ಮುಂಡಗೋಡ: ಬಿಜೆಪಿ ನಂಗೆ ಒಂದು ವರ್ಷ ಐದು ತಿಂಗಳ ಕಾಲ ಸಚಿವನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು ಹೀಗಾಗಿ, ನಾನು ನನ್ನ ಪಕ್ಷಕ್ಕೆ, ಕ್ಷೇತ್ರದ ಮತದಾರನಿಗೆ ಯಾವಾಗ್ಲೂ ಚಿರ ಋಣಿಯಾಗಿರ್ತೆನೆ ಅಂತಾ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ರು.

ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವ್ರು, ನನ್ನ ಕ್ಷೇತ್ರದ ಜನರ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ತಿಳಿಸಿದ್ರು.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ..!
ಇನ್ನು, ನೂತನ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಗಿರಿ ಸಿಗತ್ತಾ ..? ಅನ್ನೊ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಬ್ಬಾರ್, ಮುಂದಿನ ನೂತನ ಸಚಿವ ಸಂಪುಟದಲ್ಲಿ ನಂಗೆ ಸಚಿವ ಸ್ಥಾನ ನೀಡಿದ್ರೆ ಜವಾಬ್ದಾರಿಯುತವಾಗಿ ನಿಭಾಯಿಸ್ತಿನಿ, ನೀಡದೇ ಇದ್ರೂ ಶಾಸಕನಾಗೇ ನನ್ನ ಕೆಲಸ ಕಾರ್ಯಗಳನ್ನು ಮುಂದುವರಿಸ್ತಿನಿ ಅಂತಾ ಹೆಬ್ಬಾರ್ ತಿಳಿಸಿದ್ರು. ಅದೇನಿದ್ರೂ ಹೈಕಮಾಂಡ್ ನಿರ್ಧಾರಗಳಿಗೆ ನಾನು ಬದ್ಧನಾಗಿರ್ತಿನಿ ಅಂತಾ ಸ್ಪಷ್ಟ ಪಡಿಸಿದ್ರು.

 

error: Content is protected !!