ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ತಿರುಗಾಡಿದ ಅಜ್ಜ..!

ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ತಿರುಗಾಡಿದ ಅಜ್ಜ..!

ಬೆಳಗಾವಿ: ಹಾವು ಅಂದ್ರೆ ಹರನೇ ನಡುಗಿದ್ನಂತೆ.. ಆದ್ರೆ ಇಲ್ಲೊಬ್ಬ ಅಜ್ಜ ತನ್ನ ಮನೆಲಿ ಬಂದಿದ್ದ ಹಾವನ್ನೇ ಶಿವನ ಅಪರಾವತಾರದಂತೆ ಹಿಡಿದು ಕೊರಳಿಗೆ ಸುತ್ತಿಕೊಂಡು ಸೈಕಲ್ ಹತ್ತಿ ತಿರುಗಾಡಿದ್ದಾನೆ‌. ಹೌದು, ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ‌. ಹಂಗರಕಾ ಗ್ರಾಮದ ಅಜ್ಜನೊಬ್ಬ ತನ್ನ ಮನೆಯಲ್ಲಿ ಬಂದಿದ್ದ ಹಾವುವಹಿಡಿದು ಕೊರಳಿಗೆ ಸುತ್ತಿಕೊಂಡಿದ್ದಾನೆ. ಹಾಗೆ ಕೊರಳಲ್ಲಿ ಅಉತ್ತಿಕೊಂಡು ಸೈಕಲ್ ಏರಿ ತನ್ನ ಗದ್ದೆಯ ಕಡೆ ನಡೆದಿದ್ದಾನೆ. ಹಾಗೆ ಹಾವು ಸುತ್ತಿಕೊಂಡು ಅಜ್ಜ ಬರ್ತಿದ್ದಂತೆ ಗ್ರಾಮದ ಮಂದಿಯೆಲ್ಲ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಆದ್ರೆ ಈ ಅಜ್ಜ ಮಾತ್ರ ಯಾವುದೇ ಭಯ ಇಲ್ಲದೇ, ಹಾವನ್ನು ಸುತ್ತಿಕೊಂಡು ಗದ್ದೆಯಲ್ಲಿ ಬಿಟ್ಟು ಬಂದಿದ್ದಾನೆ. ಹಾವನ್ನು ಸಾಯಿಸದೇ ರಕ್ಷಣೆ ಮಾಡಿದ್ದಾನೆ.. ಹೇಗಿದೆ ಗೊತ್ತಾ ಹಾವು ಸುತ್ತಿಕೊಂಡು ಸೈಕಲ್ ಏರಿದ ಅಜ್ಜನ ಹಕೀಕತ್ತು..? ವಿಡಿಯೊ ಇದೆ. ನೋಡಲು ಇಲ್ಲಿ ಕ್ಲಿಕ್ ಮಾಡಿ..!! ಹಾವು ಕಂಡ ಕೂಡಲೇ ಕೊಲ್ಲಲು ಓಡಾಡುವ ಜನರ ಮದ್ಯೆ ಈ ಅಜ್ಜ ಉರಗ ಪ್ರೇಮ ತೋರಿಸಿದ್ದು ಶ್ಲಾಘನೀಯವಾಗಿದೆ‌..

ಚುಡಾಯಿಸಿದವನಿಗೆ ನಡುರಸ್ತೆಯಲ್ಲಿಯೇ ಧರ್ಮದೇಟು..!

ಚುಡಾಯಿಸಿದವನಿಗೆ ನಡುರಸ್ತೆಯಲ್ಲಿಯೇ ಧರ್ಮದೇಟು..!

