ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!

ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!

ಅಂಕೋಲಾ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಶೋಭಾ ಗೋಪಾಲ ನಾಯಕ (28) ಎಂಬಾಕೆಯೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ, ಮೃತ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಈಕೆ ಪತಿಯ ಜೊತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಆಟೋ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಗೆ ಬಂದು ಅಪಘಾತ ಪಡಿಸಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಮಹಿಳೆಯ ತಲೆಗೆ ಗಂಭೀರವಾಗಿ ಗಾಯಗೊಂಡು. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತವಾಗಿರುವುದನ್ನ ಗಮನಿಸಿದ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಆಟೋದೊಂದಿಗೆ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತರ ಜಮೀನಿಗೆ ತೆರಳುವ ರಸ್ತೆ ಅತಿಕ್ರಮಣ, ತೆರವುಗೊಳಿಸದೇ ಇದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಅನ್ನದಾತರು..!

ರೈತರ ಜಮೀನಿಗೆ ತೆರಳುವ ರಸ್ತೆ ಅತಿಕ್ರಮಣ, ತೆರವುಗೊಳಿಸದೇ ಇದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಅನ್ನದಾತರು..!

 ಶಿಗ್ಗಾವಿಯಲ್ಲಿ ರಾಜಕೀಯ ಪ್ರಭಾವಿಗಳ ಕಾರಸ್ಥಾನದಿಂದ ರೈತರು ಕಂಗಾಲಾಗಿದ್ದಾರೆ. ನೂರಾರು ವರ್ಷಗಳಿಂದಲೂ ಇದ್ದ ಸಾರ್ವಜನಿಕ ರಸ್ತೆಯನ್ನು ಒತ್ತು ವರಿ ಮಾಡಿಕೊಂಡಿರೋ ಪ್ರಭಾವಿಗಳು ರೈತರಿಗೆ ಜೀವ ಹಿಂಡ್ತಿದಾರೆ ಅಂತಾ ರೈತರು ಆಕ್ರೋಶ ಹೊರಹಾಕಿದ್ದಾರೆ. ಈ ಕಾರಣಕ್ಕಾಗೇ ಚುನಾವಣೆ ಬಹಿಷ್ಕಾರ ಮಾಡುವ ತೀರ್ಮಾನ ಕೈಗೊಂಡಿದ್ದಾರೆ‌. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಅರ್ಪಿಸಿದ್ದಾರೆ. ಮನವಿಯಲ್ಲೇನಿದೆ..? ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಚಾಕಾಪೂರ-ಕುರ್ಷಾಪುರ ಗ್ರಾಮದ ಪೈಕಿ, ಬಿಸನಳ್ಳಿ ಹೊಟ್ಟಾರ ಕಲ್ಯಾಣ ಗ್ರಾಮಗಳಿಂದ ಹೋಗಿ ಬರಲು 1834 ನೇ ರಿಂದಲೂ ಸಾರ್ವಜನಿಕ ಸರಕಾರಿ ಸರಹದ್ದಿನ ರಸ್ತೆ (ದಾರಿ) ಇದೆ. ಅಂದಹಾಗೆ, ಈ ರಸ್ತೆಯನ್ನು ಶ್ರೀಮತಿ, ಲಕ್ಷ್ಮೀಬಾಯಿ ಕೋಂ ವಾದಿರಾಜ ಶೆಟ್ಟಿ ಮತ್ತು ಅವರ ಮಗ ನರಹರಿ ವಾದಿರಾಜ ಕಟ್ಟಿ, ಎಂಬುವವರು ತಮ್ಮ ಜಮೀನಿನ ಚಾಕಾಪೂರ ಗ್ರಾಮದ ರಿ.ಸ.ನಂ: 18/1 ರಲ್ಲಿ ಪೆಟ್ರೋಲ್‌ ಬಂಕ್ ನ್ನು 2006 ರಲ್ಲಿ ಸ್ಥಾಪಿಸಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿದೆ. ಹೀಗಿರೋ ಪೆಟ್ರೋಲ್‌ ಬಂಕನ ಪಶ್ಚಿಮ ದಿಕ್ಕಿನಲ್ಲಿ, ಉತ್ತರದಿಂದ...

