ಪಾಳಾ ಭಾಗದಲ್ಲಿ ಹೆಜ್ಜೆ ಹೆಜ್ಜೆಗೂ ಮಟ ಮಟ ಮಟ್ಕಾ, ಅಸಲು, ದಂಧೆ ನಡಿತಿರೋದು ಯಾರ ನೆರಳಲ್ಲಿ ಗೊತ್ತಾ..? “ಮಟ್ಕಾಲಿ”ಯ ಅಡ್ಡಕಸುಬಿಗೆ ಶ್ರೀ ರಕ್ಷೆ ಯಾರದ್ದು..?

ಪಾಳಾ ಭಾಗದಲ್ಲಿ ಹೆಜ್ಜೆ ಹೆಜ್ಜೆಗೂ ಮಟ ಮಟ ಮಟ್ಕಾ, ಅಸಲು, ದಂಧೆ ನಡಿತಿರೋದು ಯಾರ ನೆರಳಲ್ಲಿ ಗೊತ್ತಾ..? “ಮಟ್ಕಾಲಿ”ಯ ಅಡ್ಡಕಸುಬಿಗೆ ಶ್ರೀ ರಕ್ಷೆ ಯಾರದ್ದು..?

ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆಯಾದ ಗಳಿಗೆಯಿಂದಲೇ ಅಕ್ರಮ ದಂಧೆಗಳು ಎಲ್ಲೆಂದರಲ್ಲಿ ಮತ್ತೆ ಬಾಲ ಬಿಚ್ಚುತ್ತಿವೆ. ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಈಗ ಮತ್ತೆ ಮಟ್ಕಾ ಅನ್ನೊ ದಂಧೆ ಹೆಜ್ಜೆ ಹೆಜ್ಜೆಗೂ ಬಡವರ ರಕ್ತ ಹೀರುತ್ತಿದೆ. ಅಂದಹಾಗೆ, ಇದು ಉತ್ತರ ಕನ್ನಡಕ್ಕೆ‌ ನೂತನ ಎಸ್ಪಿಯಾಗಿ ಬಂದಿರೋ ಎನ್.ವಿಷ್ಣುವರ್ಧನ್ ಸಾಹೇಬ್ರಿಗೆ “ಪಬ್ಲಿಕ್ ಫಸ್ಟ್” ನೀಡುತ್ತಿರೋ “ಫಸ್ಟ್ ಇನ್ಪರ್ಮೇಶನ್ ರಿಪೋರ್ಟ್” ಅಂದ್ರೆ ಮೊದಲ FIR ಮಟ್ಕಾ ಅಡ್ಡೆಗಳು..! ಎಸ್ಪಿ ಸಾಹೇಬ್ರೆ, ಈಗ್ಗೆ ಒಂದು ವರ್ಷವಾಯ್ತು. ಬಹುತೇಕ‌ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಬಂದ್ ಆಗಿತ್ತು. ಅದೇಷ್ಟೋ ಬಡವರ ಹೊಟ್ಟೆಗಳು ತಣ್ಣಗಿದ್ದವು. ಅದಕ್ಕೇಲ್ಲ ಕಾರಣ ಹಿಂದಿನ ಎಸ್ಪಿ ಡಾ.ಸುಮನಾ ಪೆನ್ನೇಕರ್ ಮೇಡಮ್ಮಿನ ಖಡಕ್ ಆದೇಶ. ಆದ್ರೆ, ಯಾವಾಗ ಮೇಡಮ್ಮಿಗೆ ಎತ್ತಂಗಡಿ ಆಯ್ತೋ ಆ ಕ್ಷಣದಿಂದಲೇ ಇಲ್ಲಿನ ಮಟ್ಕಾ ಅಡ್ಡೆಗಳು ಮತ್ತೆ ಕಸಕಡ್ಡಿ ತೆಗೆದು, ಹೋಮ ಹವಣ ಹಾಕಿಸಿಕೊಂಡು ನಂಬರುಗಳ ಚಾರ್ಟ್ ಇಟ್ಕೊಂಡು ಕುಳಿತುಬಿಟ್ಟಿದ್ದಾರೆ. ಹೀಗಾಗಿ, ಮತ್ತೆ ಈಗ ತಾಲೂಕಿನ ಬಡವರ ಅದೇಷ್ಟೋ ಒಲೆಗಳು ತಣ್ಣಗಾಗುವ...

