ಹುಬ್ಬಳ್ಳಿಯಲ್ಲಿ ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಶಿವರಾಮ್ ಹೆಬ್ಬಾರ್ ಕಾರು ಅಲ್ಲ. ಬದಲಾಗಿ, ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಅವರ ಕಾರು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬೆಂಗಾಲು ವಾಹನಕ್ಕೆ ಡಿಕ್ಕಿಹೊಡೆದಿದೆ. ಯಲ್ಲಾಪುರ ಪ್ರವಾಹಪೀಡಿದ ಪ್ರದೇಶ ಪರಿಶೀಲನೆಗೆ ಹುಬ್ಬಳ್ಳಿಯಿಂದ ಸಿಎಂ ಬೊಮ್ಮಾಯಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳ ಬೆಂಗಾವಲು ವಾಹನದ ಹಿಂದೆ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿಹೊಡೆದಿದೆ. ಪರಿಣಾಮ, ಕಾರಿನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಅಂತ ತಿಳಿದುಬಂದಿದೆ. ಆದರೆ, ಅಪಘಾತವಾಗಿದ್ದು ಶಿವರಾಮ್ ಹೆಬ್ಬಾರ ಕಾರು ಎಂದು ಸುದ್ದಿಯಾಗಿತ್ತು. ಅಂದಹಾಗೆ, ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿಗಳ ಕಾರಿನಲ್ಲೇ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಉತ್ತರ ಕನ್ನಡ ಜಿಲ್ಲೆಗೆ ನೂತನ ಸಿಎಂ ಎಂಟ್ರಿ, ಭರ್ಜರಿ ಮಳೆಯ ನಡುವೆಯೇ ಬೊಮ್ಮಾಯಿಗೆ ಸ್ವಾಗತ..!
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಗೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದ್ದಾರೆ. ಯಲ್ಲಾಪುರದ ಕಿರವತ್ತಿಯಲ್ಲಿ ನೂತನ ಸಿಎಂ ಗೆ ಭರ್ಜರಿ ಸ್ವಾಗತ ಕೋರಲಾಯಿತು. ಸಿಎಂ ಆದ ಬಳಿಕ ಮೊದಲು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿರೋ ನೂತನ ಸಿಎಂ ಬೊಮ್ಮಾಯಿ, ಕಿರವತ್ತಿಯಿಂದ ನೇರವಾಗಿ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಅಗಮಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ನೀಡಿರೋ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ ನೆರವೇರಿಸಿ ಆನಂತರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಬೊಮ್ಮಾಯಿ ತೆರಳಲಿದ್ದಾರೆ. ಇನ್ನು ನೂತನ ಸಿಎಂ ಸ್ವಾಗತಕ್ಕೆ ಮಳೆರಾಯನೂ ಸಜ್ಜಾಗೇ ನಿಂತಿದ್ದ, ಸಿಎಂ ಆಗಮನಕ್ಕೂ ಮುನ್ನವೇ ಯಲ್ಲಾಪುರ ಪಟ್ಟಣ ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗುತ್ತಿದೆ. ಇನ್ನು ಸುರಿಯುವ ಮಳೆಯಲ್ಲಿಯೇ ಸಿಎಂಗೆ ಪೊಲೀಸರಿಂದ ಗಾಡ್ ಆಫ್ ಹಾನರ್ ಗೌರವ ಸಮರ್ಪಣೆ ಮಾಡಲಾಯಿತು. ಯಲ್ಲಾಪುರದ ತಾಲೂಕು ಆಸ್ಪತ್ರೆ ಬಳಿ ನೂತನ ಸಿಎಂ ಗೌರವ ವಂದನೆ ಸ್ವೀಕರಿಸಿದ್ರು.
ಟೂರ್ ಪ್ಲಾನ್ ಬದಲು, ನೇರವಾಗಿ ಉತ್ತರ ಕನ್ನಡಕ್ಕೆ ಬರಬೇಕಿದ್ದ ಸಿಎಂ ಹೋಗಿದ್ದೇಲ್ಲಿಗೆ..?
ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಗೆ ನೂತನ ಸಿಎಂ ಆಗಮನವಾಗಿದ್ದು ಹುಬ್ಬಳ್ಳಿಯ ಭೇಟಿಗಾಗಿ ಬೊಮ್ಮಾಯಿ ಟೂರ್ ಪ್ಲಾನ್ ಬದಲಾಯಿಸಿದ್ದಾರೆ. ಬೆಂಗಳೂರಿನಿಂದ ನೇರವಾಗಿ ಉತ್ತರ ಕನ್ನಡ ಜಿಲ್ಲೆಗೆ ತೆರಳಬೇಕಿದ್ದ ಸಿಎಂ, ಹುಬ್ಬಳ್ಳಿಗೆ ಅಗಮಿಸುತ್ತಿದ್ದಂತೆಯೇ ಟೂರ್ ಪ್ಲಾನ್ ಬಹುತೇಕ ಬದಲಾಗಿದೆ. ಹುಬ್ಬಳ್ಳಿಯ ಕೇಶಕುಂಜ ಸೇರಿದಂತೆ, ಬೊಮ್ಮಾಯಿ ತಂದೆ ದಿ.S R ಪಾಟೀಲ ಸಮಾಧಿಗೆ ಭೇಟಿ ನೀಡಿದ ಸಿಎಂ, ಅಲ್ಲಿಂದ ನೇರವಾಗಿ ನಗರದಲ್ಲಿರೋ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಸದ್ಯ ಇದೀಗ ಯಲ್ಲಾಪುರಕ್ಕೆ ರಸ್ತೆ ಮೂಲಕ ನೆರೆ ವೀಕ್ಷಣೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಾರೆ.
ವೀರರಾಣಿ ಚೆನ್ನಮ್ಮಾಜಿಗೆ ನಿಂದನೆ: ಶಿಗ್ಗಾವಿಯಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ..!
ಶಿಗ್ಗಾವಿ : ವೀರರಾಣಿ ಕಿತ್ತೂರ ಚನ್ನಮ್ಮಾಜಿಯವರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ವ್ಯಕ್ತಿಯ ವಿರುದ್ದ ಶಿಗ್ಗಾವಿ ನಿಯೋಜಿತ ಚನ್ನಮ್ಮ ಸರ್ಕಲ್ನಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಚನ್ನಮ್ಮ ಅಭಿಮಾನಿ ಬಳಗದ ವತಿಯಿಂದ ಪ್ರತಿಭಟಿಸಿ, ನಿಂದಿಸಿದ ವ್ಯಕ್ತಿಯ ಪ್ರತಿಕೃತಿ ದಹನ ಮಾಡಿ ಗಡಿಪಾರಿಗೆ ಅಗ್ರಹಿಸಿದ ಘಟನೆ ಸೋಮವಾರ ಜರುಗಿತು. ಶಿಗ್ಗಾವಿಯ ವೈದ್ಯ ಡಾ. ಕುಮಾರಗೌಡ ಪಾಟೀಲ ಅವರೇ ಚನ್ನಮ್ಮನವರ ಬಗ್ಗೆ ನಿಂದಿಸಿದ ವ್ಯಕ್ತಿ ಎಂದು ಹೇಳಲಾಗಿದ್ದು ಶಿಗ್ಗಾವಿ ಪಂಚಮಸಾಲಿ ಸಮಾಜದ ಅದ್ಯಕ್ಷ ಶಿವಾನಂದ ಬಾಗೂರ ಅವರು ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸೋಮವಾರ ಬೆಳಿಗ್ಗೆ ನಿಯೋಜಿತ ಚನ್ನಮ್ಮ ಸರ್ಕಲ್ನಲ್ಲಿ ನಿರ್ಮಾಣವಾಗುತ್ತಿರುವ ಕಿತ್ತೂರ ಚನ್ನಮ್ಮಾಜಿ ಅವರ ಪುತ್ಥಳಿ ನಿರ್ಮಾಣ ಕಾಮಗಾರಿ ಸ್ಥಳದ ಹತ್ತಿರ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಈಶ್ವರಗೌಡ ಪಾಟೀಲ, ನಾಗಪ್ಪ ಅಣ್ಣಿಗೇರಿ, ಬಸವರಾಜ ಲಂಗೋಟಿ ಚಂದ್ರು ಹೆಬ್ಬಾಳ ಅವರುಗಳು ಸೇರಿದಂತೆ ಸಮಾಜದ ಮುಖಂಡರು ಕಾಮಗಾರಿ ವೀಕ್ಷೀಸುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಡಾ. ಕುಮಾರಗೌಡ ಪಾಟೀಲ ಚನ್ನಮ್ಮನ ಘೋರಿ ಯಾವಾಗ ಮುಗಿಸುತ್ತೀರಿ ಎಂದು...
ಪಾಳಾ ಬಳಿ ಬಸ್- ಲಾರಿ ನಡುವೆ ಮುಖಾಮುಕಿ ಡಿಕ್ಕಿ..!
ಮುಂಡಗೋಡ: ತಾಲೂಕಿನ ಪಾಳಾ ಬಳಿಯ ಗೋಟಗೋಡಿಕೊಪ್ಪ ಕ್ರಾಸ್ ಬಳಿ KSRTC ಬಸ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ. ಲಾರಿ ಚಾಲಕನ ನಿರ್ಲಕ್ಷದಿಂದಲೇ ಅಪಘಾತವಾಗಿದೆ ಅಂತಾ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದು, ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಧಿಕಾರ ಕೊಟ್ರೆ ನಿಭಾಯಿಸ್ತಿನಿ, ಇಲ್ಲಾಂದ್ರೆ ಶಾಸಕನಾಗೇ ಕೆಲಸ ಮುಂದುವರೀಸ್ತಿನಿ; ಮಾಜಿ ಸಚಿವ ಹೆಬ್ಬಾರ್
ಮುಂಡಗೋಡ: ಬಿಜೆಪಿ ನಂಗೆ ಒಂದು ವರ್ಷ ಐದು ತಿಂಗಳ ಕಾಲ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು ಹೀಗಾಗಿ, ನಾನು ನನ್ನ ಪಕ್ಷಕ್ಕೆ, ಕ್ಷೇತ್ರದ ಮತದಾರನಿಗೆ ಯಾವಾಗ್ಲೂ ಚಿರ ಋಣಿಯಾಗಿರ್ತೆನೆ ಅಂತಾ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ರು. ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವ್ರು, ನನ್ನ ಕ್ಷೇತ್ರದ ಜನರ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ತಿಳಿಸಿದ್ರು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ..! ಇನ್ನು, ನೂತನ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಗಿರಿ ಸಿಗತ್ತಾ ..? ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಬ್ಬಾರ್, ಮುಂದಿನ ನೂತನ ಸಚಿವ ಸಂಪುಟದಲ್ಲಿ ನಂಗೆ ಸಚಿವ ಸ್ಥಾನ ನೀಡಿದ್ರೆ ಜವಾಬ್ದಾರಿಯುತವಾಗಿ ನಿಭಾಯಿಸ್ತಿನಿ, ನೀಡದೇ ಇದ್ರೂ ಶಾಸಕನಾಗೇ ನನ್ನ ಕೆಲಸ ಕಾರ್ಯಗಳನ್ನು ಮುಂದುವರಿಸ್ತಿನಿ ಅಂತಾ ಹೆಬ್ಬಾರ್ ತಿಳಿಸಿದ್ರು. ಅದೇನಿದ್ರೂ ಹೈಕಮಾಂಡ್ ನಿರ್ಧಾರಗಳಿಗೆ ನಾನು ಬದ್ಧನಾಗಿರ್ತಿನಿ ಅಂತಾ ಸ್ಪಷ್ಟ ಪಡಿಸಿದ್ರು.
ಶಿಗ್ಗಾವಿ ಶಿಕ್ಷಣ ಇಲಾಖೆ ಮ್ಯಾನೇಜರ್ ಸುರೇಶ್ ರೋಡ್ಡನವರ ಎಸಿಬಿ ಬಲೆಗೆ..!