ಟಿಕೆಟ್ ಘೋಷಣೆ‌ ಬೆನ್ನಲ್ಲೇ ಬಿಜೆಪಿ ಮೊದಲ ವಿಕೆಟ್ ಪತನ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್ ಬೈ..!

ಟಿಕೆಟ್ ಘೋಷಣೆ‌ ಬೆನ್ನಲ್ಲೇ ಬಿಜೆಪಿ ಮೊದಲ ವಿಕೆಟ್ ಪತನ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಗುಡ್ ಬೈ..!

 ಬೆಳಗಾವಿ; ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಮೊದಲ ವಿಕೆಟ್ ಪತನವಾಗಿದೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಗುಡ್ ಬೈ ಹೆಳಿದ್ದಾರೆ. ಹಾಗಂತ ಖುದ್ದು ಲಕ್ಷ್ಮಣ ಸವದಿ ಅಥಣಿಯಲ್ಲಿಂದು ಘೋಷಣೆ ಮಾಡಿದ್ದಾರೆ. ನಾಳೆ ಕ್ಷೇತ್ರದ ಜನರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ತಿನಿ ಅಂತಾ ಹೇಳಿರೋ ಸವದಿ, ಸಿಎಂ ಬಸವರಾಜ್ ಬೊಮ್ಮಾಯಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಬೊಮ್ಮಾಯಿಯವರು ಸೌಜನ್ಯಕ್ಕಾದ್ರೂ ನನ್ನ ಜೊತೆ ಮಾತಾಡಬೇಕಿತ್ತು. ಆದ್ರೆ, ಬೊಮ್ಮಾಯಿ ಸಾಹೇಬ್ರು ನನ್ನ ಜೊತೆ ಮಾತಾಡಿಲ್ಲ ಅಂದ್ರು. ಮೊದಲೇ ನಿಂಗೆ ಟಿಕೆಟ್ ಸಿಗಲ್ಲ ಅಂತಾ ಹೇಳಿದ್ದಿದ್ರೆ ನಾನು ಮನಸ್ಥತಿಯನ್ನು ಬದಲಾಯಿಸಿಕೊಳ್ತಿದ್ದೆ. ಆದ್ರೆ, ಕೊನೆ ಗಳಿಗೆವರೆಗೂ ಗುಟ್ಟು ಬಿಟ್ಟು ಕೊಡದೆ ನಂಗೆ ನೋವು ನೀಡಿದ್ರು ಅಂತಾ ಸವದಿ ಅಸಮಾಧಾನ ಹೊರ ಹಾಕಿದ್ರು.. ಬೊಮ್ಮಾಯಿ ಪಿಎಂ ಆಗ್ತಾರೆ..! ಇನ್ನು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಿಎಂ ಬೊಮ್ಮಾಯಿ ವಿರುದ್ದ ಆಕ್ರೋಶ ಹೊರಹಾಕಿದ್ದು, ಕಾಂಗ್ರೆಸ್ ಸೇರಲು ಹೊರಟಿದ್ದ ಬೊಮ್ಮಾಯಿವರನ್ನು ನಾನು,...

ಅಗಡಿಯ 10 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ, ಕಮಲ ಮುಡಿದ ಕಾಂಗ್ರೆಸ್ ಮುಖಂಡನ ಸಹೋದರ..!

ಅಗಡಿಯ 10 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆ, ಕಮಲ ಮುಡಿದ ಕಾಂಗ್ರೆಸ್ ಮುಖಂಡನ ಸಹೋದರ..!

