ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಂತೂ ಇಂತೂ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದೆ. ಇದ್ರೊಂದಿಗೆ ಸಾಕಷ್ಟು ಕುತೂಹಲ ಕೆರಳಿಸಿದ್ದ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಇನ್ನು ಉತ್ತರಕನ್ನಡ ಕ್ಷೇತ್ರದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳ್ಳರ್ ಅವರ ಹೆಸರನ್ನ ಪಕ್ಷದ ಹೈಕಮಾಂಡ ಘೋಷಣೆ ಮಾಡಿದೆ.
ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿಯ ಎರಡು ಕ್ಷೇತ್ರಗಳು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಈ ಭಾರಿ ಕಾಂಗ್ರೆಸ್ ನಿಂದ ನ್ಯಾಯವಾದಿ ರವೀಂದ್ರನಾಥ ನಾಯ್ಕ ಹಾಗೂ ಸಿದ್ದಾಪುರ ಮೂಲದ ಕಾರವಾರದಲ್ಲಿ ನ್ಯಾಯವಾದಿಗಳಾಗಿರೋ ಜಿ ಟಿ ನಾಯ್ಕ ಸೇರಿದಂತೆ ಪ್ರಮುಖರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು.ಆದರೆ ಪಕ್ಷದ ಹೈಕಮಾಂಡ ಅಂಜಲಿ ನಿಂಬಾಳ್ಳರ್ ಅವರನ್ನ ಕಣಕ್ಕಿಳಿಸಿದೆ. ಸದ್ಯ ಕೆನರಾ ಲೋಕಸಭಾಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೆ ಇರುವುದು ಅಭ್ಯರ್ಥಿಗೆ ಗೆಲುವಿನ ದಡ ಸೇರಿಸತ್ತಾ..? ಜೂನ್ 4 ರಂದೇ ತಿಳಿಯಲಿದೆ.