ತಹಶೀಲ್ದಾರ್ ಶ್ರೀಧರ್ ಮುಂದಲಮನಿ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆಗಳು..! ಅಂದಹಾಗೆ, ಕಾರವಾರದಲ್ಲಿ ಏನಾಯ್ತು ಗೊತ್ತಾ..!

ತಹಶೀಲ್ದಾರ್ ಶ್ರೀಧರ್ ಮುಂದಲಮನಿ ವಿರುದ್ಧ ಸಿಡಿದೆದ್ದ ದಲಿತ ಸಂಘಟನೆಗಳು..! ಅಂದಹಾಗೆ, ಕಾರವಾರದಲ್ಲಿ ಏನಾಯ್ತು ಗೊತ್ತಾ..!

ಕಾರವಾರ: ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಹುದ್ದೆಯಲ್ಲಿರೋ ಆರೋಪ ಹೊತ್ತಿರೊ, ಮುಂಡಗೋಡ ತಹಶೀಲ್ದಾರ್ ಶ್ರೀಧರ ಮುಂದಲಮನಿ ವಿರುದ್ಧ ತನಿಖೆ ನಡೆಸಿ, ಆರೋಪದಿಂದ ಮುಕ್ತವಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯದಂತೆ ಆದೇಶಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ಅವರು ಕಾರವಾರದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತದ ಮೂಲಕ ಪತ್ರ..! ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿರುವ ಅವರು, ಮುಂಡಗೋಡ ತಾಲೂಕು ತಹಶೀಲ್ದಾರ ಶ್ರೀಧರ್ ಮುಂದಲಮನಿಯವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ದೆ ಈ ಕುರಿತು ಈಗಾಗಲೇ ಅವ್ರನ್ನ ಬಂಧಿಸಲು ಪೊಲೀಸರು ಬಂದಿದ್ರು. ಆದ್ರೆ ಆ ಹೊತ್ತಲ್ಲಿ ಮನೆಯಿಂದ ಹೊರಗೆ ಬರದೆ, ಒಳಗೇ ಕುಳಿತು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ರು. ಹೀಗಾಗಿ, ಬಂಧನದಿಂದ ಬಚಾವ್ ಆಗಿದ್ದಾರೆ. ಕಳೆದ 3 ವರ್ಷಗಳಿಂದ ಮುಂಡಗೋಡ ತಾಲೂಕಾ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರೊ ಅವರ ಮೇಲೆ ಫೆ.12ರಂದು ಯಲಬುರ್ಗಾ ಪೊಲೀಸ್...

ಅಸ್ಪಷ್ಟವಾಯ್ತು ಅಗಡಿ ಮೈಲಾರಲಿಂಗ ಕಾರಣೀಕ..! ಅಷ್ಟಕ್ಕೂ ಏನದು..?

ಅಸ್ಪಷ್ಟವಾಯ್ತು ಅಗಡಿ ಮೈಲಾರಲಿಂಗ ಕಾರಣೀಕ..! ಅಷ್ಟಕ್ಕೂ ಏನದು..?

