ಮೀಟರ್ ಬಡ್ಡಿ, ಮೈಕ್ರೋ ಫೈನಾನ್ಸ್ ಗಳು, ಬಾಲ‌ ಬಿಚ್ಚಿದ್ರೆ ಸುಮ್ಮನಿರಲ್ಲ,, ರೌಡಿಗಳನ್ನು ಸಾಲ ವಸೂಲಿಗೆ ಬಳಸಿದ್ರೆ ನಿರ್ದಾಕ್ಷಿಣ್ಯ ಕ್ರಮ- ಡೀಸಿ, ಎಸ್ಪಿ ಜಂಟೀ ವಾರ್ನಿಂಗ್

ಮೀಟರ್ ಬಡ್ಡಿ, ಮೈಕ್ರೋ ಫೈನಾನ್ಸ್ ಗಳು, ಬಾಲ‌ ಬಿಚ್ಚಿದ್ರೆ ಸುಮ್ಮನಿರಲ್ಲ,, ರೌಡಿಗಳನ್ನು ಸಾಲ ವಸೂಲಿಗೆ ಬಳಸಿದ್ರೆ ನಿರ್ದಾಕ್ಷಿಣ್ಯ ಕ್ರಮ- ಡೀಸಿ, ಎಸ್ಪಿ ಜಂಟೀ ವಾರ್ನಿಂಗ್

 ಕಾರವಾರ- ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿ ಹಾಗೂ ನಿಯಮಗಳನ್ನು ಉಲ್ಲಂಘಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಎಚ್ಚರಿಕೆ ನೀಡಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳದಂತಹ ಪ್ರಕರಣಗಳು ಅಧಿಕವಾಗಿವೆ. ಇದಕ್ಕೆಲ್ಲಾ ಕಾರಣ ಆರ್.ಬಿ.ಐ ಮಾರ್ಗಸೂಚಿಗಳು ಹಾಗೂ ನಿಯಮಗಳ ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದರು. ಮೈಕ್ರೋ ಫೈನಾನ್ಸ್ಗಳು ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಗಳನ್ನು ಪರಿಶೀಲನೆಯನ್ನು ಮಾಡಿ, ಅವರ ಆದಾಯದ ಶೇ. 50 ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರು ಸಾಲ ತೆಗೆದುಕೊಳ್ಳುವ ಸಾಮರ್ಥ್ಯ ನೋಡದೇ ಸಾಲವನ್ನು ನೀಡುತ್ತಿರುವುದು ಕಂಡುಬರುತ್ತಿದ್ದು , ಇದಕ್ಕೆ...

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ  ಸರ್ಕಾರದ ಕ್ರಮ,  ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ,  ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ..!

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ, ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆ, ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ..!

ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ ಕೈ ಸಾಲ ಪಡೆಯುವ ಪದ್ಧತಿ ರೂಢಿಯಲ್ಲಿದೆ.ಬಹುತೇಕರು ಪಡೆದ ಸಾಲವನ್ನು ವಾಪಸ್ಸು ನೀಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ,ವೈಯಕ್ತಿಕ ಅಥವಾ ಉತ್ಪಾದಕವಲ್ಲದ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವುದರಿಂದ, ಮರುಪಾವತಿ ಕ್ಷಮತೆ ಕಡಿಮೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಲ ನೀಡಿದವರು ಮರು ವಸೂಲಿಗಾಗಿ ಒತ್ತಾಯಿಸುತ್ತಾರೆ.ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ..! ಕಳೆದ ಜನವರಿ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕರ್ನಾಟಕ ವಲಯದ ಅಧ್ಯಕ್ಷರು, ಭಾರತೀಯ ರಿಸರ್ವ ಬ್ಯಾಂಕ್‌ (RBI) ನ ಪ್ರಾಂತೀಯ ನಿರ್ದೇಶಕರು, ಹಾಗೂ ಸಾ-ಧನ್(SDHAN),ಎಕೆಎಂಐ,ಎಂಎಫ್ಐಎನ್...

ಮುಂಡಗೋಡಿನಲ್ಲಿ ರಾತ್ರಿ ನಡೀತು ಕಂಡೂ ಕೇಳರಿಯದ ಬಹುದೊಡ್ಡ ಪೊಲೀಸ್ ದಾಳಿ..!ಮೀಟರ್ ಬಡ್ಡಿ ಕುಳಗಳೇ ಪೊಲೀಸರ ಟಾರ್ಗೆಟ್..? ಅಷ್ಟಕ್ಕೂ ಈ ದಾಳಿ ವಿಫಲವಾಯ್ತಾ..?

