ಸವಣೂರು: ಸರ್ಕಾರದಿಂದ ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿಕೊಡಲು ಲಂಚ ಸ್ವೀಕರಿಸಿದ ಗ್ರಾಮ ಪಂಚಾಯತಿ ಸದಸ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರಡಗಿ ಗ್ರಾಮದ ದಾದಾಪೀರ ಮಹ್ಮದಗೌಸ್ ಲೋಹಾರ ಎಂಬುವವರಿಗೆ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 5 ಲಕ್ಷ ಹಣ ಮಂಜೂರಾಗಿತ್ತು. ಹೀಗಾಗಿ, ಕಾರಡಗಿ ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್ ಜಾಫರ್ ಸಂಶಿ, ಫಲಾನುಭವಿ ದಾದಪೀರನ ಮನೆಯ ಜಿಪಿಎಸ್ ಮಾಡಿಸಿಕೊಡಲು ರೂ 40 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 20 ಸಾವಿರ ರೂ. ಲಂಚದ ಹಣವನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ. ಪಿ. ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಆಂಜನೇಯ ಎನ್.ಎಚ್, ಮುಸ್ತಾಕ್ ಅಹ್ಮದ್ ಶೇಖ, ಮಂಜುನಾಥ ಪಂಡಿತ್ ಪಿ. ಎನ್, ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಎಮ್ ಕೆ ನದಾಫ, ಟಿ ಇ ತಿರುಮಲೆ, ಬಿ ಎಮ್ ಕರ್ಜಗಿ, ಎಮ್ ಕೆ ಲಕ್ಷ್ಮೀಶ್ವರ,...
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಬಗಡಗೇರಿಯಲ್ಲಿ ಗ್ರಾಪಂ ಸದಸ್ಯನ ಭೀಕರ ಹತ್ಯೆ, ಗ್ರಾಮದ ನಡುಬೀದಿಯಲ್ಲೇ ಕೊಂದು ಬೀಸಾಕಿದ ದುಷ್ಕರ್ಮಿಗಳು..!
ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಭೀಕರ ಹತ್ಯೆಯಾಗಿದೆ. ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ದುಷ್ಕರ್ಮಿಗಳು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಆಸ್ತಿ ವಿಚಾರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಇನ್ನು ನಡುಬೀದಿಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು. ಇನ್ನು ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಟಿಬೇಟಿಯನ್ ಕಾಲೋನಿಯಲ್ಲಿ ಅಕ್ರಮ ಗೋಮಾಂಸ ದಂಧೆ, ಇಬ್ಬರು ಆರೆಸ್ಟ್..!
ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಗೋಮಾಂಸ ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಓರ್ವ ಟಿಬೇಟಿಗನೂ ಸೇರಿದಂತೆ ಇಬ್ಬರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಟಿಬೇಟಿಯನ್ ಕಾಲೋನಿ ನಂಬರ್ 3 ರಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಪಂಚ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲಿದೆ, ಮೋದಿ ಅಲೆ ಕೆಲಸ ಮಾಡಲಿದೆ- ಟಿಬೇಟಿಯನ್ ಕ್ಯಾಂಪ್ ಗೆ ಆಗಮಿಸಿದ ಅರುಣಾಚಲ ಸಿಎಂ ಪೇಮಾ ಖಂಡು ಹೇಳಿಕೆ
ಮುಂಡಗೋಡ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲಿದೆ, ಬಿಜೆಪಿ ಪರ ಫಲಿತಾಂಶ ಬರುತ್ತದೆ ಪ್ರಧಾನಿ ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಆಳ್ವಿಕೆಗೆ ಮೆಚ್ಚುಗೆ ಇದ್ದು ಬಿಜೆಪಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ ಎಂಬ ಭರವಸೆ ಇದೆ ಅಂತಾ ಅರುಣಾಚಲ ಸಿಎಂ ಪೇಮಾ ಖಂಡು ಭವಿಷ್ಯ ನುಡಿದ್ರು. ಎರಡು ದಿನಗಳ ಕಾಲ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ಗೆ ಭೇಟಿ ನೀಡಿರೋ ಅವ್ರು ಮಾತನಾಡಿದರು. ಇನ್ನು ಮಣಿಪುರದಲ್ಲಿ ನಡೆದ ಗಲಭೆ ವಿಚಾರವಾಗಿ ಮಾತನಾಡಿದ ಅವ್ರು, ಅಲ್ಲಿ ಗಲಭೆ ನಡೆಯುತ್ತಿರುವುದು ಇದೇ ಮೊದಲ ಅಲ್ಲ. ಅಲ್ಲಿ ಆಗಾಗ ನಡದೆ ಇರುತ್ತದೆ, ಇದೊಂದು ದುರದೃಷ್ಟಕರ ಸಂಗತಿ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಲಿನ ಬೆಳವಣಿಗೆ ಮೇಲೆ ನಿಗಾ ಇಟ್ಟಿವೆ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವತ್ತ ಹೆಜ್ಜೆ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಂದಿದ್ದೇನೆ ಎಂದ ಅವರು, ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ಎರಡು...
