ಮುಂಡಗೋಡ ತಾಲೂಕಿನ ಕಾತೂರು ಬಳಿಮಿನಿ ಲಾರಿ ಪಲ್ಟಿಯಾದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಲಾರಿಯಡಿ ಚಾಲಕ ಸಿಲುಕಿಕೊಂಡಿದ್ದು ಚಾಲಕನ ರಕ್ಷಣಾ ಕಾರ್ಯ ನಡಿತಿದೆ. ಜಿಯೋ ಟವರ್ ಕೆಲಸ ಮಾಡಲು ಮುಂಡಗೋಡಿಗೆ ಬಂದಿದ್ದ ಕೃಷ್ಣ ಸಿಂಗನಳ್ಳಿ ಹಾಗೂ ಚಾಲಕ ಶಶಿ, ಶಿರಸಿ ಕಡೆಗೆ ಹೋಗುತ್ತಿದ್ದಾಗ ಮಳೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಮಿನಿ ಲಾರಿ ಪಲ್ಟಿಯಾಗಿದೆ. ಇನ್ನು ಘಟನೆಯಲ್ಲಿ ಚಾಲಕ ಲಾರಿಯಡಿಯಲ್ಲೇ ಸಿಲುಕಿಕೊಂಡಿದ್ದು, ನರಳುತ್ತಿದ್ದಾನೆ. ಹೀಗಾಗಿ, ಚಾಲಕನನ್ನು ಹೊರತೆಗೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಟ್ಟರ್ ಸಹಾಯದಿಂದ ಚಾಲಕನನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕಟ್ಟರ್ ನಿಂದ ಕಾರ್ಯಾಚರಣೆ ಮಾಡುವ ವೇಳೆ ಯುವಕನೊಬ್ಬನಿಗೆ ಕಟ್ಟರ್ ತಾಗಿ ಗಾಯವಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿ ಧನರಾಜ್ ಹಾಗೂ ಚಾಲಕ ವಿಜಯ್ ಪಾಟೀಲ್ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಕಾತೂರು ಬಳಿ ಮಿನಿ ಲಾರಿ ಪಲ್ಟಿ, ಲಾರಿಯಡಿ ಸಿಲುಕಿಕೊಂಡ ಚಾಲಕನ ಹೊರತೆಗೆಯಲು ಹರಸಾಹಸ, ಇಬ್ಬರಿಗೆ ಗಾಯ..!
ನಿರಂತರ ಮಳೆ ಹಿನ್ನೆಲೆ, ಮುಂಡಗೋಡ ತಾಲೂಕು ಸೇರಿ ಜಿಲ್ಲಾಧ್ಯಂತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಹಲವು ಅನಾಹುತಗಳಿ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮುಂಡಗೋಡ ತಾಲೂಕು ಸೇರಿದಂತೆ ನಾಳೆ ಜುಲೈ 25 ರ ಮಂಗಳವಾರವೂ ಜಿಲ್ಲೆಯ ಅಂಗನವಾಡಿಗಳೂ ಸೇರಿ, ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಹವಾಮಾನ (Meteorological Department) ಆರೆಂಜ್ ಅಲರ್ಟ್ ಮುನ್ಸೂಚನೆ ನೀಡಲಾಗಿದೆ. ಅಲ್ಲದೇ, ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯ ಕಾರಣದಿಂದ ಹಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವು ಕಡೆ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೆಜುಗಳಿಗೆ ರಜೆ ನೀಡಿದ್ದು ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.
ನಾಳೆ ಹಾವೇರಿಗೆ ಸಿಎಂ ಸಿದ್ದರಾಮಯ್ಯ, ಪ್ರಗತಿ ಪರಿಶೀಲನಾ ಸಭೆ ನಡೆಸಲಿರೋ ಸಿಎಂ..!
ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಕೆಲವು ಕಡೆ ಹಾನಿಯಾದ ಹಿನ್ನಲೆಯಲ್ಲಿ, ನಾಳೆ ಮೊದಲ ಬಾರಿಗೆ ಏಲಕ್ಕಿ ನಾಡಿಗೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಕೃಷಿ,ಆರೋಗ್ಯ,ಆಹಾರ, ಮಳೆ-ಬೆಳೆ ಹಾನಿ ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಿಎಂ ಸಿದ್ದರಾಮಯ್ಯ, ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಹೀಗಾಗಿ, ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರಿಂದ ಪೂರ್ವ ಭಾವಿ ಸಭೆ ನಡೆಯಿತು. ತವರು ಜಿಲ್ಲೆಯವರಾಗಿದ್ದರು ಬಸವರಾಜ್ ಬೊಮ್ಮಾಯಿ ಈ ಹಿಂದೆ ಸಿಎಂ ಆಗಿದ್ದಾಗ ಒಂದು ಬಾರಿಯೂ ಪ್ರಗತಿ ಪರಿಶೀಲನಾ ಸಭೆ ಮಾಡಿರಲಿಲ್ಲ. ಹೀಗಾಗಿ, ಸಿದ್ದರಾಮಯ್ಯ ನವರ ಹಾವೇರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಮಹತ್ವ ಪಡೆದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಿನ ಹಲವು ಲೋಪದೋಷಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಮ್ಮೆ ಮೈ ತೊಳೆಯಲು ನೀರಿಗೆ ಇಳಿದಿದ್ದ ಯುವಕ ದಾರುಣ ಸಾವು..!