ಬೆಳಗಾವಿ: ತನ್ನನ್ನು ಚುಡಾಯಿಸಿ, ಹಿಂಬಾಲಿಸುತ್ತಿದ್ದ ಕಾಮುಕನಿಗೆ ಮಹಿಳೆ ಚಪ್ಪಲಿ ಏಟು ನೀಡಿರುವ ಘಟನೆ ಬೆಳಗಾವಿ ಎಸ್ಪಿ ಕಚೇರಿ ಮುಂದಿನ ರಸ್ತೆಯಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಮರಳುವ ವೇಳೆಯಲ್ಲಿ ಕೆಲ ತಿಂಗಳಿಂದ ಹಿಂಬಾಲಿಸುತ್ತಿದ್ದನು. ಜತೆಗೆ ಸಿಳ್ಳೆ ಹೊಡೆಯುವ ಮೂಲಕ ಚುಡಾಯಿಸುತ್ತಿದ್ದನು. ಕೆಲವು ಬಾರಿ ಮನೆಯವರೆಗೂ ಸಹ ಬಂದು ಚುಡಾಯಿಸುತ್ತಿದ್ದು, ಹಲವು ಸಾರಿ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಆದರೂ ಸಹ ತನ್ನನ್ನು ಹಿಂಬಾಲಿಸುವುದು ನಿಲ್ಲಿಸಿಲ್ಲ ಎಂದು ಮಹಿಳೆ ಆರೋಪಿಸಿ, ಚಪ್ಪಲಿ ಏಟು ನೀಡಿದ್ದಾಳೆ. ಚುಡಾಯಿಸಿದವನಿಗೆ ಆ ಮಹಿಳೆ ಬಿಸಿ ಬಿಸಿ ಕಜ್ಜಾಯ ಹೇಗೆ ಕೊಟ್ಲು ಗೊತ್ತಾ..! ವಿಡಿಯೊ ನೋಡಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ..!! ಮಹಿಳೆ ಹಾಗೂ ಆಕೆಯ ಪತಿ ಕಾಮುಕನಿಗೆ ನಡುರಸ್ತೆಯಲ್ಲೇ ಚಪ್ಪಲಿ ಸೇವೆ ಮಾಡಿದ್ದಾರೆ. ಬಳಿಕ ರಸ್ತೆ ಸವಾರರು ಸಹ ಮಹಿಳೆ ಆರೋಪಿಸಿರುವುದನ್ನು ಕಂಡು ವ್ಯಕ್ತಿಗೆ ಥಳಿಸಿದ್ದರು. ಯಾವಾಗ ಸಾರ್ವಜನಿಕರು ಧರ್ಮದೇಟು ನೀಡಲು ಶುರುವಿಟ್ಟರೋ ಕಾಮುಕ ಅಲ್ಲಿಂದ ಕಾಲಿಕ್ಕಿತ್ತಿದ್ದಾನೆ.

ಉಗ್ರರ ಜೊತೆಗಿನ ಕಾಳಗದಲ್ಲಿ ಮಡಿದ ಉಕ್ಕಲಿಯ ವೀರಸೇನಾನಿ..! ಯೋಧನ ಹುಟ್ಟೂರಲ್ಲೀಗ ಬರೀ ಕಂಬನಿ, ಕಹಾನಿ..!!

ಉಗ್ರರ ಜೊತೆಗಿನ ಕಾಳಗದಲ್ಲಿ ಮಡಿದ ಉಕ್ಕಲಿಯ ವೀರಸೇನಾನಿ..! ಯೋಧನ ಹುಟ್ಟೂರಲ್ಲೀಗ ಬರೀ ಕಂಬನಿ, ಕಹಾನಿ..!!