ಮುಂಡಗೋಡಿನಲ್ಲಿ ರಾತ್ರಿ ನಡೀತು ಕಂಡೂ ಕೇಳರಿಯದ ಬಹುದೊಡ್ಡ ಪೊಲೀಸ್ ದಾಳಿ..!ಮೀಟರ್ ಬಡ್ಡಿ ಕುಳಗಳೇ ಪೊಲೀಸರ ಟಾರ್ಗೆಟ್..? ಅಷ್ಟಕ್ಕೂ ಈ ದಾಳಿ ವಿಫಲವಾಯ್ತಾ..?

ಮುಂಡಗೋಡಿನಲ್ಲಿ ತಡರಾತ್ರಿ ತಾಲೂಕಿನ ಮಟ್ಟಿಗೆ ಇತಿಹಾಸದಲ್ಲಿ ಎಂದೂ ಕೇಳರಿಯದ ಪೊಲೀಸ್ ದಾಳಿ ನಡೆದಿದೆ. ಮೀಟರ್ ಬಡ್ಡಿ ಕುಳಗಳನ್ನೇ ಟಾರ್ಗೆಟ್ ಮಾಡಿ ಪೊಲೀಸ್ರು ರೇಡ್ ಮಾಡಿದ್ದಾರೆ ಎನ್ನಲಾಗ್ತಿದೆ. ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲೂ ಹಲವರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಪೊಲೀಸ್ರು, ಪರಿಣಾಮ, ಹಲವರು ಪೊಲೀಸರ ವಶಕ್ಕೆ ತಗಲಾಕ್ಕೊಂಡಿದ್ದರೆ, ಇನ್ನೂ ಹಲವರು ಪರಾರಿಯಾಗಿದ್ದಾರೆ ಅನ್ನೊ ಮಾಹಿತಿ ಬಂದಿದೆ. ಆದ್ರೆ, ಹಾಗೆ ದಾಳಿ ಮಾಡಿದ್ದವರು ನಮ್ಮ‌ ಮುಂಡಗೋಡಿನ ಪೊಲೀಸರು ಅಲ್ಲವೇ ಅಲ್ಲ. ಬದಲಾಗಿ ಕಾರವಾರದ ಖಡಕ್ ಎಸ್ಪಿ ಎಂ‌. ನಾರಾಯಣ್ ಸಾಹೇಬ್ರು ರಚಿಸಿರೋ ಬಲಿಷ್ಟ ಟೀಂ..! 50 ಕ್ಕೂ ಹೆಚ್ಚು ವಾಹನ, ಅದ್ರಲ್ಲಿ ಅಧಿಕಾರಿಗಳು..! ಅಸಲು, ಮೀಟರ್ ಬಡ್ಡಿ ದಂಧೆಕೋರರನ್ನೇ ಟಾರ್ಗೆಟ್ ಮಾಡಿ ಕಾರವಾರ ಸೇರಿದಂತೆ, ಜಿಲ್ಲೆಯ ಹಲವು ಠಾಣೆಗಳ ಸಿಪಿಐ, ಪಿಎಸ್ಐ, ಎಎಸ್ಐಗಳು, ಪೇದೆಗಳು ಸೇರಿ ಸುಮಾರು ನೂರಕ್ಕೂ ಅಧಿಕ ಅಧಿಕಾರಿ ಪಡೆ ಏಕಕಾಲದಲ್ಲಿ ದಾಳಿ ಮಾಡಿದೆ. ಆದ್ರೆ, ಈ ವೇಳೆ ಹಲವರನ್ನು ವಶಕ್ಕೆ ಪಡೆಯಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದ್ದು,...

ಮುಂಡಗೋಡಲ್ಲಿ ಹಾಡಹಗಲೇ ನಡೆದಿದ್ದ ಮನೆಗಳ್ಳತನ ಕೇಸ್ ಬೇಧಿಸಿದ ಪೊಲೀಸ್ರು..! ಇಬ್ಬರು ಲೋಕಲ್ ಆರೋಪಿಗಳ ಬಂಧನ..!

