Gold Price Today; ಆಭರಣ ಪ್ರಿಯರಿಗೆ ಮತ್ತೊಮ್ಮೆ ಬಿಗ್ ಶಾಕ್ ತಟ್ಟಿದೆ. ಇತ್ತೀಚೆಗೆ ಸ್ವಲ್ಪ ಇಳಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಸತತ 2ನೇ ದಿನವೂ ಚಿನ್ನದ ಬೆಲೆ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಕೂಡ ಎರಡೇ ದಿನದಲ್ಲಿ ₹4000 ಏರಿಕೆಯಾಗಿದೆ.

ಪ್ರಸ್ತುತ ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಳಿತದಿಂದ ಕೂಡಿತ್ತು. ಒಂದು ಹಂತದಲ್ಲಿ ಇದು ತನ್ನ ಗರಿಷ್ಠ ಮಟ್ಟದಿಂದ ₹7000 ಇಳಿಕೆ ಕಂಡಿತ್ತು. ಆದರೆ, ಕಳೆದ ಎರಡು ದಿನಗಳಿಂದ ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು, ಮತ್ತೆ ಸಾರ್ವಕಾಲಿಕ ಗರಿಷ್ಠ ಮಟ್ಟ ಸಮೀಪಿಸಿದೆ.

ಕೊಲೆ ಮಾಡಿ ಶವಗಳನ್ನು ಮೊಸಳೆಗೆ ಹಾಕುತ್ತಿದ್ದ ಸರಣಿ ಹಂತಕ ವೈದ್ಯನ ಬಂಧನ ; ಈತನ ಮೇಲಿದೆ 27 ಕೊಲೆ ಪ್ರಕರಣ..!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇನ್ನೂ ಮುಂದುವರಿದಿದೆ. ಡಾಲರ್ ಮೌಲ್ಯ ಕಡಿಮೆಯಾಗುತ್ತಿದೆ, ರಷ್ಯಾ-ಉಕ್ರೇನ್ ಉದ್ವಿಗ್ನತೆ ಹೆಚ್ಚುತ್ತಿದೆ.ಇದಷ್ಟೇ ಅಲ್ಲದೆ ಡೊನಾಲ್ಡ್ ಟ್ರಂಪ್ ಅವರ ಪ್ರತೀಕಾರದ ಸುಂಕ ಭೀತಿಯು ಬೂದಿ ಮುಚ್ಚಿದ ಕೆಂಡದಂತಿದೆ. ಈ ಎಲ್ಲ ಕಾರಣಗಳಿಂದ ಬಂಗಾರದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಕಳೆದ ಎರಡು ದಿನಗಳಿಂದ ಗೋಲ್ಡ್‌ ರೇಟ್‌ ಸತತವಾಗಿ ಏರಿಕೆಯಾಗುತ್ತಿದೆ.

ಮುಂಡಗೋಡ ತಾಲೂಕಿನಲ್ಲಿ ಮಳೆಯ ಅರ್ಭಟ, ಇದು, ತಹಶೀಲ್ದಾರ ಕಚೇರಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆಯ ಪ್ರಕಟಣೆ..!

ಬೆಂಗಳೂರಲ್ಲಿ ಚಿನ್ನದ ಬೆಲೆ..!
ಬೆಂಗಳೂರಲ್ಲಿ ಸತತ 2ನೇ ದಿನವೂ ಚಿನ್ನದ ಬೆಲೆ ಏರಿಕೆಯಾಗಿದೆ. ನಿನ್ನೆ ಬುಧವಾರ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹2400 ಏರಿಕೆಯಾಗಿತ್ತು. ಇಂದು ಗುರುವಾರ ಕೂಡ ₹450 ಏರಿಕೆಯಾಗಿದ್ದು, ₹89,750ರಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆಯಲ್ಲಿ ಕೂಡ ನಿನ್ನೆ ಬುಧವಾರ ಪ್ರತಿ 10 ಗ್ರಾಂಗೆ ₹2400 ಏರಿಕೆಯಾಗಿತ್ತು. ಇಂದು ಗುರುವಾರ ಕೂಡ ₹490 ಏರಿಕೆಯಾಗಿದ್ದು, ₹97,910ರಲ್ಲಿ ವಹಿವಾಟು ನಡೆಸುತ್ತಿದೆ.

ಬಿರುಗಾಳಿ-ಆಲಿಕಲ್ಲು ಮಳೆಯ ಹೊಡೆತಕ್ಕೆ ಇಂಡಿಗೋ ವಿಮಾನಕ್ಕೆ ಹಾನಿ ; ಕಿರುಚಿಕೊಂಡ ಪ್ರಯಾಣಿಕರು..!

ಬೆಳ್ಳಿ ಬೆಲೆ ಎರಡೇ ದಿನಕ್ಕೆ ₹4000 ಏರಿಕೆ
ಚಿನ್ನದ ಬೆಲೆಯ ಜೊತೆಗೆ, ಬೆಳ್ಳಿಯ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಬೆಂಗಳೂರಲ್ಲಿ ನಿನ್ನೆ ಬುಧವಾರ ₹1 ಕೆಜಿ ಬೆಳ್ಳಿ ಬೆಲೆ ₹3000 ಏರಿಕೆಯಾಗಿತ್ತು. ಇಂದು ಗುರುವಾರ ಕೂಡ ₹1000 ಏರಿಕೆಯಾಗಿ 1.01 ಲಕ್ಷ ತಲುಪಿದೆ. ಹೈದರಾಬಾದ್‌ನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ₹1.11 ಲಕ್ಷ ತಲುಪಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಆಯಾ ರಾಜ್ಯಗಳ ತೆರಿಗೆ ದರಗಳನ್ನು ಆಧರಿಸಿ ಬದಲಾಗುತ್ತವೆ.

error: Content is protected !!