ಪಾಳಾ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಮರ, ಮಗು ಸೇರಿ ದಂಪತಿಗೆ ಗಂಭೀರ ಗಾಯ..!

ಪಾಳಾ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಬಿದ್ದ ಪರಿಣಾಮ ಒಂದು ಮಗು ಸೇರಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಪಾಳಾದಿಂದ‌ ಮುಂಡಗೋಡ ಕಡೆಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆ ಬದಿಯ ಹಳೆಯ ಮರ ಬಿದ್ದು ಘಟನೆ ಸಂಭವಿಸಿದೆ.

ಮುಂಡಗೋಡ ತಾಲೂಕಿನ ಚಿಟಗೇರಿಯ ಪರಶುರಾಮ್ ಸಿದ್ದಪ್ಪ ನಾಯ್ಕರ್, ಮಧು ಪರಶುರಾಮ್ ನಾಯ್ಕರ್ ಹಾಗೂ ಒಂದೂವರೆ ವರ್ಷದ ಮಗು ಧನವೀರ್ ಪರಶುರಾಮ್ ನಾಯ್ಕರ್ ಗಾಯಗೊಂಡಿದ್ದಾರೆ.

ಸದ್ಯ ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೆ ಮಗುವನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ‌. ಸ್ಥಳಕ್ಕೆ ಮುಂಡಗೋಡ ಪಿಎಸ್ ಐ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!