ಶಿರಸಿಯ ಮಾರಿಕಾಂಬೆಯ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಸಹಸ್ರ ಸಂಖ್ಯೆಯ ಭಕ್ತರ ಹರ್ಷೋದ್ಘಾರದ ನಡುವೆ ಶಿರಸಿಯ ಸಿರಿದೇವಿ ಜಾತ್ರಾ ಗದ್ದುಗೆಯ ಮೇಲೆ ವಿರಾಜಮಾನಳಾಗಿದ್ದಾಳೆ. ಆದ್ರೆ, ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಅದ್ಯಾಕೋ ಏನೋ ಪೊಲೀಸ್ ಇಲಾಖೆ ಕೊಂಚ ನಿರ್ಲಿಪ್ತವಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ, ಮೊದಲ ದಿನದ ಜಾತ್ರೆಯಲ್ಲೇ ಕಳ್ಳರ ಕೈಚಳಕ ವಿಪರೀತ ಹೆಚ್ಚಾಗಿದೆ ಅಂತಾ ಸಾಕಷ್ಟು ಭಕ್ತರು ಗಾಬರಿಗೊಂಡಿದ್ದಾರೆ.
ಮೊದಲ ದಿನವೇ ಇಷ್ಟಾ..?
ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಭಕ್ತರ ಮೂಲಕ ಬಂದ ಮಾಹಿತಿ ಪ್ರಕಾರ ಇವತ್ತಿನ ಮೊದಲ ದಿನದ ಮಾರಿಕಾಂಬಾ ಜಾತ್ರೆಯಲ್ಲಿ ಏನಿಲ್ಲವೆಂದರೂ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಾಗಿವೆ. ಆದ್ರೆ, ಅವೇಲ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ. ಕೆಲವು ಮಾತ್ರ ಪೊಲೀಸರ ಗಮನಕ್ಕೆ ಬಂದಿದೆ. ಅದ್ರಲ್ಲಿ, ನಾಲ್ಕೈದು ಚಿನ್ನದ ಸರಗಳ್ಳತನ, ಮೊಬೈಲ್ ಕಳ್ಳತನ ನಡೆದು ಹೋಗಿದೆ ಎನ್ನಲಾಗ್ತಿದೆ. ಆದ್ರೆ, ರಾಜ್ಯದ ಪ್ರಸಿದ್ಧ ಜಾತ್ರೆಯೊಂದರಲ್ಲಿ ಮೊದಲ ದಿನವೇ ಇಂತಹ ಘಟನೆಗಳು ಈ ಪರಿಯಲ್ಲಿ ನಡೆದಿದೆ ಅಂದ್ರೆ ಏನಯ್ಯಾ ಗತಿ ಅಂತಾ ಭಕ್ತರು ಪ್ರಶ್ನಿಸ್ತಿದಾರೆ.
ಪೊಲೀಸರ ವೈಫಲ್ಯವಾ..?
ಅಂದಹಾಗೆ, ಇಷ್ಟು ವರ್ಷದ ಮಾರಿಕಾಂಬಾ ಜಾತ್ರೆಗಳಲ್ಲಿ ಕಳ್ಳತನ ಅನ್ನೋದೇ ಅಪರೂಪ ಎನ್ನುವಂತಾಗಿತ್ತು. ಅಷ್ಟೊಂದು ಪೊಲೀಸರ ಕಣ್ಗಾವಲು ಇರ್ತಿತ್ತು. ಆದ್ರೆ ಈ ವರ್ಷದ ಮಾರಿ ಜಾತ್ರೆಯಲ್ಲಿ ಕಳ್ಳರ ಕರಾಮತ್ತುಗಳು ಅದ್ಯಾಕೆ ಇಷ್ಟು ವಿಪರೀತಗೊಂಡಿವೆ ಅನ್ನೋದು ಭಕ್ತರ ಪ್ರಶ್ನೆಯಾಗಿದೆ. ಇಲ್ಲಿನ ಪೊಲೀಸ್ ವ್ಯವಸ್ಥೆ ಹೇಳಿಕೊಳ್ಳುವಷ್ಟು ಅಲರ್ಟ್ ಆಗಿಲ್ಲವಾ..? ಅಥವಾ ಅದೇಲ್ಲಾ ಕಾಮನ್ನು ಅಂತಾ ಪೊಲೀಸ್ ಅಧಿಕಾರಿಗಳು ಕೈಚೆಲ್ಲಿ ಕುಳಿತ್ರಾ..? ಯಾರಂದ್ರೆ ಯಾರಿಗೂ ಗೊತ್ತಿಲ್ಲ.
ಭಕ್ತರೇ ಎಚ್ಚರವಿರಲಿ..!
ಅಸಲು, ಶಿರಸಿಯ ಸಿರಿದೇವಿ ಜಾತ್ರೆಯಲ್ಲಿ ಮೊಬೈಲ್ ಕಳ್ಳರು, ಚೈನ್ ಕಳ್ಳರು, ಪರ್ಸ್ ಕಳ್ಳರದ್ದೊಂದು ದೊಡ್ಡ ಗ್ಯಾಂಗೇ ಇದ್ದಿರಬಹುದು. ಹೀಗಾಗಿ, ಜಾತ್ರೆಗೆ ಬರುವ ಭಕ್ತರು ಜಾಗ್ರತೆ ವಹಿಸೋದು ಅತ್ಯವಶ್ಯವಾಗಿದೆ. ಯಾಕಂದ್ರೆ ಶಿರಸಿ ಪೊಲೀಸರು ಸ್ವಲ್ಪ ಬ್ಯುಸಿಯಾಗಿದ್ದಾರೆ.