ಮುಂಡಗೋಡ ಪೊಲೀಸ್ ಪೇದೆ ಅಣ್ಣಪ್ಪ ಬುಡಗೇರಗೆ “ತಿಂಗಳ ಅತ್ಯುತ್ತಮ ಸಾಧಕ” ಗೌರವ

ಮುಂಡಗೋಡ ಪೊಲೀಸ್ ಪೇದೆ ಅಣ್ಣಪ್ಪ ಬುಡಗೇರಗೆ “ತಿಂಗಳ ಅತ್ಯುತ್ತಮ ಸಾಧಕ” ಗೌರವ

ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಅಣ್ಣಪ್ಪಾ ಬುಡಗೇರ್ ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಬಳಗದಿಂದ ಗೌರವ ದೊರೆತಿದೆ. ಶಿರಸಿ ವಿಭಾಗದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದ ಕಾರಣ “ತಿಂಗಳ ಅತ್ಯುತ್ತಮ ಸಾಧಕ” ಪ್ರಮಾಣಪತ್ರ ಲಭಿಸಿದೆ. ಶಿರಸಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್, ಪೇದೆ ಅಣ್ಣಪ್ಪ ಬುಡಗೇರ್ ಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಿರ್ವಹಿಸಿದ ಅತ್ಯುತ್ತಮ‌ ಸೇವೆ ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಈ ಗೌರವ ಪ್ರಮಾಣ ಪತ್ರ ನೀಡಿದೆ.

ನಂದಿಗಟ್ಟಾದ ಗ್ರಾಮ ಪಂಚಾಯತಿ ಪಕ್ಕದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ‌‌..!

ನಂದಿಗಟ್ಟಾದ ಗ್ರಾಮ ಪಂಚಾಯತಿ ಪಕ್ಕದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ‌‌..!

ಮುಂಡಗೋಡ ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಪಕ್ಕದಲ್ಲೇ ಬಾಡಿಗೆ ರೂಂ ಹಿಂದಿನ ಕಿಡಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿ ಮೂಲದ ಪ್ರಭಾಕರ್ (45)ಎಂಬ ವ್ಯಕ್ತಿಯೇ ನೇಣಿಗೆ ಶರಣಾದವನು ಎನ್ನಲಾಗಿದೆ. ಈತ ಕಳೆದ ಕೆಲ ತಿಂಗಳ ಹಿಂದಷ್ಟೇ ನಂದಿಗಟ್ಟಾ ಗ್ರಾಮದಲ್ಲಿ ಬಂದು ಅಂಗಡಿ ನಡೆಸುತ್ತಿದ್ದ. ಆದ್ರೆ ಅದೇನು ಕಾರಣವೋ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ನಂದಿಗಟ್ಟಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಹೆಣವಾಗಿ ಪತ್ತೆ..!

ನಂದಿಗಟ್ಟಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಹೆಣವಾಗಿ ಪತ್ತೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಗ್ರಾಮದ ಹೊರವಲಯದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ದುರ್ನಾತ ಬೀರುತ್ತಿದೆ. ಅಂದಹಾಗೆ, ಕಳೆದ ಎರಡು ದಿನಗಳಿಂದ ನಂದಿಗಟ್ಟಾ ಗ್ರಾಮದ ಮಾಬುಸಾಬ್ ಅತ್ತಿವೇರಿ (47) ಎಂಬುವ ವ್ಯಕ್ತಿ ನಾಪತ್ತೆಯಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಬುಸಾಬ್ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದ, ಆದ್ರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಏಕಾಏಕಿ ನಾಪತ್ತೆಯಾದವನು ಈಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸದ್ಯ ಮುಂಡಗೋಡ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ರವಾನಿಸಿದ್ದು ಶವ ಹೊರ ತೆಗೆಯುವ ಕಾರ್ಯ ನಡೆಸಲಾಗುತ್ತದೆ ಅಂತಾ ಮಾಹಿತಿ ತಿಳಿದು ಬಂದಿದೆ.