ಮುಂಡಗೋಡಲ್ಲಿ ಹಾಡಹಗಲೇ ನಡೆದಿದ್ದ ಮನೆಗಳ್ಳತನ ಕೇಸ್ ಬೇಧಿಸಿದ ಪೊಲೀಸ್ರು..! ಇಬ್ಬರು ಲೋಕಲ್ ಆರೋಪಿಗಳ ಬಂಧನ..!

 ಮುಂಡಗೋಡ ಪೊಲೀಸರು ಅಲರ್ಟ್ ಆಗಿದ್ದಾರೆ. ಹೀಗಾಗಿನೆ, ಪಟ್ಟಣದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಬೇಧಿಸಿದ್ದಾರೆ. ಜನೆವರಿ 27 ರಂದು ನಡೆದಿದ್ದ ಮನೆಗಳ್ಳತನ ಕೇಸಲ್ಲಿ ಇಬ್ಬರು ಲೋಕಲ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಮೊನ್ನೆ ಜನೆವರಿ 27 ರಂದು ಹಾಡಹಗಲೇ ಪಟ್ಟಣದ ವಡ್ಡರ ಓಣಿಯಲ್ಲಿನ ತಿಪ್ಪವ್ವ ತಿಪ್ಪಣ್ಣ ವಡ್ಡರ್ ಎಂಬುವವರ ಮನೆಗೆ ಹಿಂಬಾಗಿಲಿನಿಂದ‌ ನುಗ್ಗಿ, ಟ್ರಿಜರಿಯಲ್ಲಿ ಇಟ್ಟಿದ್ದ , 05 ಗ್ರಾಂ ಬಂಗಾರದ 32 ಗುಂಡುಗಳು ಇರುವ ಬೋರ್ ಮಾಳ ಸರ್-01. ಅಂದಾಜು ಮೊತ್ತ 30.000/-ರೂ. 03 ಗ್ರಾಂ ಬಂಗಾರದ ಜಾಲರಿ 01 ಜೊತೆ ಅಂದಾಜು ಮೊತ್ತ 15.000/- ರೂ. 01 ಜೋತೆ ಬೆಂಡೋಲಿ ಅಂದಾಜು ಮೊತ್ತ 15.000/-ರೂ ಹಾಗೂ ನಗದು ಹಣ 2000/- ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು‌. ಹೀಗಾಗಿ, ಮನೆಯ ಯಜಮಾನಿ‌ ಮುಂಡಗೋಡ ಪೊಲೀಸರಿಗೆ ದೂರು ನೀಡಿದ್ದಳು. ಮುಂಡಗೋಡ ಸುಭಾಸ ನಗರದ ಪ್ರವೀಣ ಬಸವರಾಜ ಭೋವಿ(23), ಕ್ಯಾಸನಕೇರಿಯ ರಾಕೇಶ ತಂದೆ ಹನುಮಂತ ಹೆಬ್ಬಳ್ಳಿ (21) ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿತರಿಂದ...

ಮುಂಡಗೋಡ ಖ್ಯಾತ ಸ್ಪರ್ಧಾ ಹೋರಿ ಇಂದೂರು ಹೊಯ್ಸಳ ಅಸ್ತಂಗತ..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!

ಮುಂಡಗೋಡ ಖ್ಯಾತ ಸ್ಪರ್ಧಾ ಹೋರಿ ಇಂದೂರು ಹೊಯ್ಸಳ ಅಸ್ತಂಗತ..! ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!