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಸುಮಾರು ಹತ್ತಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ಯಲ್ಲಾಪುರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಟಿ. ಪಾಟೀಲ್ ಸೇರಿದಂತೆ ಸಿದ್ದಪ್ಪ ಹಡಪದ್, ವಿವೇಕ್ ಹೆಬ್ಬಾರ್ ಕಾರ್ಯಕರ್ತರಿಗೆ ಬಿಜೆಪಿ ಶಾಲು ಹಾಕಿ ಬರಮಾಡಿಕೊಂಡರು. ಅಗಡಿ ಗ್ರಾಮದ ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್ ರ ಸಹೋದರ ಸುನೀಲ್ ನಾಯ್ಕ್ ಸೇರಿದಂತೆ ಸುಮಾರು ಹತ್ತು ಜನ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ‌. ಇನ್ನು ಸಂಜು ನಾಯ್ಕ್, ಪ್ರಸನ್ನ ನಾಯ್ಕ್, ಮಾರುತಿ ವಾಲ್ಮೀಕಿ, ಶೇಖಪ್ಪ ಗಳಗಿ, ಗದಗಯ್ಯ ಹಿರೇಮಠ, ಕಲ್ಲಪ್ಪ ವಾಲ್ಮೀಕಿ, ಚನ್ನಪ್ಪ ಜಿನ್ನೂರ, ಮುತ್ತು ಕುಮ್ಮಣ್ಣಿ, ಸುಪುತ್ರಪ್ಪ ವಾಲ್ಮೀಕಿ ಬಿಜೆಪಿ ಸೇರಿದ್ದಾರೆ.

ಇಂದೂರು ಕೊಪ್ಪದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರು..!

ಇಂದೂರು ಕೊಪ್ಪದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರು..!

ಮುಂಡಗೋಡ: ತಾಲೂಕಿನ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಕೊಪ್ಪ ಗ್ರಾಮದಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಪಕ್ಷದ ಶಾಲು ಹೊದಿಸಿ ಕಾರ್ಯಕರ್ತರನ್ನು ಬರಮಾಡಿಕೊಂಡಿದ್ದಾರೆ. ಇಂದೂರಿನ ಬಿಜೆಪಿ ಮುಖಂಡ ಬಿ.ಕೆ.ಪಾಟೀಲ್, ಕೊಪ್ಪ ಗ್ರಾಮದ ಚನ್ನಬಸಪ್ಪ ಮುಂಗೈ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ್ರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಹಿರಿಯ ದುರೀಣ ಎಚ್.ಎಂ.ನಾಯ್ಕ್, ಮಹ್ಮದ್ ರಫೀಕ್ ದೇಸಳ್ಳಿ, ಪಿ.ಜಿ.ತಂಗಚ್ಚನ್, ರಾಜಶೇಖರ್ ಪಾಟೀಲ್, ಯುವ ಕಾಂಗ್ರೆಸ್ ಮುಖಂಡರಾದ ಬಸನೂ ನಡುವಿನಮನಿ, ಬಸು ಹರಿಜನ, ಧರ್ಮರಾಜ್ ನಡಗೇರಿ, ಬಿಷ್ಟನಗೌಡ ಪಾಟೀಲ್, ಮಲ್ಲಿಕಾರ್ಜುನ ಸುಣಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಭಾರೀ ಮಳೆ: ಸಿಡಿಲಿನ ರಭಸಕ್ಕೆ ಮನೆಯ ಮೇಲ್ಚಾವಣಿ ಕುಸಿತ: ಇಬ್ಬರು ಮಹಿಳೆಯರ ದಾರುಣ ಸಾವು..!

ಭಾರೀ ಮಳೆ: ಸಿಡಿಲಿನ ರಭಸಕ್ಕೆ ಮನೆಯ ಮೇಲ್ಚಾವಣಿ ಕುಸಿತ: ಇಬ್ಬರು ಮಹಿಳೆಯರ ದಾರುಣ ಸಾವು..!