ಬೈಕ್ ಗೆ ಗುದ್ದಿದ ಕಾರ್ 10 ಅಡಿ ದೂರ ಹಾರಿ ಬಿದ್ದ ಮಹಿಳೆ, ಸಿಸಿಟಿವಿಯಲ್ಲಿ ಭಯಾನಕ ದೃಷ್ಯ

ಬೈಕ್ ಗೆ ಗುದ್ದಿದ ಕಾರ್ 10 ಅಡಿ ದೂರ ಹಾರಿ ಬಿದ್ದ ಮಹಿಳೆ, ಸಿಸಿಟಿವಿಯಲ್ಲಿ ಭಯಾನಕ ದೃಷ್ಯ

ಧಾರವಾಡ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ದಾಟುವಾಗ ಭಯಾನಕ ದುರ್ಘಟನೆ ನಡೆದಿದೆ.  ರಸ್ತೆ ದಾಟಿ ಹೋಗುತ್ತಿದ್ದ ಬೈಕ್ ಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಬ್ಲಾಕ್ ಕಲರ್ ಕಾರ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಮಹಿಳೆ 10 ಅಡಿ ಹಾರಿ ಹೋಗಿ ಬಿದ್ದಿದ್ದಾಳೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ

ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ

ಮುಂಡಗೋಡ ತಾಲೂಕಿನ ಇಂದೂರು ಬಳಿಯ ಷರೀಫ ದೇವಸ್ಥಾನದ ಬಳಿ ಅಪಘಾತವಾಗಿದೆ. ಟ್ರಾಕ್ಟರ್ ಹಾಗೂ ಬೈಕ್‌ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ದಂಪತಿಗೆ ಗಾಯವಾಗಿದೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾದ ಆಕಾಶ್ ವಾಸಪ್ಪ ಲಮಾಣಿ (22) ಸಂಗೀತಾ ಆಕಾಶ್ ಲಮಾಣಿ (20) ಗಾಯಗೊಂಡವರಾಗಿದ್ದಾರೆ. ಇಂದೂರು ಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ಮುಂಡಗೋಡ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ನಡುವೆ ಡಿಕ್ಕಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾತೂರಿನಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ..!

ಕಾತೂರಿನಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ..!

ಮುಂಡಗೋಡ: ತಾಲೂಕಿನ ಕಾತೂರಿನ ಸಭಾಭವನದಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಮುಂಡಗೋಡ ಜೆಎಮ್ ಎಫ್ ಸಿ ಕೋರ್ಟ್ ನ್ಯಾಯಧೀಶ ಕೇಶವ್ ಕೆ. ಕಾರ್ಯಕ್ರಮ ಉದ್ಘಾಟಿಸಿದ್ರು. ಪೊಲೀಸ್ ನಿರೀಕ್ಷಕ ಸಿದ್ದಪ್ಪ ಸಿಮಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ, ಮುಂಡಗೋಡ ಹಾಗೂ ವಕೀಲರ ಸಂಘ ಮುಂಡಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೊಲಿಸ್‌ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಕು. ಉಮಾ ದಾಮೋದರ ನಾಯ್ಕ್, ಪಿಎಸ್ಐ ಬಸವರಾಜ ಮಬನೂರು, ಎಎಸ್ಐ ಶ್ರೀಮತಿ ಗೀತಾ ಕಲಘಟಗಿ, ಶ್ರೀ ಮತಿ ರೂಪ ಅಂಗಡಿ, ಮೇಲ್ವಿಚಾರಕರು ಸಿಡಿಪಿಒ, ವಿ.ಸಿ. ಪವಾಡಶೆಟ್ಟರ್ , ಪ್ಯಾನಲ್ ವಕೀಲರುಗಳಾದ ಆರ್.ಸಿ. ಮಳೆಕ‌ರ್, ಆರ್. ಎಮ್. ಮಳಗಿಕ‌ರ್, ಆರ್. ಬಿ. ಹುಬ್ಬಳ್ಳಿ, ಆರ್. ಎಸ್. ಹಂಚಿನಮನಿ, ಶ್ರೀ ಜಿ....

ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!

ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!

 ಇದು ಮುಂಡಗೋಡ ತಾಲೂಕಿನ ಪಾಲಿಗೆ ಅಚ್ಚರಿಯ ಸಂಗತಿ. ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರ ಖುರ್ಚಿಗೆ ಕುತ್ತು ಬಂದಿದೆಯಾ..? ಮಾರ್ಕೆಟಿಂಗ್ ಸೊಸೈಟಿಗೆ ರವಿಗೌಡ ಪಾಟೀಲರ ನಾಮನಿರ್ದೇಶನವೇ ಕಾನೂನು ಬಾಹಿರಾಗಿದೆ ಅಂತಾ ಹೈಕೋರ್ಟ್ ಧಾರವಾಡ ವಿಭಾಗೀಯ ಪೀಠ ಆದೇಶ ನೀಡಿದೆ. 03.11.2020 ರಂದು ರವಿಗೌಡ ಪಾಟೀಲರನ್ನು ಸರ್ಕಾರದಿಂದಲೇ ನಾಮ ನಿರ್ದೇಶನಗೊಳಿಸಿದ್ದು ಕಾನೂನು ಬಾಹಿರ ಅಂತಾ ಸರ್ಕಾರದ ಆದೇಶವನ್ನು ಮಾನ್ಯ ಹೈಕೋರ್ಟ್ ವಿಭಾಗೀಯ ಪೀಠ ಕಿತ್ತು ಹಾಕಿದೆ. ಹೀಗಾಗಿ, ಸಚಿವ ಶಿವರಾಮ್ ಹೆಬ್ಬಾರ್ ರವರ ಪರಮಾಪ್ತ, ಬಿಜೆಪಿಯ ಪ್ರಭಾವಿ ಮುಖಂಡ ರವಿಗೌಡ ಪಾಟೀಲರಿಗೆ ದಕ್ಕಿದ್ದ ಇಲ್ಲಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಗಾದಿ ಬಹುತೇಕ ಕೈ ತಪ್ಪುವಂತಾಗಿದೆ. ಕಾನೂನು ಬಾಹಿರ..! ಅಂದಹಾಗೆ, 3.11.2020 ರಂದು ಮಾರ್ಕೆಟಿಂಗ್ ಸೊಸೈಟಿಯಲ್ಲಿ ಅಧ್ಯಕ್ಷ ಪದವಿಗಾಗಿಯೇ ಸರ್ಕಾರದ ಪರವಾಗಿ ನಾಮಿನೇಟ್ ಸದಸ್ಯರನ್ನಾಗಿ ರವಿಗೌಡರಿಗೆ ನೇಮಿಸಲಾಗಿತ್ತು. ಅಧ್ಯಕ್ಷ ಪದವಿ ನೀಡುವ ಸಲುವಾಗಿಯೇ ಕಾನೂನು ಬಾಹಿರವಾಗಿ ನಾಮಿನೆಟ್ ಮಾಡಲಾಗಿದೆ ಅಂತಾ ಕೆಲವು ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು‌. ಹೀಗಾಗಿ, ಸದ್ಯ ಹೈಕೋರ್ಟ್ ವಿಭಾಗೀಯ...

ಉತ್ತರ ಕನ್ನಡ ಎಸ್ಪಿ ಸುಮನಾ ಪೆನ್ನೇಕರ್ ಎತ್ತಂಗಡಿ, ವರ್ಗಾವಣೆಗೊಳಿಸಿ ಸರ್ಕಾರ ಆದೇಶ..!