ಮುಂಡಗೋಡ: ತಾಲೂಕಿನ ಅಗಡಿ ಶ್ರೀ ಮೈಲಾರಲಿಂಗ ಸ್ವಾಮಿಯ ಎಂಟನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಕಾರಣೀಕ ಉತ್ಸವ ನಡೆಯಿತು‌. ಆದ್ರೆ ಈ ವರ್ಷದ ಕಾರಣೀಕ ಅಸ್ಪಷ್ಟವಾಗಿ ಕೇಳಿತು. ಕಾರಣೀಕದ ನುಡಿಗಳು ಯಾರಿಗೂ ಸ್ಪಷ್ಟವಾಗಿ ಕೇಳಲೇ ಇಲ್ಲದಿರುವುದು ಭಕ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ತಂಪಾಯಿತಲೇ ಪರಾಕ್..? “ರಾಜ್ಯ ತಂಪಾಯಿತಲೇ ಪರಾಕ್” ಇದು ಅಗಡಿಯಲ್ಲಿ ಇಂದು ಅಸ್ಪಷ್ಟವಾಗಿ ಕೇಳಿ ಬಂದ ಕಾರಣೀಕ ನುಡಿ. ಒಂದುವೇಳೆ ಇದೇ ಮೈಲಾರಲಿಂಗ ಸ್ವಾಮಿಯ ಕಾರಣೀಕವಾಗಿದ್ದರೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಅಲ್ಲದೆ, ರಾಜ್ಯದಲ್ಲಿ ಶಾಂತಿ ನೆಲಸಿ ತಂಪಾದ ವಾತಾವರಣ ನಿರ್ಮಾಣವಾಗಲಿದೆ ಅನ್ನೋದು ತಾತ್ಪರ್ಯ‌. ಇದೊಂದು ನಂಬಿಕೆ‌‌..! ಅಂದಹಾಗೆ, ಸಾವಿರಾರು ಜನರ ನಡುವೆ ಬಿಲ್ಲನ್ನೇರಿ ಆಕಾಶದತ್ತ ದೃಷ್ಟಿ ನೆಟ್ಟು, ಕಾರಣೀಕ ನುಡಿಯುವ ವೃತಾಧಾರಿ ಗೊರವಪ್ಪ, ಕಾರಣೀಕ ನುಡಿದ ನಂತರ ಬಿಲ್ಲಿನಿಂದಲೇ ಕೆಳಗಡೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಜಾರಿ ಬೀಳುತ್ತಾರೆ. ಅಲ್ಲದೇ ಮೈಲಾರಲಿಂಗಸ್ವಾಮಿಯ ಕಾರಣೀಕ ನುಡಿ ಕೇಳಲು ಭಕ್ತರು ಕಾತರಿಸುತ್ತಾರೆ. ಯಾಕಂದ್ರೆ, ರೈತರಿಗೆ ಮೈಲಾರಲಿಂಗನ ಕಾರಣೀಕ ನುಡಿಗಳು ಪ್ರಸಕ್ತ ವರ್ಷದ ಕೃಷಿಯ ಆಗು...

ಮುಂಡಗೋಡ ತಾಲೂಕಾಡಳಿತ, ಅಧಿಕಾರಿಗಳ ವಿರುದ್ಧ ರಿಂಚನ್ ಲಾಮೊ ಭಾರೀ ಆಕ್ರೋಶ..!

ಮುಂಡಗೋಡ ತಾಲೂಕಾಡಳಿತ, ಅಧಿಕಾರಿಗಳ ವಿರುದ್ಧ ರಿಂಚನ್ ಲಾಮೊ ಭಾರೀ ಆಕ್ರೋಶ..!

ಮುಂಡಗೋಡ: ಟಿಬೇಟಿಯನ್ ಕಾಲೋನಿಗಳ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ಇಲ್ಲಿನ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಗಳು ಕಾಳಜಿ ತೋರಿಸಿಲ್ಲ ಅಂತಾ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ರಿಂಚನ್ ಲಾಮೊ ಅಸಮಾಧಾನ ಹೊರಹಾಕಿದ್ದಾರೆ.. ಮೂರು ದಿನಗಳ‌ ಕಾಲ ಮುಂಡಗೋಡ ಟಿಬೇಟಿಯನ್ ಕಾಲೋನಿಗಳ ಪ್ರವಾಸದಲ್ಲಿರೋ ರಿಂಚನ್ ಲಾಮೊ, ಟಿಬೇಟಿಯನ ಕ್ಯಾಂಪ್ ನಂಬರ್ 6 ರ ಸೈನ್ಸ್ ಭವನದಲ್ಲಿ ನಡೆದ, ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ರು‌. ಬೌದ್ಧ ಸನ್ಯಾಸಿಗಳು ಅಹಿಂಸಾವಾದಿಗಳು, ಯಾರ ಹತ್ತಿರವೂ ನಿರ್ಭಿಡೆಯಿಂದ ಮಾತನಾಡುವವರಲ್ಲ. ಇವ್ರಿಗೆ ಸಿಗಬೇಕಿದ್ದ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆಯಲೂ ಸಹಿತ ಇವ್ರು ಹಿಂಜರಿಯುತ್ತಾರೆ. ಹೀಗಾಗಿ, ಇಲ್ಲಿನ ಸ್ಥಳೀಯ ಆಡಳಿತದ ಅಧಿಕಾರಿಗಳು ಗಮನಿಸಬೇಕಾಗಿದೆ‌ ಅಂತಾ ಎಚ್ಚರಿಸಿದ್ರು‌. ಈ ಬಗ್ಗೆ ಕರ್ನಾಟಕ ಸರ್ಕಾರದ ಜೊತೆ ಮಾತುಕತೆ ಮಾಡುವುದಾಗಿ ತಿಳಿಸಿದ್ರು‌. ಸಭೆ..! ಇನ್ನು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ, ಶ್ರೀಮತಿ ರಿಂಚನ್ ಲಾಮೊ, ಇಲ್ಲಿನ ಡ್ರೆಪುಂಗ್ ಮಾನಸ್ಟ್ರಿಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳ ಕುರಿತು ಚರ್ಚೆಗೆ ಸಂಬಂಧಿಸಿದಂತೆ...

