ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಭರ್ಜರಿ ಯುದ್ಧ ಸಾರಿದ್ದಾರೆ. ಪರಿಣಾಮ 25 ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ. ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮೀಟರ್ ಬಡ್ಡಿ ಹಾವಳಿಯ ಬಗ್ಗೆ ನೋವು ತೋಡಿಕೊಂಡಿದ್ದರಲ್ಲದೇ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಪತ್ತೆಗೆ ಮುಂದಾಗಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ 7 ಪ್ರಕರಣ ದಾಖಲಿಸಿ 25 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡದ ಉಪನಗರ ಠಾಣೆ-2, ಶಹರ ಠಾಣೆ-2, ಪ್ರಕರಣ ವಿದ್ಯಾನಗರ ಠಾಣೆ-2 ಹಾಗೂ ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ. ಬಂಧಿತರಿಂದ 10 ದ್ವಿಚಕ್ರ ವಾಹನಗಳು, 10 ಮೊಬೈಲ್, ಹರಿತವಾದ ಆಯುಧ, ಮೀಟರ್ ಬಡ್ಡಿ ದಂಧೆಯ ವಿವರ ನಮೂದಿಸಿದ ದಾಖಲೆಗಳು, ಬಾಂಡ್ ಗಳನ್ನು ಜಪ್ತು ಮಾಡಲಾಗಿದೆ...
Top Stories
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ಎತ್ತಂಗಡಿ, ವೀರೇಶ್ ಈಗ ನೂತನ RFO..!
ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ರನ್ನು ವರ್ಗಾವಣೆ ಮಾಡಲಾಗಿದೆ. ಯಲ್ಲಾಪುರದ ಇಡಗುಂದಿ ಅರಣ್ಯ ವಲಯಕ್ಕೆ ನಿಯುಕ್ತಿ ಮಾಡಲಾಗಿದ್ದು ಇವ್ರ ಜಾಗಕ್ಕೆ ಅಂದ್ರೆ ಕಾತೂರು ಅರಣ್ಯ ವಲಯಕ್ಕೆ ವೀರೇಶ್ ಎಂಬುವವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮುಂಡಗೋಡ ಪ.ಪಂಚಾಯತಿಯ ಮುಚ್ಚಂಡಿ ಸಾಹೇಬ್ರು ವರ್ಗವಾಗಿ 20 ದಿನ ಆಯ್ತು..! ಆದ್ರೂ ಇಲ್ಲೇ ಇದಾರಲ್ರಿ..? ಅದ್ಯಾರ ಕೃಪೆ..?
ಮುಂಡಗೋಡ ಪಟ್ಟಣ ಪಂಚಾಯತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಮುಚ್ಚಂಡಿ ಅಂತೂ ಇಂತೂ ಟ್ರಾನ್ಸಪರ್ ಆಗಿದ್ದಾರೆ. ಜುಲೈ 31 ರಂದೇ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದರೂ ಸಾಹೇಬ್ರು ಮಾತ್ರ ಇನ್ನೂ ಜಾಗ ಕದಲಿಸಿಲ್ಲ. ಅದ್ಯಾರ ಕೃಪೆಯೋ ಅಥವಾ, ತಮಗಿರೋ ಭಾರೀ ಪ್ರಭಾವ ಬಳಸಿ ಇಲ್ಲೇ ಮುಂದುವರಿಯೋ ಮಹಾ ಪ್ಲ್ಯಾನೋ ಯಾರಂದ್ರೆ ಯಾರಿಗೂ ಅರ್ಥವಾಗಿಲ್ಲ. ಹೀಗಾಗಿ, ಸಾರ್ವಜನಿಕ ವಲಯದಲ್ಲಿ ಇದು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಗುಸು, ಗುಸು ಪಿಸು, ಪಿಸು ನಡೀತಿದೆ..! ಅಸಲು, ಸಾಕಷ್ಟು ಆಕ್ರೋಶಗಳು, ಆರೋಪಗಳು ಮಾರ್ದನಿಸಿದ ಹಿನ್ನೆಲೆಯಲ್ಲಿ, ಮುಚ್ಚಂಡಿ ಸಾಹೇಬ್ರನ್ನು ಸರ್ಕಾರ ವರ್ಗಾವಣೆಗೊಳಿಸಿದೆ ಅನ್ನೊ ಮಾಹಿತಿ ಸಿಕ್ಕಿದೆ. ಅಂದಹಾಗೆ, ಸರ್ಕಾರ ಇವರನ್ನು ವರ್ಗಾವಣೆಗೊಳಿಸಿ ಮುಂದಿನ ಕಾರ್ಯಸ್ಥಳವನ್ನೇ ನೀಡಿಲ್ಲ. ಆದ್ರೆ, ಮುಂದೆ ಸ್ಥಳ ಸೂಚಿಸುವ ವರೆಗೂ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಲಾಗಿದೆ. ಹೀಗಾಗಿ, ಶಿರಿಸಿಯಿಂದ ಬರುವ ಹುಚ್ಚಯ್ಯ ಹಿರೇಮಠರು ಖೋ… ಅಂದಕೂಡಲೇ ಮುಚ್ಚಂಡಿ ಸಾಹೇಬ್ರು ಬೆಂಗಳೂರಿನ ಬಸ್ ಹತ್ತಬೇಕಿದೆ. ಜನಾಕ್ರೋಶವಿತ್ತು..! ಅಸಲು, ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಒಂದಿಷ್ಟು ಮುಖಗಳು ಮುಂಡಗೋಡಿಗರ ಕಣ್ಣು ಕೆಂಪಗಾಗಿಸಿವೆ....
ಶಿಡ್ಲಗುಂಡಿ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಯಾರಿಗಾದ್ರೂ ಈತನ ಗುರುತು ಇದ್ರೆ ಮಾಹಿತಿ ನೀಡಿ..
ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 60-65 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು ಯಾರಿಗಾದ್ರೂ ಈತನ ಬಗ್ಗೆ ಗುರುತು ಇದ್ರೆ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಮುಂಡಗೋಡ ಪೊಲೀಸ್ ಠಾಣೆ ಫೋನ್ ನಂಬರ್ 08301 222211 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕ್ರೈ ಪಿಎಸ್ಐ ಹೆಚ್.ಬಿ.ಕುಡುಗುಂಟಿ ತಿಳಿಸಿದ್ದಾರೆ
ಪದವಿ ಪೂರ್ವ ಕಾಲೇಜುಗಳಲ್ಲಿ ಪೊಕ್ಸೋ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ- ಹೆಚ್ಚು ಮೊಬೈಲ್ ಬಳಕೆಯಿಂದಲೇ ಡೇಂಜರ್- ಡಾ.ತಿಪ್ಪೇಸ್ವಾಮಿ ಕೆ.ಟಿ. ಆತಂಕ
ಕಾರವಾರ; ರಾಜ್ಯದಲ್ಲಿ ಅತೀ ಹೆಚ್ಚು ಪೋಕ್ಸೋ ಪ್ರಕರಣ ಗಳು 18 ವರ್ಷದೊಳಗಿನ ವಯೋಮಿತಿಯಲ್ಲಿ ಕಂಡು ಬರುತ್ತಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಗ್ರತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಕರೆ ನೀಡಿದ್ರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 18 ವರ್ಷದೊಳಗಿನವರೂ ಕೂಡಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವ್ಯಾಪ್ತಿಗೆ ಬರಲಿದ್ದು, ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 44 ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಿಲುಕುತ್ತಿದ್ದಾರೆ. ಟೀನೇಜ್ ಪ್ರೆಗ್ನೆನ್ಸಿ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಆದ್ದರಿಂದ ಎಲ್ಲಾ ಪದವಿ ಪೂರ್ವ ಕಾಲೇಜುಗಳು, ಐ.ಟಿ.ಐ . ಡಿಪ್ಲೋಮೋ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪೋಕ್ಸೋ ಕುರಿತಂತೆ ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು, ಈ...
ಜಸ್ಟ್ ಪೋನಿನಲ್ಲಿ ಮಹಿಳೆ ಜೊತೆ ಮಾತಾಡಿದ ಅಂತಾ ಮೂಳೆ ಮುರಿಯುವಂಗೆ ಹೊಡೆದ್ರು..!