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧನೊಬ್ಬ ಹುತಾತ್ಮರಾಗಿದ್ದಾರೆ. ಹೀಗಾಗಿ ಉಕ್ಕಲಿ ಗ್ರಾಮದಲ್ಲಿ ಈಗ ದುಃಖ ಮಡುಗಟ್ಟಿದೆ.. ಹುತಾತ್ಮ ಯೋಧನ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.. ಊರಿಗೇ ಊರೇ ಕಣ್ಣೀರಲ್ಲಿ.. ನಿಜ, ಉಕ್ಕಲಿ ಗ್ರಾಮದ ಜನರ ಹೃದಯ ಅಕ್ಷರಶಃ ಭಾರವಾಗಿದೆ. ಕಣ್ಣೇದುರೇ ಆಡಿ ಬೆಳೆದಿದ್ದ ಹುಡುಗ ದೇಶಸೇವೆಗಾಗಿ ಪ್ರಾಣವನ್ನೆ ಬಲಿ ಕೊಟ್ಟಿದ್ದಾನೆ. ಒಂದು ಕಡೆ ದೇಶಕ್ಕಾಗಿ ಹುತಾತ್ಮನಾದ ಯೋಧನ ಹೆಮ್ಮೆಯ ಆನಂದ ಭಾಷ್ಪ ಸುರಿಯುತ್ತಿದ್ದರೆ ಮತ್ತೊಂದೆಡೆ, ಆ ಯೋಧನ ಪುಟ್ಟ ಪುಟ್ಟ ಎರಡು ಕಂದಮ್ಮಗಳ ಮುಗ್ದ ಮುಖ ನೋಡಿ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿದೆ. ಹೌದು, ಉಕ್ಕಲಿ ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ ಎಂಬುವ ವೀರಯೋಧ ಹುತಾತ್ಮನಾಗಿದ್ದಾನೆ ಹೇಗಾಯ್ತು..? ಜುಲೈ 1 ನೇ ತಾರೀಖಿನಂದು ರಾತ್ರಿ ಕರ್ತವ್ಯದಲ್ಲಿದ್ದ ವೇಳೆ, ಭಯೋತ್ಪಾದಕರೊಂದಿಗೆ ಗುಂಡಿನ...

ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!

ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 1 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಒಟ್ಟೂ 23 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಗುಣಮುಖರಾಗಿಲ್ಲ . ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲೂ ಯಾವುದೇ ಸೋಂಕಿತರು ದಾಖಲಾಗಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ‌ ನೇಣಿಗೆ ಶರಣು..!

ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ‌ ನೇಣಿಗೆ ಶರಣು..!

ಮುಂಡಗೋಡ;ತಾಲೂಕಿನ ಓಣಿಕೇರಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ನೇಣಿಗೆ ಶರಣಾಗಿದ್ದಾನೆ. 38 ವರ್ಷದ ಗಿರೀಶ್ ಕೃಷ್ಣಮೂರ್ತಿ ಅರ್ಕಸಾಲಿ ಎಂಬುವ ಯುವಕನೇ ನೇಣಿಗೆ ಶರಣಾದವನಾಗಿದ್ದು, ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ಎಷ್ಟೇ ಚಿಕಿತ್ಸೆ ನೀಡಿದ್ರೂ ಗುಣಮುಖ ಆಗಿರಲಿಲ್ಲ. ಹೀಗಾಗಿ ಅದನ್ನೇ ಮನಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ ಅಂತಾ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ: ದೇವಸ್ಥಾನ, ಬಾರ್, ಮಾಲ್ ಓಪನ್..!

ಇನ್ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ: ದೇವಸ್ಥಾನ, ಬಾರ್, ಮಾಲ್ ಓಪನ್..!

ಬೆಂಗಳೂರು: ಸೋಮವಾರ 5 ನೇ ತಾರೀಖಿನಿಂದ ದೇವಸ್ಥಾನ, ಮಾಲ್, ಬಾರ್ ಓಪನ್ ಆಗತ್ತೆ. ಇನ್ಮುಂದೆ ವೀಕೆಂಡ್ ಕರ್ಫ್ಯೂ ಇರಲ್ಲ ಅಂತಾ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇಂದು ಅನಲಾಕ್ ಸಂಬಂಧ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗಿದ್ದು, ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.  

ಬಸಾಪುರದಲ್ಲಿ ಸಾಲಬಾಧೆಯಿಂದ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ..!

ಬಸಾಪುರದಲ್ಲಿ ಸಾಲಬಾಧೆಯಿಂದ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ..!

