Poor CIBIL Score: ಅನೇಕ ಬ್ಯಾಂಕುಗಳು ಸುಲಭದಲ್ಲಿ ವೈಯಕ್ತಿಕ ಸಾಲ ನೀಡುತ್ತದೆ. ಆದರೆ, ಸಾಲ ನೀಡುವಾಗ CIBIL ಸ್ಕೋರ್ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ಸುಲಭವಾಗಿ ಹಾಗೂ ಕಡಿಮೆ ಬಡ್ಡಿಗೆ ಸಾಲ ದೊರೆಯುತ್ತದೆ. ಆದರೆ, ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಚಿಂತಿಸಬೇಕಿಲ್ಲ. ಕಡಿಮೆ CIBIL ಸ್ಕೋರ್‌ನೊಂದಿಗೆ ₹3 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು.
ಯಾವುದೇ ತುರ್ತು ಹಣಕಾಸಿನ ಅಗತ್ಯಗಳನ್ನು ಪೂರೈಕೊಳ್ಳಲು ಬಹುತೇಕರು ವೈಯಕ್ತಿಕ ಸಾಲದ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಬ್ಯಾಂಕುಗಳು ಸಾಲ ನೀಡುವಾಗ ಸಾಲಗಾರನ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡುತ್ತವೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಸಾಲ ನೀಡಲು ತುದಿಗಾಲಲ್ಲಿ ನಿಂತಿರುತ್ತವೆ. ಒಂದು ವೇಳೆ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ, ಸಾಲ ಪಡೆಯುವುದು ಸ್ವಲ್ಪ ಕಷ್ಟವಾಗಬಹುದು.
ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಬಂಧನ..!
Poor CIBIL Score
ಸಾಮಾನ್ಯವಾಗಿ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. 500ರ ಆಸುಪಾಸಿನಲ್ಲಿದ್ದರೆ, ಕಳಪೆ ಸಿಬಿಲ್ ಸ್ಕೋರ್ ಎನ್ನಬಹುದು. ಕಡಿಮೆ ಸಿಬಿಲ್ ಸ್ಕೋರ್ ಇದ್ದರೆ ಸಾಲ ಪಡೆಯುವುದು ಕಷ್ಟವಾಗುತ್ತದೆ. ನಿಮ್ಮ ಆರ್ಥಿಕ ಶಿಸ್ತನ್ನು ಪ್ರತಿಬಿಂಬಿಸುವ CIBIL ಸ್ಕೋರ್ ಅನ್ನು ಸಾಲದ ಅರ್ಜಿ ಸಲ್ಲಿಸುವಾಗ ಬಹಳ ಮುಖ್ಯವಾಗಿದೆ ಪರಿಶೀಲಿಸಲಾಗುತ್ತದೆ.
ನಿಮ್ಮ CIBIL ಸ್ಕೋರ್ 510 ಇದ್ದರೆ, ಚಿಂತಿಸಬೇಕಿಲ್ಲ. ಕೆಲವು ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ₹3 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಸಾಮಾನ್ಯವಾಗಿ, CIBIL ಸ್ಕೋರ್ 600 ಕ್ಕಿಂತ ಕಡಿಮೆ ಇದ್ದರೆ ಅದನ್ನು ತುಂಬಾ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಸ್ಕೋರ್ 510 ಆಗಿದ್ದರೆ, ನೀವು ಹಿಂದಿನ ಸಾಲಗಳಿಗೆ ತಡವಾಗಿ ಪಾವತಿ ಮಾಡಿರಬಹುದು ಅಥವಾ ನಿಮ್ಮ ಕ್ರೆಡಿಟ್ ಮಿತಿಯನ್ನು ಮೀರಿರಬಹುದು. ಹೀಗಾಗಿ ಕಳಪೆ ಸಿಬಿಲ್ ಸ್ಕೋರ್ ನಿಮ್ಮ ಹಣಕಾಸು ಯೋಜನೆ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಹೆಚ್ಚಿನ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ವೈಯಕ್ತಿಕ ಸಾಲಗಳಿಗೆ CIBIL ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಹೀಗಾಗಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉತ್ತಮವಾಗಿ ಇರಿಸಿಕೊಳ್ಳು ಆದ್ಯತೆ ನೀಡಬೇಕು.
