ದಾಂಡೇಲಿಯ DRFO ಯೋಗೇಶ್ ನಾಯ್ಕ್ ಕೊನೆಗೂ ಬದುಕಲೇ ಇಲ್ಲ..! ಕಾರ್ಕೋಟಕ “ವಿಷ” ವರ್ತುಲದಲ್ಲಿ ಅರಣ್ಯ ಅಧಿಕಾರಿಯ ದುರಂತ ಸಾವು..! ಅಷ್ಟಕ್ಕೂ ಯಾರು ಹೊಣೆ..?

ದಾಂಡೇಲಿಯ DRFO ಯೋಗೇಶ್ ನಾಯ್ಕ್ ಕೊನೆಗೂ ಬದುಕಲೇ ಇಲ್ಲ..! ಕಾರ್ಕೋಟಕ “ವಿಷ” ವರ್ತುಲದಲ್ಲಿ ಅರಣ್ಯ ಅಧಿಕಾರಿಯ ದುರಂತ ಸಾವು..! ಅಷ್ಟಕ್ಕೂ ಯಾರು ಹೊಣೆ..?

ಈ ಸಾವನ್ನು ನಿಜಕ್ಕೂ ಯಾರ್ ಅಂದ್ರೆ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಕೆಲವೇ ದಿನಗಳ ಹಿಂದೆ ಲವಲವಿಕೆಯಿಂದ ಕಾರ್ಯ ನಿರ್ವಹಿಸ್ತಿದ್ದ ಅರಣ್ಯ ಅಧಿಕಾರಿಯೊಬ್ಬ ಹೀಗೆ ವಯಸ್ಸಲ್ಲದ ವಯಸ್ಸಲ್ಲಿ ಜೀವ ಕಳೆದುಕೊಂಡು ಬಿದ್ದಿದ್ದಾನೆ. ಹಾಗಿದ್ರೆ, ಇದನ್ನು ಆತನ ಹಣೆಬರಹ ಅನ್ನ ಬೇಕೋ..? ಅಥವಾ ನಿರ್ಲಜ್ಜ, ಅಮಾನುಷ ವ್ಯವಸ್ಥೆಯ, ಮದವೇರಿದ ಅಧಿಕಾರಿಗಳ ನಿರ್ಲಕ್ಷ ಅನ್ನಬೇಕೋ ಒಂದೂ ಅರ್ಥವಾಗ್ತಿಲ್ಲ. ಒಟ್ನಲ್ಲಿ ದಾಂಡೇಲಿಯ ಅವನೊಬ್ಬ ಅರಣ್ಯ ಅಧಿಕಾರಿ ಸದ್ಯ ಇಂತದ್ದೇ ವ್ಯವಸ್ಥೆಗೆ ತನ್ನ ಜೀವ ಬಲಿ ಕೊಟ್ನಾ..? ಅರ್ಥವೇ ಆಗ್ತಿಲ್ಲ. ಆತನ ಹೆಸ್ರು ಯೋಗೇಶ್..! ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವ, ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ನಿರ್ಬಿಡೆಯ, ಪ್ರಮಾಣಿಕ ಸೇವೆ ಸಲ್ಲಿಸಿದ್ದವ. ಸದ್ಯ ವಿರ್ನೋಲಿ ವಲಯದ ,ಕುಳಗಿ ಶಾಖೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆಯಲ್ಲಿದ್ದವ. ಈಗಷ್ಟೇ ಬಹುಶಃ ಮೂವತ್ತರ ಆಸುಪಾಸಿನ ಹುಡುಗ. ಮದುವೆಯಾಗಿದೆ. ಜೊತೆಗೆ ಮೂರು ವರ್ಷದ ಪುಟ್ಟ ಕಂದಮ್ಮನೂ ಇದೆ. ಹೀಗಿರೋ ಈತ ಕಳೆದ ಜೂನ್ 27 ರಂದು, ಸಾಗವಾನಿ ಮಡಿ...

ನಿಲ್ಲದ ಮಳೆ ಅಬ್ಬರ, ಗದ್ದೆಯಲ್ಲಿ ಹೋಗುತ್ತಿದ್ದ ಇಬ್ಬರು ನೀರಲ್ಲಿ ಕೊಚ್ಚಿ ಹೋಗಿ ದಾರುಣ ಸಾವು..!

ನಿಲ್ಲದ ಮಳೆ ಅಬ್ಬರ, ಗದ್ದೆಯಲ್ಲಿ ಹೋಗುತ್ತಿದ್ದ ಇಬ್ಬರು ನೀರಲ್ಲಿ ಕೊಚ್ಚಿ ಹೋಗಿ ದಾರುಣ ಸಾವು..!

ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ‌ಮಳೆಯ ಅಬ್ಬರ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಇಬ್ಬರು ದುರಂತ ಸಾವು ಕಂಡಿದ್ದಾರೆ. ಭಾರೀ ಮಳೆಯಲ್ಲಿ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಸಾವು ಸಾವು ಕಂಡಿದ್ದಾರೆ. ಕುಮಟ ತಾಲೂಕಿನ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಟ್ಕುಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸತೀಶ ಪಾಂಡುರಂಗ ನಾಯ್ಕ (40), ಉಲ್ಲಾಸ ಗಾವಡಿ (50) ಎಂಬುವವರು ದಾರುಣ ಸಾವು ಕಂಡಿದ್ದಾರೆ. ಭಾರೀ ಮಳೆಯಿಂದ ಗದ್ದೆಗಳು ಅಕ್ಷರಶಃ ಕೆರೆಯಂತಾಗವೆ. ಇಂತಹ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಓರ್ವ ಕಾಲು ಜಾರಿ ಬಿದ್ದಿದ್ದಾನೆ. ನಂತರ ಆತನನ್ನು ರಕ್ಷಣೆ ಮಾಡಲು ಹೋಗಿ ಮತ್ತೋರ್ವ ಸಾವಿನ ಹಾದಿ ಹಿಡಿದಿದ್ದಾನೆ. ಇನ್ನು, ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಇಬ್ಬರ ಶವಗಳು, ಕೆಲವು ಗಂಟೆಗಳ ಬಳಿಕ ಪತ್ತೆಯಾಗಿವೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದೆ.

ಬಸ್ ನಲ್ಲಿ ಪ್ರೀ ಯಾಗಿ ಪ್ರಯಾಣಿಸಲು ಬುರ್ಕಾ ಧರಿಸಿದ ವ್ಯಕ್ತಿ, ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ..?

ಬಸ್ ನಲ್ಲಿ ಪ್ರೀ ಯಾಗಿ ಪ್ರಯಾಣಿಸಲು ಬುರ್ಕಾ ಧರಿಸಿದ ವ್ಯಕ್ತಿ, ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ..?

 ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ಶಕ್ತಿ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯರ ಬುರ್ಖಾ ಧರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇನ್ನು ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾದ ಶಕ್ತಿ ಯೋಜನೆ ಲಾಭ ಪಡೆಯಲು ಹಲವು ಪುರುಷರು ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಇನ್ನು ಈ ಕುರಿತು ಸಾರ್ವಜನಿಕರು ಬುರ್ಖಾ ಧರಿಸಿದ್ದರೂ ಬಸ್‌ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದರಿಂದ ಪ್ರಶ್ನೆ ಮಾಡಿದಾಗ ವೀರಭದ್ರಯ್ಯ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ತಾನು ಭಿಕ್ಷಾಟನೆ ಉದ್ದೇಶದಿಂದ ಬುರ್ಖಾ ಹಾಕಿದ್ದೇನೆ ಎಂದು ವೀರಭದ್ರಯ್ಯ ಹೇಳಿಕೊಂಡಿದ್ದಾನೆ.

ಶೆಟ್ಟರ್ ನೇತೃತ್ವದಲ್ಲಿ ಆಪರೇಷನ್ ಹಸ್ತ: ಕಾಂಗ್ರೆಸ್ಸಿಗೆ ಬರ್ತಾರೆ ಮಾಜಿ ಶಾಸಕ ಚಿಕ್ಕನಗೌಡರ..?