ಶಿಗ್ಗಾವಿ: ಶಿಗ್ಗಾವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮ್ಯಾನೇಜರ್ ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದಿದ್ದಾನೆ. ವರ್ಗಾವಣೆ ವಿಷಯಕ್ಕೆ ಸಂಭಂದಿಸಿದಂತೆ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸುರೇಶ್, 4 ಸಾವಿರಕ್ಕೆ ಡೀಲು ಕುದುರಿಸಿದ್ದ ಎನ್ನಲಾಗಿದ್ದು ಶಿಗ್ಗಾವಿ ಗಾಂಧಿನಗರ LPS ಶಾಲೆಯ ಶಿಕ್ಷಕ ಹನುಮಂತಪ್ಪ ಹಳ್ಳೆಪ್ಪನವರ ಅವರ ದೂರಿನ ಮೇರೆಗೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಸುರೇಶನನ್ನು ವಶಕ್ಕೆ ಪಡೆದಿದ್ದಾರೆ. ಡಾವಣಗೇರಿಯ ಎಸಿಬಿ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಎಸಿಬಿ ಅಧಿಕಾರಿಗಳಾದ ಸುದರ್ಶನ ಪಟ್ಟಣಕುಡೆ, ಶ್ರೀಮತಿ ಪ್ರಭಾವತಿ ಸೇಖ್ ಸನದಿ, ಬಿಎಸ್ ಕರಡೆಣ್ಣನವರ ಕಡಕೊಳ, ವೆಂಕಟೇಶ ಹುಲಿಹಳ್ಳಿ ಮಂಜುನಾಥ, ಮುಲಿಮನಿ ಕೋಂಬಳಿ ಬಸಪ್ಪ ಅವರುಗಳು ದಾಳಿಯಲ್ಲಿ ಭಾಗವಹಿಸಿದ್ದರು.
“ಲಿಂಗಾಯತ” ಶಾಸಕರಿಗೆ ಸಿಎಂ ಸ್ಥಾನ ಪಕ್ಕಾ..! ಆ ಇಬ್ಬರಲ್ಲಿದೆ ತೀವ್ರ ಪೈಪೋಟಿ..!!
ಯಸ್, ಬಿಜೆಪಿ ಹೈಕಮಾಂಡ್ ಬಯಸಿದಂತೆ ಎಲ್ಲವೂ ಆಗಿ ಹೋಗಿದೆ. ಸಿಎಂ ಆಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದ್ರ ಜೊತೆ ಈಗ ಯಡಿಯೂರಪ್ಪ ಸಚಿವ ಸಂಪುಟ ಮಾಜಿಯಾಗಿದೆ. ಹಾಗಾದ್ರೆ ಯಾರು ಮುಂದಿನ ಸಿಎಂ..? ಈ ಕುತೂಹಲ ಸದ್ಯ ಇಡೀ ರಾಜ್ಯದ ಜನರಲ್ಲಿದೆ. ಬಹುಶಃ ಅಂದುಕೊಂಡಂತೆ ಆದ್ರೆ ಗುರುವಾರ ಅಥವಾ ಶುಕ್ರವಾರ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸೋದು ಪಕ್ಕಾ ಎನ್ನುವಂತಾಗಿದೆ. ಆ ಇಬ್ಬರ ನಡುವೆಯಷ್ಟೇ ಪೈಪೋಟಿ..! ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಹಾಗೂ ಬಾಗಲಕೋಟೆ ಬೀಳಗಿ ಶಾಸಕ ಮುರುಗೇಶ್ ನಿರಾಣಿ ನಡುವೆ ಸಿಎಂ ಪಟ್ಟಕ್ಕಾಗಿ ಹಾಣಹಣಿ ನಡೆಯುತ್ತಿದೆ ಎನ್ನಲಾಗ್ತಿದೆ. ಆದ್ರೆ, ಇಬ್ಬರ ನಡುವೆ ಯಾರು ಹಿತವರು ಅನ್ನೋದನ್ನ ಹೈಕಮಾಂಡ್ ಅಳೆದು ತೂಗಿ ತೀರ್ಮಾನಿಸಲಾಗ್ತಿದೆ ಅನ್ನೋ ಮಾಹಿತಿ ಇದೆ. ಹೊಸ ಮುಖಕ್ಕೆ ಆದ್ಯತೆ..? ಅಂದಹಾಗೆ, ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಪಕ್ಕಾ ಪ್ಲಾನ್ ಮೂಲಕವೇ ಹೊಸ ಸಿಎಂ ಆಯ್ಕೆ ಮಾಡಲು ಸನ್ನಧ್ದವಾಗಿದೆ. ಬಹುತೇಕ ಲಿಂಗಾಯತ ಶಾಸಕರಿಗೇ...