ಸತತ 2ನೇ ದಿನವೂ ಚಿನ್ನದ ಬೆಲೆ ಏರಿಕೆ, ಬೆಳ್ಳಿ ₹4000 ಹೆಚ್ಚಳ, ಅಷ್ಟಕ್ಕೂ ಇವತ್ತಿನ ಚಿನ್ನದ ಬೆಲೆ ಎಷ್ಟು..?
“ನಿಮ್ಮ CIBIL ಸ್ಕೋರ್ 510 ಕ್ಕಿಂತ ಕಡಿಮೆ ಇದ್ದರೆ, ಬ್ಯಾಂಕ್‌ಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (NBFC) ಗಳಿಂದ ₹3 ಲಕ್ಷವರೆಗೆ ವೈಯಕ್ತಿಕ ಸಾಲ ಪಡೆಯುವುದು ಕಷ್ಟವಾಗಬಹುದು. ಏಕೆಂದರೆ, ಕಡಿಮೆ ಸಿಬಿಲ್ ಸ್ಕೋರ್ ನಿಮ್ಮ ಹಿಂದಿನ ಕ್ರೆಡಿಟ್ ಹಿಸ್ಟರಿಯಲ್ಲಿನ ಸಮಸ್ಯೆಗಳನ್ನು ಸೂಚಿಸುತ್ತದೆ. ಆದರೆ, ಹೆಚ್ಚಿನ ಬಡ್ಡಿ ಪಾವತಿಸುವ ಮೂಲಕ ಸಾಲ ಪಡೆಯುವ ಸಾಧ್ಯತೆಯಿದೆ.”
ಮುಂಡಗೋಡ ತಾಲೂಕಿನಲ್ಲಿ ಮಳೆಯ ಅರ್ಭಟ, ಇದು, ತಹಶೀಲ್ದಾರ ಕಚೇರಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆಯ ಪ್ರಕಟಣೆ..!
ಕಡಿಮೆ ಸಿಬಿಲ್ ಸ್ಕೋರ್‌ನೊಂದಿಗೆ ಸಾಲ ಅನುಮೋದನೆಗೆ ಪ್ರಮುಖ ಅಂಶಗಳು, ಸಾಲದಾತರು ನಿಮ್ಮ CIBIL ಸ್ಕೋರ್ ಹೊರತುಪಡಿಸಿ ಇತರ ವಿಷಯಗಳನ್ನು ನೋಡುತ್ತಾರೆ.
ಬಿರುಗಾಳಿ-ಆಲಿಕಲ್ಲು ಮಳೆಯ ಹೊಡೆತಕ್ಕೆ ಇಂಡಿಗೋ ವಿಮಾನಕ್ಕೆ ಹಾನಿ ; ಕಿರುಚಿಕೊಂಡ ಪ್ರಯಾಣಿಕರು..!
510 ಅಂಕಗಳು ಕಡಿಮೆ ಇರುವುದರಿಂದ, ಸಾಮಾನ್ಯವಾಗಿ ಸಾಲವನ್ನು ಅನುಮೋದಿಸುವುದು ಕಷ್ಟ.
ನೀವು ಸ್ಥಿರವಾದ, ನಿಯಮಿತ ಆದಾಯ ಹೊಂದಿದ್ದರೆ, ಸಾಲ ಮರುಪಾವತಿಸಲು ಸಾಧ್ಯವಾಗುತ್ತದೆ ಎಂದು ಸಾಲದಾತರು ವಿಶ್ವಾಸ ಬರುವಂತೆ ಮಾಡಿದರೆ ಸಾಲ ಪಡೆಯಬಹುದು. ಒಂದೇ ಸ್ಥಳದಲ್ಲಿ ದೀರ್ಘಕಾಲ ಸ್ಥಿರವಾಗಿ ಕೆಲಸ ಮಾಡುವುದು ನಿಮ್ಮ ಕ್ರೆಡಿಟ್ ಪ್ರೊಫೈಲ್‌ಗೆ ಒಳ್ಳೆಯದು. ನಿಮ್ಮ ಸಾಲಗಳು ನಿಮ್ಮ ಆದಾಯಕ್ಕೆ ಹೋಲಿಸಿದರೆ ತುಂಬಾ ಹೆಚ್ಚಿದ್ದರೆ, ಸಾಲದಾತರು ನಿಮಗೆ ಸಾಲ ನೀಡಲು ಹಿಂಜರಿಯುತ್ತಾರೆ.