ಕಾರವಾರ: ನಕಲಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಹುದ್ದೆಯಲ್ಲಿರೋ ಆರೋಪ ಹೊತ್ತಿರೊ, ಮುಂಡಗೋಡ ತಹಶೀಲ್ದಾರ್ ಶ್ರೀಧರ ಮುಂದಲಮನಿ ವಿರುದ್ಧ ತನಿಖೆ ನಡೆಸಿ, ಆರೋಪದಿಂದ ಮುಕ್ತವಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯದಂತೆ ಆದೇಶಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ಅವರು ಕಾರವಾರದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಜಿಲ್ಲಾಡಳಿತದ ಮೂಲಕ ಪತ್ರ..!
ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿರುವ ಅವರು, ಮುಂಡಗೋಡ ತಾಲೂಕು ತಹಶೀಲ್ದಾರ ಶ್ರೀಧರ್ ಮುಂದಲಮನಿಯವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ದೆ ಈ ಕುರಿತು ಈಗಾಗಲೇ ಅವ್ರನ್ನ ಬಂಧಿಸಲು ಪೊಲೀಸರು ಬಂದಿದ್ರು. ಆದ್ರೆ ಆ ಹೊತ್ತಲ್ಲಿ ಮನೆಯಿಂದ ಹೊರಗೆ ಬರದೆ, ಒಳಗೇ ಕುಳಿತು ಕೋರ್ಟಿನಿಂದ ತಡೆಯಾಜ್ಞೆ ತಂದಿದ್ರು. ಹೀಗಾಗಿ, ಬಂಧನದಿಂದ ಬಚಾವ್ ಆಗಿದ್ದಾರೆ.

ಕಳೆದ 3 ವರ್ಷಗಳಿಂದ ಮುಂಡಗೋಡ ತಾಲೂಕಾ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರೊ ಅವರ ಮೇಲೆ ಫೆ.12ರಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಹುದ್ದೆಗೆ ಆಯ್ಕೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಈ ದೂರಿನ ಹಿನ್ನೆಲೆಯಲ್ಲಿ ಶ್ರೀಧರ ಮುಂದಲಮನಿಯವರು ಧಾರವಾಡ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆದಿದ್ದು, ಕರ್ತವ್ಯದಲ್ಲಿ ಮುಂದುವರೆದಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ಜವಾಬ್ದಾರಿ ಹುದ್ದೆಯಲ್ಲಿದ್ದು ಹೀಗೆ ದಲಿತರಿಗೆ ಮೋಸ ಮಾಡುವ ಮೂಲಕ ಹುದ್ದೆಗೆ ಸೇರ್ಪಡೆಯಾಗಿರುವುದು ದಲಿತರಿಗೆ ಮತ್ತು ಸರ್ಕಾರಕ್ಕೆ ಮಾಡಿದ ಅನ್ಯಾಯವಾಗಿದೆ. ಆದ್ದರಿಂದ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಸಂಪೂರ್ಣವಾಗಿ ಆರೋಪಿತರಲ್ಲ ಎಂದು ಸಾಬೀತು ಪಡಿಸುವ ತನಕ ಅವರನ್ನು ತಾಲೂಕಾ ದಂಡಾಧಿಕಾರಿಯಾಗಿ ಮುಂದುವರೆಸಬಾರದು ಎಂದು ಚಿದಾನಂದ ಹರಿಜನ್ ಆಗ್ರಹಿಸಿದ್ದಾರೆ.

error: Content is protected !!