ಮುಂಡಗೋಡ: ತಾಲೂಕಿನ ಅಗಡಿ ಶ್ರೀ ಮೈಲಾರಲಿಂಗ ಸ್ವಾಮಿಯ ಎಂಟನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಕಾರಣೀಕ ಉತ್ಸವ ನಡೆಯಿತು‌. ಆದ್ರೆ ಈ ವರ್ಷದ ಕಾರಣೀಕ ಅಸ್ಪಷ್ಟವಾಗಿ ಕೇಳಿತು. ಕಾರಣೀಕದ ನುಡಿಗಳು ಯಾರಿಗೂ ಸ್ಪಷ್ಟವಾಗಿ ಕೇಳಲೇ ಇಲ್ಲದಿರುವುದು ಭಕ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯ ತಂಪಾಯಿತಲೇ ಪರಾಕ್..?
“ರಾಜ್ಯ ತಂಪಾಯಿತಲೇ ಪರಾಕ್” ಇದು ಅಗಡಿಯಲ್ಲಿ ಇಂದು ಅಸ್ಪಷ್ಟವಾಗಿ ಕೇಳಿ ಬಂದ ಕಾರಣೀಕ ನುಡಿ. ಒಂದುವೇಳೆ ಇದೇ ಮೈಲಾರಲಿಂಗ ಸ್ವಾಮಿಯ ಕಾರಣೀಕವಾಗಿದ್ದರೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಅಲ್ಲದೆ, ರಾಜ್ಯದಲ್ಲಿ ಶಾಂತಿ ನೆಲಸಿ ತಂಪಾದ ವಾತಾವರಣ ನಿರ್ಮಾಣವಾಗಲಿದೆ ಅನ್ನೋದು ತಾತ್ಪರ್ಯ‌.

ಇದೊಂದು ನಂಬಿಕೆ‌‌..!
ಅಂದಹಾಗೆ, ಸಾವಿರಾರು ಜನರ ನಡುವೆ ಬಿಲ್ಲನ್ನೇರಿ ಆಕಾಶದತ್ತ ದೃಷ್ಟಿ ನೆಟ್ಟು, ಕಾರಣೀಕ ನುಡಿಯುವ ವೃತಾಧಾರಿ ಗೊರವಪ್ಪ, ಕಾರಣೀಕ ನುಡಿದ ನಂತರ ಬಿಲ್ಲಿನಿಂದಲೇ ಕೆಳಗಡೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಜಾರಿ ಬೀಳುತ್ತಾರೆ. ಅಲ್ಲದೇ ಮೈಲಾರಲಿಂಗಸ್ವಾಮಿಯ ಕಾರಣೀಕ ನುಡಿ ಕೇಳಲು ಭಕ್ತರು ಕಾತರಿಸುತ್ತಾರೆ. ಯಾಕಂದ್ರೆ, ರೈತರಿಗೆ ಮೈಲಾರಲಿಂಗನ ಕಾರಣೀಕ ನುಡಿಗಳು ಪ್ರಸಕ್ತ ವರ್ಷದ ಕೃಷಿಯ ಆಗು ಹೋಗುಗಳ ಭವಿಷ್ಯವಾಗಿರುತ್ತದೆ ಅನ್ನೋದು ರೈತರ ನಂಬಿಕೆ. ಹೀಗಾಗಿ, ಮೈಲಾರಲಿಂಗ ಸ್ವಾಮಿಯ ಕಾರಣೀಕ ಪ್ರಾಮುಖ್ಯತೆ ಪಡೆದುಕೊಂಡಿದೆ.

error: Content is protected !!