ಬಾಗಲಕೋಟೆ: ಸಿಡಿಲಿನ ಹೊಡೆತಕ್ಕೆ ಮನೆಯ ಮಣ್ಣಿನ ಮೇಲ್ಛಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು ಕಂಡ ದಾರುಣ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ. ನೆನ್ನೆ ರಾತ್ರಿ 11.30 ಸುಮಾರಿಗೆ ನಡೆದ ಘಟನೆ ಇದಾಗಿದ್ದು, ಯಂಕುಬಾಯಿ ಕುಲಕರ್ಣಿ (79), ಶಾರದಾ ಪತ್ತಾರ (61) ಮೃತ ದುರ್ದೈವಿಗಳು. ಅಂದಹಾಗೆ, ದಿನಂಪ್ರತಿ ಯಂಕುಬಾಯಿ ಕುಲಕರ್ಣಿ ಅವ್ರ ಮನೆಯಲ್ಲೇ ಶಾರದಾ ಪತ್ತಾರ ಮಲಗುತ್ತಿದ್ರು. ನಿನ್ನೆ ಸುರಿದ ಭಾರೀ ಮಳೆ ಹಾಗೂ ಸಿಡಿಲಿನ ರಭಸಕ್ಕೆ ಮನೆಗೆ ಹಾನಿಯಾಗಿದ್ದು, ಮಣ್ಣಿನ ಮೇಲ್ಛಾವಣಿ ಕುಸಿದಿದೆ. ಹೀಗಾಗಿ, ಮನೆಯಲ್ಲಿ ಮಲಗಿದ್ದ ಯಂಕುಬಾಯಿ, ಶಾರದಾ ಅವ್ರ ಮೇಲೆ ಗೋಡೆ ಬಿದ್ದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾನಪ್ಪಿದ್ದಾರೆ. ಇನ್ನು, ಅಗ್ನಿಶಾಮಕ ದಳ ಸಿಬ್ಬಂದಿಗಳ ಸಾಹಾಯದಿಂದ ಶವಗಳನ್ನ ಹೊರತಗೆಯಲಾಗಿದ್ದು, ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮೃತ ಮಹಿಳೆಯರ ಶವ ಪರೀಕ್ಷೆ ನಡೆದಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಮೃತಪಟ್ಟ ತಿಂಗಳೊಳಗೇ ದಿ. ಧ್ರುವ ನಾರಾಯಣ್ ಪತ್ನಿಯೂ ವಿಧಿವಶ..! ಎಂಥಾ ಆಘಾತ..!!

ಪತಿ ಮೃತಪಟ್ಟ ತಿಂಗಳೊಳಗೇ ದಿ. ಧ್ರುವ ನಾರಾಯಣ್ ಪತ್ನಿಯೂ ವಿಧಿವಶ..! ಎಂಥಾ ಆಘಾತ..!!

ಮೈಸೂರು:ಪತಿ ಸಾವಿನ ಬೆನ್ನಲ್ಲೇ ದಿವಂಗತ ಆರ್.ಧ್ರುವ ನಾರಾಯಣ್ ಪತ್ನಿ ವೀಣಾ(58) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಇಂದು ವಿಧಿವಶರಾಗಿದ್ದಾರೆ. ಪತಿ ಧ್ರುವನಾರಾಯಣ್ ಸಾವಿನಿಂದ ಕುಗ್ಗಿದ್ದ ವೀಣಾ, ಪತಿ ಮೃತಪಟ್ಟು ತಿಂಗಳಿಗೂ ಮುನ್ನವೇ ನಿಧನರಾಗಿದ್ದಾರೆ. ಕಳೆದ ಮಾರ್ಚ್ 11ರಂದು ಹೃದಯಾಘಾತದಿಂದ ಧ್ರುವನಾರಾಯಣ್ ನಿಧನರಾಗಿದ್ದರು. ಇನ್ನು, ಪುತ್ರ ದರ್ಶನ್ ಧ್ರುವಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಹೀಗಾಗಿ, ಚುನಾವಣಾ ಚಟುವಟಿಕೆಗಳಲ್ಲಿ ನಿರತರಾಗಿದ್ದ ದರ್ಶನ್ ರಿಗೆ ತಾಯಿ ಸಾವಿನಿಂದ ಆಘಾತವಾಗಿದೆ.