ಹಾನಗಲ್: ತುಂಬಿ ಹರಿಯುತ್ತಿರೋ ಧರ್ಮಾ ನದಿಯಲ್ಲಿ ಎಮ್ಮೆ ಮೈತೊಳೆಯುವಾಗ ಕಾಲುಜಾತಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಯಮನಪ್ಪ ಬಂಡಿವಡ್ಡರ (24)ಮೃತ ಯುವಕನಾಗಿದ್ದಾನೆ. ಎಮ್ಮೆ ಮೇಯಿಸಲು ಜಮೀನಿಗೆ ತೆರಳಿದ್ದ ಮೃತ ಯಮನಪ್ಪ, ಮರಳಿ ವಾಪಸ್ಸು ಮನೆಗೆ ಬರುವಾಗ ಧರ್ಮಾ ನದಿಯಲ್ಲಿ ಎಮ್ಮೆ ಮೈ ತೊಳೆಯುವಾಗ ದುರಂತ ಸಂಭವಿಸಿದೆ. ಕಾಲು ಜಾರಿ ನದಿಗೆ ಬಿದ್ದಾಗ ಈಜು ಬಾರದೆ ಯುವಕ ಸಾವು ಕಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಡೂರು ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ಮುಂಡಗೋಡ ತಾಲೂಕು ಸೇರಿ ಜಿಲ್ಲಾಧ್ಯಂತ ಶಾಲಾ ಕಾಲೇಜುಗಳಿಗೆ ರಜೆ..!
ಉತ್ತರ ಕನ್ನಡ ಜಿಲ್ಲಾಧ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮುಂಡಗೋಡ ತಾಲೂಕು ಸೇರಿದಂತೆ ನಾಳೆ ಸೋಮವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯ ಕಾರಣದಿಂದ ಹಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವು ಕಡೆ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೆಜುಗಳೊಗೆ ರಜೆ ನೀಡಿದ್ದು ಸಾರ್ವಜನಿಕರು ಜಾಗ್ರತೆ ವಹಿಸುವಂತೆ ಕರೆ ನೀಡಲಾಗಿದೆ.
ಕರಡಿ ದಾಳಿಯಿಂದ ಸತ್ತ ರೈತನ ಕುಟುಂಬಕ್ಕೆ 15 ಲಕ್ಷ ಪರಿಹಾರದ ಚೆಕ್ ವಿತರಣೆ, ಅರಣ್ಯ ಅಧಿಕಾರಿಗಳ ಜವಾಬ್ದಾರಿಗೆ ಸಾರ್ವಜನಿಕರ ಸಲಾಂ..!
ಮುಂಡಗೋಡ: ಕರಡಿ ದಾಳಿಯಿಂದ ಸ್ಥಳದಲ್ಲೇ ಸಾವುಕಂಡಿದ್ದ ರೈತನ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ನೀಡಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಲ್ಲಿನ ಅರಣ್ಯ ಅಧಿಕಾರಿಗಳು ನೊಂದ ಕುಟುಂಬಕ್ಕೆ ಪರಿಹಾರದ ಆಸರೆ ಒದಗಿಸುವಲ್ಲಿ ಜವಾಬ್ದಾರಿ ಮೆರೆದಿದ್ದಾರೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ಹ್ಯಾಟ್ಸ್ ಅಪ್.. ಅಂದಹಾಗೆ, ಕರಡಿ ದಾಳಿಯಿಂದ ಮುಂಡಗೋಡ ತಾಲೂಕಿನ ಮರಗಡಿ ಗೌಳಿದಡ್ಡಿಯ ಜಿಮ್ಮು ವಾಘು ತೋರವತ್ ಎಂಬುವ ರೈತ ಭೀಕರ ಸಾವು ಕಂಡಿದ್ದ. ಹೀಗಾಗಿ, ಅಕ್ಷರಶಃ ನಲುಗಿ ಹೋಗಿದ್ದ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿದೆ. ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ CCF ವಸಂತ ರೆಡ್ಡಿ, ಯಲ್ಲಾಪುರ ವಿಭಾಗದ DFO ಶಶಿಧರ್ ಹೆಗಡೆ, ACF ರವಿ ಹುಲಕೋಟಿ, RFO ಸುರೇಶ್ ಕುಲ್ಲೋಳ್ಳಿ, DRFO ನಾಗರಾಜ್ ಕಲಾಲ, ಮಾಜಿ ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಲಂಚ ಪಡೆಯುತ್ತಿದ್ದ ವೇಳೆ, ಹಾವೇರಿ DDPI ಮೇಲೆ ಲೋಕಾಯುಕ್ತ ದಾಳಿ, DDPI ಅಂದಾನೆಪ್ಪ ಸೇರಿ ಇಬ್ಬರು ವಶಕ್ಕೆ..!