ಮಹಾರುದ್ರನಂತೆ ಭಯಂಕರವಾಗಿತ್ತು ಆತನ ಕೋಪಾಗ್ನಿ..! ಕಾಲುಕೆದರಿ ನಿಂತರೆ ಸಾಕು ಎದುರಿಗಿದ್ದವರ ಎದೆಯಲ್ಲೇ ಬಡಿದಂತೆ ನಗಾರಿ..!! ಆದ್ರೆ ಸದ್ಯ ಮೌನಿಯಾಗಿ ಮಲಗಿಬಿಟ್ಟಿದ್ದಾನೆ ಆತ..! ಇನ್ನೆಂದೂ ಆತನ ರೌದ್ರತೆ ಕಾಣಸಿಗೋದೇ ಇಲ್ಲ..! ಯಾಕಂದ್ರೆ ಆತ ಮರಳಿ ಬಾರದೂರಿಗೆ ಪಯಣ ಬೆಳಿಸಿದ್ದಾನೆ..! ಆದ್ರೆ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಾತ್ರ ಬಹುದೊಡ್ಡ ಸ್ಥಾನ ಪಡದಿದ್ದಾನೆ “ಮಹಾರಾಜ”ನಂತೆ ಘರ್ಜಿಸಿದ್ದಾನೆ..! ಯಸ್, ಅವನು ಹೋರಿ ಅಭಿಮಾನಿಗಳ ಪಾಲಿನ ಮಹಾದಂಡನಾಯಕ.. ಆತನಿಗೆ ಮುಂಡಗೋಡ ಅಷ್ಟೇ ಅಲ್ಲ ಹೊರ ಜಿಲ್ಲೆಗಳಲ್ಲೂ ಸಾವಿರ ಸಾವಿರ ಸಂಖ್ಯೆಯ ಅಭಿಮಾನಿ ಬಳಗವಿದೆ.. ಹುಚ್ಚರಂತೆ ಆರಾಧಿಸೋ ಯುವ ಪಡೆಯಿದೆ.. ಅಂತಹ ಮಹಾದಂಡನಾಯಕ ಈಗ ಅಕ್ಷರಶಃ ಮೌನಿಯಾಗಿದ್ದಾನೆ.. ಸದಾ ಘರ್ಜನೆಯಲ್ಲಿದ್ದ ಆತ ಈಗ ನಿರ್ಲಿಪ್ತವಾಗಿದ್ದಾನೆ.. ಅಂದಹಾಗೆ, ನಾವಿಲ್ಲಿ ಹೇಳಹೊರಟಿರೋದು ಯಾವುದೇ ರಾಜಕಾರಣಿಯ ಕತೆಯನ್ನಲ್ಲ.. ಯಾವುದೇ ಸಿನಿಮಾ ನಟನ ಸ್ಟೋರಿನೂ ಅಲ್ಲ.. ಬದಲಾಗಿ ಮುಗ್ದ ಮನಸ್ಸಿನ, ಮೂಕ ಭಾವಗಳಲ್ಲೇ ಅಭಿಮಾನಿಗಳನ್ನ ತನ್ನತ್ತ ಸೆಳೆದ ಭಯಂಕರ ಚತುರ, ಮುಟ್ಟಿದರೆ ಮುನಿದು ಚಿಮ್ಮುವ ತಾಕತ್ತಿನ ಸರದಾರ, ಬ್ಯಾಡಗಿಯಲ್ಲಿ ಹುಟ್ಟಿ, ರಾಜ್ಯದ ನಾನಾ ಕಡೆ ಸ್ಪರ್ಧಾ...

ಸಾಲಗಾಂವ್ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವ ಹೆಣವಾದ..!

ಸಾಲಗಾಂವ್ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವ ಹೆಣವಾದ..!

 ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಾಲಗಾಂವ್ ಕೆರೆಯಲ್ಲಿ ನಡೆದಿದೆ. ಗ್ರಾಮಸ್ಥರ ಸಹಕಾರದಿಂದ ಮುಂಡಗೋಡ ಪಿಎಸ್ಐ ಪರಶುರಾಮ್ ಮಿರ್ಜಿಗಿ ಕೆರೆಯಲ್ಲಿ ಇಳಿದು ವ್ಯಕ್ತಿಯ ಶವ ಹೊತೆಗೆದಿದ್ದಾರೆ. ಗುಡ್ಡಪ್ಪ ಜಾಡರ್(58) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ಇಂದು ಮೀನು ಹಿಡಿಯಲು ಕೆರೆಯಲ್ಲಿ ಇಳಿದಿದ್ದ. ಈ ವೇಳೆ ಕೆರೆಯ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಹೀಗಾಗಿ, ಸುದ್ದಿ ತಿಳಿದ ಪಿಎಸ್ಐ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡ ಅಜಾದ್ ಬ್ಯಾಂಕ್ ಅಧ್ಯಕ್ಷರಾಗಿ ಮಹ್ಮದ್ ಗೌಸ್ ಧುಂಡಸಿ ಆಯ್ಕೆ..!

ಮುಂಡಗೋಡ ಅಜಾದ್ ಬ್ಯಾಂಕ್ ಅಧ್ಯಕ್ಷರಾಗಿ ಮಹ್ಮದ್ ಗೌಸ್ ಧುಂಡಸಿ ಆಯ್ಕೆ..!