ಮುಂಡಗೋಡ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಗಂಗಾರಾಮ್ ಸಿಂಗ್ ಶಂಕರಸಿಂಗ್ ರಜಪೂತ (55) ಎಂಬುವವರೇ ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು, ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ನಮ್ಮ ಮೇಲೆ ಬಂದಿರೋ ಆರೋಪಗಳೇಲ್ಲ ಸುಳ್ಳು, ಸುಳ್ಳು, ಸುಳ್ಳು..! ಕಬನೂರು ಗ್ರಾಪಂ ಅಧ್ಯಕ್ಷರ ಸ್ಪಷ್ಟನೆ..!!

ನಮ್ಮ ಮೇಲೆ ಬಂದಿರೋ ಆರೋಪಗಳೇಲ್ಲ ಸುಳ್ಳು, ಸುಳ್ಳು, ಸುಳ್ಳು..! ಕಬನೂರು ಗ್ರಾಪಂ ಅಧ್ಯಕ್ಷರ ಸ್ಪಷ್ಟನೆ..!!

ಶಿಗ್ಗಾವಿ:ತಾಲೂಕಿನ ಕಬನೂರ ಪಂಚಾಯತಿಯಲ್ಲಿ ಅಧ್ಯಕ್ಷರು ಮತ್ತು ಕೆಲ ಸದಸ್ಯರ ಸರ್ವಾಧಿಕಾರಿ ಧೋರಣೆ ಆರೋಪಕ್ಕೆ ಸಂಬಂಧಿಸಿದಂತೆ, ಆರೋಪಕ್ಕೆ ಒಳಗಾಗಿದ್ದ ಅಧ್ಯಕ್ಷ ದೇವೇಂದ್ರಪ್ಪ ಸೊರಟೂರ ಅವರು ಬೆಂಬಲಿಗ 6 ಜನ ಸದಸ್ಯರೊಡನೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಬಂದಿದ್ದ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದು ಆರೋಪ ಮಾಡಿರುವ ಸದಸ್ಯರ ಒಪ್ಪಿಗೆಯಿಂದಲೇ ಎಲ್ಲವೂ ನಡೆದಿದೆ ಎಂದು ದಾಖಲೆ ಸಮೇತ ಸ್ಪಷ್ಟೀಕರಣ ನೀಡಿದ್ದಾರೆ. ಕಳೆದ ಅಧ್ಯಕ್ಷರ ಆಯ್ಕೆಯಲ್ಲಿ ಅಸಮಾಧಾನ ಗೊಂಡಿರುವ ಸದಸ್ಯರು ಹಾಗೂ ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೋಟೆಪ್ಪ ಕಮ್ಮಾರ ಅವರು 3-4 ಸದಸ್ಯರನ್ನು ಗುಂಪು ಕಟ್ಟಿಕೊಂಡು ಗ್ರಾಮ ಪಂಚಾಯತಿಯ ಅಭಿವೃದ್ದಿಗೆ ಯೋಚಿಸಬೇಕಾದ ಅವರು ಕೇವಲ ಅಧ್ಯಕ್ಷ ಸ್ಥಾನ ದಕ್ಕಲಿಲ್ಲ ಎಂಬ ಹತಾಶೆ ಭಾವನೆಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಅಲ್ಲದೇ ಅಭಿವೃದ್ದಿ ಕಾರ್ಯಗಳಲ್ಲಿ ಪ್ರತಿಯೊಂದರಲ್ಲೂ ಸಹಕಾರ ನೀಡಿ ಸಭೆಗಳಲ್ಲಿ ಮಾಹಿತಿ ನೀಡಿದರೂ ವಯಕ್ತಿಕ ವೈಶಮ್ಯದಿಂದ ಆರೋಪ ಮಾಡ್ತಿದಾರೆ. ಜೊತೆಗೆ ಪಂಚಾಯತಿ ಆಡಳಿತದ ಮೇಲೆ ಹಿಡಿತ ಸಾಧಿಸುವ ಮತ್ತು ಹಲವಾರು ಕಾರಣಗಳಿಂದ ಕಮ್ಮಾರ ಅವರ ಕೆಲ...

ಮಂಟಗಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ..!

ಮಂಟಗಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ..!

ಸವಣೂರು: ತಾಲೂಕಿನ ಮಂಟಗಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಇಂದು “ಆರೋಗ್ಯ ತಪಾಸಣೆ ಶಿಬಿರ” ಏರ್ಪಡಿಸಲಾಗಿತ್ತು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಗುರುಮಾತೆಯರು, ಆರೋಗ್ಯ ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಹಾಗೂ ಗ್ರಾಮದ ಮುಖಂಡರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯ ಶಿಕ್ಷಕರು, ಪ್ರಾಸ್ತಾವಿಕ ನುಡಿಗಳನ್ನು ಆಡಿ, ಈಗಿನ ಮಕ್ಕಳಿಗೆ ಆರೋಗ್ಯ ಚೆನ್ನಾಗಿದ್ದರೆ ಮುಂದೆ ಸದೃಢ ದೇಹ ಹಾಗೂ ದೇಶ ಕಟ್ಟಬಹುದು ಎಂಬುದನ್ನು ಮಾರ್ಮಿಕವಾಗಿ ನುಡಿದರು. ವೈದ್ಯಾಧಿಕಾರಿಗಳು ಮಕ್ಕಳನ್ನು ತಪಾಸಣೆ ಮಾಡಿ ಸೂಕ್ತ ಔಷಧಿಗಳನ್ನು ನೀಡಿ ಹಾಗೂ ಮಕ್ಕಳ ಪಾಲನೆ ಪೋಷಣೆ ಬಗ್ಗೆ ಮಾರ್ಗ ದರ್ಶನ ನೀಡಿದರು. ಸಹ ಶಿಕ್ಷಕರು ಗುರುಮಾತೆಯರು ವಂದನಾರ್ಪಣೆ ಸಲ್ಲಿಸಿದರು.

ಮದುವೆ ಆಗಿ ದೇವರಿಗೆ ಹೊರಟಿದ್ದ ಮದುಮಗಳ ಬಾಳಲ್ಲಿ ವಿಧಿಯ ಕ್ರೌರ್ಯ..! ಹೆಣವಾದ ಮದುಮಗಳು..!!

ಮದುವೆ ಆಗಿ ದೇವರಿಗೆ ಹೊರಟಿದ್ದ ಮದುಮಗಳ ಬಾಳಲ್ಲಿ ವಿಧಿಯ ಕ್ರೌರ್ಯ..! ಹೆಣವಾದ ಮದುಮಗಳು..!!

ವಿಜಯಪುರ: ಟೆಂಫೋ ಹಾಗೂ ಕ್ರೂಜರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಗಷ್ಟೆ ಮದುವೆ ಮುಗಿಸಿಕೊಂಡು ದೇವರಿಗೆ ಹೊರಟಿದ್ದ ಮದುಮಗಳು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಡೆದಿದೆ. ಎಲ್ಲಿ..? ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಿ.ಕೆ. ಯರಗಲ್ ಬಳಿ ಘಟನೆ ನಡೆದಿದ್ದು, ರಾಣಿ ಗಣೇಶ ಚವ್ಹಾಣ ಮೃತ ಮದುಮಗಳು. ಅಲ್ಲದೇ, ಮದುಮಗ ಗಣೇಶ ಚವ್ಹಾಣ ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮದುವೆ ಮನೆಯಿಂದ ಮಸಣಕ್ಕೆ..! ಇನ್ನು ಮದುವೆ ನಂತರ ಶಂಕರವಾಡಿಯಿಂದ ಕೊಕಟನೂರ ದೇವಸ್ಥಾನಕ್ಕೆ ಹೋಗುವ ವೇಳೆಯಲ್ಲಿ ಟೆಂಫೋ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.. ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ..

error: Content is protected !!