ಯಲ್ಲಾಪುರ ತಾಲೂಕಿನ ಅರಬೈಲಿನಲ್ಲಿ ಬೆಳ್ಳಂ ಬೆಳಿಗ್ಗೆ ಚಿರತೆ ಪ್ರತ್ಯಕ್ಷವಾಗಿದೆ. ಮನೆಯ ಹಿತ್ತಲಿನ ಬಾವಿಯಲ್ಲಿ ಬಿದ್ದಿರೋ ಚಿರತೆ ಬಾವಿಯಿಂದ ಮೇಲೆ ಬರಲು ಪರದಾಡುತ್ತಿದೆ. ಆದ್ರೆ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ತಕ್ಷಣವೇ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಆದ್ರೆ, ಈ ವಿಷಯ ಯಾರಿಗೂ ಹೆಳಬೇಡಿ ಅಂತಾ ಮನೆಯವರಿಗೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರಂತೆ.
ಅಂದಹಾಗೆ, ಯಲ್ಲಾಪುರ ತಾಲೂಕಿನ ಅರೆಬೈಲು ಗ್ರಾಮದ ಕೋವಿಂದ ನಾಯರ್ ಎಂಬುವವರ ಮನೆಯ ಬಾವಿಯಲ್ಲಿ ಘಟನೆ ನಡೆದಿದೆ. ಬಹುಶಃ ನಿನ್ನೆ ರಾತ್ರಿಯೇ ಮನೆಗೆ ದಾಳಿ ಇಟ್ಟಿರೋ ಚಿರತೆ, ಮನೆಯಲ್ಲಿನ ಬೆಕ್ಕಿನ ಮೇಲೆ ದಾಳಿ ಮಾಡಿ ಹಿಡಿದು ತಿಂದಿದೆ. ಬೆಕ್ಕಿನ ಮೇಲೆ ದಾಳಿ ಮಾಡುವ ವೇಳೆ ಆಯತಪ್ಪಿ ಬಾವಿಗೆ ಬಿದ್ದಿರಬಹುದು ಅಂತಾ ಅಂದಾಜಿಸಲಾಗಿದೆ.
ಇನ್ನು, ಈ ಮನೆಯಲ್ಲಿ ಪತಿ,ಪತ್ನಿ ಇಬ್ಬರೇ ವಾಸವಾಗಿದ್ದು, ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಭಯಭೀತಗೊಂಡಿದ್ದಾರೆ. ತಕ್ಷಣವೇ ಚಿರತೆಯನ್ನು ರಕ್ಷಿಸಿ ಮುಂದಿನ ಕ್ರಮ ಕೈಗೊಳ್ಳಲು ಹಂಬಲಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.