Accident News: ರಾಷ್ಟ್ರೀಯ ಹೆದ್ದಾರಿ-69 ರ ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ KSRTC ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಹಿಂಬದಿ ಸವಾರ ಗಾಯಗೊಂಡಿದ್ದಾನೆ.

ಭಟ್ಕಳ ಡಿಪೋ ಬಸ್ ಹೊನ್ನಾವರ ಕಡೆಯಿಂದ ಶಿರಸಿಗೆ ತೆರಳುತ್ತಿದ್ದು, ಬೈಕ್ ಸವಾರ ಜೋಗ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬೈಕ್ ಸವಾರ ಸಾಗರ ಮೂಲದ ನಜೀಮ್ ಪಾಶ(30) ಮೃತಪಟ್ಟಿದ್ದು, ಆಯಾನ್ ಸಾಗರ ಗಾಯಗೊಂಡ ಬೈಕ್ ಹಿಂಬದಿ ಸವಾರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!