ಕೊನೆಗೂ ಅನಂತಕುಮಾರ್ ಹೆಗಡೆಯವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಬಿಜೆಪಿಯ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಏಳು ಬಾರಿ ಗೆದ್ದು ಬೀಗಿದ್ದ ಅನಂತಣ್ಣನಿಗೆ ಬಿಜೆಪಿ ಠಕ್ಕರ್ ಕೊಟ್ಟಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ ಕ್ಷೇತ್ರದಿಂದ ಮೂರು ಬಾರಿ ಹಾಗೂ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು, ಇನ್ನು ಕಳೆದ ವರ್ಷದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ ವಿರುದ್ಧ ಕಾಗೇರಿ ಅವರು ಸೋಲುವಂತಾಗಿತ್ತು. ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾಗೇರಿ ಅವರಿಗೆ ಟಿಕೆಟ್ ನೀಡಿದೆ.
ವಿವಾದಾತ್ಮಕ ಹೇಳಿಕೆಗಳೇ ಮುಳುವಾಯ್ತಾ..?
ಅಂದಹಾಗೆ, ಅನಂತಣ್ಣನಿಗೆ ಕ್ಷೇತ್ತದಲ್ಲಿ ಹಿಂದು ಫೈಯರ್ ಬ್ರ್ಯಾಂಡ್ ಹೆಸರಿದ್ದರೂ, ಬರೀ ವಿವಾದಾತ್ಮಕ ಹೇಳಿಕೆ ಮೂಲಕವೇ ಸುದ್ದಿಯಾಗುತ್ತಿದ್ದರು. ಹೀಗಾಗಿ, ಕಳದ ಮೂವತ್ತು ವರ್ಷಗಳ ಕಾಲ ಉತ್ತರ ಕನ್ನಡದ ಲೋಕಸಭಾ ಕ್ಷೇತ್ರದ ಅಧಿಪತಿಯಾಗಿ ಗೆದ್ದು ಬರುತ್ತಿದ್ದರು. ಬರೋಬ್ಬರಿ ಏಳು ಬಾರಿ ಈ ಕ್ಷೇತ್ರವನ್ನ ಪ್ರತಿನಿಧಿಸಿ ಒಮ್ಮೆ ಮಾತ್ರ ಸೋಲು ಕಂಡಿದ್ದರು. ಆದರೆ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿದ್ದ ಅನಂತಕುಮಾರ ಹೆಗಡೆಗೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಲು ಅವರ ಆ ಹೇಳಿಕೆಗಳೇ ಕಾರಣವಾಗಿದೆ ಅಂತಾ ವಿಶ್ಲೇಷಿಸಲಾಗುತ್ತಿದೆ.
ಸಂವಿಧಾನ ಬದಲಾವಣೆ ಮಾತೇ ಮಾರಕ..?
ಅಂದಹಾಗೆ, ಅನಂತಕುಮಾರ್ ಹೆಗಡೆಯವರ ಸಂವಿಧಾನ ಬದಲಾವಣೆ ಹೇಳಿಕೆಗಳು ಪಕ್ಷಕ್ಕೆ ದೊಡ್ಡ ಹೊಡೆತಕೊಟ್ಟಿದೆ. ಇವರ ಈ ಹೇಳಿಕೆಗಳಿಂದಾಗಿ ರಾಜ್ಯಾದ್ಯಂತ ಇರುವ ದಲಿತರು ಸೇರಿದಂತೆ ಹಿಂದುಳಿದ ಮತದಾರರು ಬಿಜೆಪಿಯಿಂದ ದೂರ ಸರಿಯುವ ಆತಂಕ ಎದುರಾಗಿತ್ತು. ಹೀಗಾಗಿ, ಹೈಕಮಾಂಡ್ ಅನಂತಣ್ಣನಿಗೆ ಟಿಕೆಟ್ ನೀಡದೇ ನೇಪತ್ಯಕ್ಕೆ ಸರಿಸಿದೆ ಅಂತಾ ಹೇಳಲಾಗ್ತಿದೆ.
ಒಟ್ನಲ್ಲಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ತದ ಅಖಾಡ ರೆಡಿಯಾಗಿದ್ದು, ಕಾಂಗ್ರೆಸ್ ನ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ವಿಶ್ವೇಶ್ಬರ ಹೆಗಡೆ ಕಾಗೇರಿ ಕಣಕ್ಕಿಳಿದಿದ್ದಾರೆ.