ಚಿಗಳ್ಳಿ ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಭಾರತಿ ನಿಂಬಾಯಿ ನೂತನ ಅಧ್ಯಕ್ಷೆ..!

ಚಿಗಳ್ಳಿ ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಭಾರತಿ ನಿಂಬಾಯಿ ನೂತನ ಅಧ್ಯಕ್ಷೆ..!

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಭಾರತಿ ನಿಂಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ, ಆಂತರಿಕ ಒಪ್ಪಂದದಂತೆ ಅಧ್ಯಕ್ಷರ ಬದಲಾವಣೆ ಆಗಿದೆ. ಕೈ ಬಲ..! ಒಟ್ಟೂ 13 ಸದಸ್ಯ ಬಲದ ಚಿಗಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಭರ್ಜರಿ ಜಯಗಳಿಸಿ ಬಿಜೆಪಿ ಬೆಂಬಲಿತರಿಗೆ ಭಾರೀ ನಿರಾಸೆ‌ ಮೂಡಿಸಿದ್ದರು. ಆಡಳಿತಾರೂಢ ಬಿಜೆಪಿ ಬೆಂಬಲಿತರು ಕೇವಲ 2 ಸ್ಥಾನಕ್ಕಷ್ಟೇ ತೃಪ್ತಿ ಪಟ್ಟು ಕೈ ಚೆಲ್ಲಿದ್ದರು. ಮೂವರು ಪಕ್ಷೇತರರು ಗೆದ್ದು ಬಂದಿದ್ದರು. ಹೀಗಾಗಿ, ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಕೈ ಪಡೆಯ ಬೆಂಬಲಿತರಿಗೆ ಅನಾಯಾಸವಾಗಿ ಆಡಳಿತದ ಚುಕ್ಕಾಣಿ ಸಿಕ್ಕಿತ್ತು. 15-15 ತಿಂಗಳು..! ಅವತ್ತು, ಬಹುತೇಕ ಅವಿರೋಧವಾಗಿಯೇ ನೂತನ ಅಧ್ಯಕ್ಷರನ್ನಾಗಿ ತುಳಸವ್ವ ರಾಣೋಜಿಯವರನ್ನು 15 ತಿಂಗಳುಗಳ ಅವಧಿಗೆ ಆಯ್ಕೆ ಮಾಡಲಾಗಿತ್ತು. ಆ ವೇಳೆ ತೀವ್ರ ಪೈಪೋಟಿ ನಡೆಸಿದ್ದ ಭಾರತಿ ನಿಂಬಾಯಿಯವರಿಗೆ ಮುಂದಿನ ಅವಧಿಗೆ ಅಧ್ಯಕ್ಷೆಯನ್ನಾಗಿಸೋ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ, 15 ತಿಂಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ...

ಉದ್ಯಮಿ ಆರ್.ಎನ್. ನಾಯ್ಕ್ ಹತ್ಯೆ ಕೇಸ್, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿಗಳು..!

ಉದ್ಯಮಿ ಆರ್.ಎನ್. ನಾಯ್ಕ್ ಹತ್ಯೆ ಕೇಸ್, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿಗಳು..!

