ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗೆ ಇಂದು ಭಾರತ ಸರ್ಕಾರದ ರಾಷ್ಟ್ರೀಯ ಅಲ್ಪಸಂಖ್ಯಾತ ರ ಆಯೋಗದ ಸದಸ್ಯೆ, ಶ್ರೀಮತಿ ರಿಂಚನ್ ಲಾಮೊ ಭೇಟಿ ನೀಡಿದ್ಧಾರೆ. ಎರಡು ವಾರಗಳ ಕಾಲ ಕರ್ನಾಟಕದ ಪ್ರವಾಸದಲ್ಲಿರೋ ರಿಂಚನ್ ಲಾಮೊ ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಅಂದಹಾಗೆ, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕವಾಗಿ ಆಗಮಿಸಿದ ರಿಂಚನ್ ಲಾಮೊರನ್ನು ಮುಂಡಗೋಡ ತಾಲೂಕಾಡಳಿತದಿಂದ ತಾಲೂಕಿನ ಗಡಿ ಭಾಗ ವಡಗಟ್ಟಾದ ಚೆಕ್ ಪೊಸ್ಟ್ ಬಳಿ ಸ್ವಾಗತಿಸಲಾಯಿತು. ಈ ವೇಳೆ ಮುಂಡಗೋಡ ಉಪತಹಶೀಲ್ದಾರ್ ಸೇರಿ ಹಲವರು ಸ್ವಾಗತಿಸಿಕೊಂಡ್ರು.
ಇನ್ನು ಎಪ್ರಿಲ್ 1 ರ ವರೆಗೂ ಮುಂಡಗೋಡ ಟಿಬೇಟಿಯನ್ ಕಾಲೋನಿಯಲ್ಲಿ ಪ್ರವಾಸ ಕೈಗೊಂಡಿರೋ ಶ್ರೀಮತಿ ರಿಂಚನ್ ಲಾಮೊ ಇಂದು ಸಂಜೆ 4 ಗಂಟೆಗೆ ಟಿಬೇಟಿಯನ್ ಕಾಲೋನಿಯ ಡ್ರೆಪುಂಗ್ ಮಾನಸ್ಟ್ರಿಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳ ಕುರಿತು ಚರ್ಚೆಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಮುಖ್ಯಸ್ಥರು/ಅಲ್ಪಸಂಖ್ಯಾತರ ಸಮುದಾಯಗಳ ವಿವಿಧ ಒಕ್ಕೂಟಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.