ಭಟ್ಕಳ: ಪಟ್ಟಣದಲ್ಲಿ ವರುಣನ ಅರ್ಭಟ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಭಟ್ಕಳ ಪಟ್ಟಣ ಅಕ್ಷರಶಃ ಹೊಳೆಯಂತಾಗಿದೆ.

ಪಟ್ಟಣದ ಸಂಶುದ್ಧೀನ್ ಸರ್ಕಲ್, ರಂಗಿನಕಟ್ಟಾ, ಚೌಥನಿ ಸೇರಿ ಹಲವೆಡೆ ನೀರು ತುಂಬಿಕೊಂಡಿದೆ. ರಸ್ತೆಯ ಮೇಲೆ ನೀರು ನಿಂತ ಪರಿಣಾಮ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ಅಗಲೀಕರಣದಿಂದ ಮುಚ್ಚಿಹೋಗಿರುವ ಚರಂಡಿ ಕಾಲುವೆಗಳಿಂದಾಗಿ ರಸ್ತೆಯ ಮೇಲೆಯೇ ಮಳೆಯ ನೀರು ತುಂಬಿಕೊಂಡಿದೆ. ಹೀಗಾಗಿ ಪಟ್ಟಣದ ರಸ್ತೆಗಳೇಲ್ಲ ಅಕ್ಷರಶಃ ಹೊಳೆಯಂತಾಗಿವೆ.

ಇನ್ನು, ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ವರುಣ ಅಬ್ಬರಿಸುತ್ತಿದ್ದು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ವಿಪರೀತ ಮಳೆಯಾಗುತ್ತಿದೆ. ಹಲವೆಡೆ ನದಿಗಳು ಮೈದುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇಂದೂ ಕೂಡ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

error: Content is protected !!