ಮುಂಡಗೋಡಿನ ಅಜಾದ್ ಕೋ- ಆಪರೇಟಿವ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಮಹ್ಮದ್ ಗೌಸ್ ಧುಂಡಸಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರೋ ಧುಂಡಸಿಯವರಿಗೆ ಹಲವು ಮುಖಂಡರು ಆಭಿನಂದಿಸಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ ನಸೀಮಾಬಾನು ಅವ್ರು ಆಯ್ಕೆಯಾಗಿದ್ದು, ನೂತನ ಆಡಳಿತ ಮಂಡಳಿ ಜಾರಿಗೆ ಬಂದಿದೆ.

ಕುಂಭಮೇಳಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿ..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ..!

ಕುಂಭಮೇಳಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿ..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ..!

ಮೌನಿ ಅಮವಾಸ್ಯೆ ದಿನ ಪ್ರಯಾಗರಾಜ್ ಕುಂಭಮೇಳದ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಬೆಳಗಾವಿ ನಗರದಿಂದ 30 ಜನರ ತಂಡ ಕುಂಭಮೇಳಕ್ಕೆ ಹೋಗಿದ್ದರು. ಐತಿಹಾಸಿಕ ಪುಣ್ಯಸ್ನಾನಕ್ಕೆ ಹೋದವರೀಗ ಹೆಣವಾಗಿದ್ದು ಈವರೆಗೂ ಜಿಲ್ಲಾಡಳಿತದಿಂದ ಅಧಿಕೃತವಾಗಿ ಸಾವಿನ ಖಚಿತತೆಯನ್ನು ದೃಢಪಡಿಸಲಿಲ್ಲ. ಆದ್ರೆ ಮೃತರೊಂದಿಗೆ ಹೋಗಿದ್ದವರು ಕೊಟ್ಟ ಮಾಹಿತಿ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಸಾವಿಗಿಡಾದ ಕುಟುಂಬಸ್ಥರ ಮನೆಗೆ ಸ್ಥಳೀಯ ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಮೃತದೇಹವನ್ನ ಬೆಳಗಾವಿಗೆ ಕರೆ ತರಲು ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನವೇ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿದಲ್ಲಿ ಕುಂದಾನಗರಿ ಬೆಳಗಾವಿಯ ನಾಲ್ವರು ದಾರುಣ ಸಾವು ಕಂಡಿದ್ದಾರೆ. ಕಳೆದ ಭಾನುವಾರ ಬೆಳಗಾವಿಯಿಂದ ಪ್ರಯಾಗರಾಜ್ ಕ್ಕೆ 30 ಜನರ ತಂಡ ಪ್ರಯಾಣ ಬೆಳೆಸಿತ್ತು. ಇದರಲ್ಲಿ ಬೆಳಗಾವಿಯ ವಡವಾಗಿಯ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ, ಮಗಳು ಮೇಘನಾ ಹತ್ತರವಾಠ ಮೃತಪಟ್ಟಿದ್ದಾರೆ....

ಮುಂಡಗೋಡ ಶಿವಾಜಿ ಸರ್ಕಲ್, ಕೋರ್ಟ ಬಳಿಯೇ ನಡೀತು ಮತ್ತೊಂದು ಅಮಾನುಷ ಹಲ್ಲೆ..!  ಅಷ್ಟಕ್ಕೂ, ಆ ವ್ಯಕ್ತಿಗೆ ಅಟ್ಟಾಡಿಸಿ, ಚಪ್ಪಲಿಯಿಂದ ಹೊಡೆದದ್ದು ಯಾರು..?

ಮುಂಡಗೋಡ ಶಿವಾಜಿ ಸರ್ಕಲ್, ಕೋರ್ಟ ಬಳಿಯೇ ನಡೀತು ಮತ್ತೊಂದು ಅಮಾನುಷ ಹಲ್ಲೆ..! ಅಷ್ಟಕ್ಕೂ, ಆ ವ್ಯಕ್ತಿಗೆ ಅಟ್ಟಾಡಿಸಿ, ಚಪ್ಪಲಿಯಿಂದ ಹೊಡೆದದ್ದು ಯಾರು..?