ಧಾರವಾಡ: ಮಹಿಳೆ ಜೊತೆ ಪೋನಿನಲ್ಲಿ ಮಾತನಾಡಿದ್ದಾನೆಂದು ಸಂಶಯ ಪಟ್ಟು ಟಂಟಂ ಚಾಲಕನ ಮೇಲೆ ಒಂದೇ ಕುಟುಂಬದವರಿಂದ ಹಲ್ಲೆ ನಡೆದಿದೆ. ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದ ಮಾವಿನ ತೋಟದಲ್ಲಿ ಘಟನೆ ನಡೆದಿದೆ. ಇಮಾಮ್ ಸಾಬ್ ದೇವರಮನೆ (34) ಎನ್ನುವ ಟಂಟಂ ಚಾಲಕನ ಮೇಲೆ, ಸುಮಾರು 10 ಜನರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ತೀವ್ರ ಹಲ್ಲೆಗೆ ಒಳಗಾದ ಇಮಾಮಸಾಬ್ ನ ಎರಡು ಕೈ ಮುರಿತಗೊಂಡಿವೆ. ಎಲುಬು ಮುರಿಯುವಂತೆ ಹೊಡೆದು ಕೈ ಮುರಿದಿರುವ ದುಷ್ಕರ್ಮಿಗಳು. ಕೊಟೂರು ಗ್ರಾಮದ ಅಗಸಿಮನಿ ಎಂಬ ಕುಟುಂಬದ ಹತ್ತು ಜನರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಅಗಸಿಮನಿ ಕುಟುಂಬದ ಮಹಿಳೆ ಜೊತೆ ಟಂಟಂ ಚಾಲಕ ಇಮಾಮ್ ಮಾತಾಡಿದ್ದಾನೆ ಎಂದು ಸಂಶಯ ಪಟ್ಟು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಸ್ಲಂ, ಇಸಾಕ್, ಶಕೀಲ್, ಅಪ್ಪಲಾಲ್, ನಿಸಾರ್, ಹಜರುದ್ದೀನ್, ಮುಜಮೀಲ್ ಸೇರಿ ಒಟ್ಟು 10 ಜನರಿಂದ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ 10 ಜನರ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ...
ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಸುಧಾ ಭೋವಿಗೆ ಮೊದಲ ದಿನವೇ ಹೈಕೋರ್ಟ್ ಶಾಕ್..! ಮೀಸಲಾತಿಗೆ ತಡೆಯಾಜ್ಞೆ..!
ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಆದ್ರೆ, ಅಧ್ಯಕ್ಷರಾದ ಮೊದಲ ದಿನವೇ ಶಾಕ್ ಎದುರಾಗಿದೆ. ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ, ಮಾನ್ಯ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಅದರ ವಿರುದ್ಧ ನಾಲ್ವರು ಪಟ್ಟಣ ಪಂಚಾಯತಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ವಿಚಾರಣೆ ನಡಸಿರೊ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಹೀಗಾಗಿ, ಅಧ್ಯಕ್ಷ ಪದವಿಗೇರಿದ್ರೂ ಜಯಸುಧಾ ಭೋವಿ ಮೇಡಂ ಸದ್ಯ ಕೋರ್ಟ್ ಮುಂದಿನ ಆದೇಶದ ವರೆಗೂ ನಾಮಕೆವಾಸ್ತೆ ಅನ್ನುವಂತಾಗಿದೆ..? ಅಸಲು, ಅಚ್ಚರಿಯೆಂಬಂತೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಪದವಿಗೇರಿದ್ದ ಜಯಸುಧಾ ಭೋವಿ ಎರಡನೇ ಬಾರಿ ಹುದ್ದೆ ಅಲಂಕರಿಸಿದ್ದಾರೆ. ಇನ್ನು, ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯರಾದ ರಝಾ ಖಾನ್ ಪಠಾಣ್, ಶಿವರಾಜ್ ಸುಬ್ಬಾಯವರ್, ಫಣಿರಾಜ್ ಹದಳಗಿ ಸೇರಿದಂತೆ ಹಲವರು ಕೋರ್ಟ್ ಮೆಟ್ಟಿಲೇರಿದ್ದರು ಅನ್ನೊ ಮಾಹಿತಿ ಲಭ್ಯವಾಗಿದೆ.
ಮುಂಡಗೋಡ ಪಟ್ಟಣ ಪಂಚಾಯತಿಗೆ ಅಚ್ಚರಿಯ ಅಧ್ಯಕ್ಷರಾಗಿ ಜಯಸುಧಾ ಭೋವಿ..!
ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಅಚ್ಚರಿಯೆಂಬಂತೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ಮುಂಡಗೋಡ ಪಟ್ಟಣ ಪಂಚಾಯತಿ ಕಾಂಗ್ರೆಸ್ ನೆರಳಲ್ಲಿ, ಶಿವರಾಮ್ ಹೆಬ್ಬಾರ್ ಬೆಂಬಲಿಗರ ಪಾಲಾಗಿದೆ. ಅಸಲು, ಅಧ್ಯಕ್ಷ ಸ್ಥಾನ ಜಯಸುಧಾ ಭೋವಿಯವರಿಗೆ ದಕ್ಕಿದ್ದೇ ರೋಚಕ ಎಂಬಂತಾಗಿದೆ. ಮೊನ್ನೆ ಯಿಂದಲೂ ಆಯ್ಕೆ ಕಸರತ್ತು ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿತ್ತು. ಇವತ್ತು ಬೆಳಗಿನವರೆಗೂ ಕಸುಮಾ ನಾಗಭೂಷಣ ಹಾವಣಗಿಯವ್ರೇ ಕೈ ಪಡೆಯ ಅಧ್ಯಕ್ಷ ಅಭ್ಯರ್ಥಿಯಾಗೋದು ಅನ್ನೊ ಮಾತಿತ್ತು. ಆದ್ರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಎರಡನೇ ಬಾರಿಗೆ ಜಯಸುಧಾ ಭೋವಿ ಕೈ ಪಡೆಯ ಅಂಗಳದಿಂದಲೇ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಳೆದ ಹಲವು ದಿನಗಳಿಂದ ಏನೇಲ್ಲ ಗುದುಮರಗಿ ಬಿದ್ದಿತ್ತೊ ಅದಕ್ಕೇಲ್ಲ ಸ್ಪಷ್ಟ ತಿರುವು ಸಿಕ್ಕಿದೆ. ಯಾರೂ ನಿರೀಕ್ಷಿಸಿರದ ಮಹಿಳೆ ಮತ್ತೊಮ್ಮೆ ಗದ್ದುಗೆ ಹಿಡಿದಿದ್ದಾರೆ. ಇದ್ರೊಂದಿಗೆ, ಒಳಗೊಳಗೇ ನಡೆದಿದ್ದ ಲೆಕ್ಕಾಚಾರಗಳು...
