Mundgod Rain Warning Issued:
ಮುಂಡಗೋಡ ತಾಲೂಕಿನಲ್ಲಿ ಅಧಿಕ ಮಳೆ ಆಗುತ್ತಿದೆ. ಹಳ್ಳ-ಕೊಳ್ಳಗಳು, ಕೆರೆಗಳು, ಜಲಾಶಯಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ, ಸಾರ್ವಜನಿಕರು ನೀರಿನ ಮೂಲಗಳ ಸಮೀಪ ಹೋಗಬಾರದು. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಅನಾಹುತ ಆಗುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಅಂತಾ ಮುಂಡಗೋಡ ತಹಶೀಲ್ದಾರ್ ಕಾರ್ಯಾಲಯದಿಂದ ಪ್ರಕಟಣೆ‌ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಇನ್ನು, ಮಳೆಗೆ ಸಂಬಂಧಿತ ಯಾವುದೇ ಸಮಸ್ಯೆ, ಅವಘಡಗಳ ಪರಿಹಾರಕ್ಕೆ ಮುಂಡಗೋಡ ತಹಶೀಲ್ದಾರ್ ಕಾರ್ಯಾಲಯದಲ್ಲಿ 24×7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಅದರ ದೂರವಾಣಿ ಸಂಖ್ಯೆ: 08301-222122 ಆಗಿರುತ್ತದೆ. ಸದರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ಪ್ರಕೃತಿ ವಿಕೋಪ ಸಂಬಂಧಿತ ಸಮಸ್ಯೆಗಳನ್ನು,ದೂರುಗಳನ್ನು ಗಮನಕ್ಕೆ ತರಬಹುದಾಗಿದೆ. ತಮ್ಮ ಸಮಸ್ಯೆ, ದೂರುಗಳಿಗೆ ತಕ್ಷಣ ಸ್ಪಂದಿಸಲಾಗುವುದು ಅಂತಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!