ಮುಂಡಗೋಡಿನಲ್ಲಿ ಖತರ್ನಾಕ ATM ವಂಚಕಿಯ ಬಂಧನ, ಹಣ ಡ್ರಾ ಮಾಡಿ ಕೊಡುವುದಾಗಿ ವಂಚಿಸಿದ್ದ ಲೇಡಿ..!
ಮುಂಡಗೋಡ: ಎಟಿಎಂ ನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ಹೇಳಿ, ಬರೋಬ್ಬರಿ 69 ಸಾವಿರ ರೂ. ವಂಚಿಸಿದ್ದ ಖತರ್ನಾಕ ವಂಚಕಿಯನ್ನು ಮುಂಡಗೋಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಕಳೆದ ಸೆಪ್ಟೆಂಬರ್ 29 ರಂದು ನಡೆದಿದ್ದ ಎಟಿಎಂ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಖಾರಿಪುರ ತಾಲೂಕಿನ ಶಿರಾಳಕೊಪ್ಪದ ಆರೋಪಿ ಮಹಿಳೆ ಕೌಸರಬಾನು ನಜೀರಸಾಬ ಹಿರೇಕರೂರು(35) ಎಂಬುವವಳನ್ನು ಬಂಧಿಸಿ, 12 ಸಾವಿರ ರೂ. ಹಣ ವಶಕ್ಕೆ ಪಡೆದಿದ್ದಾರೆ. ಅಂದಹಾಗೆ, ಮುಂಡಗೋಡ ತಾಲೂಕಿನ ಮೈನಳ್ಳಿಯ ಸಹೀನಾಜ್ ಮಹಮ್ಮದ್ ಸಲೀಂ ಎಂಬುವವರು ಮುಂಡಗೋಡ ಠಾಣೆಗೆ ದೂರು ನೀಡಿದ್ದರು. ಕಳೆದ ಸೆಪ್ಟೆಂಬರ್ 25 ರಂದು ಸಾಯಂಕಾಲ ಮುಂಡಗೋಡಿನ ಬಸ್ ನಿಲ್ದಾಣದ ಎದುರಿನಲ್ಲಿರೋ ಎಟಿಎಂ ನಲ್ಲಿ ಹಣ ತೆಗೆಯಲು ಹೋಗಿದ್ದರು. ಈ ವೇಳೆ ಸರತಿ ಸಾಲಿನಲ್ಲಿ ಹಿಂದೆ ನಿಂತಿದ್ದ ಅಪರಿಚಿತ ಮಹಿಳೆ ಎಟಿಎಂ ನಿಂದ ಹಣ ತೆಗೆದು ಕೊಡುವುದಾಗಿ ನಂಬಿಸಿದ್ದಳು. ಅದೇ ವೇಳೆ ಎಟಿಎಂ ಪಾಸ್ ವರ್ಡ್ ಪಡೆದುಕೊಂಡಿದ್ದಳು. ಹಾಗೇ ದೂರುದಾರಳ ಎಟಿಎಂ ಕಾರ್ಡ್ ಎಗರಿಸಿ ಬೇರೆ...
ಕಾತೂರು ಸಮೀಪದ ಗೋಟಗೋಡಿಕೊಪ್ಪದಲ್ಲಿ ಚಿರತೆ ದಾರುಣ ಸಾವು..! ಅಷ್ಟಕ್ಕೂ ಚಿರತೆಯ ಸಾವಿಗೆ ಎನು ಕಾರಣ..?