ಉತ್ತರ ಕನ್ನಡ ಎಸ್ಪಿ ಸುಮನಾ ಪೆನ್ನೇಕರ್ ಎತ್ತಂಗಡಿ, ವರ್ಗಾವಣೆಗೊಳಿಸಿ ಸರ್ಕಾರ ಆದೇಶ..!

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಎತ್ತಂಗಡಿಯಾಗಿದ್ದಾರೆ. ಒಂದೇ ಒಂದು ವರ್ಷದ ಅವದಿಯಲ್ಲೇ ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿ‌ ಮೇಡಂ ವರ್ಗಾವಣೆ ಮಾಡಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಂದಹಾಗೆ, ಪಬ್ಲಿಕ್ ಫಸ್ಟ್ ನ್ಯೂಸ್ ಕಳೆದ ಒ‌ಂದು ತಿಂಗಳ ಹಿಂದೆಯೇ ‌ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಉತ್ತರ ಕನ್ನಡಕ್ಕೆ ನೂತನ ಎಸ್ಪಿಯಾಗಿ ಎನ್. ವಿಷ್ಣುವರ್ಧನ್ ವರ್ಗಾವಣೆಗೊಂಡಿದ್ದಾರೆ. ಡಾ ಸುಮನಾ ಪೆನ್ನೇಕರ್ ಮೇಡಂ ಜಿಲ್ಲೆಗೆ ಎಂಟ್ರಿಯಾಗಿ ಬಂದಾಗಿನಿಂದ ಇಲ್ಲಿ‌ನ ಅಕ್ರಮಿಗಳು ಬಾಲ ಬಿಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅದೇಷ್ಟೋ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಹೀಗಾಗಿ, ಕೆಲವು ರಾಜಕಾರಣಿಗಳೂ ಸೇರಿದಂತೆ ಅಕ್ರಮಿಗಳು, ಎಸ್ಪಿ ವರ್ಗಾವಣೆಗೆ ಪಟ್ಟು ಹಿಡಿದು ಬೆಂಗಳೂರಿಗೆ ಅಲೆದಿದ್ದರು. ಅದ್ರಂತೆ, ಸರ್ಕಾರ ಇಂದು ಎಸ್ಪಿ ಡಾ. ಸುಮನಾ ಪೆನ್ನೇಕರ್ ರವರನ್ನ ತಕ್ಷಣದಿಂದಲೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಕುನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಕುನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಶಿಗ್ಗಾವಿ: ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣ ಕಲಿಕಾ ದಿನಗಳಲ್ಲಿ ನಾಡು ನುಡಿಯ ಹೆಮ್ಮೆಯ ಸಂಘತಿಗಳ ಕುರಿತು ತಿಳಿದುಕೊಂಡು ನಾಡಿನ ಕೀರ್ತಿ ಬೆಳಗಿದ ಮಹನಿಯರ ಆದರ್ಶಗಳನ್ನು ಪಾಲಿಸುತ್ತ ಹೋದಾಗ ಉತ್ತಮ ರಾಷ್ಟದ ಶಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಶಿಕ್ಷಣ ಪ್ರೇಮಿ ಶಿವಾನಂದ ದೊಡ್ಡಮನಿ ಹೇಳಿದರು. 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಶಿಗ್ಗಾವಿ ತಾಲೂಕ ಕುನ್ನೂರ ಪ್ಲಾಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ, ಈ ದಿನದಂದು ಇಡಿ ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಈ ದಿಸೆಯಲ್ಲಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸುವದರಿಂದ ವಿದ್ಯಾರ್ಥಿಗಳಲ್ಲಿ ನಾಡು, ನುಡಿ ಬಾಷಾ ಪ್ರೇಮದ ಬಗ್ಗೆ ಶಿಕ್ಷಣ ನೀಡಿದಂತಾಗುತ್ತದೆ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೈಲಾರಪ್ಪ ಮಮದಾಪುರ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ...

error: Content is protected !!