ಮುಂಡಗೋಡ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲಿದೆ, ಬಿಜೆಪಿ ಪರ ಫಲಿತಾಂಶ ಬರುತ್ತದೆ ಪ್ರಧಾನಿ ನರೇಂದ್ರ ಮೋದಿ ಅವರ ಒಂಬತ್ತು ವರ್ಷಗಳ ಆಳ್ವಿಕೆಗೆ ಮೆಚ್ಚುಗೆ ಇದ್ದು ಬಿಜೆಪಿ ಸಕಾರಾತ್ಮಕ ಫಲಿತಾಂಶ ಸಿಗಲಿದೆ ಎಂಬ ಭರವಸೆ ಇದೆ ಅಂತಾ ಅರುಣಾಚಲ ಸಿಎಂ ಪೇಮಾ ಖಂಡು ಭವಿಷ್ಯ ನುಡಿದ್ರು.
ಎರಡು ದಿನಗಳ ಕಾಲ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ಗೆ ಭೇಟಿ ನೀಡಿರೋ ಅವ್ರು ಮಾತನಾಡಿದರು.
ಇನ್ನು ಮಣಿಪುರದಲ್ಲಿ ನಡೆದ ಗಲಭೆ ವಿಚಾರವಾಗಿ ಮಾತನಾಡಿದ ಅವ್ರು, ಅಲ್ಲಿ ಗಲಭೆ ನಡೆಯುತ್ತಿರುವುದು ಇದೇ ಮೊದಲ ಅಲ್ಲ. ಅಲ್ಲಿ ಆಗಾಗ ನಡದೆ ಇರುತ್ತದೆ,
ಇದೊಂದು ದುರದೃಷ್ಟಕರ ಸಂಗತಿ ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಲ್ಲಿನ ಬೆಳವಣಿಗೆ ಮೇಲೆ ನಿಗಾ ಇಟ್ಟಿವೆ ಮಣಿಪುರದಲ್ಲಿ ಶಾಂತಿ ಸ್ಥಾಪಿಸುವತ್ತ ಹೆಜ್ಜೆ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಂದಿದ್ದೇನೆ ಎಂದ ಅವರು, ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ಎರಡು ದಿನಗಳ ಕಾಲ ಇಲ್ಲೇ ಇರುತ್ತೇನೆ ಅಂತಾ ಪೇಮಾ ಖಂಡು ಇಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕುರಿತು ವಿವರ ನೀಡಿದರು.
I N D I A ಮಹಾ ಘಟಬಂಧನ್ ದಲ್ಲಿ ಆರಂಭದಲ್ಲಿಯೇ ಅಪಸ್ವರ ವಿಚಾರ ಕುರಿತು ಸಹ ಹೇಳಿಕೆ ನೀಡಿದ ಅವರು ಈ ಕುರಿತು ನಾನು ಹೆಚ್ಚಿಗೆ ಮಾತನಾಡಲ್ಲ,
ನಮ್ಮ ಬಿಜೆಪಿ ವಕ್ತಾರರು ಪ್ರತಿಕ್ರಿಯೆ ಮಾಡಿದರೆ ಸೂಕ್ತ ಎಂದರು.