ಹಳಿಯಾಳ : ಜೊಯಿಡಾ ತಾಲೂಕಿನ ಕ್ಯಾಸರಲಾಕ್ ಸಮೀಪದ ಕುಣಗಿನಿಯಲ್ಲಿರುವ ಶ್ರೀ ಸಂತೋಷಿ ಮಾತಾ ಕಾಳಿಕಾ ಮಠದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ ಆಶ್ರಮದ ಶ್ರೀ ರಘುವೀರ ಗುರೂಜಿಯವರು ಒಂದು ದಿನದ ಊಟದ ಪೊಟ್ಟಣವನ್ನು ವಿತರಿಸಿದರು. 150 ಕ್ಕೂ ಹೆಚ್ಚು ಊಟದ ಪೊಟ್ಟಣವನ್ನು ವಿತರಿಸಲಾಯ್ತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಚವ್ವಾಣ, ಪ್ರಮುಖರಾದ ಮಾರುತಿ ನರಗುಂದಕರ, ಯಲ್ಲಪ್ಪಾ ಮಾಲವಣಕರ, ಯಶವಂತ ಪಟ್ಟೇಕರ, ಬಸವರಾಜ ಹಿರೆಮೊರಬ, ಆಶ್ರಮದ ರೂಪೇಶ ನಾಯ್ಕ, ಪಾಂಡುರಂಗ ಶೇಠ, ರಿಶ್ವಿತ್ ನಾಯ್ಕ, ಸಿದ್ದಾಂತ ಪರಬ ಮೊದಲಾದವರು ಇದ್ದರು.
Top Stories
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಂತೋಷಿ ಮಾತಾ ಕಾಳಿಕಾ ಮಠದಿಂದ ಆಹಾರ ಪೊಟ್ಟಣ ವಿತರಣೆ..!
ಮಳಗಿ: ಮೀನು ಹಿಡಿಯಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವು..!
ಮುಂಡಗೋಡ: ತಾಲೂಕಿನ ಮಳಗಿಯಲ್ಲಿ, ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಉಮೇಶ್ ಶಿವಪ್ಪ ಬೋವಿ(25) ಮೃತಪಟ್ಟ ಯುವಕನಾಗಿದ್ದಾನೆ. ಮಳಗಿ ಗ್ರಾಮದ ಸಿದ್ದಾಪುರ ಓಣಿಯ ನಿವಾಸಿಯಾಗಿರೊ ಯುವಕ ಶನಿವಾರ ಮದ್ಯಾನ ಮೀನು ಹಿಡಿಯಲೆಂದು ಕೆರೆಗೆ ಹೋಗಿದ್ದ. ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಅಂತಾ ಸಂಬಂಧಿ ಜಯಮ್ಮ ಹನ್ಮಂತ ಬೋವಿ ಎಂಬುವವರು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬನವಾಸಿ ಭಾಗದ ಗ್ರಾಮಗಳಿಗೆ ಸಚಿವ ಹೆಬ್ಬಾರ್ ಭೇಟಿ: ಕೋವಿಡ್ ನಿರ್ವಹಣೆ ಕುರಿತು ಚರ್ಚೆ..!
ಶಿರಸಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಂದು ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ, ಬಿಸಲಕೊಪ್ಪ, ಅಂಡಗಿ ಹಾಗೂ ಸುಗಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಆಶಾ ಕಾರ್ಯಕರ್ತೆರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಸಂಕಷ್ಟದಲ್ಲಿರೊ 21 ಬಡ ಕುಟುಂಬಗಳಿಗೆ ಧನಸಹಾಯ ಮಾಡಿದ ಟಿಬೇಟಿಯನ್ ಲಾಮಾ..!
