ಅನಧಿಕೃತ ಇಟ್ಟಿಗೆ ಭಟ್ಟಿಗಳು ಬಾಲ ಬಿಚ್ಚಂಗಿಲ್ಲ, ಮತ್ತೆ ದಂಧೆಗಿಳಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ರು ತಹಶೀಲ್ದಾರ್..!

ಮುಂಡಗೋಡ ತಾಲೂಕಿನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿ ದಂಧೆಗೆ ಬಹುತೇಕ ಮೂಗುದಾರ ಬಿದ್ದಂತಾಗಿದೆ. ತಾಲೂಕಿನಲ್ಲಿ ಇನ್ಮೇಲೆ ಮತ್ತೆ ಇಟ್ಟಿಗೆ ಭಟ್ಟಿ ದಂಧೆ ಶುರು ಮಾಡಿದ್ರೆ ಸುಮ್ನೆ ಬಿಡಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಈ ಕುರಿತು ಪತ್ರಕರ್ತರು ಹಾಗೂ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ತಹಶೀಲ್ದಾರ್ ಸಂದೇಶ ರವಾನಿಸಿದ್ದಾರೆ.

ಎಲ್ಲವೂ ಅನಧಿಕೃತವಂತೆ..!
ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಎಲ್ಲವೂ ಅನಧಿಕೃತ ಇಟ್ಟಿಗೆ ಭಟ್ಟಿಗಳಂತೆ. ಇಲ್ಲಿ ಯಾರೊಬ್ರೂ ಅಧಿಕೃತ ಪರವಾನಗಿ ಪಡೆದು ದಂಧೆ ಮಾಡಿಯೇ ಇಲ್ಲ ಅನ್ನೋದು ತಹಶೀಲ್ದಾರ ಕಚೇರಿಯಿಂದ ಸಿಕ್ಕ ಮಾಹಿತಿ. ಹೀಗಾಗಿ, ಖಡಕ್ ಸಮರ ಸಾರಿರೋ ತಹಶೀಲ್ದಾರ್ ಸಾಹೇಬ್ರು, ಯಾರೊಬ್ಬರಿಗೂ ಸೊಪ್ಪು ಹಾಕುತ್ತಿಲ್ಲ. ಅದ್ಯಾರೇ ವಕಾಲತ್ತು ವಹಿಸಿದ್ರೂ ಯಾರಂದ್ರೆ ಯಾರಿಗೂ ಕ್ಯಾರೇ ಅಂತಿಲ್ಲ. ತಾಲೂಕಿನಲ್ಲಿ ಅದೇನೇ ಆದ್ರೂ ಅಕ್ರಮ ಇಟ್ಟಿಗೆ ಭಟ್ಟಿಗಳ ಹಾವಳಿ ನಿಯಂತ್ರಣಕ್ಕೆ ತೊಡೆ ತಟ್ಟಿ ನಿಂತಿದ್ದಾರೆ. ಹೀಗಾಗಿ, ಇಡೀ ತಾಲೂಕಿನ ಜನ ತಹಶೀಲ್ದಾರರ ಕ್ರಮಕ್ಕೆ ಮನತುಂಬಿ ಹರಸ್ತಿದಾರೆ. ಹೆಮ್ಮೆ ಪಡ್ತಿದಾರೆ.

ಹಳ್ಳಿಗಳಲ್ಲಿ..!
ಮುಂಡಗೋಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಬಹುತೇಕ ಅಕ್ರಮ ಇಟ್ಟಿಗೆ ಭಟ್ಟಿಗಳದ್ದೇ ಕಾರುಬಾರಿದೆ. ಇಲ್ಲಿ, ಕೆಲವೊಬ್ರು ಜಮೀನನ್ನು NA ಮಾಡಿಸಿಕೊಂಡ್ರೆ ಮುಗೀತು, ನಮ್ಮನ್ನ ಕೇಳೋರ್ಯಾರು ಅನ್ನೋ ಹುಂಬತನದಲ್ಲಿ ಇದ್ರಂತೆ. ಈ ಕಾರಣಕ್ಕಾಗೇ ತಾಲೂಕಿನಲ್ಲಿ ಹೆಜ್ಜೆಗೊಂದರಂತೆ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿದ್ದವು. ಏನಿಲ್ಲವೆಂದ್ರೂ ನೂರರ ಆಸುಪಾಸಿನಲ್ಲಿರೋ ಅಕ್ರಮ ಭಟ್ಟಿಗಳು ಯಾರ ಭಯವಿಲ್ಲದೇ ದಂಧೆಗಿಳಿದಿದ್ದವು. ಹೀಗಾಗಿ, ಕಳೆದ ಕೆಲ ತಿಂಗಳ ಹಿಂದಷ್ಟೇ ತಹಶೀಲ್ದಾರ್ ಸಾಹೇಬ್ರು ಅಕ್ರಮ ಭಟ್ಟಿಗಳ ತೆರವಿಗೆ JCB ಹರಿಬಿಟ್ಟಿದ್ರು. ಆದ್ರೆ, ಆ ಹೊತ್ತಲ್ಲಿ ಸಮಯ ಕೇಳಿದ್ದ ಮಾಲೀಕರು, ಅದಾಗಲೇ ರೆಡಿಯಾಗಿದ್ದ ಇಟ್ಟಿಗೆಗಳನ್ನು ಉಳಿಸಿಕೊಂಡಿದ್ದರು.