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಳೆದು ತಂದಿದ್ದಾರೆ. ಟಿಬೇಟಿಯನ್ ಕ್ಯಾಂಪ್ ನಂಬರ್ 2 ರ ಕುಸೂರು ಕ್ರಾಸ್ ಬಳಿ ಗಾಂಜಾ ಸಾಗಾಟ ‌ಮಾಡುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ 410 ಗ್ರಾಂ ಗಾಂಜಾ ಹಾಗೂ ಸ್ಕೂಟಿ ವಶ ಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದಲ್ಲಿ ದಾಳಿ‌ ಮಾಡಿರೋ ಮುಂಡಗೋಡ ಪೊಲೀಸರು, ಮುಂಡಗೋಡ ಯಲ್ಲಾಪುರ ರಸ್ತೆಯ ಬ್ಲ್ಯೂ ಹಿಲ್ ಹೊಟೇಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಉತ್ತರ ಪ್ರದೇಶ ಮೂಲದ ಆರ್ಯನ್ ಅಲಿಯಾಸ್ ಅಮರೀಶ್ ಕುಮಾರ್ ಹಾಗೂ ಭಟ್ಕಳ ಮೂಲದ ಮಹ್ಮದ ಅಲಿ ಗಾಂಜಾ ಕೇಸಲ್ಲಿ ಅಂದರ್ ಆದ ಆರೋಪಿಗಳು. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ಕ್ರೈಂ ಪಿಎಸ್ ಐ ಎನ್.ಡಿ. ಜಕ್ಕಣ್ಣನವರ್, ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಸಿಬ್ಬಂದಿಗಳಾದ ಅನ್ವರ್ ಖಾನ್, ಕೊಟೇಶ್ ನಾಗರಳ್ಳಿ, ಅಣ್ಣಪ್ಪ ಬುಡಗೇರ, ಮಹಾಂತೇಶ್ ಮುದೋಳ್, ಸಂಜು ರಾಠೋಡ್, ಗಿರೀಶ್ ಹಾಗೂ ಶರತ್ ದಾಳಿಯಲ್ಲಿ ಭಾಗಿಯಾಗಿದ್ರು.

ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ಹನುಮ‌ಭಕ್ತರಿಂದ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌ ಇಲ್ಲಿನ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಬೆಳಗಿನಿಂದಲೂ ಹನುಮನಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ರಾಘು ಕಾಂಬಳೆ, ನವೀನ ಸವಣೂರು, ಸೋಮಶೇಖರ್, ದಿಲಿಪ್, ಕಿರಣ್ ಖಾರದ್, ಮಹದೇವ್ ಕಾಂಬ್ಳೆ, ಸುನಿಲ್ ಕೊಟಗುಣಸಿ, ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಹನುಮ ಜಯಂತಿಯ ಸಂಭ್ರಮ ಜೋರಾಗಿತ್ತು. ಇಲ್ಲಿನ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಓಣಿಯ ಹತ್ತಿರ ಇರೋ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಈ ವೇಳೆ ರವಿ ಗೌಡ ಪಾಟೀಲ್, ಫಣಿರಾಜ್ ಹದಳಗಿ, ಶೇಖರ್ ಲಮಾಣಿ, ಶಂಕರ್ ಲಮಾಣಿ, ರವಿ ಹಾವೇರಿ, ಮಂಜುನಾಥ್ ಹರಮಲ್ಕರ್, ಅಯ್ಯಪ್ಪ ಭಜಂತ್ರಿ, ಲಕ್ಷ್ಮಣ ಲಮಾಣಿ, ಉದಯ್ ಪಾಲೇಕರ್, ಬಸವರಾಜ ತನಿಕೆದಾರ್, ಶಂಭು ನಿಡಗುಂದಿ. ಪ್ರಕಾಶ ಬಡಿಗೇರ್, ಮಂಜು ಹರಿಜನ್, ವಿನಾಯಕ ರಾಯ್ಕರ್, ವಿಶ್ವ ನಾಯರ್, ರವಿ ನಿಡಗುಂದಿ, ವಿನೋದ್ ಲಮಾಣಿ, ವಿಷ್ಣು ರಾಠೋಡ್, ಮಹೇಶ್ ರಾಠೋಡ್, ವಿಷ್ಣು ಲಮಾಣಿ, ಷಣ್ಮುಖ ಕೋಳೂರು, ಬಸ್ಸು ಲಮಾಣಿ, ಗುರು ಕಾಮತ್ ಸೇರಿದಂತೆ ಹಲವು ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!