ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಹೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 7ರಿಂದ 9ರವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 9ರವವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಬೆಂಗಳೂರು, ರಾಮನಗರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗದಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
Top Stories
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ: ಮಳಗಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅಂದರ್..!
ಮುಂಡಗೋಡ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ತಾಲೂಕಿನ ಮಳಗಿಯ ಪಂಚವಟಿಯಲ್ಲಿ ಮೇ. 20 ರಂದು ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣ ಬೇಧಿಸಿ, ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇದ್ರೊಂದಿಗೆ ನಿಟ್ಟುಸಿರು ಬಿಟ್ಟಿದ್ದಾರೆ ಖಾಕಿಗಳು. ಶಿರಸಿಯ ನಿವಾಸಿಗಳಾದ ಸಲೀಂ(25) ಅಬ್ದುಲ್ ಸತ್ತಾರ ಅಬ್ದುಲ್ ಗಫಾರ್ ಮುಲ್ಲಾ(28) ಹಾಗೂ ಇರ್ಫಾನ್ ಮಕಬೂಲ್ ಶೇಖ್ (21) ಎಂಬುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಂದಹಾಗೆ, ಮೇ 20 ರ ರಾತ್ರಿ ಮಳಗಿ ಸಮೀಪದ ಪಂಚವಟಿಯಲ್ಲಿರುವ ಹಜರತ ಅಲಿ ಯಲಿವಾಳ್ ಎಂಬುವವರ ಅಂಗಡಿಯ ಮೇಲ್ಚಾವಣಿ ತೆಗೆದು ಒಳ ನುಗ್ಗಿದ್ದ ಖದೀಮರು, ಅಂಗಡಿಯಲ್ಲಿದ್ದ ರೇಶನ್, ಪ್ರಿಡ್ಜ್, ಸೇರಿ ಅಂದಾಜು 63,465 ರೂಪಾಯಿ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ರು. ಹೀಗಾಗಿ ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಉತ್ತರ ಕನ್ನಡ ಎಸ್ಪಿ ಡಾ.ಸುಮನ್ ಪೆನ್ನೇಕರ್ ಮಾರ್ಗದರ್ಶನದಲ್ಲಿ ಮುಂಡಗೋಡಿನ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಲ್ಲಾಪುರ-ಶಿರಸಿ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಪೋನ್ ಮತ್ತೆ ಆ್ಯಕ್ಟಿವ್..!
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಸೇರಿ, ಕರಾವಳಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಆಕ್ಟಿವ್ ಗೊಂಡಿರುವುದು ಬಾರೀ ಆತಂಕ ತಂದಿಟ್ಟಿದೆ.. ಬೇಹುಗಾರಿಕಾ ಏಜೆನ್ಸಿ ಸ್ಯಾಟಲೈಟ್ ಫೋನ್ ಲೊಕೇಷನ್ ಗಳನ್ನು ಪತ್ತೆ ಮಾಡಿದೆ., ಹೀಗಾಗಿ, ನಾಲ್ಕು ಅರಣ್ಯ ಪ್ರದೇಶಗಳಿಂದ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ಮಧ್ಯೆ ಇರುವ ಅರಣ್ಯ, ಮಂಗಳೂರು ಹೊರ ಭಾಗದಲ್ಲಿರುವ ನಾಟಿಕಲ್, ಕುಳಾಯಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ನಡುವಿನ ಅರಣ್ಯ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ. ಮೇ 23ರಿಂದ 29ರವರೆಗೆ ನಾಲ್ಕು ಪ್ರದೇಶಗಳಲ್ಲಿ ಫೋನ್ ಆಕ್ಟಿವ್ ಆಗಿದ್ದು, 6 ದಿನಗಳ ಅವಧಿಯಲ್ಲಿ ನಾಲ್ಕು ಕಡೆಗಳಲ್ಲಿ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸಿದ್ದಾರೆ ಎಂದು ಬೇಹುಗಾರಿಕಾ ಏಜೆನ್ಸಿ ಫೋನ್ ಲೊಕೇಷನ್ ಟ್ರೇಸ್ ಮಾಡಿದೆ.