ಅಂಕೋಲಾ: ಉದ್ಯಮಿ ಆರ್.ಎ‌ನ್.ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ ಅಂತಾ ಸಾಬೀತಾಗಿದೆ. ಬನ್ನಂಜೆ ರಾಜಾ ವಿರುದ್ಧದ ಆರೋಪಗಳೆಲ್ಲವೂ ಸಾಬೀತಾಗಿದ್ಧು, ಬೆಳಗಾವಿ ಕೋಕಾ ನ್ಯಾಯಾಲಯ ನ್ಯಾಯಾಧೀಶ ಸಿ.ಎಂ.ಜೋಶಿ ತೀರ್ಪು ನೀಡಿದ್ದಾರೆ. ಎಪ್ರಿಲ್ 4 ಶಿಕ್ಷೆ ತೀರ್ಪು..! ಇನ್ನು, ಏಪ್ರಿಲ್ 4ರವರೆಗೆ ಶಿಕ್ಷೆಯ ತೀರ್ಪು ಕಾಯ್ದಿರಿಸಿದ ಬೆಳಗಾವಿ ಕೋಕಾ ನ್ಯಾಯಾಲಯದ ನ್ಯಾಯಾಧೀಶ ಸಿ‌‌‌.ಎಂ.ಜೋಶಿ, ಪ್ರಕರಣದ 6, 11 ಹಾಗೂ 16ನೇ ಆರೋಪಿಗಳು ನಿರ್ದೋಷಿ ಎಂದು ತೀರ್ಪು ನೀಡಿದೆ. ಆರನೇ ಆರೋಪಿ ಕೇರಳದ ರಬ್ದಿನ್ ಫಿಚೈ, 11 ನೇ ಆರೋಪಿ ಬೆಂಗಳೂರಿನ ಮಹ್ಮದ್ ಶಾಬಂದರಿ, 16ನೇ ಆರೋಪಿ ಉತ್ತರ ಕನ್ನಡದ ಆನಂದ ನಾಯಕ್ ದೋಷಮುಕ್ತರಾಗಿದ್ದಾರೆ. ಉಳಿದಂತೆ 9 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದ್ದು, ಎರಡನೇ ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಮೂರನೇ ಆರೋಪಿ ಬೆಂಗಳೂರಿನ ಅಭಿ ಭಂಡಗಾರ, ನಾಲ್ಕನೇ ಆರೋಪಿ ಉಡುಪಿಯ ಗಣೇಶ ಭಜಂತ್ರಿ, ಐದನೇ ಆರೋಪಿ ಕೇರಳದ ಕೆ.ಎಂ ಇಸ್ಮಾಯಿಲ್, ಏಳನೇ...

ಟಿಬೇಟಿಯನ್ ಕಾಲೋನಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ರಿಂಚನ್ ಲಾಮೊ ಆಗಮನ..!

ಟಿಬೇಟಿಯನ್ ಕಾಲೋನಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ರಿಂಚನ್ ಲಾಮೊ ಆಗಮನ..!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗೆ ಇಂದು ಭಾರತ ಸರ್ಕಾರದ ರಾಷ್ಟ್ರೀಯ ಅಲ್ಪಸಂಖ್ಯಾತ ರ ಆಯೋಗದ ಸದಸ್ಯೆ, ಶ್ರೀಮತಿ ರಿಂಚನ್ ಲಾಮೊ ಭೇಟಿ ನೀಡಿದ್ಧಾರೆ. ಎರಡು ವಾರಗಳ ಕಾಲ ಕರ್ನಾಟಕದ ಪ್ರವಾಸದಲ್ಲಿರೋ ರಿಂಚನ್ ಲಾಮೊ ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಂದಹಾಗೆ, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕವಾಗಿ ಆಗಮಿಸಿದ ರಿಂಚನ್ ಲಾಮೊರನ್ನು ಮುಂಡಗೋಡ ತಾಲೂಕಾಡಳಿತದಿಂದ ತಾಲೂಕಿನ ಗಡಿ ಭಾಗ ವಡಗಟ್ಟಾದ ಚೆಕ್ ಪೊಸ್ಟ್ ಬಳಿ ಸ್ವಾಗತಿಸಲಾಯಿತು. ಈ ವೇಳೆ ಮುಂಡಗೋಡ ಉಪತಹಶೀಲ್ದಾರ್ ಸೇರಿ ಹಲವರು ಸ್ವಾಗತಿಸಿಕೊಂಡ್ರು. ಇನ್ನು ಎಪ್ರಿಲ್ 1 ರ ವರೆಗೂ ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಪ್ರವಾಸ ಕೈಗೊಂಡಿರೋ ಶ್ರೀಮತಿ ರಿಂಚನ್ ಲಾಮೊ ಇಂದು ಸಂಜೆ 4 ಗಂಟೆಗೆ ಟಿಬೇಟಿಯನ್ ಕಾಲೋನಿಯ ಡ್ರೆಪುಂಗ್ ಮಾನಸ್ಟ್ರಿಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳ ಕುರಿತು ಚರ್ಚೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಮುಖ್ಯಸ್ಥರು/ಅಲ್ಪಸಂಖ್ಯಾತರ ಸಮುದಾಯಗಳ ವಿವಿಧ ಒಕ್ಕೂಟಗಳ ಮುಖಂಡರೊಂದಿಗೆ ಸಭೆ...