ಯಮರೂಪಿ ರಸ್ತೆ ಗುಂಡಿಗಳಿಗೆ ತೆಪೆ ಹಾಕಲು ಬಂದ್ರು ಅಧಿಕಾರಿಗಳು..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!
ಮುಂಡಗೋಡ ಹೊರ ವಲಯದ ಮಹಾಲೆ ಮಿಲ್ ಹತ್ತಿರ PWD ಅಧಿಕಾರಿಗಳು ಬಂದಿಳಿದಿದ್ದಾರೆ. ನಿನ್ನೆಯಷ್ಟೇ ರಸ್ತೆಯಲ್ಲಿ ಬಾಯ್ತೆರೆದಿರೋ ಯಮರೂಪಿ ಗುಂಡಿಗಳ ಬಗ್ಗೆ ಪಬ್ಲಿಕ್ ಫಸ್ಟ್ ನ್ಯೂಸ್ ಪ್ರತ್ಯಕ್ಷ ವರದಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗ್ತಿದೆ. ವಾಹನ ಸವಾರರಿಗೆ ತಾತ್ಕಾಲಿಕವಾಗಿ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..! ನಿಜ, ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ. ಪ್ರತೀ ವರ್ಷದ ಮಳೆಗಾಲ ಬಂತಂದ್ರೆ ಸಾಕು ಈ ರಸ್ತೆಯಲ್ಲಿ ಜಸ್ಟ್ ನಡೆದಾಡಲೂ ಆಗದ ಸ್ಥಿತಿ ಇರತ್ತೆ. ಅದೆಷ್ಟೇ ತೆಪೆ ಹಚ್ಚಿದ್ರೂ ಈ ರಸ್ತೆ ಇವತ್ತಿಗೂ ಶಾಶ್ವತ ಪರಿಹಾರಕ್ಕೆ ಸಾಕ್ಷಿ ಆಗಲೇ ಇಲ್ಲ. ಅವನೊಬ್ಬ ಬ್ರಷ್ಟ ಅಧಿಕಾರಿ ಅವತ್ತು ಸರಿಯಾಗಿ ಕಾರ್ಯ ನಿರ್ವಹಿಸಿದ್ದಿದ್ದರೆ, ಈ ಸ್ಥಿತಿ ಇರ್ತಾನೇ ಇರಲಿಲ್ಲ. ಈ ರಸ್ತೆಯ ಸಮಸ್ಯೆಗೆ ಅವತ್ತೇ ಮುಕ್ತಿ ಸಿಕ್ಕುಬಿಡ್ತಿತ್ತು ಅಂತಾರೆ ಇಲ್ಲಿನ ಜನ. ಅದೇನೇ ಆಗಲಿ, ಸದ್ಯ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಆದ್ರೆ, ಇದೇ ಶಾಶ್ವರ ಪರಿಹಾರ ಅಲ್ಲ....
ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು..!
ಗದಗ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಭಿಕರ ಅಪಘಾತ ನಡೆದಿದೆ. ಪರಿಣಾಮ ಕಾರನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಸಾವು ಕಂಡಿದ್ದಾರೆ. ಇಳಕಲ್ ನಿಂದ ಹುಬ್ಬಳ್ಳಿ ಗೆ ಹೊರಟ್ಟಿದ್ದ ಸಾರಿಗೆ ಬಸ್, ಹಾವೇರಿಯಿಂದ ಕಲ್ಲಾಪೂರ ಕಡೆಗೆ ಹೊರಟ್ಟಿದ್ದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೃತರು ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟ್ಟಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.