Lokayukta Trap in Belgaum: ಬೆಳಗಾವಿಯಲ್ಲಿ ಭ್ರಷ್ಟರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ, ಕಚೇರಿ ಸೂಪರಡೆಂಟ್ ಅಬ್ದುಲ್ ವಲಿ, ಕಂಪ್ಯೂಟರ್ ಆಪರೇಟರ್ ಸೌಮ್ಯಾ ಬಡಗೇರನ್ನು ಬಂಧಿಸಲಾಗಿದೆ.
ಅಂಗನವಾಡಿ ಸಹಾಯಕಿಯಿಂದ ವರ್ಗಾವಣೆಗಾಗಿ, 30 ಸಾವಿರ ಹಣದ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ, ಹುಕ್ಕೇರಿ ತಾಲೂಕಿನ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬಳೆಯಿಂದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.
ಕೊನೆಗೂ ಈಡೇರಲೇ ಇಲ್ಲ RCB ಫ್ಯಾನ್ಸ್ಗಳ ಆ ಕನಸು; ಎಲ್ಲೆಡೆ ಬೇಸರ..!
ಹೀಗಾಗಿ, 15 ಸಾವಿರ ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ಧರ್ಮಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದ್ದು,
ಲೋಕಾಯುಕ್ತ ದಾಳಿ ಮಾಡ್ತಿದ್ದಂತೆ ಕಂಪ್ಯೂಟರ್ ಆಪರೇಟರ್ ಸೌಮ್ಯಾಗೆ ಅಸ್ವಸ್ಥತೆ ಕಂಡುಬಂದಿದೆ. ಈ ಕಾರಣಕ್ಕಾಗಿ ತಕ್ಷಣವೇ ಕಚೇರಿಗೆ ವೈದ್ಯರನ್ನ ಕರೆಸಿ ಅಧಿಕಾರಿಗಳು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ವಿಚಾರಣೆ ಮುಂದೊರೆಸಿದ್ದಾರೆ.