ಅವ್ನು ದೊಡ್ಡ ಡಾನ್ ಅಲ್ಲ. ಆದ್ರೂ ಅವನನ್ನ ಹಿಡಿಯಲು ಭರ್ಜರಿ ಟೀಂ.. ಅವನು ಭೂಗತ ಲೋಕದಲ್ಲಿ ಅಡಗಿಲ್ಲ. ಆದ್ರೂ ಅವನನ್ನ ಹಿಡಿಯಲು ಸಖತ್ ಪ್ಲಾನ್ ಕಣ್ಣೆದುರೇ ಇದ್ರೂ ಆರೋಪಿಯನ್ನ ಹಿಡಿಯಲು ಪೋಲೀಸ್ರು ಹೆಣಗಾಡಿದ್ದೇಕೆ ಅನ್ನೋದೇ ಕುತೂಹಲ.

ಗಿಡದಲ್ಲಿ ಕಳ್ಳ..ಆ ಕಳ್ಳನ ಕೈಯಲ್ಲಿ ಪಿಸ್ತೂಲು.. ಕೊಡಪ್ಪ ಪ್ಲೀಸ್ ಕೊಡಪ್ಪ ಕಳ್ಳನಿಗೆ ಕೈ ಚಾಚುತ್ತಿರೋ ಪೋಲೀಸ್ ಪಡೆ.. ಇದು ಅಚ್ಚರಿ ಅನ್ನಿಸಿದ್ರೂ ಇಂಥಹದೊಂದು ಸೀನ್ ನಡೆದಿದ್ದು ಬಿಸಿಲೂರು ಕಲಬುರಗಿಯಲ್ಲಿ. ಹೌದು ಇದು ಒಂಥರ ಕಳ್ಳ&ಪೋಲೀಸ್ ಆಟ ಇದ್ದಂಗಿತ್ತು. ಅಂದಹಾಗೆ ಇಲ್ಲಿ ಗಿಡವೇರಿ ಕುಳಿತ ಕುಖ್ಯಾತ ಕಳ್ಳನ ಹೆಸರು ಖಾಜಾ. ಅಫಜಲಪುರ ತಾಲೂಕಿನ ಬಳ್ಳೂರಗಿ ನಿವಾಸಿಯಾದ ಈ ಖದೀಮನನ್ನ ಇವತ್ತು ಪಿಎಸ್ಐ ಭೀಮರಾಯ ಅಂಡ್ ಟೀಂ ಬಂಧಿಸಲು ಹೋಗಿದೆ. ಆದ್ರೆ ಕಿಲಾಡಿ ಖಾಜಾ ಪೋಲೀಸರ ಪಿಸ್ತೂಲು ಕಸಿದು ಎಸ್ಕೇಪ್ ಆಗಿ ಹೊರವಲಯದ ಮರದಲ್ಲಿ ಕುಳಿತು ಬಿಟ್ಟಿದ್ದ.

ಯಾವಾಗ ಈ ವಿಷ್ಯ ಬಟಾ ಬಯಲಾಯ್ತೋ ಖುದ್ದು ಎಸ್ಪಿ ಇಷಾ ಪಂತ್ ಮೇಡಂ ಫೀಲ್ಡಿಗಿಳಿದ್ರು..50 ಕ್ಕೂ ಹೆಚ್ಚಿನ ಖಾಕಿ ಟೀಂ ಕಟ್ಕೊಂಡು ಆರೋಪಿ ಕುಳಿತಿದ್ದ ಮರದ ಬಳಿಯ ಲೊಕೇಷನ್ ಗೆ ರೀಚ್ ಆದ್ರು.. ಕಣ್ಣೆದುರೇ ಆರೋಪಿ ಕಂಡ್ರೂ ಹಿಡಿಯಂಗಿಲ್ಲ ಹೊಡಿಯಂಗಿಲ್ಲ.. ಸುಮಾರು ನಾಲ್ಕಾರು ತಾಸು ಬರೀ ಬಾತ್ ಚೀತ್ ನಡೀತು.. ಆದ್ರೆ ಆರೋಪಿ ಕೆಳಗಿಳಿಯಲಿಲ್ಲ ಪಿಸ್ತೂಲು ಕೊಡಲಿಲ್ಲ..ಕೊನೆಗೆ ಎಸ್ಪಿ ಮೇಡಂ ಧೈರ್ಯ ಮಾಡಿ ಮರದ ಬಳಿ ನಿಂತ್ರು ನೋಡಿ ಅಲ್ಲಿಗೆ ಥಂಡಾ ಹೊಡೆದ ಖಾಜಾ ತನ್ನ ಕೈಯಲ್ಲಿದ್ದ ಪಿಸ್ತೂಲು ಮೇಡಂ ಕೈಗೆ ಸಿಗುವಂತೆ ಬಿಸಾಕಿ ಬಿಟ್ಟ..

ಖಾಕಿಪಡೆಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಕೊನೆಗೆ ತಾನೇ ಬಲೆಗೆ ಬಿದ್ದಿದ್ದಾನೆ. ವಿಶೇಷ ಅಂದ್ರೆ ಬೆಂಗಳೂರಿನ ಸಿಸಿಬಿ ಟೀಂ ಸಹ ಈ ಆರೋಪಿ ಖಾಜಾ ಬಂಧನಕ್ಕೆ ಜಾಲ ಬೀಸಿತ್ತು. ಕಾರಣ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕಳ್ಳತನ ಕೇಸ್ ದಾಖಲಾಗಿವೆ. ಒಟ್ಟಾರೆ ಬಾಹರ್ ಆಗಿದ್ದ ಖಾಜಾ ಇದೀಗ ಮತ್ತೆ ಅಂದರ್ ಆಗಿದ್ದಾನೆ.

 

error: Content is protected !!