳಿದಿಲ್ಲ.

ಬರೋಬ್ಬರಿ 18 ಲಕ್ಷ..!
ಸದ್ಯ ಮುಂಡಗೋಡ ಠಾಣೆಯಲ್ಲಿ ಹಾಸನದ ಯುವತಿಯೋರ್ವಳು ಗಿರೀಶ್ ಅನ್ನೊ ಪೊಲೀಸಪ್ಪನ ವಿರುದ್ಧ ವಂಚನೆಯ ಕೇಸ್ ದಾಖಲಿಸಿದ್ದಾರೆ. ಬರೋಬ್ಬರಿ 18 ಲಕ್ಷಗಳನ್ಜು ವಂಚಿಸಿರೋ ಆರೋಪ ಆತನ ಮೇಲಿದೆ. ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಆರೋಪಿ ಪೊಲೀಸಪ್ಪ ನಾಪತ್ತೆಯಾಗಿದ್ದಾನೆ ಅನ್ನೋ ಮಾಹಿತಿ ಇದೆ. ಹೀಗಾಗಿ, ತನ್ನ ಸಹೋದರ ಹಾಗೂ ತಂದೆಯೊಂದಿಗೆ ನೊಂದ ಯುವತಿ ಪೊಲೀಸ್ ಠಾಣೆಯಲ್ಲಿ ಬೀಡು ಬಿಟ್ಟಿದ್ದಾರೆ. ಕ್ರಮ ಏನಾಗತ್ತೋ ಕಾಯಬೇಕಿದೆ.

ಇದೊಂದೆ ಅಲ್ಲವಂತೆ..!
ಇನ್ನು, ಈ ಪೊಲೀಸಪ್ಪನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮುಂಡಗೋಡಿನಲ್ಲೂ ಈತನಿಂದ ಹಣ ಕಳೆದುಕೊಂಡಿರೋ ಕೆಲವ್ರು ಪೊಲೀಸ್ ಠಾಣೆಯ ಸುತ್ತ ಮುತ್ತ ತಿರುಗುತ್ತಿದ್ದಾರೆ. ನಿಜಕ್ಕೂ ಈತನ ವೃತ್ತಾಂತಗಳು, ಪೀಕಾಯಣಗಳು ಒಂದೇರಡಲ್ಲ ಅವೇಲ್ಲ ಈಗ ಒಂದೊಂದೇ ಠಾಣೆಯ ಮೆಟ್ಟಿಲೇರೋ ಎಲ್ಲಾ ಸಾಧ್ಯತೆಗಳೂ ಇವೆ. ಕೆಲವೇ ದಿನಗಳಲ್ಲಿ ಅವೇಲ್ಲ ತಮ್ಮೇಲ್ಲರ ಮುಂದೆಯೂ ಬರಲಿದೆ. ತುಸು ಕಾಯಬೇಕಷ್ಟೆ..!

error: Content is protected !!