ಪಬ್ಲಿಕ್ ಫಸ್ಟ್ ನ್ಯೂಸ್ ಮುಂಡಗೋಡಿನ ಈ ದಿನದ ಪ್ರಮುಖ ಸುದ್ದಿಗಳು

ಪಬ್ಲಿಕ್ ಫಸ್ಟ್ ನ್ಯೂಸ್ ಮುಂಡಗೋಡಿನ ಈ ದಿನದ ಪ್ರಮುಖ ಸುದ್ದಿಗಳು

ಪಬ್ಲಿಕ್ ಫಸ್ಟ್ ನ್ಯೂಸ್ ************************************ ನಮ್ಮ ಯೂಟ್ಯೂಬ್ ಚಾನಲ್ Subscribe ಆಗಿ, Like ಮಾಡಿ, Share ಮಾಡಿ.. ಬೆಂಬಲಿಸಿ.. ಇಂದಿನ ಪ್ರಮುಖ ಸುದ್ದಿಗಳನ್ನು ನೋಡಲು ಈ ಕೆಳಗಿನ ಲಿಂಕ್ ಓಪನ್ ಮಾಡಿ👇 https://youtu.be/b-rV2wH9Cwc  

ಮುಂಡಗೋಡಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ..!

ಮುಂಡಗೋಡಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ..!

ಮುಂಡಗೋಡ: ಪಟ್ಟಣದಲ್ಲಿ ಇಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ರು. ಪ್ರತಿಭಟನೆಯ ವಿಡಿಯೊ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ.https://youtu.be/_9sHGn2Dwnk ಇಲ್ಲಿನ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿದ್ದ ಪ್ರತಿಭಟನಾ ಮೆರವಣಿಗೆ, ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಂದು, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ್ರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ರು‌. ನಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಅರ್ಪಿಸಿದ್ರು‌. ಇನ್ನು ಪ್ರತಿಭಟನಾ ನಿರತರು ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ್ದ ಕಾರಣಕ್ಕೆ ಕೆಲಹೊತ್ತು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಾಹನಗಳು ಸಂಚರಿಸಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಳಗಿ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ನಂದಿಕಟ್ಟಾದ ವ್ಯಕ್ತಿ ಸಾವು..!

ಮಳಗಿ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ನಂದಿಕಟ್ಟಾದ ವ್ಯಕ್ತಿ ಸಾವು..!

ಮುಂಡಗೋಡ: ತಾಲೂಕಿನ ಮಳಗಿ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿಯಾದ ಪರಿಣಾಮ‌ ಬೈಕ್ ಸವಾರ ಗಂಭೀರ ಗಾಯಗೊಂಡು ಶಿರಸಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ನಡೆದಿದೆ. ಈ ಸುದ್ದಿಯ ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ..https://youtu.be/TklQgUwYU58 ನಂದಿಕಟ್ಟಾ ಗ್ರಾಮದ ಅಮ್ಜದ್ ಖಾನ್ ಕಲಘಟಗಿ ಎಂಬುವವನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಬೆಳಿಗ್ಗೆ ನಂದಿಕಟ್ಟಾ ಗ್ರಾಮದಿಂದ ಶಿರಸಿ ಕಡೆಗೆ ತೆರಳುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ‌. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಶಿರಸಿ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗಮದ್ಯೆಯೇ ಮೃತಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದ್ದು, ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಬ್ಲಿಕ್ ಫಸ್ಟ್ ನ್ಯೂಸ್ ಮುಂಡಗೋಡಿನ ಇಂದಿನ ಪ್ರಮುಖ ಸುದ್ದಿಗಳು

ಪಬ್ಲಿಕ್ ಫಸ್ಟ್ ನ್ಯೂಸ್ ಮುಂಡಗೋಡಿನ ಇಂದಿನ ಪ್ರಮುಖ ಸುದ್ದಿಗಳು

ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿಗಳನ್ನು ನೋಡಲು ಈ ಕೆಳಗಿನ ಲಿಂಕ್ ಓಪನ್ ಮಾಡಿ ************************************ ನಮ್ಮ ಯೂಟ್ಯೂಬ್ ಚಾನಲ್ Subscribe ಆಗಿ, Like ಮಾಡಿ, Share ಮಾಡಿ.. ಬೆಂಬಲಿಸಿ.. ಈ ಲಿಂಕ್ ಕ್ಲಿಕ್ ಮಾಡಿ.. ಇಂದಿನ ಸುದ್ದಿ ನೋಡಿ.. https://youtu.be/C5ay3WGDUZk

error: Content is protected !!