ಬೆಂಗಳೂರು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟನಲ್ಲಿ ಚಿತ್ರ ನಟ ಚೇತನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಕೇವಲ 1 ರೂ. ಕೇಸ್..
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಚಿವ ಹೆಬ್ಬಾರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಕೇವಲ ಒಂದು ರೂಪಾಯಿ ಮಾನನಷ್ಟ ಪರಿಹಾರ ಕೋರಿ ನಟ ಚೇತನ್ ಮೊಕದ್ದಮೆ ದಾಖಲಿಸಿದ್ದಾರೆ.
ಏನಿದು ವಿವಾದ..?
ಇತ್ತಿಚೆಗೆ ನಟ ಚೇತನ್ ಬ್ರಾಹ್ಮಣರ ವಿರುದ್ಧ ಮಾತನಾಡಿದ್ರು ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಗರಂ ಆಗಿದ್ರು. ಚೇತನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೇ ಠಕ್ಕರ್ ಕೊಟ್ಟಿದ್ರು. ಬ್ರಾಹ್ಮಣರ ವಿರುದ್ಧ ಮಾತನಾಡಿದ್ದ ನಟ ಚೇತನರ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ರು.
ಕೇವಲ 1 ರೂ. ಪರಿಹಾರ ಬೇಕಂತೆ..!
ಹೀಗಾಗಿ, ನಟ ಚೇತನ ಸಚಿವ ಹೆಬ್ಬಾರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹೆಬ್ಬಾರ್ ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ. ನನಗೆ ಅದ್ರಿಂದ ಮಾನಹಾನಿಯಾಗಿದೆ. ಹೀಗಾಗಿ, ನನಗೆ 1 ರೂ. ಮಾನಹಾನಿ ಪರಿಹಾರ ನೀಡುವಂತೆ ಕೋರ್ಟನಲ್ಲಿ ನಟ ಚೇತನ್ ಮೊಕದ್ದಮೆ ಹೂಡಿದ್ದಾರೆ.
ನಟ ಚೇತನ್, ಸಚಿವ ಹೆಬ್ಬಾರ್ ವಿರುದ್ಧ ದಾಖಲಿಸಿರೋ ಮೊಕದ್ದಮೆಯನ್ನು ಸಿಟಿ ಸಿವಿಲ್ ಕೋರ್ಟ್ ವಿಚಾರಣೆ ಮಾಡಿದೆ. ಸಚಿವ ಹೆಬ್ಬಾರ್ ಗೆ ಆಕ್ಷೇಪಣೆ ಸಲ್ಲಿಸಲು ಜುಲೈ 14 ರವರೆಗೆ ಕಾಲಾವಕಾಶ ನೀಡಿದೆ. ಅಲ್ಲದೇ ಈ ಕುರಿತು ಸಚಿವ ಶಿವರಾಮ್ ಹೆಬ್ಬಾರ್ ಗೆ ಕೋರ್ಟ್ ನೋಟೀಸು ನೀಡಿದೆ ಅಂತಾ ಮಾಹಿತಿ ಲಭ್ಯವಾಗಿದೆ.