ಶೆಟ್ಟರ್ ನೇತೃತ್ವದಲ್ಲಿ ಆಪರೇಷನ್ ಹಸ್ತ: ಕಾಂಗ್ರೆಸ್ಸಿಗೆ ಬರ್ತಾರೆ ಮಾಜಿ ಶಾಸಕ ಚಿಕ್ಕನಗೌಡರ..?

 ಹುಬ್ಬಳ್ಳಿ: ; ಬಿಜೆಪಿ ಮಾಜಿ ಶಾಸಕ ಯಡಿಯೂರಪ್ಪ ಸಂಬಂಧಿ ಕಾಂಗ್ರೆಸ್ ಕೈ ಹಿಡಿಯುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ. ಹುಬ್ಬಳ್ಳಿ ಭಾಗದಲ್ಲಿ ಮತ್ತೋರ್ವ ಬಿಜೆಪಿ ಹುರಿಯಾಳು ಕಾಂಗ್ರೆಸ್ ಸೇರ್ಪಡೆಗೊಳ್ಳುವ ವಿಚಾರ ಸಾಕಷ್ಟು ದಟ್ಟವಾಗಿದ್ದು, ರಾಜ್ಯ ರಾಜಕಾರಣದ ಬೆಳವಣಿಗೆಗೆ ಪುಷ್ಟಿ ನೀಡಲಿದೆ. ಹೌದು…ಶಿಘ್ರದಲ್ಲಿಯೇ ಯಡಿಯೂರಪ್ಪ ಸಂಬಂಧಿ ಎಸ್.ಐ.ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ಚಿಕ್ಕನಗೌಡರ ಕುಂದಗೋಳ ಮಾಜಿ ಶಾಸಕರಾಗಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳದಿದ್ದ ಚಿಕ್ಕನಗೌಡರ ಪರಾಜಿತರಾಗಿದ್ದರು. ಬಿಜೆಪಿ‌ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಚಿಕ್ಕನಗೌಡರ ಈಗ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ಸೇರಲಿರುವ ಚಿಕ್ಕನಗೌಡರ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬುವ ಮಾಹಿತಿ ಲಭ್ಯವಾಗಿದ್ದು, ಲೋಕಸಭೆ ಚುನಾವಣೆ ಹಿನ್ನಲೆ ಸದ್ದಿಲ್ಲದೆ ಆಪರೇಶನ್ ಆರಂಭಿಸಿರುವ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಮುಖ ನಾಯಕರನ್ನು ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ. ಶೆಟ್ಟರ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿರುವ ಚಿಕ್ಕನಗೌಡರ, ನಿನ್ನೆ ತಮ್ಮ...

ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್  ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್ ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾರವರ 88 ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಇಲ್ಲಿನ ಕ್ಯಾಂಪ್ ನಂಬರ್ ಒಂದರ ಬೌದ್ದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅಂದಹಾಗೆ, ಇಲ್ಲಿನ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಗರು ದಲೈ ಲಾಮಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪ್ರತೀ ಮನೆ ಮನೆಗಳಲ್ಲೂ ದಲೈ ಲಾಮಾರವರ ಹುಟ್ಟುಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ದೀರ್ಘಾಯುಷ್ಯ ಕೋರಿ ಪ್ರಾರ್ಥನೆಗಳು ನಡೆಯುತ್ತಿವೆ. ಅಲ್ಲದೇ, ಹಲವು ಸಾಮಾಜಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ, ಸಿಎಂ ಸಿದ್ದರಾಮಯ್ಯ ಭಾಗಿ..!

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ, ಸಿಎಂ ಸಿದ್ದರಾಮಯ್ಯ ಭಾಗಿ..!