ಮುಂಡಗೋಡ ತಾಲೂಕಿನ ಗೊಟಗೋಡಿಕೊಪ್ಪ ಸಮೀಪದ ಮುಕ್ತಿ ಮಠದ ಹತ್ತಿರ ಎರಡು ವರ್ಷದ ಗಂಡು ಚಿರತೆ ದಾರುಣ ಸಾವು ಕಂಡಿದೆ. ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಿರತೆಯ ಸಾವು ಹೇಗಾಯ್ತು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಮದ್ಯಾಹ್ನವೇ..? ಶುಕ್ರವಾರ ಮದ್ಯಾಹ್ನವೇ ಗೋಟಗೋಡಿಕೊಪ್ಪದ ಮುಕ್ತಿ ಮಠದ ಹತ್ತಿರದ ಗದ್ದೆಗಳ ಪಕ್ಕದಲ್ಲಿ ಚಿರತೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ರೈತರು ಚಿರತೆಯ ಮೃತದೇಹ ಕಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಮೃತದೇಹದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಹೇಗೆ ಸಾವು..? ಅಂದಹಾಗೆ, ರಸ್ತೆ ಪಕ್ಕದ ಗದ್ದೆಯಲ್ಲಿ ಚಿರತೆ ಸಾವು ಕಂಡಿದೆ. ಆದ್ರೆ, ಯಾವ ಕಾರಣಕ್ಕೆ ಸಾವು ಕಂಡಿದೆ ಅನ್ನೋ ಮಾಹಿತಿಯನ್ನು ಅರಣ್ಯ ಅಧಿಕಾರಿಗಳು ನೀಡಬೇಕಿದೆ. ಬಹುಶಃ ರಸ್ತೆ ದಾಟುವಾಗ ವಾಹನಗಳಿಗೆ ಡಿಕ್ಕಿಯಾಗಿ ಸಾವುಜ ಕಂಡಿತಾ..? ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಸಾವು ಕಂಡಿದೆಯಾ ವೈದ್ಯರ ವದಿಯ ಬಳಿಕವಷ್ಟೇ ಮಾಹಿತಿ ದೊರೆಯಬೇಕಿದೆ. ಸದ್ಯ...
ಅನಧಿಕೃತ ಇಟ್ಟಿಗೆ ಭಟ್ಟಿಗಳು ಬಾಲ ಬಿಚ್ಚಂಗಿಲ್ಲ, ಮತ್ತೆ ದಂಧೆಗಿಳಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ರು ತಹಶೀಲ್ದಾರ್..!
ಮುಂಡಗೋಡ ತಾಲೂಕಿನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿ ದಂಧೆಗೆ ಬಹುತೇಕ ಮೂಗುದಾರ ಬಿದ್ದಂತಾಗಿದೆ. ತಾಲೂಕಿನಲ್ಲಿ ಇನ್ಮೇಲೆ ಮತ್ತೆ ಇಟ್ಟಿಗೆ ಭಟ್ಟಿ ದಂಧೆ ಶುರು ಮಾಡಿದ್ರೆ ಸುಮ್ನೆ ಬಿಡಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಈ ಕುರಿತು ಪತ್ರಕರ್ತರು ಹಾಗೂ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ತಹಶೀಲ್ದಾರ್ ಸಂದೇಶ ರವಾನಿಸಿದ್ದಾರೆ. ಎಲ್ಲವೂ ಅನಧಿಕೃತವಂತೆ..! ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಎಲ್ಲವೂ ಅನಧಿಕೃತ ಇಟ್ಟಿಗೆ ಭಟ್ಟಿಗಳಂತೆ. ಇಲ್ಲಿ ಯಾರೊಬ್ರೂ ಅಧಿಕೃತ ಪರವಾನಗಿ ಪಡೆದು ದಂಧೆ ಮಾಡಿಯೇ ಇಲ್ಲ ಅನ್ನೋದು ತಹಶೀಲ್ದಾರ ಕಚೇರಿಯಿಂದ ಸಿಕ್ಕ ಮಾಹಿತಿ. ಹೀಗಾಗಿ, ಖಡಕ್ ಸಮರ ಸಾರಿರೋ ತಹಶೀಲ್ದಾರ್ ಸಾಹೇಬ್ರು, ಯಾರೊಬ್ಬರಿಗೂ ಸೊಪ್ಪು ಹಾಕುತ್ತಿಲ್ಲ. ಅದ್ಯಾರೇ ವಕಾಲತ್ತು ವಹಿಸಿದ್ರೂ ಯಾರಂದ್ರೆ ಯಾರಿಗೂ ಕ್ಯಾರೇ ಅಂತಿಲ್ಲ. ತಾಲೂಕಿನಲ್ಲಿ ಅದೇನೇ ಆದ್ರೂ ಅಕ್ರಮ ಇಟ್ಟಿಗೆ ಭಟ್ಟಿಗಳ ಹಾವಳಿ ನಿಯಂತ್ರಣಕ್ಕೆ ತೊಡೆ ತಟ್ಟಿ ನಿಂತಿದ್ದಾರೆ. ಹೀಗಾಗಿ, ಇಡೀ ತಾಲೂಕಿನ ಜನ ತಹಶೀಲ್ದಾರರ ಕ್ರಮಕ್ಕೆ ಮನತುಂಬಿ ಹರಸ್ತಿದಾರೆ. ಹೆಮ್ಮೆ ಪಡ್ತಿದಾರೆ. ಹಳ್ಳಿಗಳಲ್ಲಿ..! ಮುಂಡಗೋಡ ತಾಲೂಕಿನ...
ಚಿಗಳ್ಳಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ, ಕಲ್ಲಪ್ಪಜ್ಜನ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!
ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಹೊರ ವಲಯದಲ್ಲಿರೋ ಕಲ್ಲಪ್ಪಜ್ಜಯ್ಯನ ಗುಡ್ಡದ ದೇವಸ್ಥಾನದ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿದು ಬಂದಿದೆ. ಚಿಗಳ್ಳಿಯ ಈರಪ್ಪ ಫಕ್ಕೀರಪ್ಪ ಲಕ್ಕಿಕೊಪ್ಪ (45) ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ, ಯಾವುದೋ ಕಾರಣಕ್ಕೆ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?
ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈದುನನೇ ಅಣ್ಣನ ಹೆಂಡತಿ ಹಾಗೂ ಎರಡು ಪುಟ್ಟ ಪುಟ್ಟ ಕಂದಮ್ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿಬಲ್ ಮರ್ಡರ್ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಭೀಕರವಾಗಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಕುಮಾರಗೌಡ್ ಮರಿಗೌಡ್ರು (35)ಎಂಬುವ ಮೈದುನನೇ ಕೊಲೆ ಮಾಡಿ ನಾಪತ್ತೆಯಾಗಿರೋ ಅನುಮಾನ ವ್ಯಕ್ತವಾಗಿದೆ. ಪಾಪಿ ತಮ್ಮನೇ, ಸ್ವಂತ ಅಣ್ಣ ಹೊನ್ನೆಗೌಡ ಎಂಬುವವನ ಹೆಂಡತಿ ಮತ್ತು ಮಕ್ಕಳನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದ್ದು, ಮೃತ ಗೀತಾ ಪತಿ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಸದ್ಯ ನಾಪತ್ತೆಯಾಗಿರೋ ಮೈದುನ ಕುಮಾರಗೌಡನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ, ಹಾನಗಲ್ ಸಿಪಿಐ...
ಅವ್ರೊಬ್ಬ DyRFO ಸಾಹೇಬ್ರು..! ಅವ್ರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್..! ಅರಣ್ಯಾಧಿಕಾರಿಗಳೇ ಯಾರಿಗಾಗಿ ಈ ದೌಲತ್ತು..?
ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ DyRFO ಒಬ್ರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೊಗೆ ಫೋಸ್ ನೀಡಿದ್ದಾರೆ. ಹಾಗಂತ ಸಾಕಷ್ಟು ಚರ್ಚೆಗಳು ಖುದ್ದು ಇಲಾಖೆಯ ಅಂಗಳದಲ್ಲೇ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದೆ. ಅಲ್ದೇ ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಟೋಗಳೂ ಹರಿದಾಡ್ತಿವೆ. ಇಲಾಖೆಯ ಅಧಿಕಾರಿಗಳೇ ಹೀಗೆ ಮಾಡಿದ್ರೆ, ಸಾರ್ವಜನಿಕರ ಪಾಡೇನು ಅನ್ನೋ ಪ್ರಶ್ನೆ ನೆಟ್ಟಿಗರು ಕೇಳ್ತಿದಾರಂತೆ. ಅವರು ಹಾಗಾ..? ಅಸಲು, ಅವ್ರು ಇಡೀ ಕೆನರಾ ವಲಯದಲ್ಲೇ ಜಬರ್ದಸ್ತ್ ಪ್ರಭಾವಿಯಂತೆ. ಇಡೀ ಇಲಾಖೆಯೇ ಇವರ ಇಶಾರೆಯಲ್ಲಿ ಬದ್ರವಾಗಿದೆ ಅನ್ನೋ ಪುಕಾರು ಇದೆ. ಅಂತಹದ್ದೊಂದು ಹವಾ ಮೆಂಟೇನ್ ಮಾಡಿರೋ ಅವರ ವಿರುದ್ಧ ತುಟಿ ಬಿಚ್ಚಲು ಅಲ್ಲಿನ ಹಿರಿಯ ಅಧಿಕಾರಿಗಳೇ ಒಂದುಕ್ಷಣ ಬೆವರಿ ಬಿಡ್ತಾರೆ ಅನ್ನೋ ವಾತಾವರಣ ಇದೆಯಂತೆ. ಅದಕ್ಕಾಗೇ ನಾವೂ ಕೂಡ ಅವ್ರಿಗೆ “ಅವನು ಇವನು” ಅನ್ನದೇ ಫುಲ್ಲಿಲೋಡೇಡ್ ಗೌರವ ನೀಡುತ್ತಿದ್ದೆವೆ.. ಯಾಕಂದ್ರೆ, ಅದು ನಮ್ಮ ಪುಣ್ಯ ಅಂದುಕೊಂಡಿದ್ದಿವಿ. ನಮಗೂ ಬೆವರು ಕಣ್ರಿ..! ಅಲ್ದೇ ಅವರ ಹವಾ, ಬಲಿಷ್ಟ ಬಿರುಗಾಳಿಯ ಬಗ್ಗೆ ಹತ್ತಾರು ಜನ ಇಲಾಖೆಯ...