ಹುಬ್ಬಳ್ಳಿ: ಎಸ್ ಡಿಎಂ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಜಿರೋ ಟ್ರಾಫಿಕ್ ನಲ್ಲೇ ಲೀವರ್ ರವಾನೆ ಮಾಡಲಾಗಿದೆ.
ಲಿವರ್ ಸಾಗಿಸಲು ಆಂಬ್ಯುಲೆನ್ಸ್ ಗೆ ಹುಬ್ಬಳ್ಳಿ ಪೊಲೀಸ್ರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ರು. ಹುಬ್ಬಳ್ಳಿಯ SDM ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ,
16 ಕಿಲೋಮೀಟರ್ ದೂರ ಕ್ರಮಿಸಲು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಇನ್ನು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರಿಗೆ ಲೀವರ್ ಅವಶ್ಯವಾಗಿತ್ತು. ಎಸ್ ಡಿಎಂ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಎರಡು ಕಿಡ್ನಿ, ಕಣ್ಣು, ಲೀವರ್ ದಾನ ಮಾಡಲಾಗಿತ್ತು.
ಹೀಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಆ ವ್ಯಕ್ತಿಯ ಲೀವರ್ ರವಾನೆ ಮಾಡಲಾಗಿದೆ.