ಈಗ ಶುರು..!
ಅಸಲು, ಇಷ್ಟು ದಿನ ಮಳೆಗಾಲ ಇದ್ದ ಕಾರಣಕ್ಕೆ ಇಟ್ಟಿಗೆ ಭಟ್ಟಿಗಳ ಕಾರ್ಯ ಸ್ಥಗಿತವಾಗಿತ್ತು. ಇನ್ನೇನು ಮಳೆಗಾಲ ಮುಗಿಯುತ್ತಿದ್ದಂತೆ ಮತ್ತೆ ಭಟ್ಟಿಗಳ ಅಂಗಳದಲ್ಲಿ ಇಟ್ಟಿಗೆಗಳು ಜನ್ಮ ತಾಳಲು ರೆಡಿಯಾಗಿವೆ. ಹೀಗಾಗಿ, ಮುಂಚಿತವಾಗೇ ಎಚ್ಚರಿಕೆ ನೀಡಿರೋ ತಹಶೀಲ್ದಾರರು ಅಕ್ರಮಕ್ಕೆ ಜಾಗವಿಲ್ಲ ಅಂತಾ ಖಡಾ ಖಂಡಿತವಾಗಿ ವಾರ್ನ್ ಮಾಡಿದ್ದಾರೆ.

ಎಲ್ಲೆಲ್ಲಿ ಹೆಚ್ಚು ಗೊತ್ತಾ..?
ಅಸಲು, ಮುಂಡಗೋಡ ತಾಲೂಕಿನ ಸನವಳ್ಳಿ, ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಪಾಳಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೆ ಇಂದೂರು, ಕೊಪ್ಪ, ಅತ್ತಿವೇರಿ ಭಾಗಗಳಲ್ಲಿ ಇಟ್ಟಿಗೆ ಭಟ್ಟಿಗಳಿವೆ. ಇದ್ರಲ್ಲಿ ಅತಿಹೆಚ್ಚು ಭಟ್ಟಿಗಳು ಸನವಳ್ಳಿ ಭಾಗದಲ್ಲಿವೆ. ಹೀಗಾಗಿ ಕಳೆದ ಕೆಲ ತಿಂಗಳ ಹಿಂದೆ ತಹಶೀಲ್ದಾರ್ ಸಾಹೇಬ್ರು ಸನವಳ್ಳಿ ಭಾಗದಲ್ಲಿ JCB ಗಳ‌ ಮೂಲಕ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಘರ್ಜಿಸಿದ್ದರು. ಆ ಮೂಲಕ ಇಡೀ ತಾಲೂಕಿನ ಅಷ್ಟೂ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು.

ಪ್ರಭಾವಕ್ಕೆ ಜಗ್ಗಲ್ಲ..!
ಹಾಗೆ ನೋಡಿದ್ರೆ, ನಮ್ಮ ಮುಂಡಗೋಡ ಶಂಕರ್ ಗೌಡಿಯವರಂತಹ ದಕ್ಷ ತಹಶೀಲ್ದಾರರನ್ನು ಪಡೆದಿದೆ. ಈ ಕಾರಣಕ್ಕಾಗೇ ಅದೇಂತದ್ದೇ ಅಕ್ರಮಿಗಳಿದ್ರೂ ಅಂತವರ ವಿರುದ್ಧ ಸಮರ ಸಾರಲು ಸಾಹೇಬ್ರು ಯಾವ ಮುಲಾಜೂ ಇಟ್ಟುಕೊಂಡಿಲ್ಲ. ಹೀಗಾಗಿ, ಮುಂಡಗೋಡ ತಹಶೀಲ್ದಾರ್ ಕಾರ್ಯಾಲಯ ಸದ್ಯ ಒಂದಿಷ್ಟು ಜನಸ್ನೇಹಿ ಆಗಿ ಬದಲಾಗಿದೆ. ಹಿಂದಿನ ಅವಧಿಗಳಿಗೆ ಹೋಲಿಸಿದ್ರೆ, ಒಂದಿಷ್ಟು ಆಂತರಿಕ ನುಂಗಣ್ಣರುಗಳ ಹಾವಳಿಗೂ ಕಡಿವಾಣ ಬಿದ್ದಿದೆ. ಅದ್ಯಾವುದೇ ಬಲಿಷ್ಟ ಕೈಗಳ ಪ್ರಭಾವಗಳೂ ಇಲ್ಲಿ ಲೆಕ್ಕಕ್ಕೆ ಬರೋದೇ ಇಲ್ಲ. ಬಹುತೇಕ ಅದೇನಾಗಬೇಕೋ ಅದೇಲ್ಲ ಕಾನೂನಾತ್ಮಕವಾಗಿಯೇ ನಡೀತಿದೆ. ಹೀಗಾಗಿ, ಇಡೀ ತಾಲೂಕಿನ ಜನತೆ ತಹಶೀಲ್ದಾರ ಶಂಕರ್ ಗೌಡಿಯವರಿಗೆ ಶ್ಲಾಘಿಸುತ್ತಿದೆ. ಇದು ಹೀಗೆ ಮುಂದುವರಿಯಲಿ ಅಂತಾ ಆಶಿಸುತ್ತಿದೆ.

error: Content is protected !!