ಶಿಗ್ಗಾವಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಂಸದ ಪ್ರಹ್ಲಾದ್ ಜೋಷಿಯವರ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಶಿಗ್ಗಾವಿ ತಾಲೂಕಿನ ಪ್ರತಿ ಶಾಲೆಯ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಜ್, ಮತ್ತು ಪಲ್ಸ್ ಆಕ್ಸಿಮೀಟರ್‌ಗಳನ್ನು ನೀಡುವ ಕಾರ್ಯಕ್ಕೆ ಭಾ.ಜ.ಪ ಅದ್ಯಕ್ಷ ಶಿವಾನಂದ ಮ್ಯಾಗೇರಿ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಆರೋಗ್ಯದ ದೃಷ್ಟಿಯಿಂದ ಇಂದಿನ ಮಕ್ಕಳೇ ನಾಳೆಯ ನಾಡಿನ ಪ್ರಜೆಗಳು ಎಂಬ ಸದುದ್ದೇಶದಿಂದ ಮಕ್ಕಳು ಪರೀಕ್ಷೆಗಳನ್ನು ಎದುರಿಸುವ ಕಾರ್ಯಕ್ಕೆ ಮುಕ್ತವಾಗಿ ತಮ್ಮ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಈ ಎಲ್ಲ ಸಾಧನಗಳನ್ನು ನೀಡಲಾಗುತ್ತಿದೆ ಎಂದರು.

ಪುರಸಭೆ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಕಳೆದ ಬಾರಿ ಜೋಷಿಯವರ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜ್ ನೀಡಲಾಗಿತ್ತು ಈ ಭಾರಿಯೂ ಸಹಿತ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ನೀಡಲಾಗುತ್ತಿದೆ ಜೊತೆಗೆ ಬೊಮ್ಮಾಯಿಯವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ಕೈಗೊಳ್ಳುವ ಮೂಲಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ನರಹರಿ ಕಟ್ಟಿ, ರೇಣುಕನಗೌಡ ಪಾಟೀಲ, ಶಿವರಾಜ ರಾಯಣ್ಣವರ, ಕಾಶೀನಾಥ ಕಳ್ಳಿಮನಿ, ವಿನಯ ಮುಂಡಗೋಡ, ಸಂತೋಷ ದೊಡ್ಡಮನಿ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರು ಹಾಗೂ ಭಾಜಪದ ಕಾರ್ಯಕರ್ತರು ಇದ್ದರು.