ನಾನೀಗ ಮಾಜೀ ಸಚಿವನಾಗಿಬಿಟ್ಟೆ..! ಪಬ್ಲಿಕ್ ಫಸ್ಟ್ ಗೆ ಹೆಬ್ಬಾರ್ ಫಸ್ಟ್ ರಿಯಾಕ್ಷನ್..!!
ಮುಂಡಗೋಡ: “ಸಿಎಂ ರಾಜೀನಾಮೆ ನೀಡ್ತಿದಾರೆ, ಹೀಗಾಗಿ ನಾನೂ ಈಗ ಮಾಜಿ ಸಚಿವನಾಗಿಬಿಟ್ಟೆ..! ಹೀಗಂತ ಸಚಿವ ಶಿವರಾಂ ಹೆಬ್ಬಾರ್ ಬೇಸರದ ನುಡಿ ಹಂಚಿಕೊಂಡ್ರು. “ಪಬ್ಲಿಕ್ ಫಸ್ಟ್ ನ್ಯೂಸ್” ಜೊತೆ ಎಕ್ಸ್ ಕ್ಲೂಸಿವ್ ಆಗಿ ಮೊದಲ ಪ್ರತಿಕ್ರಿಯೆ ನೀಡಿದ ಸಚಿವ ಶಿವರಾಮ್ ಹೆಬ್ಬಾರ್ ಭಾವುಕರಾದಂತೆ ಕಂಡ್ರು, ರಾಜ್ಯ ರಾಜಕೀಯದಲ್ಲಿ ಇಂದು ನಡೆದ ಮಹತ್ತರ ಬೆಳವಣಿಗೆ ಕುರಿತು ಬಹುಶಃ ಸಚಿವ ಶಿವರಾಮ್ ಹೆಬ್ಬಾರ್ ರವರಿಗೂ ಬೇಸರವಾಗಿರೋದು ಅವ್ರ ಮಾತುಗಳಲ್ಲಿ ಕಂಡು ಬಂತು. ಮುಂದೇನು..? ಸಿಎಂ ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಯಡಿಯೂರಪ್ಪರ ರಾಜೀನಾಮೆ ಅಂಗೀಕರಿಸಿಯೂ ಆಗಿದೆ. ಸಿಎಂ ರಾಜೀನಾಮೆ ಬಳಿಕ ಬಹುತೇಕ ಸಚಿವ ಸಂಪುಟ ವಿಸರ್ಜನೆ ಆಗತ್ತೆ. ಹೊಸ ಸಿಎಂ ಆಯ್ಕೆಯಾಗಿ ಮತ್ತೆ ನೂತನ ಸಚಿವ ಸಂಪುಟ ರಚನೆಯಾಗತ್ತೆ. ಹೀಗಾಗಿ, ಸಿಎಂ ರಾಜೀನಾಮೆ ಬಳಿಕ ನಾವು ಹೇಗೆ ಸಚಿವರಾಗಿ ಉಳಿಯೋಕೆ ಸಾಧ್ಯ ಅಂದ್ರು ಹೆಬ್ಬಾರ್. ಸಮಾವೇಶಕ್ಕೆ ಹಾಜರಾಗಿಲ್ಲ ಸಚಿವ್ರು.. ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಇಂದಿಗೆ ಎರಡು ವರ್ಷ...
ಕಣ್ಣೀರು ಹಾಕುತ್ತಲೇ ರಾಜೀನಾಮೆ ಘೋಶಿಸಿದ ಸಿಎಂ ಯಡಿಯೂರಪ್ಪ..!
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರೋ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಸಾಧನಾ ಸಮಾವೇಶದಲ್ಲಿ ಸಿಎಂ ಮಹತ್ವದ ಘೋಷಣೆ ಮಾಡಿದ್ದಾರೆ. ಅಕ್ಷರಶಃ ಕಣ್ಣೀರಾಗುತ್ತಲೇ ವಿದಾಯ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ, ಕಾರ್ಯಕ್ರಮ ಮುಗಿದ ಬಳಿಕ, ರಾಜ್ಯಪಾಲರ ಬಳಿಗೆ ಹೋಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸ್ತಿನಿ ಅಂತಾ ಭಾವುಕರಾಗೇ ಘೋಷಣೆ ಮಾಡಿದ್ರು..