ಮುಂಡಗೋಡ-ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ಕುಟುಂಬಗಳಿಗೆ ಟಿಬೇಟಿಯನ್ ಸಕ್ಯಾ ಪಾರ್ಟಿಯ ಬೌದ್ದ ಸನ್ಯಾಸಿ ಒಬ್ಬರು ಸಹಾಯ ಮಾಡಿದ್ದಾರೆ. ಸಂಕಷ್ಟದಲ್ಲಿದ್ದ 21 ಬಡ ಕುಟುಂಬಗಳಿಗೆ ತಲಾ 500 ರೂಪಾಯಿ ಹಣ ಸಹಾಯ ಮಾಡಿದ್ದು , ಹಣವನ್ನು ಇಂದು ಗ್ರಾಮ ಪಂಚಾಯತಿ ಸದಸ್ಯರು ವಿತರಿಸಿದ್ರು. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು..
ಯಲ್ಲಾಪುರ: ಬಾವಿಗೆ ಹಾರಿದ ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ..!
ಯಲ್ಲಾಪುರ: ಬಾವಿಗೆ ಬಿದ್ದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಿದ ಘಟನೆ ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ನಡೆದಿದೆ. ಸುನಂದ ಪಟಗಾರ್(34) ಅನ್ನೋ ಮಹಿಳೆಯೇ ರಕ್ಷಣೆಗೊಳಗಾದವಳಾಗಿದ್ದಾಳೆ. ಇಂದು ಬೆಳಗ್ಗೆ ಮನೆಯಿಂದ ಹೊರಬಂದ ಮಹಿಳೆ ಏಕಾ ಏಕಿ ಸಾರ್ವಜನಿಕ ಬಾವಿಗೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಅದೃಷ್ಟವಶಾತ್ ಬಾವಿಯಲ್ಲಿ ಆಳವಿಲ್ಲದೇ ಇದ್ದಿದ್ದರಿಂದ ಆಕೆ ಬದುಕುಳಿದಿದ್ದು ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಬಾವಿಯಲ್ಲೇ ಚೀರಾಡಿದ್ದಾಳೆ. ಈ ವೇಳೆ ಮನೆಯಲ್ಲಿ ಈಕೆ ಇರದುದ್ದನ್ನು ಗಮನಿಸಿ ಹೊರಬಂದು ನೋಡಿದಾಗ, ಈಕೆ ಚೀರಾಡುವ ಧ್ವನಿ ಮನೆಯ ಜನರಿಗೆ ಕೇಳಿಸಿದೆ. ತಕ್ಷಣ ಬಾವಿ ಇಣುಕಿ ನೋಡಿದಾಗ ಈಕೆ ಬಾವಿಯಲ್ಲಿ ಬಿದ್ದಿರೋದು ಗಮನಕ್ಕೆ ಬಂದಿದೆ. ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ನೀರಿನಿಂದ ಹೊರಕ್ಕೆ ಕರೆತಂದಿದ್ದಾರೆ. ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ .ಭೀಮರಾವ್ ವಾಯು ಉಪ್ಪಾರ್, ಸಿಬ್ಬಂದಿಗಳಾದ ಹನುಮಂತನಾಯ್ಕ , ಉಲ್ಲಾಸ್ ವೈ ನಾಗೇಕರ್,...
ಮುಂಡಗೋಡ: ತಾಲೂಕಿನಲ್ಲಿಂದು19 ಪಾಸಿಟಿವ್ ದೃಢ, 57 ಗುಣಮುಖ, ಒಂದು ಸಾವು..!
ಮುಂಡಗೋಡ-ತಾಲೂಕಿನಲ್ಲಿ ಇಂದು 19 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಓರ್ವ ಸಾವನ್ನಿಪ್ಪಿದ್ದಾನೆ. ಇನ್ನು 57 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ತಾಲೂಕಿನಲ್ಲಿ ಒಟ್ಟೂ 291 ಸಕ್ರೀಯ ಪ್ರಕರಣಗಳಿದ್ದು, 62 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 204 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 25 ಜನ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ. ಇನ್ನು ಪಟ್ಟಣದ ಗಾಂಧಿನಗರದ 76 ವರ್ಷದ ವೃದ್ದ ಕೊರೋನಾಗೆ ಇಂದು ಬಲಿಯಾಗಿದ್ದು, ಇದುವರೆಗೂ ತಾಲೂಕಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. ಅಂದಹಾಗೆ, ಇದುವರೆಗೂ ತಾಲೂಕಿನಲ್ಲಿ 3730 ಪ್ರಕರಣಗಳು ಪತ್ತೆಯಾಗಿದ್ದು ಅದ್ರಲ್ಲಿ,3374 ಸೋಂಕಿತರು ಗುಣಮುಖರಾಗಿದ್ದಾರೆ.