ಹಾವೇರಿ: ಡಿಡಿಪಿಐ ಹಾಗೂ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಡಿಡಿಪಿಐ ಅಂದಾನೆಪ್ಪ ಒಡಿಗೇರಿ ಹಾಗೂ ಕೇಸ್ ವರ್ಕರ್ ದತ್ತಾತ್ರೆಯ್ ಕುಂಟೆಯವರನ್ನ ಲೋಕಾ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಮಹಮ್ಮದ್ ಗೌಸ್ ಎಂಬ ಶಿಕ್ಷಕ, ತಮ್ಮ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳನ್ನು ನೀಡಿದ್ದರು. ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲು ಕೋರಿದ್ದರು. ಅದಕ್ಕಾಗಿ ಡಿಡಿಪಿಐ 7 ಸಾವಿರ ರು. ಲಂಚ ಕೇಳಿದ್ದರು ಎನ್ನಲಾಗಿದೆ. ಹೀಗಾಗಿ, 7 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುತ್ತಿದೆ.
ಮರಗಡಿಯಲ್ಲಿ ರೈತನ ಮೇಲೆ ಭಯಾನಕ ಕರಡಿ ದಾಳಿ, ಸ್ಥಳದಲ್ಲೇ ಭೀಕರ ಸಾವು ಕಂಡ ಅನ್ನದಾತ..!
ಮುಂಡಗೋಡ ತಾಲೂಕಿನ ಮರಗಡಿಯಲ್ಲಿ ಕರಡಿ ದಾಳಿಯಿಂದ ಓರ್ವ ರೈತ ಮೃತಪಟ್ಟಿದ್ದಾನೆ. ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ಭೀಕರವಾಗಿ ಕೊಂದು ಹಾಕಿದೆ. ಮರಗಡಿ ಗೌಳಿ ದಡ್ಡಿಯ ಜಿಮ್ಮು ವಾಘು ತೋರವತ್(58) ಕರಡಿ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಅಂದಹಾಗೆ, ನಿನ್ನೆ ಗುರುವಾರ ಈತ ಕೆಲಸಕ್ಕಾಗಿ ಗದ್ದೆಗೆ ಹೋಗಿದ್ದ. ಆದ್ರೆ, ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬರಬೇಕಿದ್ದ ರೈತ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಹುಡುಕಲು ಹೋಗಿದ್ದಾರೆ. ಈ ವೇಳೆ ಕರಡಿ ದಾಳಿಯಿಂದ ಮೃತಪಟ್ಟು ಬಿದ್ದಿರೋದು ಕಂಡು ಬಂದಿದೆ. ಕರಡಿ ದಾಳಿಯಿಂದ ಮೃತಪಟ್ಟ ಘಟನೆ ಅರಿವಾದ ತಕ್ಷಣವೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿರೋ ಕುಟುಂಬಸ್ಥರು, ಗ್ರಾಮಸ್ಥರು, ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆ, ಮೂರು ಶಾಲೆಗಳಿಗೆ ರಜೆ ಘೋಷಣೆ..! ಯಾವ್ಯಾವ ಶಾಲೆಗಳು ಗೊತ್ತಾ..?
