ಹಾವೇರಿಯಲ್ಲಿ ಭೀಕರ ಅವಘಡ, ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಹರಿದ ಬಸ್, ತಲೆ ಪೀಸ್, ಪೀಸ್..!

ಹಾವೇರಿಯಲ್ಲಿ ಭೀಕರ ಅವಘಡ, ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಹರಿದ ಬಸ್, ತಲೆ ಪೀಸ್, ಪೀಸ್..!

ಹಾವೇರಿ: ರಸ್ತೆ ದಾಟುವ ವೇಳೆ ಸಾರಿಗೆ ಬಸ್ ಗೆ ಸಿಕ್ಕು ಮಹಿಳೆ ದಾರುಣ ಸಾವು ಕಂಡ ಘಟನೆ, ಹಾವೇರಿ ನಗರದ ವಾಲ್ಮೀಕಿ‌ ವೃತ್ತದ ಬಳಿ ನಡೆದಿದೆ. ಹುಬ್ಬಳ್ಳಿ ಯಿಂದ ಹಾವೇರಿಯತ್ತ ಬರುತ್ತಿದ್ದ ಸಾರಿಗೆ ಬಸ್ ಗೆ, ಹಾವೇರಿಯ ಇಜಾರಿ ಲಕಮಾಪುರದ ನಿವಾಸಿ ಜಯಮ್ಮ ಕೂಳೇನೂರ (31) ಎಂಬುವವರು ಸಾವು ಕಂಡಿದ್ದಾರೆ. ಸರ್ಕಾರಿ ಮಹಿಳಾ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡ್ತಿದ್ದ ಮೃತ ಮಹಿಳೆ, ಪತಿ ರಸ್ತೆ ಪಕ್ಕ ನಿಂತು ಕರೆದ ಹಿನ್ನಲೆ ರಸ್ತೆ ದಾಟಲು ಹೋಗಿದ್ದರು. ಹೀಗಾಗಿ, ದುರಂತ ಸಂಭವಿಸಿದೆ. ಹಾವೇರಿ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

ಉ.ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಉ.ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ, ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಇನ್ನಿಲ್ಲದ ಅವಾಂತರಗಳು ಸೃಷ್ಟಿಯಾಗಿವೆ. ಹೀಗಾಗಿ, ಜಿಲ್ಲೆಯ 10 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಮೇಡಮ್ಮು ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ, ದಾಂಡೇಲಿ, ಯಲ್ಲಾಪುರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ,ನಾಳೆ ಗುರುವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ, ಜೋಯಿಡಾ, ದಾಂಡೇಲಿ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 18 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..

ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿ; ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ

ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿ; ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚನೆ

ಅಂಕೋಲಾ ತಾಲೂಕಿನ ಶಿರೂರು ಸಮೀಪ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಕುರಿತಂತೆ ಐ ಆರ್ ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಕೋಲಾ ತಾಲೂಕಿನ ಶಿರೂರುನಲ್ಲಿ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು ಈ ಘಟನೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣವಾಗಿದ್ದು ಮೃತರ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಐಆರ್ಬಿ ಕಂಪನಿಯ ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ಮತ್ತು ಗುಡ್ಡ ಕುಸಿತಕ್ಕೆ ಕಾರಣವಾದ ಕಾರಣ ಅರಣ್ಯ ಇಲಾಖೆಯ ಕಾಯ್ದೆ ಯಡಿ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ , ಸಾವಿರಾರು ಮಂದಿ...

ಗೋಟಗೋಡಿಕೊಪ್ಪ ಕ್ರಾಸ್ ಬಳಿ ಸರಣಿ ಅಪಘಾತ, ನಿಂತಿದ್ದ ಕಾರು, ಬೈಕ್ ಗೆ ಗುದ್ದಿದ ಕಾರು..! ಎರಡು ಕಾರುಗಳು, ಒಂದು ಬೈಕ್ ಜಖಂ

ಗೋಟಗೋಡಿಕೊಪ್ಪ ಕ್ರಾಸ್ ಬಳಿ ಸರಣಿ ಅಪಘಾತ, ನಿಂತಿದ್ದ ಕಾರು, ಬೈಕ್ ಗೆ ಗುದ್ದಿದ ಕಾರು..! ಎರಡು ಕಾರುಗಳು, ಒಂದು ಬೈಕ್ ಜಖಂ

 ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಬಳಿ ನಿಂತಿದ್ದ ಕಾರ್ ಹಾಗೂ ಬೈಕಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಾಗೂ ಕಾರು ನುಜ್ಜುಗುಜ್ಜಾದ ಘಟನೆ ನಡೆದಿದೆ. ನಿರಂತರ ಮಳೆಯ ಪರಿಣಾಮ ಗೋಟಗೋಡಿಕೊಪ್ಪ ಕ್ರಾಸ್ ಬಳಿ ರಸ್ತೆ ಮೇಲೆ ಮರ ಬಿದ್ದಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ಮಾಡ್ತಿದ್ದರು. ಈ ವೇಳೆ ರಸ್ತೆ ಸಂಚಾರ ಕೆಲಹೊತ್ತು ಬಂದ್ ಆಗಿತ್ತು. ಇದೇ ಸಂದರ್ಭದಲ್ಲಿ ಸಾಲುಗಟ್ಟಿ ವಾಹನಗಳು ನಿನಮತಿದ್ದವು. ಹೀಗಿರುವಾಗ, ಏಕಾಏಕಿ ಬಂದ ಕಾರ್, ಎದುರು ನಿಂತಿದ್ದ ಕಾರ್ ಹಾಗೂ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ, ಕಾರು ಮುಂದೆ ನಿಂತಿದ್ದ ಲಾರಿಗೆ ಹೋಗಿ ಗುದ್ದಿ ಘಟನೆ ಸಂಭವಿಸಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮಗೆ ಮಳೆಯಿಂದ ವಿದ್ಯುತ್ ಸಮಸ್ಯೆಯಾಗಿದೆಯಾ..? ಹಾಗಿದ್ರೆ, ಈ ನಂಬರ್ ಗೆ ಕರೆ ಮಾಡಿ..!

ನಿಮಗೆ ಮಳೆಯಿಂದ ವಿದ್ಯುತ್ ಸಮಸ್ಯೆಯಾಗಿದೆಯಾ..? ಹಾಗಿದ್ರೆ, ಈ ನಂಬರ್ ಗೆ ಕರೆ ಮಾಡಿ..!

ಕಾರವಾರ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ಹೆಸ್ಕಾಂ ವಿದ್ಯುತ್ ಮಾರ್ಗಗಳಲ್ಲಿ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಹೆಸ್ಕಾಂ ಶಿರಸಿ ವೃತ್ತದ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ. ಮಳೆಗಾಳಿಗಳಿಂದ ವಿದ್ಯುತ್ ಅಡೆತಡೆ ಉಂಟಾದಲ್ಲಿ, ವಿದ್ಯುತ್ ವಾಹಕ ತುಂಡಾಗಿ ಬಿದ್ದಿದ್ದಲ್ಲಿ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಹೆಸ್ಕಾಂ ಹೆಲ್ಪ್‌ಲೈನ್: 1912 ಅಥವಾ ಈ ಕೆಳಕಂಡ 24*7 ಗ್ರಾಹಕರ ಸಹಾಯವಾಣಿಗಳಿಗೆ ಸಂಪರ್ಕಿಸಿ ದೂರುಗಳನ್ನ ನೀಡಬಹುದಾಗಿದೆ. ಕಾರವಾರ ವಿಭಾಗ- ಕಾರವಾರ ಶಾಖೆ: 08382- 221336, ಸದಾಶಿವಗಡ ಶಾಖೆ: 08382- 265753, ಅಂಕೋಲಾ ಶಾಖೆ: 08382- 230730, ಹೊನ್ನಾವರ ವಿಭಾಗ- ಕುಮಟಾ ಶಾಖೆ: 08386- 222034, ಗೋಕರ್ಣ ಶಾಖೆ: 94808 81935, ಮರಾಕಲ್ ಶಾಖೆ: 94808 83732, ಹೊನ್ನಾವರ ಶಾಖೆ: 08387- 220 294, ಕಾಸರಕೋಡ್ ಶಾಖೆ: 94808 81943, ಗೇರುಸೊಪ್ಪ ಶಾಖೆ: 08387- 268 063, ಭಟ್ಕಳ ಶಾಖೆ: 08385- 226 426/ 94808 81958, ಮುರುಡೇಶ್ವರ ಶಾಖೆ: 08385- 268 555/ 94815...