ಕಾರವಾರ ಜಿಪಂ ಅಭಿಲೇಖಾಲಯ ಕಛೇರಿಯಲ್ಲಿ ಬೆಂಕಿ ಅವಘಡ: 3 ಅಂತಸ್ತಿನ ಕಟ್ಟಡಕ್ಕೆ ವ್ಯಾಪಿಸಿದ ಬೆಂಕಿ..!
ಕಾರವಾರ: ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಜಿಪಂ ಅಭಿಲೇಖಾಲಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಮೂರು ಅಂತಸ್ಥಿನ ಕಟ್ಟಡಕ್ಕೆ ಬೆಂಕಿ ವ್ಯಾಪಸಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿಗಳು ನಿರತರಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಹೊತ್ತಿಕೊಂಡಿರೋ ಅನುಮಾನ ವ್ಯಕ್ತವಾಗಿದೆ. ಇನ್ನು ಘಟನೆಯಲ್ಲಿ ಕಚೇರಿಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಡಿಸಿ ಮುಲೈ ಮುಹಿಲನ್, ಸಿಇಒ ಪ್ರಿಯಾಂಗ ಭೇಟಿ ನೀಡಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸನವಳ್ಳಿಯಲ್ಲಿ ಹಲವು ಮನೆಯೊಳಗೆ ಹೊಕ್ಕ ಮಳೆ ನೀರು: ರಾತ್ರಿಯಿಡೀ ಪರದಾಟ..!
ಮುಂಡಗೋಡ-ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಮಳೆಯ ಕಾರಣಕ್ಕೆ ಕೆಲವು ಗ್ರಾಮಸ್ಥರು ರಾತ್ರಿಯಿಡಿ ನಿದ್ದೆಗೆಡುವಂತಾಯಿತು. ಸನವಳ್ಳಿ ಗ್ರಾಮದಲ್ಲಿ ವ್ಯವಸ್ಥಿತವಾದ ಗಟಾರಗಳು ಇಲ್ಲದ ಕಾರಣ, ಗ್ರಾಮದ ಹಲವು ಮನೆಗಳಿಗೆ ಮಳೆಯ ನೀರು ಒಳಗೆ ನುಗ್ಗಿತ್ತು. ಹೀಗಾಗಿ, ಮನೆ ಮಂದಿಯೆಲ್ಲ ಮಳೆ ನೀರು ಹೊರಹಾಕಲು ಹರಸಾಹಸ ಪಡಬೇಕಾಯ್ತು. ಪುಟ್ಟ ಪುಟ್ಟ ಮಕ್ಕಳು ಸೇರಿದಂತೆ ಮನೆಯ ಮಂದಿಯೆಲ್ಲ ಮಳೆ ನೀರು ಹೊರ ಹಾಕುವಲ್ಲಿ ನಿರತರಾಗಿದ್ರು. ಇನ್ನು ಮಳೆ ನೀರು ಮನೆಯ ಒಳಗೆ ಹೊಕ್ಕ ಕಾರಣ ಮನೆಯಲ್ಲಿನ ಹಲವು ವಸ್ತುಗಳು ಮಳೆಯ ನೀರಲ್ಲಿ ನೆನೆದು ಹಾಳಾಗಿವೆ. ಹೀಗಾಗಿ ಸಮರ್ಪಕ ಗಟಾರು ವ್ಯವಸ್ಥೆ ಮಾಡದ ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ.
ಹುಲಿಹೊಂಡ ಗ್ರಾಮದಲ್ಲಿ ಮರಕ್ಕೆ ಬಡಿದ ಸಿಡಿಲು: ಮರದ ಕೆಳಗೆ ನಿಂತಿದ್ದ 9 ಜನರಿಗೆ ಗಾಯ..!
ಮುಂಡಗೋಡ- ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿದೆ. ಶುಕ್ರವಾರ ತಾಲೂಕಿನ ಹುಲಿಹೊಂಡ ಗ್ರಾಮದ ಗದ್ದೆಯಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ಪರಿಣಾಮ, ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದ 9 ಜನರಿಗೆ ಸಿಡಿಲಿನ ಶಾಖ ತಟ್ಟಿ ಚಿಕ್ಕ ಪುಟ್ಟ ಗಾಯವಾದ ಘಟನೆ ನಡೆದಿದೆ. ಹುಲಿಹೊಂಡ ಗ್ರಾಮದ ರಾಮಪ್ಪ ಬಸಪ್ಪ ಕಬ್ಬೇರ್ ಎಂಬುವವರು ತಮ್ಮ ಜಮೀನಿನಲ್ಲಿ ನಿನ್ನೆ ಶುಕ್ರವಾರ ಗೋವಿನ ಜೋಳ ಬೀಜ ಬಿತ್ತನೆ ಮಾಡುತ್ತಿದ್ದರು. ಈ ವೇಳೆ ಮಳೆ ಬಂದ ಕಾರಣ ಮಳೆಯ ಹನಿಯಿಂದ ತಪ್ಪಿಸಿಕೊಳ್ಳಲು ಬೀಜ ಬಿತ್ತನೆಯಲ್ಲಿ ತೊಡಗಿದ್ದ 9 ಜನರು ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ಆದ್ರೆ ಅದೇ ವೇಳೆ ನಿಂತಿದ್ದ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ರಭಸಕ್ಕೆ ಬಹುತೇಕರು ಮೂರ್ಚೆ ಹೋಗಿದ್ದಾರೆ. ಹೀಗಾಗಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇನ್ನು ಘಟನೆಯಲ್ಲಿ ಅನಿತಾ ಪರಸಪ್ಪ ಕಬ್ಬೇರ್ ಎಂಬುವವರಿಗೆ ಹೆಚ್ಚಿನ ಗಾಯವಾಗಿದ್ದು, ಸಮೀಪದ ಬಮ್ಮಿಗಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರದೊಯ್ಯಲಾಗಿತ್ತು. ಅವ್ರು ಸದ್ಯ ಚೇತರಿಸಿಕೊಂಡಿದ್ದಾರೆ. ಮುಂಡಗೋಡ ಕಂದಾಯ ಇಲಾಖೆ ಅಧಿಕಾರಿಗಳು...
VRDM ಟ್ರಸ್ಟ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸೆಪ್ಟಿ ಕಿಟ್ ವಿತರಣೆ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ದೇಶಪಾಂಡೆ ರೂಡ್ ಸೆಟಿ ವತಿಯಿಂದ ಇಂದು ಮೆಡಿಕಲ್ ಸೆಪ್ಟಿ ಕಿಟ್ ವಿತರಿಸಲಾಯಿತು. ತಾಲೂಕಿನ ಹುನಗುಂದ ಗ್ರಾಮದ ವಿರಕ್ತ ಮಠದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಚ್.ಎಂ.ನಾಯ್ಕ್ ಉದ್ಘಾಟಿಸಿ ಮಾತನಾಡಿದ್ರು. ಹುನಗುಂದ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಕುನ್ನೂರ್, ಉಪಾಧ್ಯಕ್ಷ ತುಕಾರಾಮ್ ಹೊನ್ನಳ್ಳಿ, ಕಾಂಗ್ರೆಸ್ ಯುವ ಮುಖಂಡ ಧರ್ಮರಾಜ್ ನಡಗೇರಿ, ಗ್ರಾಪಂ ಸದಸ್ಯರಾದ ಈಶ್ವರಗೌಡ ಅರಳಿಹೊಂಡ ಸೇರಿ ದೇಶಪಾಂಡೆ ರೂಡಸೆಟಿಯ ಸಂಚಾಲಕರು ಉಪಸ್ತಿತರಿದ್ದರು.