ಮುಂಡಗೋಡ ತಾಲೂಕಿನಾಧ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ತಾಲೂಕಾಡಳಿತ ಹಲವು ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಪರಿಣಾಮವಾಗಿ ತಾಲೂಕಿನ ಮೂರು ಶಾಲೆಗಳಿಗೆ ರಜೆ ಘೋಷಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ಇಡೀ ಸುರಿಯುತ್ತಿರೋ ಮಳೆಯ ಕಾರಣದಿಂದ ಹಳ್ಳಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ. ಅಲ್ಲದೇ ಕೆಲವು ಕಡೆ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಹೀಗಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಮ್ಮಚಗಿ, ಓಣಿಕೇರಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ತಹಶೀಲ್ದಾರ್ ಶಂಕರ್ ಗೌಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ತಾಲೂಕಿನಲ್ಲಿ 3 ಶಾಲೆಗಳಿಗೆ ರಜೆ ಘೋಷಿಣೆ ಮಾಡಲಾಗಿದ್ದು, ಹೀಗೆ ಘೋಷಣೆ ಮಾಡಿರುವ ರಜೆಯ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಶಾಲೆ ನಡೆಸಿ, ಹೊಂದಿಸಿಕೊಳ್ಳಲಾಗುವುದು ಎಂದು ಬಿಇಒ ತಿಳಿಸಿದ್ದಾರೆ.
ಬಂಧಿಸಲು ಹೋದ ಪಿಎಸ್ಐ ಪಿಸ್ತೂಲ್ ಕಸಿದುಕೊಂಡ ಕಳ್ಳ, ಪಿಸ್ತೂಲು ಹಿಡಿದು ಮರವೇರಿ ಕುಳಿತು ಕಳ್ಳ ಆಡಿದ್ದ ಆಟಕ್ಕೆ ಖಾಕಿಗಳೇ ಕಂಗಾಲು..!
ಅವ್ನು ದೊಡ್ಡ ಡಾನ್ ಅಲ್ಲ. ಆದ್ರೂ ಅವನನ್ನ ಹಿಡಿಯಲು ಭರ್ಜರಿ ಟೀಂ.. ಅವನು ಭೂಗತ ಲೋಕದಲ್ಲಿ ಅಡಗಿಲ್ಲ. ಆದ್ರೂ ಅವನನ್ನ ಹಿಡಿಯಲು ಸಖತ್ ಪ್ಲಾನ್ ಕಣ್ಣೆದುರೇ ಇದ್ರೂ ಆರೋಪಿಯನ್ನ ಹಿಡಿಯಲು ಪೋಲೀಸ್ರು ಹೆಣಗಾಡಿದ್ದೇಕೆ ಅನ್ನೋದೇ ಕುತೂಹಲ. ಗಿಡದಲ್ಲಿ ಕಳ್ಳ..ಆ ಕಳ್ಳನ ಕೈಯಲ್ಲಿ ಪಿಸ್ತೂಲು.. ಕೊಡಪ್ಪ ಪ್ಲೀಸ್ ಕೊಡಪ್ಪ ಕಳ್ಳನಿಗೆ ಕೈ ಚಾಚುತ್ತಿರೋ ಪೋಲೀಸ್ ಪಡೆ.. ಇದು ಅಚ್ಚರಿ ಅನ್ನಿಸಿದ್ರೂ ಇಂಥಹದೊಂದು ಸೀನ್ ನಡೆದಿದ್ದು ಬಿಸಿಲೂರು ಕಲಬುರಗಿಯಲ್ಲಿ. ಹೌದು ಇದು ಒಂಥರ ಕಳ್ಳ&ಪೋಲೀಸ್ ಆಟ ಇದ್ದಂಗಿತ್ತು. ಅಂದಹಾಗೆ ಇಲ್ಲಿ ಗಿಡವೇರಿ ಕುಳಿತ ಕುಖ್ಯಾತ ಕಳ್ಳನ ಹೆಸರು ಖಾಜಾ. ಅಫಜಲಪುರ ತಾಲೂಕಿನ ಬಳ್ಳೂರಗಿ ನಿವಾಸಿಯಾದ ಈ ಖದೀಮನನ್ನ ಇವತ್ತು ಪಿಎಸ್ಐ ಭೀಮರಾಯ ಅಂಡ್ ಟೀಂ ಬಂಧಿಸಲು ಹೋಗಿದೆ. ಆದ್ರೆ ಕಿಲಾಡಿ ಖಾಜಾ ಪೋಲೀಸರ ಪಿಸ್ತೂಲು ಕಸಿದು ಎಸ್ಕೇಪ್ ಆಗಿ ಹೊರವಲಯದ ಮರದಲ್ಲಿ ಕುಳಿತು ಬಿಟ್ಟಿದ್ದ. ಯಾವಾಗ ಈ ವಿಷ್ಯ ಬಟಾ ಬಯಲಾಯ್ತೋ ಖುದ್ದು ಎಸ್ಪಿ ಇಷಾ ಪಂತ್ ಮೇಡಂ ಫೀಲ್ಡಿಗಿಳಿದ್ರು..50 ಕ್ಕೂ ಹೆಚ್ಚಿನ...