ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಗೆ ನೂತನ ಸಿಎಂ ಆಗಮನವಾಗಿದ್ದು ಹುಬ್ಬಳ್ಳಿಯ ಭೇಟಿಗಾಗಿ ಬೊಮ್ಮಾಯಿ ಟೂರ್ ಪ್ಲಾನ್ ಬದಲಾಯಿಸಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ಉತ್ತರ ಕನ್ನಡ ಜಿಲ್ಲೆಗೆ ತೆರಳಬೇಕಿದ್ದ ಸಿಎಂ, ಹುಬ್ಬಳ್ಳಿಗೆ ಅಗಮಿಸುತ್ತಿದ್ದಂತೆಯೇ ಟೂರ್ ಪ್ಲಾನ್ ಬಹುತೇಕ ಬದಲಾಗಿದೆ. ಹುಬ್ಬಳ್ಳಿಯ ಕೇಶಕುಂಜ ಸೇರಿದಂತೆ, ಬೊಮ್ಮಾಯಿ ತಂದೆ ದಿ.S R ಪಾಟೀಲ ಸಮಾಧಿಗೆ ಭೇಟಿ ನೀಡಿದ ಸಿಎಂ, ಅಲ್ಲಿಂದ ನೇರವಾಗಿ ನಗರದಲ್ಲಿರೋ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಸದ್ಯ ಇದೀಗ ಯಲ್ಲಾಪುರಕ್ಕೆ ರಸ್ತೆ ಮೂಲಕ ನೆರೆ ವೀಕ್ಷಣೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸುತ್ತಿದ್ದಾರೆ.