ಬೆಂಗಳೂರು; ಶಿವಶರಣ ಹಡಪದ ಅಪ್ಪಣ್ಣನವರ ರಾಜ್ಯಮಟ್ಟದ ಜಯಂತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಲಾಯಿತು. ಸಿಎಂ ಸಿದ್ದರಾಮಯ್ಯ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ರು. ಶಿವಶರಣ ಹಡಪದ ಅಪ್ಪಣ್ಣ ನವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಉದ್ಘಾಟಿಸಿದ್ರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿರವರು, ಹಡಪದ ಅಪ್ಲಣ್ಣ ದೇವರ ಸಂಸ್ಥಾನ ಮಠ ತಂಗಡಗಿಯ ಪರಮಪೂಜ್ಯ ಅನ್ನದಾನ ಭಾರತಿ ಅಪ್ಪಣ್ಣ ಮಹಾ ಸ್ವಾಮಿಗಳು , ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಸಿದ್ದಪ್ಪ ಮ ಹಡಪದ ಸೇರಿದಂತೆ ರಾಜ್ಯ ಸಂಘದ ಪದಾಧಿಕಾರಿಗಳು ಬೆಂಗಳೂರು ಜಿಲ್ಲಾ ಸಂಘದ ಅಧ್ಯಕ್ಷರಾದ ನಾಗರಾಜ ಹಡಪದ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು . ಸಮಾರಂಭದಲ್ಲಿ ಬೆಂಗಳೂರು ನಗರದ ಸಮಾಜದ ಬಂಧುಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮಾಜದ...

ಬಂಕಾಪುರ ಬಳಿ ಲಾರಿ, ಕಾರು ಮುಖಾಮುಕಿ ಡಿಕ್ಕಿ, ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು..!

ಬಂಕಾಪುರ ಬಳಿ ಲಾರಿ, ಕಾರು ಮುಖಾಮುಕಿ ಡಿಕ್ಕಿ, ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ: ಲಾರಿ ಹಾಗೂ ಕಾರು ಮಧ್ಯೆ ಡಿಕ್ಕಿಯಾದ ಪರಿಣಾಮ ಮೆಡಿಕಲ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿಗ್ಗಾವಿ ತಾಲೂಕಿ‌ನ ಬಂಕಾಪುರ ಬಳಿಯ ತಂಬಾಕದ ಮನೆಯ ಹತ್ತಿರ ರಾ.ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಖಿಲ ಕುಂಬಾರ (27), ಎಂಬುವ ವಿದ್ಯಾರ್ಥಿ ಸಾವು ಕಂಡಿದ್ದು, ಬೆಳಗಾವಿಯಲ್ಲಿ ಎಂಡಿ ವಿದ್ಯಾಭ್ಯಾಸ ಮಾಡ್ತಾ ಇದ್ದ, ಬೆಂಗಳೂರಿನ ನಿವಾಸಿ ಎನ್ನಲಾಗಿದೆ. ಇಂದು ಬೆಳಗಾವಿ ಇಂದ ದಾವಣಗೆರೆ ಗೆ ಹೊರಟಿದ್ದ ವೇಳೆ, ಹೆದ್ದಾರಿಯ ಮೇಲೆ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರು ನುಜ್ಜು ನಜ್ಜುಗುಜ್ಜಾಗಿದೆ. ಹೀಗಾಗಿ, ವಿದ್ಯಾರ್ಥಿ ಅಖಿಲ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬಂಕಾಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಬಂಕಾಪುರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ‌.

ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?

ಶಕ್ತಿ ಯೋಜನೆ ಎಫೆಕ್ಟ್​; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ ಇದುವರೆಗೂ ಎಷ್ಟೇಲ್ಲ ಮಹಿಳೆಯರು ಪ್ರಯಾಣಿಸಿದ್ದಾರೆ ಗೊತ್ತಾ..?

ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ಒಂದಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇದೇ ತಿಂಗಳ 11 ರಂದು ಅಧಿಕೃತವಾಗಿ ಜಾರಿಗೊಳಿಸಿತು. ಅದರಂತೆ ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನಲೆ ಎಲ್ಲಾ ಬಸ್​ಗಳು ಫುಲ್​ ಆಗಿ ಸಂಚರಿಸುತ್ತಿವೆ. ಈ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿದ್ದ ಮಹಿಳೆಯರು ದೇವಸ್ಥಾನ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಸಂಚರಿಸಲು ಶುರು ಮಾಡಿದ್ದಾರೆ. ಅದರಂತೆ ವಾಯವ್ಯ ವಿಭಾಗಕ್ಕೆ ಒಳಪಡುವ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಹಾವೇರಿ ಸೇರಿ 9 ಜಿಲ್ಲೆಯ ಸಾರಿಗೆ ವಿಭಾಗದಲ್ಲಿ ಮಹಿಳೆಯರ ಪ್ರಯಾಣಿಕರ ಸಂಖ್ಯೆ ಕೋಟಿ ದಾಟಿದೆ. ಹೌದು ಜೂನ್​ 11ರಿಂದ 27ರವರೆಗೆ ಬರೊಬ್ಬರಿ 2,14,75,000 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರ ಟಿಕೆಟ್ ಮೌಲ್ಯ 54 ಕೋಟಿ ರೂಪಾಯಿಗೂ ಅಧಿಕವಾಗಿದೆ. ಜೂ.27 ರ ಒಂದೇ ದಿನ 14,88,000 ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳಸಿದ್ದಾರೆ. ಇನ್ನು ಮಹಿಳೆಯರ...

ಬಸವನಕಟ್ಟಿ ಕರಡಿ ದಾಳಿ ಕೇಸ್: ಪ್ರತಿದಾಳಿ ಮಾಡಿ ಪತಿ ಹಾಗೂ ತಮ್ಮನ ಪ್ರಾಣ ಉಳಿಸಿದ ಸಬೀನಾ..! ಗಾಯಗೊಂಡವರ ಸ್ಥಿತಿ ಹೇಗಿದೆ ಗೊತ್ತಾ..?

ಬಸವನಕಟ್ಟಿ ಕರಡಿ ದಾಳಿ ಕೇಸ್: ಪ್ರತಿದಾಳಿ ಮಾಡಿ ಪತಿ ಹಾಗೂ ತಮ್ಮನ ಪ್ರಾಣ ಉಳಿಸಿದ ಸಬೀನಾ..! ಗಾಯಗೊಂಡವರ ಸ್ಥಿತಿ ಹೇಗಿದೆ ಗೊತ್ತಾ..?

 ಮುಂಡಗೋಡ ಸಮೀಪದ ಶಿಗ್ಗಾವಿ ತಾಲೂಕಿನ ಬಸವನಕಟ್ಟಿಯಲ್ಲಿ, ನಿನ್ನೆ ನಡೆದಿದ್ದ ಕರಡಿ ದಾಳಿಯಲ್ಲಿ ಗಾಯಗೊಂಡಿದ್ದವರು ಹುಬ್ನಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ಭೀಕರ ಕರಡಿ ದಾಳಿಯಿಂದ ತನ್ನ ಪತಿ ಹಾಗೂ ಸಹೋದರನನ್ನು ದಿಟ್ಟತನದಿಂದ ಹೋರಾಡಿ ರಕ್ಷಿಸಿಕೊಂಡ ಮಹಿಳೆ ಈಗ ಭಾರೀ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಅಂದಹಾಗೆ, ಬಸವನಕಟ್ಟಿ ಗ್ರಾಮದ ಸಬೀನಾ ಎಂಬುವ ಮಹಿಳೆ ನಿನ್ನೆ ಶನಿವಾರ ತನ್ನ ಪತಿ ಹಾಗೂ ಸಹೋದರನ ಜೊತೆ ಗದ್ದೆಗೆ ತೆರಳಿದ್ದರು. ಈ ವೇಳೆ ತನ್ನ ಮರಿಗಳೊಂದಿಗೆ ಬಂದಿದ್ದ ಕರಡಿ, ತನ್ನ ಮರಿಗಳಿಗೆ ಇವ್ರು ಸಮಸ್ಯೆ ಮಾಡಬಹುದು ಅಂತಾ ಭಾವಿಸಿ ಏಕಾಏಕಿ ಮೂವರ ಮೇಲೂ ದಾಳಿ ಮಾಡಿತ್ತು. ಭಯಾನಕ ಪ್ರತಿದಾಳಿ..! ಈ ವೇಳೆ ಕರಡಿ ದಾಳಿ ನಡೆಸಿ ಬಸೀರ್ ಸಾಬ್ ಹಾಗೂ ರಜಾಕ್ ಗೆ ತೀವ್ರ ಗಾಯಗೊಳಿಸಿತ್ತು. ಅಲ್ಲದೇ ಇದೇ ವೇಳೆ ಸಬೀನಾ ಮೇಲೂ ದಾಳಿ ಮಾಡಿದ ಕರಡಿಯ ಜೊತೆ ಕಾದಾಡಿದ ಸಬೀನಾ ಕೊಡಲಿಯಿಂದ ಕರಡಿ ಮೇಲೆ ಪ್ರತಿದಾಳಿ ಮಾಡಿದ್ದಳು. ಹೀಗಾಗಿ, ಕರಡಿ‌ ಮೇಲೆ ಪ್ರತಿ ದಾಳಿ...

ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?

ಗುಂಜಾವತಿ ಕಟ್ಟಿಗೆ ಕಳ್ಳತನ ಕೇಸ್, ಇಬ್ಬರು ಆರೋಪಿಗಳನ್ನು ಬಂಧಿಸಿದ ಅರಣ್ಯ ಅಧಿಕಾರಿಗಳು, ಅಷ್ಟಕ್ಕೂ ಶಿರಾಳಕೊಪ್ಪದ ಗ್ಯಾಂಗ್ ಆ್ಯಕ್ಟಿವ್ ಆಯ್ತಾ..?

  ಮುಂಡಗೋಡ ತಾಲೂಕಿನ ಗುಂಜಾವತಿ ಬಳಿ ಕಳೆದ ಜೂನ್ 12 ರಂದು ಅರಣ್ಯಗಳ್ಳತನದ ವಿಫಲ ಯತ್ನ ಕೇಸ್ ಬಟಾ ಬಯಲಾಗಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕೇಸಿಗೆ ಸಂಭಂಧಿಸಿದಂತೆ ಸದ್ಯ ಇಬ್ಬರು ಆರೋಪಿಗಳನ್ನ ವಾಹನ ಸಮೇತ ಅರಣ್ಯ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾಗಂತ, ಯಲ್ಲಾಪುರ ವಿಭಾಗದ ಡಿಎಫ್ ಓ ಶಶಿಧರ್ ಹೆಗಡೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿರಾಳಕೊಪ್ಪದ ಗ್ಯಾಂಗ್..? ಅಂದಹಾಗೆ, ಗುಂಜಾವತಿ ಅರಣ್ಯದಲ್ಲಿ ಕಟ್ಟಿಗೆ ಕಳ್ಳತನ ಪ್ರಕರಣದ ಮೂಲಕ, ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅದೊಂದು ಗ್ಯಾಂಗ್ ಸಂಪೂರ್ಣ ಆ್ಯಕ್ಟಿವ್ ಆಗಿರೋ ಎಲ್ಲಾ ಸೂಚನೆ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಿಂದ ಖಾಯಂ ಆಗಿ ಮುಂಡಗೋಡ ಭಾಗದ ಕೆಲವು ಕಡೆ ನಿರಂತರ ಅರಣ್ಯಗಳ್ಳತನ ಮಾಡುತ್ತಿದ್ದಾರಾ..? ಅನ್ನೊ ಅನುಮಾನಕ್ಕೆ ಕಾರಣವಾಗಿದ್ದು, ಸದ್ಯ ಗುಂಜಾವತಿ ಕಟ್ಟಿಗೆ ಕಳ್ಳತನದ ವಿಫಲ ಯತ್ನದ ಕೇಸಿನಲ್ಲಿ ಶಿರಾಳಕೊಪ್ಪದ ಇಬ್ಬರು ಅಂದರ್ ಆಗಿದ್ದಾರೆ. ಶಿಖಾರಿಪುರ ತಾಲೂಕಿನ ಇನಾಮ್ ಮುತ್ತಳ್ಳಿ ಗ್ರಾಮದ ಕರೆಪ್ಪ ದುಗ್ಗಪ್ಪ ಹುಬ್ಬಳ್ಳಿ ಹಾಗೂ ಏಕಾಂತ್ ಲಕ್ಷಪ್ಪ ಹುಲ್ಲತ್ತಿ ಎಂಬುವವರು...

error: Content is protected !!