 ಅದೇನಾಗಿದೆ ಮುಂಡಗೋಡಿಗೆ..? ಇಲ್ಲಿ ಯಾವ ಕ್ಷಣದಲ್ಲಿ ಏನಾಗತ್ತೋ ಯಾರಿಗೂ ಅರ್ಥ ಆಗ್ತಿಲ್ಲ..! ನೀವೇ ಒಮ್ಮೆ ಯೋಚಿಸಿ, ಕಳೆದ ಕೆಲ ತಿಂಗಳ ಹಿಂದಷ್ಟೇ ಪಟ್ಟಣದ ಹೃದಯ ಭಾಗ, ಅದೂ ಕೂಡ ಮಾನ್ಯ ನ್ಯಾಯಾಧೀಶರು ಇರುವ ಕೋರ್ಟ್ ಆವರಣದಲ್ಲೇ ಅದೇಲ್ಲಿಂದಲೋ ಬಂದಿದ್ದ “ರೌಡಿ”ಗಳ ತಂಡ ಅದ್ಯಾರನ್ನೋ ಟಾರ್ಗೆಟ್ ಮಾಡಿ, ಮಚ್ಚು ಝಳಪಿಸಿ ಇಡೀ ಮುಂಡಗೋಡಿನ ಜನರಲ್ಲಿ ಆತಂಕ ಹುಟ್ಟಿಸಿತ್ತು. ಅದಿನ್ನು ಯಾರೂ ಮರೆತಿಲ್ಲ ಅಲ್ವಾ..? ಮತ್ತದೇ “ನ್ಯಾಯ”ದ ಅಂಗಳ..! ಇನ್ನು ಅದಾಗಿ, ಕೆಲ ದಿನಗಳಲ್ಲೇ ಇದೇ ಶಿವಾಜಿ ಸರ್ಕಲ್, ಇದೇ ಮಾನ್ಯ ಕೋರ್ಟಿನ ಕೂಗಳತೆ ದೂರದಲ್ಲಿ, ಮಂಗಳ‌ಮುಖಿಯರು ಹಾಡಹಗಲೇ ಪಾನ್ ಶಾಪಿಗೆ ನುಗ್ಗಿ ಹಲವರನ್ನು ಮನಬಂದಂತೆ ಥಳಿಸಿ ಹೋಗಿದ್ರು, ಅದ್ರಲ್ಲೂ ಪುಟ್ಟ ಮಗುವನ್ನೂ ಲೆಕ್ಕಿಸದೇ ಅವತ್ತು ನಡೆದಿದ್ದ ಹಲ್ಲೆ ನಿಜಕ್ಕೂ ಇಡೀ ಮುಂಡಗೋಡಿಗರ ಎದೆ ನಡುಗಿಸಿತ್ತು. ಅದಾದ ನಂತರ NMD ಜಮೀರನ ಕಿಡ್ನ್ಯಾಪ್ ಕೇಸು ಬಹುತೇಕ ಇಡೀ ಜಿಲ್ಲೆಯೇ ದೃಷ್ಟಿ ನೆಡುವಂತೆ ಮಾಡಿತ್ತು. ಅವತ್ತೂ ಕೂಡ..! ಅದಾದ ನಂತರ, ಬಂಕಾಪುರ ರಸ್ತೆಯ ಖಾಸಗಿ...

ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, 24 ವರ್ಷದ ಹುಡುಗನ ಬರ್ಬರ ಹತ್ಯೆ..! ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸ್ರು..!

ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, 24 ವರ್ಷದ ಹುಡುಗನ ಬರ್ಬರ ಹತ್ಯೆ..! ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸ್ರು..!

 ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಹಳೆ‌ ವೈಷಮ್ಯಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ ದುಷ್ಕರ್ಮಿಗಳು. ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್‌ನಲ್ಲಿ ಘಟನೆ ನಡೆದಿದೆ ಆಕಾಶ ವಾಲ್ಮೀಕಿ(24) ಕೊಲೆಯಾದ ಯುವಕನಾಗಿದ್ದು, ಮೂವರಿಂದ ಯುವಕನ ಕೊಲೆಯಾಗಿದೆ ಅನ್ನೊ ಮಾಹಿತಿ ಇದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ಪಾರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳ ಕಾಲಿಗೆ ಗುಂಡು..! ಅಂದಹಾಗೆ, ಆಕಾಶ್ ವಾಲ್ಮೀಕಿ ಕೊಲೆ ಆರೋಪಿಗಳನ್ನು ಬೆನ್ನತ್ತಿದ ಹುಬ್ಬಳ್ಳಿ ಪೊಲೀಸ್ರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಹೀಗಾಗಿ, ಸದ್ಯ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

error: Content is protected !!