ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದ ಜನ ಇವತ್ತು ಒಂದು ಕ್ಷಣ ರೋಮಾಂಚಕ ಅನುಭವ ಪಡೆದುಕೊಂಡ್ರು. ಗ್ರಾಮದಲ್ಲಿ ಕುಡಿಯುವ ನೀರು ಸರಭರಾಜು ಮಾಡುವ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ನೆಲಸಮಗೊಳಿಸಲಾಯಿತು.
ಹೌದು, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಸುಮಾರು 8ರಿಂದ 10 ವರ್ಷ ಹಳೆಯ, ಸಂಪೂರ್ಣ ಶಿಥಿಲಗೊಂಡಿದ್ದ ಕುಡಿಯುವ ನೀರಿನ ಟ್ಯಾಂಕ್ ಇತ್ತು. ನೀರಿನ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಕಾರಣ ನೀರಿನ ಟ್ಯಾಂಕ್ ಪಕ್ಕದ ಮನೆಯ ಮಾಲೀಕರಾದ ರವಿ ಸಹದೇವಪ್ಪ ಸುಭಾಂಜಿ ಅವರ ಮನೆ ಮೇಲೆ ಯಾವುದೇ ಕ್ಷಣದಲ್ಲಾದ್ರೂ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಹೀಗಾಗಿ, ಸಹದೇವಪ್ಪ ಸುಭಾಂಜಿಯವರು
ಗ್ರಾಮ ಪಂಚಾಯತಿಗೆ ಈ ಕುರಿತು ಮನವಿ ಸಲ್ಲಿಸಿದ್ದರು. ಹೀಗಾಗಿ, ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದ ನೀರಿನ ಟ್ಯಾಂಕ್ ಜೆಸಿಬಿಗಳ ಸಹಾಯದಿಂದ ನೆಲಸಮಗೊಳಿಸಲಾಯಿತು.
ಟ್ಯಾಂಕ್ ನೆಲಸಮಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಿರ್ವಹಿಸಲಾಯಿತು. ಕ್ಷಣಾರ್ಧದಲ್ಲೇ ಇಡಿ ಟ್ಯಾಂಕ್ ನೆಲಕ್ಕುರುಳಿದಾಗ ಇಡೀ ಗ್ರಾಮಸ್ಥರಿಗೆ ಒಂದು ಕ್ಷಣ ರೋಮಾಂಚಕ ಅನುಭವ ಆಯ್ತು.