ಮುಂಡಗೋಡಿನಲ್ಲಿ ಖತರ್ನಾಕ ATM ವಂಚಕಿಯ ಬಂಧನ, ಹಣ ಡ್ರಾ ಮಾಡಿ ಕೊಡುವುದಾಗಿ ವಂಚಿಸಿದ್ದ ಲೇಡಿ..!

ಮುಂಡಗೋಡ: ಎಟಿಎಂ ನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ಹೇಳಿ, ಬರೋಬ್ಬರಿ 69 ಸಾವಿರ ರೂ. ವಂಚಿಸಿದ್ದ ಖತರ್ನಾಕ ವಂಚಕಿಯನ್ನು ಮುಂಡಗೋಡ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಕಳೆದ ಸೆಪ್ಟೆಂಬರ್ 29 ರಂದು ನಡೆದಿದ್ದ ಎಟಿಎಂ ವಂಚನೆ ಪ್ರಕರಣವನ್ನು ಭೇದಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಖಾರಿಪುರ ತಾಲೂಕಿನ
ಶಿರಾಳಕೊಪ್ಪದ ಆರೋಪಿ ಮಹಿಳೆ ಕೌಸರಬಾನು ನಜೀರಸಾಬ ಹಿರೇಕರೂರು(35) ಎಂಬುವವಳನ್ನು ಬಂಧಿಸಿ, 12 ಸಾವಿರ ರೂ. ಹಣ ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ, ಮುಂಡಗೋಡ ತಾಲೂಕಿನ ಮೈನಳ್ಳಿಯ ಸಹೀನಾಜ್ ಮಹಮ್ಮದ್ ಸಲೀಂ ಎಂಬುವವರು ಮುಂಡಗೋಡ ಠಾಣೆಗೆ ದೂರು ನೀಡಿದ್ದರು. ಕಳೆದ ಸೆಪ್ಟೆಂಬರ್ 25 ರಂದು ಸಾಯಂಕಾಲ ಮುಂಡಗೋಡಿನ ಬಸ್ ನಿಲ್ದಾಣದ ಎದುರಿನಲ್ಲಿರೋ ಎಟಿಎಂ ನಲ್ಲಿ ಹಣ ತೆಗೆಯಲು ಹೋಗಿದ್ದರು‌. ಈ ವೇಳೆ ಸರತಿ ಸಾಲಿನಲ್ಲಿ ಹಿಂದೆ ನಿಂತಿದ್ದ ಅಪರಿಚಿತ ಮಹಿಳೆ ಎಟಿಎಂ ನಿಂದ ಹಣ ತೆಗೆದು ಕೊಡುವುದಾಗಿ ನಂಬಿಸಿದ್ದಳು. ಅದೇ ವೇಳೆ ಎಟಿಎಂ ಪಾಸ್ ವರ್ಡ್ ಪಡೆದುಕೊಂಡಿದ್ದಳು. ಹಾಗೇ ದೂರುದಾರಳ ಎಟಿಎಂ ಕಾರ್ಡ್ ಎಗರಿಸಿ ಬೇರೆ ಕಾರ್ಡ್ ನೀಡಿ ಪರಾರಿಯಾಗಿದ್ದಳು.

ನಂತರ, ಆ ಎಟಿಎಂ ಕಾರ್ಡ ಮೂಲಕ ಬರೋಬ್ಬರಿ 69 ಸಾವಿರ ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದಳು. ಹೀಗಾಗಿ, ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇನ್ನು ಪ್ರಕರಣ ದಾಖಲಿಸಿಕೊಂಡಿದ್ದ ಮುಂಡಗೋಡ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ, ಮುಂಡಗೋಡ ಪಿಐ ಬಿ.ಎಸ್ ಲೋಕಾಪುರ, ಪಿಎಸ್ಐ ಯಲ್ಲಾಲಿಂಗ ಕುನ್ನೂರು ಕ್ರೈಂ ಪಿಎಸ್ಐ ಹನಮಂತ ಕುಡಗುಂಟಿ, ಪಿಎಸ್ಐ ಗೀತಾ ಕಲಘಟಗಿ, ಎಎಸ್ಐ ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಸಲೀಮ್, ಕೋಟೇಶ್ ನಾಗರವಳ್ಳಿ, ಬಸವರಾಜ್ ಲಮಾಣಿ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ, ಬಸವರಾಜ ಓಡೆಯರ್, ಪುಷ್ಪಾ ಕೊಳಗಿ, ರೇಖಾ ಹುಚ್ಚಣ್ಣವರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!