ಶಿಗ್ಗಾವಿ: ಶಿಗ್ಗಾವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮ್ಯಾನೇಜರ್ ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದಿದ್ದಾನೆ.
ವರ್ಗಾವಣೆ ವಿಷಯಕ್ಕೆ ಸಂಭಂದಿಸಿದಂತೆ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸುರೇಶ್, 4 ಸಾವಿರಕ್ಕೆ ಡೀಲು ಕುದುರಿಸಿದ್ದ ಎನ್ನಲಾಗಿದ್ದು ಶಿಗ್ಗಾವಿ ಗಾಂಧಿನಗರ LPS ಶಾಲೆಯ ಶಿಕ್ಷಕ ಹನುಮಂತಪ್ಪ ಹಳ್ಳೆಪ್ಪನವರ ಅವರ ದೂರಿನ ಮೇರೆಗೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಸುರೇಶನನ್ನು ವಶಕ್ಕೆ ಪಡೆದಿದ್ದಾರೆ.
ಡಾವಣಗೇರಿಯ ಎಸಿಬಿ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಎಸಿಬಿ ಅಧಿಕಾರಿಗಳಾದ ಸುದರ್ಶನ ಪಟ್ಟಣಕುಡೆ, ಶ್ರೀಮತಿ ಪ್ರಭಾವತಿ ಸೇಖ್ ಸನದಿ, ಬಿಎಸ್ ಕರಡೆಣ್ಣನವರ
ಕಡಕೊಳ, ವೆಂಕಟೇಶ ಹುಲಿಹಳ್ಳಿ
ಮಂಜುನಾಥ, ಮುಲಿಮನಿ
ಕೋಂಬಳಿ ಬಸಪ್ಪ ಅವರುಗಳು ದಾಳಿಯಲ್ಲಿ ಭಾಗವಹಿಸಿದ್ದರು.