ಮುಂಡಗೋಡ: ಟಿಬೇಟಿಯನ್ ಕಾಲೋನಿಗಳ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪೂರೈಸುವಲ್ಲಿ ಇಲ್ಲಿನ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಗಳು ಕಾಳಜಿ ತೋರಿಸಿಲ್ಲ ಅಂತಾ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ರಿಂಚನ್ ಲಾಮೊ ಅಸಮಾಧಾನ ಹೊರಹಾಕಿದ್ದಾರೆ..

ಮೂರು ದಿನಗಳ‌ ಕಾಲ ಮುಂಡಗೋಡ ಟಿಬೇಟಿಯನ್ ಕಾಲೋನಿಗಳ ಪ್ರವಾಸದಲ್ಲಿರೋ ರಿಂಚನ್ ಲಾಮೊ, ಟಿಬೇಟಿಯನ ಕ್ಯಾಂಪ್ ನಂಬರ್ 6 ರ ಸೈನ್ಸ್ ಭವನದಲ್ಲಿ ನಡೆದ, ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ರು‌. ಬೌದ್ಧ ಸನ್ಯಾಸಿಗಳು ಅಹಿಂಸಾವಾದಿಗಳು, ಯಾರ ಹತ್ತಿರವೂ ನಿರ್ಭಿಡೆಯಿಂದ ಮಾತನಾಡುವವರಲ್ಲ. ಇವ್ರಿಗೆ ಸಿಗಬೇಕಿದ್ದ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆಯಲೂ ಸಹಿತ ಇವ್ರು ಹಿಂಜರಿಯುತ್ತಾರೆ. ಹೀಗಾಗಿ, ಇಲ್ಲಿನ ಸ್ಥಳೀಯ ಆಡಳಿತದ ಅಧಿಕಾರಿಗಳು ಗಮನಿಸಬೇಕಾಗಿದೆ‌ ಅಂತಾ ಎಚ್ಚರಿಸಿದ್ರು‌. ಈ ಬಗ್ಗೆ ಕರ್ನಾಟಕ ಸರ್ಕಾರದ ಜೊತೆ ಮಾತುಕತೆ ಮಾಡುವುದಾಗಿ ತಿಳಿಸಿದ್ರು‌.

ಸಭೆ..!
ಇನ್ನು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ, ಶ್ರೀಮತಿ ರಿಂಚನ್ ಲಾಮೊ, ಇಲ್ಲಿನ ಡ್ರೆಪುಂಗ್ ಮಾನಸ್ಟ್ರಿಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳ ಕುರಿತು ಚರ್ಚೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಮುಖ್ಯಸ್ಥರು/ಅಲ್ಪಸಂಖ್ಯಾತರ ಸಮುದಾಯಗಳ ವಿವಿಧ ಒಕ್ಕೂಟಗಳ ಮುಖಂಡರೊಂದಿಗೆ ಸಭೆ ನಡೆಸಿದ್ರು.

ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದ್ರು‌. ಟಿಬೇಟಿಯನ್ ಕಾಲೋನಿಯಲ್ಲಿರುವ ಸುಮಾರು 3ಸಾವಿರ ಭಾರತೀಯ ಬೌದ್ಧ ಬಿಕ್ಕುಗಳಿಗೆ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾತನಾಡಿದ್ರು.

error: Content is protected !!