ಜಿಲ್ಲೆಯಲ್ಲಿ ಆರ್ಭಟಿಸುತ್ತಿರುವ ಮಳೆ, 26 ಕಾಳಜಿ ಕೇಂದ್ರಗಳಲ್ಲಿ 2368 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ.

ಜಿಲ್ಲೆಯಲ್ಲಿ ಆರ್ಭಟಿಸುತ್ತಿರುವ ಮಳೆ, 26 ಕಾಳಜಿ ಕೇಂದ್ರಗಳಲ್ಲಿ 2368 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ.

ಕಾರವಾರ: ಜಿಲ್ಲೆಯಲ್ಲಿ ವರುಣ ಎಡಬಿಡದೇ ಆರ್ಭಟಿಸುತ್ತಿದ್ದು, ಮಂಗಳವಾರ ಸಂಜೆಯ ವೇಳೆಗೆ ಕಾರವಾರ ತಾಲೂಕಿನಲ್ಲಿ 6, ಕುಮಟಾ ತಾಲೂಕಿನಲ್ಲಿ 6 ಮತ್ತು ಹೊನ್ನಾವರ ತಾಲೂಕಿನಲ್ಲಿ 14 ಸೇರಿದಂತೆ ಒಟ್ಟು 26 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಇವುಗಳಲ್ಲಿ 2368 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿ0ದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳು ಪೂರ್ಣ ಹಾನಿ, 1 ಮನೆಗೆ ತೀವ್ರ ಹಾನಿ ಹಾಗೂ 18 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಕಾರವಾರ ತಾಲೂಕಿನಲ್ಲಿ ಮನೆ ಕುಸಿದು ಒಂದು ಮಾನವ ಜೀವ ಹಾನಿಯಾಗಿದೆ....

ಅಂಕೋಲಾ ಬಳಿ ಗುಡ್ಡ ಕುಸಿತ, 9 ಜನ ಸಾವು ಶಂಕೆ, ಮಣ್ಣಿನಡಿ ಕೆಲವರು ಸಿಲುಕಿರೊ ಅನುಮಾನ..!

ಅಂಕೋಲಾ ಬಳಿ ಗುಡ್ಡ ಕುಸಿತ, 9 ಜನ ಸಾವು ಶಂಕೆ, ಮಣ್ಣಿನಡಿ ಕೆಲವರು ಸಿಲುಕಿರೊ ಅನುಮಾನ..!

ಅಂಕೋಲಾ: ತಾಲೂಕಿನ ಶಿರೂರು ಬಳಿ ಹೆದ್ದಾರಿ ಪಕ್ಕದಲ್ಲಿ ಗುಡ್ಡಕುಸಿತ ಉಂಟಾಗಿ ಹಲವರು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಇನ್ನು ಇಬ್ಬರು ಮಣ್ಣಿನ ಅಡಿಯಲ್ಲಿ ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಕಿ ಲಕ್ಷ್ಮಣ ನಾಯ್ಕ (47) ಶಾಂತಿ ನಾಯ್ಕ(36) ರೋಶನ (11) ಅವಾಂತಿಕಾ (6) ಜಗನ್ನಾಥ (55) ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಐಆರ್‌ಬಿ ಕಂಪನಿ ಹೆದ್ದಾರಿ ಅಗಲೀಕರಣಕ್ಕಾಗಿ ಭಾರೀ ಪ್ರಮಾಣದಲ್ಲಿ ಗುಡ್ಡ ಅಗೆದಿರುವ ಕಾರಣ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿದೆ. ಇನ್ನೂ ಇದೇ ವೇಳೆ ಹೆದ್ದಾರಿಯಲ್ಲಿ ನಿಲ್ಲಿಸಿಟ್ಟ ಟ್ಯಾಂಕ‌ರ್ ಸಹ ಮಣ್ಣಿನ ರಭಸಕ್ಕೆ ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿದ್ದು, ಅದರಲ್ಲಿದ್ದ ಚಾಲಕ ಹಾಗೂ ಕ್ಲಿನರ್ ಸಹ ಸಾವನ್ನಪ್ಪಿರುವ ಶಂಕೆ ಇದೆ.

ಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಚರಣೆ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಚರಣೆ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18 ರ ವರಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಅರಣ್ಯ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸಾರ್ವಜನಿಕರು ಮಳೆಯಿಂದಾಗಿ ಯಾವುದೇ ಅಪಾಯವಾದಲ್ಲಿ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1077 ಗೆ ಅಥವಾ ಮೊ.ಸಂ. ಸಂಖ್ಯೆ. 9483511015 ಕರೆ, ವಾಟ್ಸಾಪ್ ಮೂಲಕ ಮಾಹಿತಿ ನೀಡಿದಲ್ಲಿ ತಕ್ಷಣ ನೆರವಿಗೆ ಧಾವಿಸಲಾಗುವುದು ಎಂದರು. ಕಾರವಾರದ ನೌಕಾ ನೆಲೆ ಮತ್ತು ರಾಷ್ಟೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಸಂಭವಿಸಿಸುವ ಕೃತಕ ನೆರೆ ಸೇರಿದಂತೆ ಎಲ್ಲಾ ರೀತಿಯ ಅನಾಹುತಗಳಿಗೆ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಕಾರವಾರ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು...

ನಿರಂತರ ಮಳೆ ಹಿನ್ನೆಲೆ ದೇವಿಮನೆ ಬಳಿ ಗುಡ್ಡ ಕುಸಿತ, ಶಿರಸಿ- ಕುಮಟಾ ರಸ್ತೆ ಬಂದ್..!

ನಿರಂತರ ಮಳೆ ಹಿನ್ನೆಲೆ ದೇವಿಮನೆ ಬಳಿ ಗುಡ್ಡ ಕುಸಿತ, ಶಿರಸಿ- ಕುಮಟಾ ರಸ್ತೆ ಬಂದ್..!

ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಶಿರಸಿ- ಕುಮಟಾ ರಸ್ತೆಯ ದೇವಿಮನೆ ಮತ್ತು ರಾಗಿ ಹೊಸಳ್ಳಿ ಮದ್ಯೆ ರಸ್ತೆ ಮೇಲೆ ಗುಡ್ಡು ಕುಸಿದಿದೆ. ಪರಿಣಾಮ ಶಿರಸಿ- ಕುಮಟಾ ರಸ್ತೆ ಬಂದ್ ಆಗಿದೆ. ರಾತ್ರಿ ಎರಡು ಗಂಟೆ ಸುಮಾರಿಗೆ ನಿರಂತರ ಮಳೆಯಿಂದ ರಸ್ತೆ ಮೇಲೆಯೇ ಗುಡ್ಡ ಕುಸಿದಿದ್ದು, ತೆರವು ಕಾರ್ಯಾಚರಣೆ ನಡೆಸಲಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ‌.

ಯಕ್ಕಂಬಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ KSRTC ಬಸ್..!

ಯಕ್ಕಂಬಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ KSRTC ಬಸ್..!

ನಿಯಂತ್ರಣ ತಪ್ಪಿ KSRTC ಬಸ್ ರಸ್ತೆ ಬದಿಗೆ ಇಳಿದ ಘಟನೆ ಎಕ್ಕಂಬಿ ಸಮೀಪ ನಡೆದಿದೆ. ಶ ಹಾವೇರಿಯಿಂದ ಶಿರಸಿಗೆ ಬರುತ್ತಿದ್ದ ಬಸ್, ಎಕ್ಕಂಬಿ ಮತ್ತು ಮಾವಿನಕೊಪ್ಪ ರಸ್ತೆ ಮದ್ಯೆ ರಸ್ತೆ ಬದಿಯ ಗಟಾರಕ್ಕೆ ಇಳಿದಿದೆ. ಪರಿಣಾಮ ಬಸ್ ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್ಸಿನ ಸೆಂಟ್ರಿಂಗ್ ಬೊಲ್ಟ್ ಕಟ್ಟಾಗಿ ಘಟನೆ ನಡೆದಿದೆ ಅಂತಾ ಹೇಳಲಾಗ್ತಿದೆ. ಪ್ರಯಾಣಿಕರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಗಿದೆ.

error: Content is protected !!