RCB Fans Deram Shattered: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಋತುವಿನಲ್ಲಿ ಈ ವರೆಗೂ ಭರ್ಜರಿ ಪ್ರದರ್ಶನ ನೀಡಿದ್ದು ಪ್ಲೇಆಫ್ಗೆ ಎಂಟ್ರಿ ಪಡೆದುಕೊಂಡಿದೆ. ಒಂದೆಡೆ ಆರ್ಸಿಬಿ ಪ್ಲೇಆಫ್ ತಲುಪಿರುವ ಖುಷಿ ಅಭಿಮಾನಿಗಳಲ್ಲಿ ಮನೆ ಮಾಡಿದ್ದರೇ ಮತ್ತೊಂದೆಡೆ ದೊಡ್ಡ ಬೇಸರವು ಕಾಣಿಸಿಕೊಂಡಿದೆ.
ಸದ್ಯ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿರುವ ಕಾರಣ ಮೇ.23 ರಂದು ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಬೆಂಗಳೂರಿನಿಂದ ಲಖನೌಗೆ ಸ್ಥಳಾಂತರ ಮಾಡಲಾಗಿದೆ. ಇದರ ಬೆನ್ನಲ್ಲೇ ಆರ್ಸಿಬಿ ಫ್ಯಾನ್ಸ್ ಕಂಡಿದ್ದ ಆ ಕನಸು ಕೂಡ ಭಗ್ನ ಗೊಂಡಿದೆ.
ಹೌದು, ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಟೆಸ್ಟ್ಗೆ ನಿವೃತ್ತಿ ಘೋಷಣೆ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ ಆರ್ಸಿಬಿ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಲು ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯಕ್ಕೆ ಬಿಳಿ ಜೆರ್ಸಿ ಧರಿಸಿ ಮೈದಾನಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು.
ಪಾಕಿಸ್ತಾನಿಯ ಜೊತೆ ನನ್ನ ಮದುವೆ ಮಾಡಿಸಿ, ಪಾಕ್ ಅಧಕಾರಿಯೊಂದಿಗೆ ಜ್ಯೋತಿ ಮಲ್ಹೊತ್ರಾ ವಾಟ್ಸಾಪ್ ಚಾಟಿಂಗ್..!
ಅದರಂತೆ ಮೇ.17ಕ್ಕೆ ಫ್ಯಾನ್ಸ್ ಬಿಳಿ ಜೆರ್ಸಿ ಧರಿಸಿ ಮೈದಾನಕ್ಕೆ ಬಂದಿದ್ದರು. ಆದರೇ ಅಂದು ಮಳೆರಾಯ ಪಂದ್ಯಕ್ಕೆ ಅಡ್ಡಿ ಪಡ್ಡಿಪಡಿಸಿದ್ದ. ಇದರಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಿ ಪಂದ್ಯ ರದ್ದು ಗೊಳಿಸಲಾಯಿತು. ಇದರ ಬೆನ್ನಲ್ಲೆ ಆರ್ಸಿಬಿಗರು ಮೇ.23ಕ್ಕೆ ಅಂದ್ರೆ ನಾಳೆ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಬಿಳಿ ಜೆರ್ಸಿ ಧರಿಸಿ ಬರುವುದಕ್ಕೆ ಮುಂದಾಗಿದ್ದರು.
ಆದರೆ ಬೆಂಗಳೂರಿನಲ್ಲಿ ಮಳೆಯ ಮುಂದುವರೆದ ಕಾರಣ ಪಂದ್ಯವನ್ನು ಲಖನೌಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ಫ್ಯಾನ್ಸ್ಗಳಿಗೆ ಭಾರೀ ನಿರಾಸೆ ಮೂಡಿದೆ. ತಾವು ಕಂಡಿದ್ದ ಕನಸಿಗೆ ವರುಣ ತಣ್ಣೀರೆರೆಚಿದ್ದಾನೆ ಎಂದು ಬೇಸರಗೊಂಡಿದ್ದಾರೆ.
ಪ್ಲೇಆಫ್ ಗೆ RCB ಎಂಟ್ರಿ..!
ಈ ಋತುವಿನಲ್ಲಿ ಆರ್ಸಿಬಿ ಭರ್ಜರಿ ಪ್ರದರ್ಶನ ನೀಡಿ ಈಗಾಗಲೇ ಪ್ಲೇಆಫ್ಗೆ ತಲುಪಿದೆ. ಈವರೆಗೂ ಆಡಿರುವ 12 ಪಂದ್ಯಗಳ ಪೈಕಿ 8 ರಲ್ಲಿ ಗೆಲುವು ಸಾಧಿಸಿದೆ. ಮೂರಲ್ಲಿ ಸೋಲನ್ನು ಕಂಡಿದೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಸದ್ಯ ಆರ್ಸಿಬಿ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೀಗ ಉಳಿದಿರುವ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಗ್ರ ಸ್ಥಾನದಲ್ಲಿ ಉಳಿಯಲು ಸಿದ್ಧತೆ ನಡೆಸಿದೆ. ಆರ್ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ.