ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯ ಅದ್ವಾನಕ್ಕೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಲೇಟ್ ಆದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕವನ್ನೇ ಬಂದ್ ಮಾಡಿದ್ದ ಚೌಡಳ್ಳಿ ರಸ್ತೆಗೆ ತೆಪೆ ಹಚ್ಚಲಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ಬಿಗ್ ಇಂಪ್ಯಾಕ್ಟ್..
ಆಕ್ರೋಶದ ಕಟ್ಟೆಯೊಡೆದಿತ್ತು..!
ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಪೈಪಲೈನ್ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿತ್ತು.
ಆದ್ರೆ ಹಾಗೆ ಗುಂಡಿ ತೋಡಿ, ಪೈಪುಗಳನ್ನು ಮುಚ್ಚಿದ ನಂತರ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚಿಯೇ ಇರಲಿಲ್ಲ. ಹೀಗಾಗಿ, ಇತ್ತಿಚೆಗೆ ಮಳೆ ಬಂದಾಗ ಗುಂಡಿಗೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ಕುಸಿದು, ರಸ್ತೆಯಲ್ಲಿ ವಾಹನಗಳಿರಲಿ, ಜನರೂ ಓಡಾಡದಂತ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸ್ತಿದ್ದರು.
ಪ್ರತಿಧ್ವನಿಸಿದ್ದ ಪಬ್ಲಿಕ್ ಫಸ್ಟ್..!
ಹಾಗೆ ಸಂಕಷ್ಟಕ್ಕೊಳಗಾಗಿದ್ದ ಗ್ರಾಮಗಳ ಜನರ ಆಕ್ರೋಶದ ದನಿಯನ್ನು, ಪಬ್ಲಿಕ್ ಫಸ್ಟ್ ನ್ಯೂಸ್ ಪ್ರತಿಧ್ವನಿಸಿತ್ತು. ಹೀಗಾಗಿ ಬಹುಶಃ ಗಾಢ ನಿದ್ದೆಯಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗೆ ತೆಪೆ ಹಾಕಿದ್ದಾರೆ.
ಸುಲಭ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