ಸಚಿವ ಶಿವರಾಮ್ ಹೆಬ್ಬಾರ್ ಗೆ ಜನ್ಮ ದಿನದ ಶುಭಾಶಯಗಳು
ಜಾಹೀರಾತು ಯಲ್ಲಾಪುರ ಕ್ಷೇತ್ರದ ಜನಪ್ರಿಯ ಶಾಸಕರು, ಕಾರ್ಮಿಕ ಸಚಿವರು ಶಿವರಾಮ್ ಹೆಬ್ಬಾರ್ ಇಂದು ಜನುಮ ದಿನದ ಸಂಭ್ರಮದಲ್ಲಿದ್ದಾರೆ. ಹೀಗಾಗಿ, ಅಭಿಮಾನಿಗಳು ನಿನ್ನೆಯಿಂದಲೇ ಶುಭಾಶಯಗಳ ಸುರಿಮಳೆ ಸುರಿಸ್ತಿದಾರೆ. ಅದ್ರಂತೆ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರು ಆದ ಹಾಗೂ ಬಿಜೆಪಿ ಮುಖಂಡರಾದ ಸಿದ್ದಪ್ಪ ಹಡಪದ ಸಚಿವ ಶಿವರಾಮ್ ಹೆಬ್ಬಾರ್ ರವರಿಗೆ ಶುಭಾಶಯ ಕೋರಿದ್ದಾರೆ.
ಬಸಾಪುರದಲ್ಲಿ ರಾಣಾ ಪ್ರತಾಪ ಸಿಂಹರ ಜಯಂತಿ ಉತ್ಸವ, ಭವ್ಯ ಮೆರವಣಿಗೆ..!
ಮುಂಡಗೋಡ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರಾತ್ರಿಯಿಡಿ ರಾಣಾ ಪ್ರತಾಪ್ ಸಿಂಗ್ ರವರ ಜಯಂತಿ ಭವ್ಯ ಮೆರವಣಿಗೆ ನಡೆಯಿತು. ಸಮಾಜ ಬಾಂದವರು ರಾಣಾ ಪ್ರತಾಪ ಸಿಂಹರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಇಡೀ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ನಡೆಸಿದ್ರು. ಭಕ್ತಿಗೀತೆಗಳನ್ನು ಹಾಕಿ ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದ ಯುವಕರು, ರಾಣಾ ಪ್ರತಾಪ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಇನ್ನು ನಿನ್ನೆ ಸಂಜೆಯಿಂದಲೇ ಬಸಾಪುರ ಗ್ರಾಮದಲ್ಲಿ ” ರಾಣಾ” ಜಯಂತಿ ಆಚರಣೆ ಸಂಭ್ರಮ ಜೋರಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?
ಶಿರಸಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರೋ ಪೊಲೀಸರು ಬುಕ್ಕಿ ಸೇರಿ,15 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಎಸ್ಪಿ, ಡಾ.ಸುಮನಾ ಪೆನ್ನೇಕರ್ ರಚಿಸಿರೋ ವಿಶೇಷ ಪೊಲೀಸ್ ಟೀಂ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ ಆಡಿಸುತ್ತಿದ್ದ ದಂಧೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೆ, ಮಟ್ಕಾ ದಂಧೆಯಲ್ಲಿಬಕೈ ಬದಲಾಯಿಸುತ್ತ ಅಂದಾಜು 3-4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿರಸಿ ನಗರ ಹಾಗೂ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಇನ್ನು ಎಸ್ಪಿ ಮೇಡಂ ರವರ ಟೀಂ ಮಾಡಿರೋ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?
ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ಕ್ರೈಮುಗಳ ಸಿಟಿಯಾಯ್ತಾ..? ಇಂತಹದ್ದೊಂದು ಅನುಮಾನ ಇಡೀ ಕ್ಷೇತ್ರದ ಪ್ರಜ್ಞಾವಂತರನ್ನ ಬೆಂಬಿಡದೇ ಕಾಡ್ತಿದೆ. ಇಲ್ಲಿ ಕೊಲೆ ಅನ್ನೋದು ಕಾರಣಗಳೇ ಇಲ್ಲದೇ ನಡೆದು ಹೋಗ್ತಿವೆ. ನಿನ್ನೆ ಸಂಜೆ ನಡೆದದ್ದೂ ಇದೆ. ಸರಗೊಲು ಆಡುತ್ತಿದ್ದಾಗ ಕೋಲು ಬಡಿಸಿಕೊಂಡ ಟಿಪ್ಪರ್ ಮಾಲೀಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಅನಾಮತ್ತಾಗಿ ಮರ್ಡರ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಉಮೇಶ್ ಶಿವಜೋಗಿಮಠ್ (45) ಎಂಬುವವನನ್ನು ಬರೋಬ್ಬರಿ ಏಳು ಜನರ ತಂಡ ಮನಬಂದಂತೆ ಥಳಿಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಏನು..? ನಿನ್ನೆ ಬುಧವಾರ, ಅದು ಸಂಜೆಯ ಹೊತ್ತು. ಶಿಗ್ಗಾವಿಯ ಎಪಿಎಂಸಿ ಬಳಿ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಟಿಪ್ಪರ್ ಮಾಲೀಕ ಕಂ ಚಾಲಕ, ಉಮೇಶ್ ತನ್ನ ಟಿಪ್ಪರ್ ಗೆ ಗ್ರೀಸಿಂಗ್ ಮಾಡ್ತಾ ನಿಂತಾಗ, ಅದೇ ಎಪಿಎಂಸಿ ಆವರಣದಲ್ಲಿ ಯುವಕರು ಸರಗೋಲು ಆಟವಾಡ್ತಿದ್ದಾಗ ಕೋಲು ಬಂದು ಟಿಪ್ಪರ್ ಗೆ ಬಿದ್ದಿದೆ, ಹೀಗಾಗಿ ಉಮೇಶ್ ಆ ಯುವಕರನ್ನ ಯಾಕ್ರಯ್ಯಾ ಹೀಗೆ ಮಾಡಿದ್ರಿ ನಿಮಗೆ...
ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!
ಮುಂಡಗೋಡ ಪೊಲೀಸರು ನಿನ್ನೆಯಿಂದ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ಬಲೆ ಬೀಸಿರೋ ಮುಂಡಗೋಡ ಪಿಎಸ್ಐ ಬಸವರಾಜು ಮಬನೂರು ಮತ್ತವರ ತಂಡ ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿ ಹಲವು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದ್ರೊಂದಿಗೆ ಮೂರೂ ಕೇಸುಗಳಲ್ಲಿ ಒಟ್ಟೂ 10 ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ. ದಾಳಿ ನಂಬರ್-1 ಮುಂಡಗೋಡ ತಾಲೂಕಿನ ಕಾತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ, ನಾಗರಾಜ ಅಡಿವೆಪ್ಪ ಆಡಿನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಇವನ ಜೊತೆ ಮಟ್ಕಾ ದಂಧೆಯಲ್ಲಿ ಸಂಗ್ರಹವಾದ ಹಣವನ್ನು ಪಡೆಯುತ್ತಿದ್ದ ಆರೋಪದ ಮೇಲೆ, ಪಾಳಾ ಗ್ರಾಮದ ಮೌಲಾಲಿ, ಹಾಗೂ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಅತಾವುಲ್ಲಾ ಎಂಬುವವನ ಮೇಲೂ ಕೇಸು ಜಡಿಯಲಾಗಿದೆ. ಇದೇ ವೇಳೆ 910 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ದಾಳಿ ನಂಬರ್-2 ಮುಂಡಗೋಡ ಪಟ್ಟಣದ ಬಂಕಾಪೂರ ರಸ್ತೆಯ ಪಕ್ಕದ ಚಿಕನ್ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ...
ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?
ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ. ರವಿವಾರ ದಿ.29 ರಂದು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿರೋ ಆನಂದ್, ಹಸಿರು ಬಣ್ಣದ ಸಿಮೆಂಟ್ ಕಂಪನಿ ಹೆಸರಿರೋ ಟೀಶರ್ಟ್, ಹಾಗೇ ಖಾಕಿ ಬಣ್ಣದ ತ್ರಿಪೋರ್ಥ್ ತೊಟ್ಟು ಉಟ್ಟುಡುಗೆಯಲ್ಲೇ ನಾಪತ್ತೆಯಾಗಿದ್ದಾರೆ. ಮೊಬೈಲ್, ಪರ್ಸ್ ಏನು ಅಂದ್ರೆ ಏನೂ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ, ಕುಟುಂಬದವರು ಆತಂಕಗೊಂಡಿದ್ದಾರೆ. ಸಿಸಿಟಿವಿಯಲ್ಲಿ..! ಅಸಲು, ಆನಂದ್ ಕಡಗಿ ರವಿವಾರ ಬೆಳಿಗ್ಗೆ ಮಕ್ಕಳನ್ನು ಸಲೂನ್ ಶಾಪ್ ಗೆ ಕರೆದುಕೊಂಡು ಹೋಗಿ ಬಂದಿದ್ದರು. ತಾವೂ ಕೂಡ ಕಟ್ಟಿಂಗ್ ಮಾಎಇಸಿಕೊಂಡು ಬಂದಿದ್ರು. ಆ ನಂತರ ಮಕ್ಕಳಿಗೆ ಸ್ನಾನ ಮಾಡಿಸಲು ಮನೆಯವರು ಒಳಗಡೆ ಹೋದಾಗ, 11ಗಂಟೆಯ ಹೊತ್ತಿಗೆ ಮನೆಯಿಂದ ಹೊರಟವರು, ಸಮಾಜ ಕಲ್ಯಾಣ ಇಲಾಖೆಯ ಎದುರೇ ಹಾದು ಹೋಗಿದ್ದಾರೆ. ಅಲ್ಲಿನ ಸಿಸಿಟಿವಿಯಲ್ಲಿ ಆತ ಏಕಾಂಗಿಯಾಗಿ ನಡೆದುಕೊಂಡು ಹೋಗ್ತಿರೋ ದೃಷ್ಯ ಸೆರೆಯಾಗಿದೆ. ಅದೇನೋ ಧಾವಂತದಲ್ಲಿ ಹೋಗುವ ಹಾಗೂ ಕಂಡಿಲ್ಲ. ಸ್ವಾಭಾವಿಕವಾಗಿ ನಿರ್ಲಿಪ್ತ ಹೆಜ್ಜೆಗಳು ಆ ದೃಷ್ಯದಲ್ಲಿ ಕಾಣತ್ತೆ. ಆ ದೃಷ್ಯ ಕಂಡರೆ ಬಹುತೇಕ ಸ್ವಾಭಾವಿಕ ಭಾವನೆಗಳೇ...
ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆ, ಪ್ರಕರಣ ದಾಖಲು..!
ಮುಂಡಗೋಡ ರೋಟರಿ ಖಾಸಗಿ ಶಾಲೆಯ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ ಅಂತಾ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಆನಂದ್, ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ಹೀಗಾಗಿ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಮೇ.29 ರಂದು ಮನೆಯಿಂದ ಹೋದವನು, ಮರಳಿ ಬಂದಿಲ್ಲ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಮೇ.29 ರ ರವಿವಾರ ಬೆಳಿಗ್ಗೆ ಸನವಳ್ಳಿ ರಸ್ತೆ ಕಡೆಗೆ ನಡೆದುಕೊಂಡೇ ಹೋಗಿದ್ದನ್ನ ಕೆಲವ್ರು ನೋಡಿದ್ದಾರೆ ಅನ್ನೋ ಮಾಹಿತಿ ಇದ್ದು ಮನೆ ಮಗನನ್ನು ಹುಡುಕಿ ಕೊಡಿ ಅಂತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.